ಬ್ಯಾಂಕ್‌ನಲ್ಲಿ ಸಾಲ ಪಡೆದವರು ಸತ್ತರೆ ಬಾಕಿ ಹಣವನ್ನು ಯಾರು ಪಾವತಿಸಬೇಕು?

Published : Aug 15, 2025, 06:41 PM IST
Indian Bank Apprentice Recruitment 2025

ಸಾರಾಂಶ

Bank Loan Recovery System:ಸದ್ಯ ಪ್ರಶ್ನೆಯೆಂದರೆ ಸಾಲ ಪಡೆದ ವ್ಯಕ್ತಿ ಯಾವುದಾದರೂ ಕಾರಣದಿಂದ ಸತ್ತರೆ ಬಾಕಿ ಸಾಲದ ಮೊತ್ತವನ್ನು ಯಾರು ಪಾವತಿಸಬೇಕಾಗುತ್ತದೆ? ಅಂತಹ ಸಂದರ್ಭಗಳಲ್ಲಿ ಸಾಲವನ್ನು ಮರುಪಡೆಯಲು ಬ್ಯಾಂಕುಗಳು ಏನು ಮಾಡುತ್ತವೆ?.

ಇಂದಿನ ಕಾಲದಲ್ಲಿ ಸಾಲ ತೆಗೆದುಕೊಳ್ಳುವ ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿದೆ. ನೀವು ಮನೆ ಅಥವಾ ಆಸ್ತಿಯನ್ನು ಖರೀದಿಸಲು ಬಯಸಿದರೆ ನಿಮಗೆ ಗೃಹ ಸಾಲ ಬೇಕು. ಅದೇ ಕಾರು ಅಥವಾ ಬೈಕು ಬೇಕಾದರೆ ಕಾರ್ ಲೋನ್ ಬೇಕು. ಒಂದು ವೇಳೆ ಉನ್ನತ ಅಧ್ಯಯನಕ್ಕೆ ಹಣ ಬೇಕಾದರೆ ಎಜುಕೇಶನ್ ಲೋನ್ ಬೇಕು. ವ್ಯಾಪಾರ ಮಾಡಲು ಹಣ ಬೇಕಾದ್ರೆ ಬ್ಯುಸಿನೆಸ್ ಲೋನ್ ಬೇಕು, ವೈಯಕ್ತಿಕ ಅಗತ್ಯಗಳಿಗೂ ಸಹ ಪರ್ಸನಲ್ ಲೋನ್ ಸುಲಭವಾಗಿ ಲಭ್ಯವಿದೆ. ದೇಶದ ಎಲ್ಲಾ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರ ಕ್ರೆಡಿಟ್ ಸ್ಕೋರ್ ಮತ್ತು ಮರುಪಾವತಿ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು ಸಾಲಗಳನ್ನು ನೀಡುತ್ತವೆ. ಸಾಲವನ್ನು ಇಎಂಐ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಸದ್ಯ ಪ್ರಶ್ನೆಯೆಂದರೆ ಸಾಲ ಪಡೆದ ವ್ಯಕ್ತಿ ಯಾವುದಾದರೂ ಕಾರಣದಿಂದ ಸತ್ತರೆ ಬಾಕಿ ಸಾಲದ ಮೊತ್ತವನ್ನು ಯಾರು ಪಾವತಿಸಬೇಕಾಗುತ್ತದೆ? ಅಂತಹ ಸಂದರ್ಭಗಳಲ್ಲಿ ಸಾಲವನ್ನು ಮರುಪಡೆಯಲು ಬ್ಯಾಂಕುಗಳು ಏನು ಮಾಡುತ್ತವೆ?.

ಎರಡು ರೀತಿಯ ಸಾಲ
ಮೊದಲನೆಯದಾಗಿ ಬ್ಯಾಂಕುಗಳು ಎರಡು ರೀತಿಯ ಸಾಲ ನೀಡುತ್ತವೆ. ಮೊದಲನೆಯದು ಸುರಕ್ಷಿತ ಸಾಲ(Secured debt). ಇದರಲ್ಲಿ ಕಾರು ಸಾಲ, ಗೃಹ ಸಾಲ, ಚಿನ್ನದ ಸಾಲ ಮತ್ತು ವ್ಯಾಪಾರ ಸಾಲ ಸೇರಿವೆ. ಎರಡನೆಯದು ಅಸುರಕ್ಷಿತ ಸಾಲ(Unsecured debt). ಇದರಲ್ಲಿ ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್ ಸಾಲ, ವಿದ್ಯಾರ್ಥಿ ಸಾಲ ಸೇರಿವೆ.

ಮರುಪಾವತಿಸುವ ಮೊದಲು ಸತ್ತರೆ
ವೈಯಕ್ತಿಕ ಸಾಲ (Personal Loan) ಅಸುರಕ್ಷಿತವಾಗಿದೆ. ಸಾಲ ಪಡೆದ ವ್ಯಕ್ತಿ ಸತ್ತರೆ ಯಾವುದೇ ಕೊಲ್ಯಾಟರಲ್ (Collateral)ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಬ್ಯಾಂಕುಗಳು ಸಂಬಂಧಪಟ್ಟ ವ್ಯಕ್ತಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಸಾಲವನ್ನು ಮರುಪಡೆಯಲು ಸಾಧ್ಯವಿಲ್ಲ. ವೈಯಕ್ತಿಕ ಸಾಲ ಪಡೆದ ವ್ಯಕ್ತಿಯು ಸಾಲವನ್ನು ಮರುಪಾವತಿಸುವ ಮೊದಲು ಸತ್ತರೆ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದರೆ ಸಾಲವನ್ನು ಮರುಪಾವತಿಸಲು ಆಸ್ತಿಯು ಮೊದಲ ಆದ್ಯತೆಯಾಗಿರುತ್ತದೆ. ಆದರೆ ಸಾಲ ಪಡೆದ ವ್ಯಕ್ತಿಯ ಜೀವನ ಸಂಗಾತಿ (ಗಂಡ ಅಥವಾ ಹೆಂಡತಿ) ಮೃತರ ಆಸ್ತಿಯನ್ನು ಇಟ್ಟುಕೊಳ್ಳಲು ನಿರ್ಧರಿಸಿದರೆ ಈ ಸಂದರ್ಭದಲ್ಲಿ ಅವರು ಬಾಕಿ ಇರುವ ಸಾಲವನ್ನು ಮರುಪಾವತಿಸಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಸಾಲ ಪಡೆದ ವ್ಯಕ್ತಿಯ ಮರಣದ ನಂತರ ಸಾಲವನ್ನು ನೇರವಾಗಿ ಅವರ ಜೀವನ ಸಂಗಾತಿಗೆ ಅಥವಾ ಜೀವನ ಸಂಗಾತಿ ಇಲ್ಲದಿದ್ದರೆ ಕುಟುಂಬದ ಸದಸ್ಯರಿಗೆ ವರ್ಗಾಯಿಸಬಹುದು.

ಸಹ-ಅರ್ಜಿದಾರರಾಗಿ ಸಹಿ ಮಾಡಿದ್ದರೆ
ಸಾಲಗಾರರೊಂದಿಗೆ ಬೇರೊಬ್ಬರು ಸಹ-ಅರ್ಜಿದಾರರಾಗಿ ಸಹಿ ಮಾಡಿದ್ದರೆ, ಸಾಲಗಾರನ ಮರಣದ ನಂತರ ಅವರನ್ನೂ ಸಾಲವನ್ನು ಮರುಪಾವತಿಸಲು ಹೊಣೆಗಾರರನ್ನಾಗಿ ಮಾಡಬಹುದು. ವೈಯಕ್ತಿಕ ಸಾಲದ ಸಂದರ್ಭದಲ್ಲಿ ಮರಣ ಹೊಂದಿದ ವ್ಯಕ್ತಿಯು ಜಂಟಿ ಖಾತೆಯನ್ನು ಹೊಂದಿದ್ದರೆ ಉಳಿದ ಸಾಲವನ್ನು ಮರುಪಾವತಿಸಲು ಕೇಳಲಾಗುತ್ತದೆ.

ಗ್ಯಾರಂಟಿದಾರನೂ ಸಾಲ ಮರುಪಾವತಿಸಲು ಸಾಧ್ಯವಾಗದಿದ್ದರೆ
ಸಾಲಗಾರನ ಸಹ-ಅರ್ಜಿದಾರನು ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ, ಬ್ಯಾಂಕ್ ಗ್ಯಾರಂಟಿದಾರರನ್ನು ಸಂಪರ್ಕಿಸಿ ಸಾಲದ ಮೊತ್ತವನ್ನು ಮರುಪಾವತಿಸಲು ಕೇಳುತ್ತದೆ. ಗ್ಯಾರಂಟಿದಾರನು ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ, ಬ್ಯಾಂಕಿನ ಬಾಕಿ ಸಾಲವು NPA ಗೆ ಹೋಗುತ್ತದೆ. ಅಂದರೆ ಕಾರ್ಯನಿರ್ವಹಿಸದ ಆಸ್ತಿ.

ಗೃಹ ಸಾಲ ಮತ್ತು ಕಾರು ಸಾಲ ಎರಡೂ ಸುರಕ್ಷಿತ
ಗೃಹ ಸಾಲ ಮತ್ತು ಕಾರು ಸಾಲ ಎರಡೂ ಸುರಕ್ಷಿತ ಸಾಲಗಳಾಗಿವೆ. ಒಬ್ಬ ವ್ಯಕ್ತಿಯು ಗೃಹ ಸಾಲ ಅಥವಾ ಕಾರು ಸಾಲವನ್ನು ಪಡೆದು ಹಠಾತ್ತನೆ ಮರಣ ಹೊಂದಿದರೆ, ಬ್ಯಾಂಕ್ ಅವನ ಮನೆ ಅಥವಾ ಕಾರನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ. ನಂತರ ಮನೆ ಮತ್ತು ಕಾರನ್ನು ಹರಾಜು ಮಾಡಲಾಗುತ್ತದೆ. ಬ್ಯಾಂಕ್ ಹರಾಜಿನಲ್ಲಿ ಆಸ್ತಿ ಅಥವಾ ಕಾರನ್ನು ಮಾರಾಟ ಮಾಡುವ ಮೂಲಕ ಸಾಲದ ಮೊತ್ತವನ್ನು ಮರುಪಡೆಯುತ್ತದೆ.

ಶಿಕ್ಷಣ ಸಾಲ ಅಥವಾ ವ್ಯಾಪಾರ ಸಾಲ
ಶಿಕ್ಷಣ ಸಾಲ ಅಥವಾ ವ್ಯಾಪಾರ ಸಾಲ ಪಡೆದ ವ್ಯಕ್ತಿಯು ಸಾವನ್ನಪ್ಪಿದರೆ, ಬ್ಯಾಂಕ್ ಮೊದಲು ಸಹ-ಅರ್ಜಿದಾರ ಅಥವಾ ಗ್ಯಾರಂಟಿದಾರನನ್ನು ಸಂಪರ್ಕಿಸುತ್ತದೆ. ಅವರೂ ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ, ಬ್ಯಾಂಕ್ ಮೃತರ ಕಾನೂನುಬದ್ಧ ಉತ್ತರಾಧಿಕಾರಿಗಳನ್ನು ಸಂಪರ್ಕಿಸುತ್ತದೆ. ಸಾಲವನ್ನು ತೆಗೆದುಕೊಳ್ಳುವ ಸಮಯದಲ್ಲಿ ಸಾಲ ವಿಮೆಯನ್ನು ತೆಗೆದುಕೊಂಡಿದ್ದರೆ, ವಿಮಾ ಕಂಪನಿಯು ಸಾಲದ ಮೊತ್ತವನ್ನು ಪಾವತಿಸುತ್ತದೆ. ಅಂತಿಮವಾಗಿ ಮೃತರ ಆಸ್ತಿಯನ್ನು ಮಾರಾಟ ಮಾಡುವ ಮೂಲಕ ಬ್ಯಾಂಕ್ ತನ್ನ ಸಾಲವನ್ನು ಮರುಪಡೆಯುತ್ತದೆ.

ಅವಧಿ ವಿಮೆ ತೆಗೆದುಕೊಳ್ಳಿ
ಒಬ್ಬ ವ್ಯಕ್ತಿಯು ಬ್ಯಾಂಕಿನಿಂದ ಸಾಲ ಪಡೆಯುತ್ತಿದ್ದರೆ, ಅವನು ಕನಿಷ್ಠ 1 ಕೋಟಿ ರೂಪಾಯಿಗಳ ಅವಧಿ ವಿಮೆ (Term Insurance)ಯನ್ನು ತೆಗೆದುಕೊಳ್ಳಬೇಕು. ಸಾಲದ ಮೊತ್ತವನ್ನು ಪಾವತಿಸುವ ಮೊದಲು ಅವನು ಸತ್ತಾಗ ಇದು ಉಪಯೋಗಕ್ಕೆ ಬರುತ್ತದೆ, ನಂತರ ವಿಮಾ ಕಂಪನಿಯ ಹಣದಿಂದ ಸಾಲವನ್ನು ತೀರಿಸಬಹುದು. ಹೀಗೆ ಮಾಡುವುದರಿಂದ, ಕುಟುಂಬವು ಸಾಲದ ಹೊರೆಯನ್ನು ಹೊರುವುದಿಲ್ಲ. ಅದೇ ಸಮಯದಲ್ಲಿ, ಆಸ್ತಿಯನ್ನು ಸಹ ಉಳಿಸಬಹುದು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!