Warranty vs Guarantee: ವಾರಂಟಿ ಮತ್ತು ಗ್ಯಾರಂಟಿ ನಡುವಿನ ವ್ಯತ್ಯಾಸವೇನು? ವಸ್ತು ಖರೀದಿಸುವಾಗ ಈ ವಿಚಾರ ನಿಮಗೆ ಗೊತ್ತಿರಲಿ

Published : Oct 20, 2026, 08:26 AM IST
Warranty vs Guarantee

ಸಾರಾಂಶ

ಹೊಸ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವಾಗ ವಾರಂಟಿ ಮತ್ತು ಗ್ಯಾರಂಟಿ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ವಾರಂಟಿ ಎಂದರೆ ಉಚಿತ ರಿಪೇರಿ, ಆದರೆ ಗ್ಯಾರಂಟಿ ಎಂದರೆ ಹೊಸ ವಸ್ತು ಅಥವಾ ಹಣ ವಾಪಸ್ ಪಡೆಯುವ ಭರವಸೆಯಾಗಿದೆ. ಸಮಸ್ಯೆ ಬಂದರೆ ಬಿಲ್ ಸಮೇತ ಅಧಿಕೃತ ಸರ್ವೀಸ್ ಸೆಂಟರ್ ಅಥವಾ ಗ್ರಾಹಕ ಸಹಾಯವಾಣಿಗೆ ದೂರು ನೀಡಬಹುದು.

Warranty vs Guarantee: Key Differences Explained ಟಿವಿ, ಫ್ರಿಡ್ಜ್, ಫೋನ್ ಅಥವಾ ವಾಷಿಂಗ್ ಮೆಷಿನ್ ಖರೀದಿಸುವಾಗ ಅಂಗಡಿಯವರು ಒಂದು ಅಥವಾ ಎರಡು ವರ್ಷದ ವಾರಂಟಿ, ಗ್ಯಾರಂಟಿ ಇದೆ ಅಂತ ಹೇಳ್ತಾರೆ. ಇವೆರಡರ ನಡುವಿನ ಅಸಲಿ ವ್ಯತ್ಯಾಸವೇನು? ಹೊಸ ವಸ್ತು ಖರೀದಿಸುವಾಗ ನೀವು ಯಾವೆಲ್ಲಾ ಎಚ್ಚರಿಕೆ ವಹಿಸಬೇಕು ಅನ್ನೋದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ವಾರಂಟಿ ಅಂದ್ರೆ ಏನು?

ವಾರಂಟಿ (Warranty) ಅಂದ್ರೆ ನೀವು ಖರೀದಿಸಿದ ವಸ್ತುವಿನಲ್ಲಿ ಏನಾದರೂ ದೋಷ ಕಂಡುಬಂದರೆ, ಕಂಪನಿಯು ನಿರ್ದಿಷ್ಟ ಸಮಯದವರೆಗೆ ಅದನ್ನು ಉಚಿತವಾಗಿ ರಿಪೇರಿ ಮಾಡಿಕೊಡುವ ಭರವಸೆ. ಉದಾಹರಣೆಗೆ, ನೀವು ಟಿವಿ ಖರೀದಿಸಿದ್ದೀರಿ ಮತ್ತು ಅದಕ್ಕೆ 2 ವರ್ಷದ ವಾರಂಟಿ ಇದೆ ಅಂದುಕೊಳ್ಳಿ. ಆ ಸಮಯದಲ್ಲಿ ಟಿವಿ ಕೆಟ್ಟುಹೋದರೆ, ಕಂಪನಿಯವರು ಅದನ್ನು ಫ್ರೀಯಾಗಿ ರಿಪೇರಿ ಮಾಡಿಕೊಡ್ತಾರೆ ಅಥವಾ ಹಾಳಾದ ಪಾರ್ಟ್ಸ್ ಬದಲಾಯಿಸ್ತಾರೆ. ಆದರೆ, ಕೈಯಿಂದ ಬಿದ್ದು ಒಡೆದುಹೋದರೆ, ನೀರು ಬಿದ್ದರೆ ಅಥವಾ ನಿಮ್ಮ ತಪ್ಪಿನಿಂದ ಹಾಳಾದರೆ ವಾರಂಟಿ ಕವರ್ ಆಗಲ್ಲ ಅನ್ನೋದು ನೆನಪಿರಲಿ.

ಗ್ಯಾರಂಟಿ ಅಂದ್ರೆ ಏನು?

ಗ್ಯಾರಂಟಿ (Guarantee) ಅಂದ್ರೆ ವಸ್ತುವಿನ ಗುಣಮಟ್ಟ ಮತ್ತು ಕಾರ್ಯಕ್ಷಮತೆಯ ಬಗ್ಗೆ ಕಂಪನಿ ನೀಡುವ ಪಕ್ಕಾ ಭರವಸೆ. ಗ್ಯಾರಂಟಿ ಇರುವ ವಸ್ತು ನಿರ್ದಿಷ್ಟ ಸಮಯದೊಳಗೆ ಹಾಳಾದರೆ, ಕಂಪನಿಯು ನಿಮಗೆ ಸಂಪೂರ್ಣವಾಗಿ ಹೊಸ ವಸ್ತುವನ್ನು (Replacement) ಕೊಡುತ್ತದೆ ಅಥವಾ ನಿಮ್ಮ ಹಣವನ್ನು ವಾಪಸ್ (Refund) ಮಾಡುತ್ತದೆ. ವಾರಂಟಿ ಅಂದ್ರೆ ರಿಪೇರಿ, ಗ್ಯಾರಂಟಿ ಅಂದ್ರೆ ಹೊಸ ವಸ್ತು ಅಥವಾ ಹಣ ವಾಪಸ್ ಅಂತ ನಾವು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದರೆ, ಕಂಪನಿಗಳು ವಿಧಿಸುವ ಷರತ್ತುಗಳ ಆಧಾರದ ಮೇಲೆ ಈ ನಿಯಮಗಳು ಬದಲಾಗಬಹುದು. ಹಾಗಾಗಿ ಕೇವಲ ಹೆಸರನ್ನು ನೋಡಿ ನಿರ್ಧಾರ ತೆಗೆದುಕೊಳ್ಳಬೇಡಿ.

ವಸ್ತು ಖರೀದಿಸುವಾಗ ಏನು ಗಮನಿಸಬೇಕು?

ಯಾವುದೇ ವಸ್ತು ಖರೀದಿಸುವ ಮುನ್ನ ವಾರಂಟಿ ಮತ್ತು ಗ್ಯಾರಂಟಿ ಎಷ್ಟು ತಿಂಗಳು ಅಥವಾ ವರ್ಷ ಇದೆ ಅನ್ನೋದನ್ನು ನೀವು ಕಡ್ಡಾಯವಾಗಿ ಚೆಕ್ ಮಾಡಬೇಕು. ಇದು ಇಡೀ ವಸ್ತುವಿಗೆ ಅನ್ವಯಿಸುತ್ತದೆಯೋ ಅಥವಾ ಕೇವಲ ಮೋಟಾರ್, ಕಂಪ್ರೆಸರ್, ಬ್ಯಾಟರಿಗೆ ಮಾತ್ರ ಸೀಮಿತವೋ ಎಂಬುದನ್ನು ಸ್ಪಷ್ಟವಾಗಿ ಕೇಳಿ ತಿಳಿದುಕೊಳ್ಳಿ. ಬಿಡಿಭಾಗಗಳು, ಸರ್ವೀಸ್ ಚಾರ್ಜ್ ಮತ್ತು ಸಾರಿಗೆ ವೆಚ್ಚ ಉಚಿತವೇ ಎಂದು ಕೇಳಿ. ಯಾವ ಕಾರಣಗಳಿಗೆ ವಾರಂಟಿ ಅನ್ವಯಿಸಲ್ಲ ಅನ್ನೋದನ್ನು ಮೊದಲೇ ಓದಿ. ಖರೀದಿಸಿದ ಬಿಲ್, ವಾರಂಟಿ ಕಾರ್ಡ್ ಮತ್ತು ಆನ್‌ಲೈನ್ ಪೇಮೆಂಟ್ ಡೀಟೇಲ್ಸ್ ಅನ್ನು ಭದ್ರವಾಗಿ ಇಟ್ಟುಕೊಳ್ಳಿ.

ಹೆಚ್ಚುವರಿ ಹಣ ಕೊಟ್ಟು ಎಕ್ಸ್‌ಟೆಂಡೆಡ್ ವಾರಂಟಿ (Extended Warranty) ಪಡೆಯುತ್ತಿದ್ದರೆ, ಅದರ ಲಾಭಗಳು ಮತ್ತು ಷರತ್ತುಗಳನ್ನು ಪರಿಶೀಲಿಸಿ. ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯ ಸೂಚನೆಯಂತೆ, ವಸ್ತುವಿನ ಗುಣಮಟ್ಟ, ಬೆಲೆ ಮತ್ತು ಗ್ಯಾರಂಟಿ ವಿವರಗಳನ್ನು ಸಂಪೂರ್ಣವಾಗಿ ತಿಳಿದುಕೊಂಡ ನಂತರವೇ ಖರೀದಿಸುವ ನಿರ್ಧಾರ ತೆಗೆದುಕೊಳ್ಳಿ.

ಸಮಸ್ಯೆ ಬಂದರೆ ಏನು ಮಾಡಬೇಕು?

ನೀವು ಖರೀದಿಸಿದ ವಸ್ತುವಿನಲ್ಲಿ ದೋಷ ಕಂಡುಬಂದರೆ, ಮೊದಲು ತಯಾರಕರು ಅಥವಾ ಅಧಿಕೃತ ಸರ್ವೀಸ್ ಸೆಂಟರ್ ಅನ್ನು ಸಂಪರ್ಕಿಸಿ. ದೂರು ದಾಖಲಿಸಿದ ನಂಬರ್, ಬಿಲ್ ಮತ್ತು ರಿಪೇರಿ ವಿವರಗಳನ್ನು ಸೇಫ್ ಆಗಿ ಇಟ್ಟುಕೊಳ್ಳಿ. ಸಮಸ್ಯೆ ಬಗೆಹರಿಯದಿದ್ದರೆ, ನೀವು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (National Consumer Helpline) 1915 ಗೆ ಕರೆ ಮಾಡಿ ದೂರು ನೀಡಬಹುದು. ವಾರಂಟಿ ಇದೆಯೋ ಅಥವಾ ಗ್ಯಾರಂಟಿ ಇದೆಯೋ ಅನ್ನೋದಕ್ಕಿಂತ, ಆ ಭರವಸೆಯ ಅಡಿಯಲ್ಲಿ ನಮಗೆ ಯಾವೆಲ್ಲಾ ಲಾಭ ಸಿಗುತ್ತದೆ ಅನ್ನೋದು ಬಹಳ ಮುಖ್ಯ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

2027ರ ವೇಳೆಗೆ ಭಾರತದ ರಿಯಲ್ ಎಸ್ಟೇಟ್ ಬೆಲೆ ಗಗನ, ಇದಕ್ಕೆ ಕಾರಣವಿದು: ಸಿಎ ವಿಶ್ಲೇಷಣೆ
Escalator vs Travelator: ಎಸ್ಕಲೇಟರ್ & ಟ್ರಾವೆಲೇಟರ್; ಇವುಗಳ ನಡುವಿನ ವ್ಯತ್ಯಾಸವೇನು?