ಯುದ್ಧದಿಂದ ಜನರು ಕಂಗಾಲು, ಬೆಂಗಳೂರು ಸೇರಿ ರಾಜ್ಯದ ಎಲ್ಲಾ ಬಂಕ್‌ನಲ್ಲಿ ಪೆಟ್ರೋಲ್ ಬೆಲೆ ಏರಿಕೆ

Published : Mar 21, 2026, 08:02 AM IST
Petrol Price

ಸಾರಾಂಶ

ಯುದ್ಧದಿಂದ ಜನರು ಕಂಗಾಲು, ಬೆಂಗಳೂರು ಸೇರಿ ರಾಜ್ಯದ ಎಲ್ಲಾ ಬಂಕ್‌ನಲ್ಲಿ ಪೆಟ್ರೋಲ್ ಬೆಲೆ ಏರಿಕೆ, ಪ್ರೀಮಿಯಂ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾಗಿದೆ. ಮೊದಲು ಶೆಲ್ ಪೆಟ್ರೋಲ್ ದರ ಏರಿಕೆಯಾಗಿದ್ದು, ಇದೀಗ ಎಲ್ಲಾ ಬಂಕ್‌ನಲ್ಲಿ ಬೆಲೆ ಏರಿಕೆಯಾಗಿದೆ. 

ಬೆಂಗಳೂರು (ಮಾ.21) ಮಧ್ಯಪ್ರಾಚ್ಯ ಯುದ್ಧ ಬಿಸಿ ಭಾರತಕ್ಕೆ ತೀವ್ರವಾಗಿ ತಟ್ಟಿದೆ. ಗ್ಯಾಸ್ ಕೊರತೆಯಂದ ಹೊಟೆಲ್ ಸೇರಿದಂತೆ ಜನಸಾಮಾನ್ಯರು ಪರದಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ತೈಲ ಕೊರತೆ ಎದುರಾಗಿದೆ. ತೈಲ ಘಟಕಗಳ ಮೇಲೆ ಇರಾನ್ ಹಾಗೂ ಇಸ್ರೇಲ್ ದಾಳಿ ಮಾಡಿರುವ ಕಾರಣ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಭಾರತದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಪ್ರೀಮಿಯಂ ಪೆಟ್ರೋಲ್ ಬೆಲೆ ಏರಿಕೆಯಾಗಿದೆ.

ಪ್ರೀಮಿಯಂ ಪೆಟ್ರೋಲ್ ಬೆಲೆ 2 ರೂಪಾಯಿ ಏರಿಕೆ

ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಪ್ರೀಮಿಯಂ ಪೆಟ್ರೋಲ್ ಬೆಲೆ 2 ರೂಪಾಯಿ ಏರಿಕೆಯಾಗಿದೆ. ತೈಲ ಘಟಕಗಳ ಮೇಲೆ ದಾಳಿಯಾಗಿರುವ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. ಮೊದಲು ಶೆಲ್ ಪೆಟ್ರೋಲ್ ಬಂಕ್ ಪ್ರೀಮಿಯಂ ಪೆಟ್ರೋಲ್ ಬೆಲೆ ಏರಿಕೆ ಮಾಡಿತ್ತು. ಮಾರ್ಚ್ 20ರಂದು ಶೆಲ್ ಪೆಟ್ರೋಲ್ ಬಂಕ್‌ಗಳಲ್ಲಿ ಪ್ರೀಮಿಯಂ ಪೆಟ್ರೋಲ್ ಬೆಲೆಯಲ್ಲಿ 2 ರೂಪಾಯಿ ಏರಿಕೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇಂದಿನಿಂದ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಪ್ರೀಮಿಯಂ ಬೆಲೆ ದುಬಾರಿಯಾಗಿದೆ.

HPCL ಪ್ರೀಮಿಯಂ ಪೆಟ್ರೋಲ್ ಬೆಲೆ 2.17 ರೂಪಾಯಿ ಏರಿಕೆ

ಬಹುತೇಕ ಪೆಟ್ರೋಲ್ ಪೂರೈಕೆ ಬಂಕ್‌ಗಳಲ್ಲಿ ಪ್ರೀಮಿಯಂ ಪೆಟ್ರೋಲ್ ಬೆಲೆ 2 ರೂಪಾಯಿ ಏರಿಕೆಯಾಗಿದ್ದರೆ, HPCL ಪೆಟ್ರೋಲ್ ಬಂಕ್‌ಗಳಲ್ಲಿ 2.17 ರೂಪಾಯಿ ಏರಿಕೆಯಾಗಿದೆ. ಪ್ರೀಮಿಯಂ ಪೆಟ್ರೋಲ್ ಬೆಲೆ ಪ್ರತಿ‌ಲೀಟರ್ ಗೆ 110.97 ರೂಪಾಯಿಂದ 113.14 ರೂಪಾಯಿಗೆ ಏರಿಕೆಯಾಗಿದೆ. ಇತ್ತ ಸಾಮಾನ್ಯ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೆ ಆತಂಕ ಹೆಚ್ಚಾಗುತ್ತಿದೆ. ಹಂತ ಹಂತವಾಗಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.  

ಕೈಗಾರಿಕೆ ಡೀಸೆಲ್ ಬೆಲೆ 22 ರೂಪಾಯಿ ಏರಿಕೆ

ಕೈಗಾರಿಕೆ ಉದ್ದೇಶಕ್ಕೆ ಬಳಸುವ ಡೀಸೆಲ್ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಕೈಗಾರಿಕಾ ಉದ್ದೇಶಕ್ಕೆ ಬಳಸುವ ಬಲ್ಕ್ ಡಿಸೇಲ್ ದರ ಲೀಟರ್ ಗೆ 22 ರೂ. ಏರಿಕೆಯಾಗಿದೆ. ಕೈಗಾರಿಕೆ ಬಳಕೆ ಮಾಡುವ ಡಿಸೇಲ್ ಪ್ರತಿ ಲೀ. ಗೆ 87.67 ರೂಪಾಯಿಯಿಂದ ಇದೀಗ 109.59 ರೂಪಾಯಿಗೆ ಏರಿಕೆಯಾಗಿದೆ.

ತೈಲ ಘಟಗಳ ಮೇಲೆ ದಾಳಿ

ಇರಾನ್ ಮೇಲಿನ ಯುದ್ದ ತೀವ್ರಗೊಳಿಸಿರುವ ಇಸ್ರೇಲ್ ತೈಲ ಘಟಕಗಳ ಮೇಲೆ ದಾಳಿ ಮಾಡಿದೆ. ಇರಾನ್ ಅತೀ ದೊಡ್ಡ ತೈಲ ಘಟಕದ ಮೇಲೆ ದಾಳಿಯಾಗಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಸೌದಿ ಅರೇಬಿಯಾ, ಖತಾರ್‌ನಲ್ಲಿರುವ ವಿಶ್ವದ ಅತೀದೊಡ್ಡ ಎಲ್‌ಎನ್‌ಜಿ ಸೇರಿ ತೈಲ ಘಟಕದ ಮೇಲೆ ದಾಳಿ ಮಾಡಿದೆ. ಇದರ ಪರಿಣಾಮ ತೈಲ ಹಾಗೂ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈ ದಾಳಿಯಾದ ಮೊದಲ ದಿನವೇ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 112 ಡಾಲರ್‌ಗೆ ಏರಿಕೆಯಾಗಿತ್ತು. ಇದೀಗ ಸತತ ಏರಿಕೆ ಕಾಣುತ್ತಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಮೇ 25 ಮತ್ತು 26ರಂದು ಎಸ್‌ಬಿಐ ರಾಷ್ಟ್ರವ್ಯಾಪಿ ಮುಷ್ಕರ, 2 ದಿನದ ಮುಷ್ಕರಕ್ಕೆ ಮೇ 27ರವರೆಗೆ ಸಂಕಷ್ಟ
ಚಿನ್ನ ಕೊಳ್ಳೋರಿಗೆ ಶುಕ್ರದೆಶೆ; ಮತ್ತೆ ಕುಸಿದ ಬಂಗಾರದ ಬೆಲೆ..! ಇವತ್ತಿನ ಗೋಲ್ಡ್‌ ರೇಟ್ ಇಲ್ಲಿದೆ ನೋಡಿ