ಸೆನ್ಸೆಕ್ಸ್‌ 62272ಕ್ಕೆ ಅಂತ್ಯ: ರುಪಾಯಿ ಮೌಲ್ಯ 31 ಪೈಸೆ ಚೇತರಿಕೆ

Published : Nov 25, 2022, 10:54 AM ISTUpdated : Nov 25, 2022, 10:57 AM IST
ಸೆನ್ಸೆಕ್ಸ್‌ 62272ಕ್ಕೆ ಅಂತ್ಯ: ರುಪಾಯಿ ಮೌಲ್ಯ 31 ಪೈಸೆ ಚೇತರಿಕೆ

ಸಾರಾಂಶ

ಸತತ 3ನೇ ದಿನವೂ ಏರಿಕೆಯ ಹಾದಿಯಲ್ಲಿ ಮುಂದುವರೆದ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಗುರುವಾರ 762 ಅಂಕಗಳ ಹೆಚ್ಚಳ ಕಾಣುವ ಮೂಲಕ ದಾಖಲೆಯ 62,272.68 ಅಂಕಗಳಿಗೆ ಏರಿಕೆಯಾಗಿದೆ. ಇದೇ ವೇಳೆ, ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿಸಹ 216 ಅಂಕಗಳ ಏರಿಕೆಯೊಂದಿಗೆ ದಿನದಂತ್ಯಕ್ಕೆ 18,484.1 ಅಂಕಗಳಲ್ಲಿ ವಹಿವಾಟನ್ನು ಕೊನೆಗಳಿಸಿದೆ.

ಮುಂಬೈ: ಸತತ 3ನೇ ದಿನವೂ ಏರಿಕೆಯ ಹಾದಿಯಲ್ಲಿ ಮುಂದುವರೆದ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಗುರುವಾರ 762 ಅಂಕಗಳ ಹೆಚ್ಚಳ ಕಾಣುವ ಮೂಲಕ ದಾಖಲೆಯ 62,272.68 ಅಂಕಗಳಿಗೆ ಏರಿಕೆಯಾಗಿದೆ. ಇದೇ ವೇಳೆ, ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿಸಹ 216 ಅಂಕಗಳ ಏರಿಕೆಯೊಂದಿಗೆ ದಿನದಂತ್ಯಕ್ಕೆ 18,484.1 ಅಂಕಗಳಲ್ಲಿ ವಹಿವಾಟನ್ನು ಕೊನೆಗಳಿಸಿದೆ. ರುಪಾಯಿ ಮೌಲ್ಯ ಕೂಡ 31 ಪೈಸೆ ಚೇತರಿಸಿದೆ.

ಸೆನ್ಸೆಕ್ಸ್‌ (Sensex) ದಿನದ ವಹಿವಾಟಿನ ವೇಳೆ ಜೀವಾವಧಿ ದಾಖಲೆಯ 62,412 ಅಂಕಗಳಿಗೆ ಏರಿಕೆ ಕಂಡಿದ್ದರೂ ಸಹ ದಿನದಂತ್ಯಕ್ಕೆ 62,272.68 ಅಂಗಳಲ್ಲಿ ಕೊನೆಗೊಂಡಿತು. ಅಮೆರಿಕದ ಮಾರುಕಟ್ಟೆಯಲ್ಲಿ (US market) ಏರುತ್ತಿರುವ ಈಕ್ಟಿಟಿಗಳು (equities) ಮತ್ತು ಕುಸಿಯುತ್ತಿರುವ ಡಾಲರ್‌ ಮೌಲ್ಯ, ಷೇರುಪೇಟೆ ಏರಿಕೆಯ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಅಲ್ಲದೇ ಭಾರತದಲ್ಲಿ ನಡೆಯುತ್ತಿರುವ ಸಮಗ್ರ ಅಭಿವೃದ್ಧಿಗಳು ದೇಶದ ಆರ್ಥಿಕತೆ ಸ್ಥಿರವಾಗುತ್ತಿರುವುದನ್ನು (stable economy) ತೋರಿಸುತ್ತಿದೆ. ಇದು ಹೂಡಿಕೆದಾರರಲ್ಲಿ ಆಶಾಭಾವನೆಯನ್ನು ಉಂಟು ಮಾಡಿದೆ. ಸೆನ್ಸೆಕ್ಸ್‌ ಏರಿಕೆಯೊಂದಿಗೆ, ಎಚ್‌ಸಿಎಲ್‌ ಟೆಕ್ನಾಲಜೀಸ್‌ (HCL Technologies), ಇಸ್ಫೋಸಿಸ್‌ (Infosies), ವಿಪ್ರೋ (Wipro), ಪವರ್‌ಗ್ರಿಡ್‌, ಟೆಕ್‌ ಮಹೀಂದ್ರಾ (Mahindra) , ಟಾಟಾ, ಎಚ್‌ಯುಎಲ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ (HDFC Bank) ಸೇರಿದಂತೆ ಹಲವು ಷೇರುಗಳ ಮೌಲ್ಯ ಹೆಚ್ಚಳವಾಗಿದೆ.

ಸತತ ಐದು ದಿನಗಳ ಕಾಲ ಏರಿಕೆ ಕಂಡ ಮುಂಬೈ ಷೇರುಪೇಟೆ: 16,600 ಅಂಶಗಳಿಗೆ ಜಿಗಿದ ನಿಫ್ಟಿ

 

ಪೇಟಿಎಂ ಷೇರುಮೌಲ್ಯ 75% ಕುಸಿತ: ಹೂಡಿಕೆದಾರರಿಗೆ 1.10 ಲಕ್ಷ ಕೋಟಿ ನಷ್ಟ

ನವದೆಹಲಿ: ಭಾರತದ ಅತಿದೊಡ್ಡ ಡಿಜಿಟಲ್‌ ಪೇಮೆಂಟ್‌ ಪೂರೈಕೆದಾರನಾಗಿರುವ ಪೇಟಿಎಂ ಷೇರು ಮಾರುಕಟ್ಟೆಗೆ ಪಾದಾರ್ಪಣೆ ಮಾಡಿದ ಮೊದಲ ವರ್ಷದಲ್ಲೇ. ಅದರ ಷೇರು ಮೌಲ್ಯದಲ್ಲಿ ಶೇ.75ರಷ್ಟುಭಾರೀ ಕುಸಿತ ಕಂಡಿದೆ. ಈ ಮೂಲಕ ಕಳೆದೊಂದು ಶತಮಾನದಲ್ಲೇ ಮೊದಲ ವರ್ಷದಲ್ಲೇ ಅತಿಹೆಚ್ಚು ಷೇರು ಕುಸಿತ ಕಂಡ ಭಾರತೀಯ ಕಂಪನಿ ಹಾಗೂ ಜಗತ್ತಿನ ಅತಿಕೆಟ್ಟಐಪಿಒಗಳಲ್ಲಿ (ಇನಿಶಿಯಲ್‌ ಪಬ್ಲಿಕ್‌ ಆಫರಿಂಗ್‌) ಒಂದೆನಿಸಿಕೊಂಡಿದೆ. ಐಪಿಒ ವೇಳೆ ಪೇಟಿಎಂ ಮಾರುಕಟ್ಟೆಮೌಲ್ಯವು 1.39 ಲಕ್ಷ ಕೋಟಿ ರು.ಗಳಷ್ಟಾಗಿತ್ತು. ಈಗ ಅದರ ಮೌಲ್ಯ 28,634 ಕೋಟಿ ರು.ಗೆ ಇಳಿಕೆಯಾಗಿದೆ. ಈ ಮೂಲಕ ಹೂಡಿಕೆದಾರರು 1.10 ಲಕ್ಷ ಕೋಟಿ ರು. ನಷ್ಟವನ್ನು ಅನುಭವಿಸಿದ್ದಾರೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!