ಆದಾಯ ತೆರಿಗೆ ರೀಫಂಡ್‌ಗೆ ಕಾಯ್ತಿದ್ದೀರಾ..? ನಿಮಗೂ ಈ ರೀತಿ ಸಂದೇಶ ಬರ್ಬೋದು ಎಚ್ಚರ!

By BK Ashwin  |  First Published Aug 6, 2023, 5:11 PM IST

Income tax refund ‘ಆದಾಯ ತೆರಿಗೆ ಮರುಪಾವತಿ’ ಸಂದೇಶದ ಹೆಸರಿನಲ್ಲಿ ಹೊಸ ಫಿಶಿಂಗ್ ಹಗರಣವೊಂದು ಕಾಣಿಸಿಕೊಂಡಿದೆ. ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ ಜುಲೈ ಗಡುವು ಮುಗಿದಂತೆ, ವಂಚಕರು ನಕಲಿ ಆದಾಯ ತೆರಿಗೆ ಮರುಪಾವತಿ ಸಂದೇಶಗಳೊಂದಿಗೆ ಜನರನ್ನು ಬಲೆಗೆ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.


ನವದೆಹಲಿ (ಆಗಸ್ಟ್‌ 6, 2023): ನೀವು ಆದಾಯ ತೆರಿಗೆ ಪಾವತಿ ಅಥವಾ ಐಟಿ ರಿಟರ್ನ್ಸ್‌ ಮಾಡಿದ್ದು, ರೀಫಂಡ್‌ಗಾಗಿ ಕಾಯ್ತಿದ್ದೀರಾ..? ಸ್ವಲ್ಪ ವಿಳಂಬವಾದ್ರೂ ಪರವಾಗಿಲ್ಲ, ರೀಫಂಡ್‌ ಪಡೆಯೋ ಅವಸರದಲ್ಲಿ ನಕಲಿ ಲಿಂಕ್‌ಗಳನ್ನು ಕ್ಲಿಕ್‌ ಮಾಡಿ ಇರೋ ಹಣವನ್ನೂ ಕಳ್ಕೋಬೇಡಿ. ಯಾಕಪ್ಪಾ ಈ ರೀತಿ ಎಚ್ಚರಿಕೆ ಅಂತೀರಾ..? ನಾವಲ್ಲ.. ಕೇಂದ್ರ ಸರ್ಕಾರವೇ ಎಚ್ಚರಿಕೆ ಸಂದೇಶ ನೀಡಿದೆ ನೋಡಿ.. 

ನಿಮಗೆ ‘’ ₹XXXXX ಮೊತ್ತದ ಆದಾಯ ತೆರಿಗೆ ರೀಫಂಡ್‌ ಅಪ್ರೂವ್‌ ಆಗಿದೆ. ಹಾಗೂ, ಇದಕ್ಕೆ ನೀವು  ನಿಮ್ಮ ಬ್ಯಾಂಕ್ ಖಾತೆಯನ್ನು ನೀವು ಪರಿಶೀಲಿಸಬೇಕು ಅಥವಾ ಅಪ್ಡೇಟ್‌ ಮಾಡಬೇಕು’’ ಎಂದು ಹೇಳಿಕೊಳ್ಳುವ ಸಂದೇಶ ಬಂದಿದ್ಯಾ..?’’ ಹಾಗಾದ್ರೆ, ಎಚ್ಚರ! ಇದೊಂದು ನಕಲಿ ಸಂದೇಶವಾಗಿದ್ದು, ದಯವಿಟ್ಟು ಅಂತಹ ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯಿಸಲು ತಲೆಕೆಡಿಸಿಕೊಳ್ಳಬೇಡಿ. 

Tap to resize

Latest Videos

ಇದನ್ನು ಓದಿ: ಭೂಮಿ ತಾಯಿಗಿಲ್ಲಿ ಬಂಗಾರಕ್ಕೂ ಅಧಿಕ ಬೆಲೆ: ಎಕರೆಗೆ 100 ಕೋಟಿ ರೂ. ಗೆ ಮಾರಾಟ!

ಏಕೆಂದರೆ, ‘ಆದಾಯ ತೆರಿಗೆ ಮರುಪಾವತಿ’ ಸಂದೇಶದ ಹೆಸರಿನಲ್ಲಿ ಹೊಸ ಫಿಶಿಂಗ್ ಹಗರಣವೊಂದು ಕಾಣಿಸಿಕೊಂಡಿದೆ. ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ ಜುಲೈ ಗಡುವು ಮುಗಿದಂತೆ, ವಂಚಕರು ನಕಲಿ ಆದಾಯ ತೆರಿಗೆ ಮರುಪಾವತಿ ಸಂದೇಶಗಳೊಂದಿಗೆ ಜನರನ್ನು ಬಲೆಗೆ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸರ್ಕಾರದ ಅಧಿಕೃತ ಫ್ಯಾಕ್ಟ್‌ ಚೆಕರ್‌, PIB FactCheck ಆದಾಯ ತೆರಿಗೆ ಮರುಪಾವತಿಗೆ ಸಂಬಂಧಿಸಿದ ನಕಲಿ ಸಂದೇಶಗಳ ಬಗ್ಗೆ ಜನರನ್ನು ಎಚ್ಚರಿಸಿದೆ. “ಆತ್ಮೀಯ ಸರ್, ನೀವು ₹15,490/- ಆದಾಯ ತೆರಿಗೆ ಮರುಪಾವತಿಗೆ ಅನುಮೋದನೆ ಪಡೆದಿದ್ದೀರಿ, ಶೀಘ್ರದಲ್ಲೇ ಮೊತ್ತವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುವುದು. ದಯವಿಟ್ಟು ನಿಮ್ಮ ಖಾತೆ ಸಂಖ್ಯೆ 5XXXXX6755 ಅನ್ನು ಪರಿಶೀಲಿಸಿ. ಇದು ಸರಿಯಾಗಿಲ್ಲದಿದ್ದರೆ, ದಯವಿಟ್ಟು ಕೆಳಗಿನ ಲಿಂಕ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಬ್ಯಾಂಕ್ ಖಾತೆ ಮಾಹಿತಿಯನ್ನು ಅಪ್ಡೇಟ್‌ ಮಾಡಿ. https://bit.ly/20wpYK6" ಎಂದು ಟ್ವೀಟ್‌ ಹೇಳುತ್ತದೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌: ಶೀಘ್ರದಲ್ಲೇ 1 ಕೋಟಿಗೂ ಹೆಚ್ಚು ಉದ್ಯೋಗಿಗಳಿಗೆ ತುಟ್ಟಿಭತ್ಯೆ ಹೆಚ್ಚಳ!

.ಇದನ್ನು ನಕಲಿ ಎಂದು ಕರೆದಿರುವ ಪಿಐಬಿ ಫ್ಯಾಕ್ಟ್ ಚೆಕ್, ಆದಾಯ ತೆರಿಗೆ ಇಲಾಖೆ ಈ ಸಂದೇಶವನ್ನು ಕಳುಹಿಸಿಲ್ಲ ಎಂದು ಹೇಳಿದೆ. ಹಾಗೂ, ಅಂತಹ ವಂಚನೆಗಳ ಬಗ್ಗೆ ಎಚ್ಚರದಿಂದಿರಬೇಕು ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದರಿಂದ ದೂರವಿರಬೇಕು.

ತೆರಿಗೆದಾರರು ಆದಾಯ ತೆರಿಗೆ ರೀಫಂಡ್‌ ಸ್ವೀಕರಿಸೋದೇಗೆ?
ಆದಾಯ ತೆರಿಗೆ ಮರುಪಾವತಿಯನ್ನು ನೇರವಾಗಿ ರಿಟರ್ನ್ಸ್ ಸಲ್ಲಿಸುವ ಸಮಯದಲ್ಲಿ ತೆರಿಗೆದಾರರು ಒದಗಿಸಿದ ಪೂರ್ವ-ಮೌಲ್ಯಮಾಪಕ ಬ್ಯಾಂಕ್ ಖಾತೆಗಳಿಗೆ ಕಳುಹಿಸಲಾಗುತ್ತದೆ. ತೆರಿಗೆ ಇಲಾಖೆಯು ತೆರಿಗೆದಾರರನ್ನು ಬ್ಯಾಂಕ್ ಖಾತೆ ವಿವರಗಳನ್ನು ನೀಡಲು ಅಥವಾ ಸಂದೇಶಗಳ ಮೂಲಕ ಅಪ್ಡೇಟ್‌ ಅಥವಾ ಪರಿಶೀಲಿಸಲು ಎಂದಿಗೂ ಕೇಳುವುದಿಲ್ಲ. ಅವರು ಇಮೇಲ್ ಮೂಲಕ ಪಿನ್‌ಗಳು ಅಥವಾ ಪಾಸ್‌ವರ್ಡ್‌ಗಳಂತಹ ವೈಯಕ್ತಿಕ ಮಾಹಿತಿಯನ್ನು ವಿನಂತಿಸುವುದಿಲ್ಲ ಎಂಬುದನ್ನು ಐಟಿ ರಿಟರ್ನ್ಸ್‌ ಫೈಲ್‌ ಮಾಡುವವರು ತಿಳಿದುಕೊಳ್ಳಬೇಕು.

ಇದನ್ನು ಓದಿ: Ambani vs Tata ನಡುವೆ ಹೆಚ್ತಿದೆ ಪೈಪೋಟಿ: ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸ್ಪರ್ಧಿಸುತ್ತಿರುವ ಬ್ರ್ಯಾಂಡ್‌ಗಳ ಪಟ್ಟಿ ಹೀಗಿದೆ..

"ಆದಾಯ ತೆರಿಗೆ ಇಲಾಖೆಯ ಪತ್ರಿಕಾ ಪ್ರಕಟಣೆಯ ಪ್ರಕಾರ, 61% ರಷ್ಟು ಇ-ಪರಿಶೀಲಿಸಿದ ರಿಟರ್ನ್ಸ್ ಅನ್ನು ಈಗಾಗಲೇ ಪ್ರಕ್ರಿಯೆಗೊಳಿಸಲಾಗಿದೆ - ಅಂದರೆ ಪ್ರಕ್ರಿಯೆ, ಮರುಪಾವತಿ ಅಥವಾ ಹೊಂದಾಣಿಕೆಗೆ ಸಂಬಂಧಿಸಿದ ಸೂಚನೆಯನ್ನು ಕಳುಹಿಸಿರಬೇಕು ಮತ್ತು ಯಾವುದಾದರೂ ರೀಫಂಡ್‌ ಡ್ಯೂ ಇದ್ದರೆ ಪ್ರಕ್ರಿಯೆಗೊಳಿಸಿದ ನಂತರ ಸಾಮಾನ್ಯವಾಗಿ 10 ದಿನಗಳಿಂದ 2 ವಾರಗಳವರೆಗೆ ಕ್ರೆಡಿಟ್ ಆಗಬೇಕು’’ ಎಂದು ಕ್ಲಿಯರ್‌ನ ಸಂಸ್ಥಾಪಕ ಮತ್ತು ಸಿಇಒ ಅರ್ಚಿತ್ ಗುಪ್ತಾ ಹೇಳಿದರು.

ಇದನ್ನೂ ಓದಿ: ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಗೆ ನೋಂದಣಿ ಮಾಡಿಲ್ವಾ? ಗಡುವು ವಿಸ್ತರಣೆ; ಕೊನೆಯ ದಿನದ ಬಗ್ಗೆ ಇಲ್ಲಿದೆ ಮಾಹಿತಿ..

click me!