ಪ್ರತಿ ಅಂಗಡಿಯಲ್ಲೂ ಕಾಣಸಿಗುವ POS ಮಶಿನ್ ಅಂದ್ರೇನು ಗೊತ್ತಾ?

By Suvarna News  |  First Published Feb 11, 2023, 3:03 PM IST

ಡಿಜಿಟಲ್ ಯುಗದಲ್ಲಿ ನಗದಿನ ಅವಶ್ಯಕತೆಯಿಲ್ಲ. ಡೆಬಿಟ್, ಕ್ರೆಡಿಟ್ ಕಾರ್ಡ್ ಇದ್ರೆ ಸಾಕು. ಬೀದಿ ಬದಿ ವ್ಯಾಪಾರಸ್ಥರೂ ಈಗ ಬದಲಾವಣೆಗೆ  ಹೊಂದಿಕೊಂಡಿದ್ದಾರೆ. ಅವ್ರ ಬಳಿಯೂ ಸಣ್ಣ ಮಶಿನ್ ಇರುತ್ತೆ. ಅದೇನು, ಅದ್ರ ಕೆಲಸವೇನು ಅನ್ನೋದು ಇಲ್ಲಿದೆ.
 


ಜಗತ್ತು ಬದಲಾಗಿದೆ. ನೋಟಿನ ಕಂತೆ ಹಿಡಿದು ಮಾರುಕಟ್ಟೆಗೆ ಹೋಗುವ ಅವಶ್ಯಕತೆಯಿಲ್ಲ. ಪರ್ಸ್ ನಲ್ಲಿ ನಯಾ ಪೈಸೆ ಇಲ್ಲವೆಂದ್ರೂ ನೀವು ಖರೀದಿ ಮಾಡಿ ಬರಬಹುದು. ಮೊಬೈಲ್ ಅಪ್ಲಿಕೇಷನ್ ಅಥವಾ ಕ್ರೆಡಿಟ್, ಡೆಬಿಟ್ ಕಾರ್ಡ್ ಇದ್ರೆ ಸಾಕು. ಈಗ ಎಲ್ಲ ಸಣ್ಣ ಅಂಗಡಿಯಲ್ಲೂ ನೀವು ಪಿಒಎಸ್ ಅಂದರೆ ಪಾಯಿಂಟ್ ಆಫ್ ಸೇಲ್ ಅನ್ನು ಬಳಸಲಾಗುತ್ತಿದೆ. ನಾವಿಂದು ಈ ಪಾಯಿಂಟ್ ಆಫ್ ಸೇಲ್ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ. 

ಪಿಒಎಸ್  (POS ) ಯಂತ್ರ ಎಂದರೇನು ? : ಪಿಒಎಸ್ ಯಂತ್ರ ಗಣಕೀಕೃತ ಎಲೆಕ್ಟ್ರಾನಿಕ್ (Electronic) ಯಂತ್ರವಾಗಿದೆ. ಪಿಒಎಸ್  ಹಿಂದಿಯಲ್ಲಿ ಪಾಯಿಂಟ್ ಆಫ್ ಸೇಲ್ ಎಂದು ಕರೆಯಲಾಗುತ್ತದೆ. ಗ್ರಾಹಕ ಕ್ರೆಡಿಟ್ (Credit) ಅಥವಾ ಡೆಬಿಟ್ ಕಾರ್ಡ್ ಹೊಂದಿದ್ದರೆ ಈ ಯಂತ್ರವನ್ನು ಬಳಸಬಹುದು. ಪಿಒಎಸ್ ಯಂತ್ರವು ನಗದು ರಹಿತ ವಹಿವಾಟು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಆನ್ಲೈನ್ ವಹಿವಾಟಾಗಿದ್ದು, ಇದ್ರಲ್ಲಿ ಪೇಮೆಂಟ್ ಮಾಡಿದ ನಂತ್ರ ರಶೀದಿ ನಮಗೆ ಸಿಗುತ್ತದೆ. 

Tap to resize

Latest Videos

ಪಿಒಎಸ್ ಖರೀದಿಗೆ ಎಷ್ಟು ಹಣ ನೀಡ್ಬೇಕು? : ನೀವೂ ವ್ಯಾಪಾರ ಮಾಡ್ತಿದ್ದು ಅದನ್ನು ಖರೀದಿಸುವ ಆಲೋಚನೆಯಲ್ಲಿದ್ದರೆ 25 ಸಾವಿರ ರೂಪಾಯಿ ಹೊಂದಿಸಬೇಕಾಗುತ್ತದೆ. ಪಿಒಸಿ ಯಂತ್ರದ ಬೆಲೆ 25 ಸಾವಿರ ರೂಪಾಯಿಯಿಂದ 50 ಸಾವಿರ ರೂಪಾಯಿವರೆಗಿದೆ. ಅವಶ್ಯಕತೆಗೆ ಅನುಗುಣವಾಗಿ ಈ ಯಂತ್ರ ಭಿನ್ನವಾಗಿರುತ್ತದೆ. ಪಿಒಸಿ ಮೊಬೈಲ್ ನಂತೆ ಕಾಡುತ್ತದೆ. ಇದನ್ನು ಹಾರ್ಡ್ವೇರ್ ಮತ್ತು ಸಾಫ್ಟವೇರ್ ಎರಡರಿಂದಲೂ ಮಾಡಲಾಗಿದೆ. 

Business Ideas : ಹೆಂಗಳೆಯರ ಅಚ್ಚುಮೆಚ್ಚಿನ ಸೀರೆ ಮಾರಾಟ ಮಾಡಿ ಹಣ ಗಳಿಸಿ

ಪಿಒಸಿ ವಿಧಗಳು : ಇದ್ರಲ್ಲಿ ನಾವು ಅನೇಕ ವಿಧಗಳನ್ನು ನೋಡ್ಬಹುದು. ಚಿಲ್ಲರೆ ವ್ಯಾಪಾರಿಗಳಿಗಾಗಿ ತಯಾರಿಸಿದ ಪಿಒಸಿಯನ್ನು  ಟೀ ಅಂಗಡಿ, ಕಾಫಿ ಶಾಪ್ ಇತ್ಯಾದಿ ಸ್ಥಳಗಳಲ್ಲಿ ಬಳಸಲಾಗುತ್ತದೆ. ಇನ್ನು ಮೊಬೈಲ್  ಫೋನ್‌ಗೆ ಲಿಂಕ್ ಮಾಡುವ ಪಿಒಸಿ ಕೂಡ ಲಭ್ಯವಿದೆ. ಬಾರ್ ಆಂಡ್ ನೈಟ್ ಕ್ಲಬ್ ಗಾಗಿಯೇ ಪಿಒಎಸ್ ಯಂತ್ರ ಲಭ್ಯವಿದೆ. ಇನ್ನೊಂದು ಸಲೂನ್ ಮತ್ತು ಸ್ಪಾ ಪಿಒಎಸ್ ಸಿಸ್ಟಮ್. ಇದನ್ನು ಜಿಮ್, ಬ್ಯೂಟಿಪಾರ್ಲರ್ ಗಳಲ್ಲಿ ಬಳಸಲಾಗುತ್ತದೆ. ಇದ್ರಲ್ಲಿ ರಿಮ್ಯಾಂಡರ್, ಅಪಾಯಿಂಟ್ಮೆಂಟ್ ಸೇರಿದಂತೆ ಕೆಲ ಸೌಲಭ್ಯಗಳಿರುತ್ತವೆ. ಇನ್ನೊಂದು ಕ್ಲೌಡ್ ಪಿಒಎಸ್ ಸಿಸ್ಟಮ್ ಆಗಿದ್ದು, ಇದನ್ನು ಎಲ್ಲಿ ಬೇಕಾದ್ರೂ ಬಳಸಬಹುದಾಗಿದೆ. ಈ ಕ್ಲೌಡ್ ಪಿಒಎಸ್ ಅಗ್ಗವಾಗಿದ್ದು, ಅದನ್ನು ಸುಲಭವಾಗಿ ಖರೀದಿ ಮಾಡಬಹುದಾಗಿದೆ. 

ಪಿಒಎಸ್ ಬಳಕೆ ಹೇಗೆ? : ಇದನ್ನು ಬಳಸುವ ವ್ಯಾಪಾರಸ್ಥರಿಗೆ ಇದ್ರ ಬಗ್ಗೆ ಜ್ಞಾನವಿರಬೇಕು. ತಮಗೆ ಏನು ಅಗತ್ಯ ಎಂಬುದನ್ನು ಪರಿಗಣಿಸಿ ಅವರು ಪಿಒಎಸ್ ಖರೀದಿ ಮಾಡಬೇಕಾಗುತ್ತದೆ. ಹಾರ್ಡ್ ವೇರ್, ಸಾಫ್ಟ್ವೇರ್ ಎರಡೂ ಕೆಲಸ ಮಾಡೋದ್ರಿಂದ ಇದ್ರ ಬಗ್ಗೆಯೂ ಸ್ವಲ್ಪ ಜ್ಞಾನವನ್ನು ಅವರು ಹೊಂದಿರಬೇಕು. 

ಬ್ಯಾಂಕ್ ಖಾತೆ ಅನಿವಾರ್ಯ : ನೀವು ವ್ಯಾಪಾರಸ್ಥರಾಗಿದ್ದರೆ ಖಾತೆ ಹೊಂದುವುದು ಅತ್ಯಗತ್ಯವಾಗಿದೆ. ಹಿಂದಿನಂತೆ ಈಗ ಬರೀ ನಗದು ವ್ಯವಹಾರ ಸಾಧ್ಯವಿಲ್ಲ. ಖಾತೆ ಹೊಂದಿದ್ದರೆ ನೀವು ಪಿಒಸಿಯನ್ನು ಸುಲಭವಾಗಿ ಬಳಸಬಹುದು. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ಎಲೆಕ್ಟ್ರಾನಿಕ್ ಪಾವತಿ ಮೂಲಕ ನಿಮ್ಮ ಹಣ ಖಾತೆ ಸೇರುತ್ತದೆ.  ಇದನ್ನು ಇನ್ಸ್ಟಾಲ್ ಮಾಡುವ ವೇಳೆಯೇ ಎಲ್ಲ ಮಾಹಿತಿ ತಿಳಿದಿಬೇಕು. ಹಾಗೆಯೇ ಸರಿಯಾಗಿ ಇನ್ಸ್ಟಾಲ್ ಮಾಡಬೇಕು. ಇಲ್ಲವೆಂದ್ರೆ ಮುಂದೆ ಪಾವತಿ ವೇಳೆ ನೀವು ಸಮಸ್ಯೆ ಎದುರಿಸಬೇಕಾಗುತ್ತದೆ.  ವ್ಯಾಪಾರಸ್ಥರಿಗೆ ಇದನ್ನು ಬಳಸಲು ಬರ್ತಿಲ್ಲವೆಂದ್ರೆ ತರಬೇತಿ ಪಡೆಯಬಹುದು. ಯಂತ್ರ ನವೀಕರಣಗೊಳ್ಳುತ್ತಿರುತ್ತದೆ. ಅದಕ್ಕೆ ತಕ್ಕಂತೆ ನಿಮ್ಮ ಜ್ಞಾನ ವೃದ್ಧಿಯಾಗಬೇಕಾಗುತ್ತದೆ. ಅನೇಕ ಕಂಪನಿಗಳು ಇದ್ರೆ ಬಳಕೆ ಬಗ್ಗೆ ನಿಮಗೆ ತರಬೇತಿ ನೀಡುತ್ತವೆ. ಅದ್ರಲ್ಲಿ ಪಾಲ್ಗೊಳ್ಳುವ ಮೂಲಕ ನೀವು ಹೆಚ್ಚಿನ ಜ್ಞಾನ ಪಡೆಯಬಹುದು.

Personal Finance : ಆಸ್ತಿ ಖರೀದಿ ಮಾಡುವ ಮುನ್ನ ಈ ದಾಖಲೆ ಪರಿಶೀಲಿಸಿ

ಪಿಒಸಿ ಲಾಭ : ಇದ್ರಲ್ಲಿ ಮೋಸವಾಗುವುದಿಲ್ಲ. ತೆರಿಗೆ ವಂಚನೆ ಸಾಧ್ಯವಿಲ್ಲ. ನಗದು ಹಣ ತೆಗೆದುಕೊಂಡು ಬರಲು ಇಷ್ಟವಿರದ ಗ್ರಾಹಕರಿಗೆ ಇದು ಅನುಕೂಲಕರವಾಗಿದೆ. 
 

click me!