ನಿಮ್ಮ ಪರ್ಸ್‌ಗೂ ಸಿಗುತ್ತೆ ವಿಮೆ; ಪಡೆಯೋದು ಹೇಗೆ?

By Suvarna News  |  First Published Feb 9, 2024, 5:46 PM IST

ಆರೋಗ್ಯ ವಿಮೆ, ಬೆಳೆ ವಿಮೆ, ವಾಹನ ವಿಮೆ ಹೀಗೆ ನಾನಾ ವಿಮೆಗಳ ಬಗ್ಗೆ ನಾವು ಕೇಳಿದ್ದೇವೆ. ಆದ್ರೆ ಪರ್ಸ್ ವಿಮೆ ಬಗ್ಗೆ ಕೇಳಿದ್ದೀರಾ?. ನಿಮ್ಮ ಜೇಬಿನಲ್ಲಿರುವ ಪರ್ಸ್ ಗೂ ವಿಮೆ ಇದೆ. ಅದ್ರ ಬಗ್ಗೆ ವಿವರ ಇಲ್ಲಿದೆ. 


ಆನ್ಲೈನ್ ಪೇಮೆಂಟ್ ಹೆಚ್ಚಾದ್ಮೇಲೆ ಜನರು ಪರ್ಸ್ ನಲ್ಲಿ ನಗದು ಇಟ್ಟುಕೊಂಡು ತಿರುಗೋದು ಕಡಿಮೆ ಆಗಿದೆ. ತುರ್ತು ಪರಿಸ್ಥಿತಿಗೆ ಬೇಕು ಎನ್ನುವ ಕಾರಣಕ್ಕೆ ಕೆಲವರು ಒಂದೋ ಎರಡೋ ಸಾವಿರ ರೂಪಾಯಿ ಇಟ್ಟುಕೊಂಡು ಹೋಗ್ತಾರೆ. ಕೆಲವರ ಪರ್ಸ್ ನಲ್ಲಿ ನಯಾಪೈಸೆ ಇರೋದಿಲ್ಲ. ಹಾಗಂತ ಪರ್ಸ್ ಕಳೆದು ಹೋದ್ರೆ ಚಿಂತಿಸುವ ಅಗತ್ಯವಿಲ್ಲ ಎಂದಲ್ಲ. ಪರ್ಸ್ ನಲ್ಲಿ ನಗದು ಇರೋದಿಲ್ಲವಾದ್ರೂ ಒಂದಿಷ್ಟು ಕಾರ್ಡ್ ಗಳು ಇದ್ದೇ ಇರುತ್ವೆ. ಈಗಿನ ದಿನಗಳಲ್ಲಿ ಆಧಾರ್ ಕಾರ್ಡ್ ಅನಿವಾರ್ಯ. ಅದರ ಜೊತೆಗೆ ಜನರು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಇಟ್ಟುಕೊಂಡಿರ್ತಾರೆ. ಪರ್ಸ್ ನಲ್ಲಿ ಏನೂ ಇಲ್ಲ ಅಂದ್ರೂ ಪರ್ಸ್ ದುಬಾರಿಯದ್ದಾಗಿರುತ್ತದೆ. ಹಾಗಾಗಿ ಪರ್ಸ್ ಕಳೆದಾಗ ಕಂಗಾಲಾಗ್ತಾರೆ. ಚಿಕ್ಕ ಪರ್ಸ್ ಕಳೆದಿದೆ ಅಂತಾ ಪೊಲೀಸ್ ಠಾಣೆಯಲ್ಲಿ ದೂರು ನೀಡೋದು ಹೇಗೆ ಎನ್ನುವವರೂ ಇದ್ದಾರೆ. ನಮ್ಮ ದೇಹ ರಕ್ಷಣೆಗೆ, ಆರೋಗ್ಯಕ್ಕೆ ನಾವು ನಾನಾ ವಿಮೆ ಮಾಡಿಕೊಳ್ತೇವೆ. ಅದೇ ರೀತಿ ವ್ಯಾಲೆಟ್ ವಿಮೆ ಕೂಡ ಮಾಡಿಸಿಕೊಳ್ಳಬಹುದು. ನಾವಿಂದು ವ್ಯಾಲೆಟ್  ವಿಮೆ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ. 

ಅನೇಕ ಬ್ಯಾಂಕ್ (Bank) ಗಳು ನಿಮಗೆ ವ್ಯಾಲೆಟ್ (Wallet) ವಿಮೆಯನ್ನು ನೀಡುತ್ತವೆ. ವ್ಯಾಲೆಟ್ ಕಳೆದ್ರು ನೀವು ಇದ್ರಿಂದ ನಿಶ್ಚಿಂತರಾಗಿರಬಹುದು. ಐಸಿಐಸಿಐ (ICICI) ಬ್ಯಾಂಕ್‌ ಕೂಡ ನಿಮಗೆ ವ್ಯಾಲೆಟ್ ವಿಮೆ ನೀಡ್ತಿದೆ. ಒನ್ ಅಸಿಸ್ಟ್ ಯೋಜನೆಯಲ್ಲಿ ವ್ಯಾಲೆಟ್ ವಿಮೆ ನಿಮಗೆ ಲಭ್ಯವಿದೆ. ಈ ಒನ್ ಅಸಿಸ್ಟ್ ಯೋಜನೆಯಲ್ಲಿ ಬರೀ ಇದು ಮಾತ್ರವಲ್ಲ ಇನ್ನೂ ಅನೇಕ ಸೇವೆಗಳನ್ನು ಬ್ಯಾಂಕ್ ನಿಮಗೆ ಒದಗಿಸುತ್ತದೆ.

Tap to resize

Latest Videos

ಬೀದಿಬದಿ ವ್ಯಾಪಾರಿಗಳಿಗೆ ವರದಾನ ಪಿಎಂ ಸ್ವನಿಧಿ ಯೋಜನೆ; ಈ ಸಾಲಕ್ಕೆ ಅರ್ಜಿ ಸಲ್ಲಿಸೋದು ಹೇಗೆ?

ಒನ್ ಅಸಿಸ್ಟ್ ಯೋಜನೆ : ಐಸಿಐಸಿಐ ಈ ಒನ್ ಅಸಿಸ್ಟ್ ಯೋಜನೆ, ಲೈಸೆನ್ಸ್,   ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ವಿಮಾನ ಟಿಕೆಟ್ ಹಾಗೂ ನಿಮ್ಮ ಗುರುತಿನ ಚೀಟಿಗೆ ವಿಮೆಯನ್ನು ಒದಗಿಸುತ್ತದೆ. ಇದಲ್ಲದೆ ಈ ಯೋಜನೆಯಲ್ಲಿ ನಿಮಗೆ ತುರ್ತು ನಗದು ಸಹಾಯ, ಹೊಟೇಲ್ ಸಹಾಯ ಹಾಗೂ ಡ್ರೈವಿಂಗ್ ಲೈಸೆನ್ಸ್ ರಿಪ್ಲೇಸ್ಮೆಂಟ್, ಉಚಿತ ಪ್ಯಾನ್ ಕಾರ್ಡ್ ಸೌಲಭ್ಯ ಸೇರಿದಂತೆ ಇನ್ನೂ ಅನೇಕ ಬಗೆಯ ಸೇವೆಗಳು ಲಭ್ಯವಿದೆ. 

ಆರ್‌ಬಿಐ ಕ್ರಮದ ಬೆನ್ನಲ್ಲಿಯೇ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ನಿರ್ದೇಶಕ ಮಂಡಳಿಯ ಸದಸ್ಯ ರಾಜೀನಾಮೆ!

ಒಂದು ಕರೆ ಮಾಡಿದ್ರೆ ಸಾಕು : ನಿಮ್ಮ ವ್ಯಾಲೆಟ್ ಕಳ್ಳತನವಾಗಿದೆ ಎಂದಾಗ ನೀವು ಆತಂಕಕ್ಕೆ ಒಳಗಾಗ್ತೀರಿ. ಅಲ್ಲಿ ಕ್ರೆಡಿಟ್ ಕಾರ್ಡ್ ಇದೆ, ಡೆಬಿಟ್ ಕಾರ್ಡ್ ಇದೆ, ನಿಮ್ಮ ಅಮೂಲ್ಯ ದಾಖಲೆ ಇದೆ ಎಂಬ ಟೆನ್ಷನ್ ಶುರುವಾಗುತ್ತದೆ. ಈ ಯೋಜನೆ ಹೊಂದಿದ್ದರೆ ನೀವು ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ವ್ಯಾಲೆಟ್ ಕಳೆದಿದೆ ಎಂಬ ಅನುಮಾನ ಬರ್ತಾ ಇದ್ದಂತೆ ನೀವು ಒಂದು ಕರೆ ಮಾಡಬೇಕು. ಈ ಎಲ್ಲ ಕಾರ್ಡ್ ಬ್ಲಾಕ್ ಆಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಸಹಾಯವಾಣಿ ಸಿಬ್ಬಂದಿ ನಿಮಗೆ ನೆರವಾಗುತ್ತಾರೆ. ಬ್ಯಾಂಕ್ ಸಹಾಯವಾಣಿಗೆ ಇಪ್ಪನ್ನಾಲ್ಕು ಗಂಟೆ ಕೆಲಸ ಮಾಡುತ್ತದೆ.  ಐಸಿಐಸಿಐ ಬ್ಯಾಂಕ್ ಒಂದೇ ಯೋಜನೆಯಲ್ಲಿ ಈ ಎಲ್ಲ ಲಾಭ ನೀಡುವ ಜೊತೆಗೆ ಕೆಲ ಓಟಿಟಿ ಫ್ಲಾರ್ಟ್ಫಾರ್ಮ್ ಗಳಿಗೆ ಚಂದಾದಾರಿಕೆಯನ್ನು ನೀಡುತ್ತದೆ. 

ಯೋಜನೆಗೆ ಎಷ್ಟು ಹಣ ಪಾವತಿ ಮಾಡಬೇಕು? : ನೀವು ಐಸಿಐಸಿಐ ಒನ್ ಅಸಿಸ್ಟ್ ನಲ್ಲಿ ಮೂರು ಪ್ಲಾನ್ ನೋಡಬಹುದು. ಒಂದೊಂದು ಪ್ಲಾನ್ ಬೆಲೆ ಭಿನ್ನವಾಗಿದೆ. ಮೊದಲ ಪ್ಲಾನ್ ಗೆ ನೀವು 1599 ರೂಪಾಯಿ ಪಾವತಿ ಮಾಡಬೇಕು. ಎರಡನೇ ಪ್ಲಾನ್ ಗೆ 1899 ರೂಪಾಯಿ ಮತ್ತು ಮೂರನೇ ಪ್ಲಾನ್ ಗೆ 2199 ರೂಪಾಯಿ ನೀಡಬೇಕು. ನೀವು ಬ್ಯಾಂಕ್ ಅಧಿಕೃತ ವೆಬ್ಸೈಟ್ ಅಥವಾ ಶಾಖೆಗೆ ಹೋಗಿ ಇದ್ರ ಬಗ್ಗೆ ಮಾಹಿತಿ ಪಡೆಯಬಹುದು. 

click me!