ಮುಕೇಶ್ ಅಂಬಾನಿಯನ್ನು ಸೋಲಿಸಿದ ವೊಡಾಫೋನ್; ಇತ್ತ ಏರ್‌ಟೆಲ್‌ಗೂ ಶಾಕ್!

Published : Feb 03, 2025, 11:50 AM IST
ಮುಕೇಶ್ ಅಂಬಾನಿಯನ್ನು ಸೋಲಿಸಿದ ವೊಡಾಫೋನ್; ಇತ್ತ ಏರ್‌ಟೆಲ್‌ಗೂ ಶಾಕ್!

ಸಾರಾಂಶ

Vodafone Creates History: ವೊಡಾಫೋನ್ ಐಡಿಯಾ ಪ್ರಮುಖ ಸಾಧನೆಯನ್ನು ಮಾಡಿದೆ. ವೊಡಾಫೋನ್ ಮಾಡಿರುವ ಈ ಸಾಧನೆಯಿಂದ ಮೊಬೈಲ್ ಬ್ರಾಡ್‌ಬ್ಯಾಂಡ್ ಕವರೇಜ್ ಕಡಿಮೆ ಇರುವ ಪ್ರದೇಶಗಳಲ್ಲಿ ಹೊಸ ಭರವಸೆ ಅಲೆಯನ್ನು ಸೃಷ್ಟಿಸಿದೆ.  

ನವದೆಹಲಿ: ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ವೊಡಾಫೋನ್ ಐಡಿಯಾ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಸಂಸ್ಥೆಗಿಂತ ಒಂದು ಹೆಜ್ಜೆಯನ್ನು ಮುಂದಿಟ್ಟಿದೆ.  ಸ್ಟ್ಯಾಂಡರ್ಟ್ ಸ್ಮಾರ್ಟ್‌ಫೋನ್‌ ಬಳಸಿ ಬಾಹ್ಯಕಾಶದಿಂದ ವಿಡಿಯೋ ಕಾಲ್ ಮಾಡುವಲ್ಲಿ ಸಕ್ಸಸ್ ಆಗಿದೆ. ಈ ಹೊಸ ತಂತ್ರಜ್ಞಾನಕ್ಕೆ ಯಾವುದೇ ವಿಶೇಷ ಸ್ಯಾಟ್‌ಲೈಟ್ ಫೋನ್, ಹೆಚ್ಚುವರಿ ಡಿಶ್, ಸ್ಪೆಷಲ್ ಟರ್ಮಿನಲ್ ಬೇಕಾಗುವುದಿಲ್ಲ. ಸದ್ಯ ಬಳಕೆಯಲ್ಲಿರುವ 4G ಮತ್ತು 5G ನೆಟ್‌ವರ್ಕ್ ಮೊಬೈಲ್ ಬ್ರಾಡ್‌ಬ್ಯಾಂಡ್ ಆಗಿದೆ. ಸ್ಯಾಟ್‌ಲೈಟ್‌ ಮತ್ತು ಟೆರಿಸ್ಟ್ರೀಯಲ್ ನೆಟ್‌ವರ್ಕ್ ಬಳಸಿ ಬಾಹ್ಯಕಾಶದಿಂದ ವಿಡಿಯೋ ಕಾಲ್ ಮಾಡಲಾಗಿದೆ.

ಜಾಗರನ್ ವರದಿ ಪ್ರಕಾರ,  ಸ್ಪೇಸ್-ಟು-ಲ್ಯಾಂಡ್ ಗೇಟ್‌ ವೇ ಮೂಲಕ ವಿಡಿಯೋ ಕಾಲ್ ಮಾಡುವ ಮೂಲಕ ವೊಡಾಫೋನ್ ಹಿಸ್ಟರಿ ಕ್ರಿಯೇಟ್ ಮಾಡಿದೆ. AST ಸ್ಪೇಸ್‌ಮೊಬೈಲ್‌ನ ಬ್ಲೂಬರ್ಡ್ ಉಪಗ್ರಹ ಸಹಾಯದಿಂದ ಈ ವಿಡಿಯೋ ಕಾಲ್ ಮಾಡಲಾಗಿದೆ. ವೊಡಾಫೋನ್ ಇಂಜಿನಿಯರ್ ರೋವನ್ ಚೆಸ್ಮರ್ (Vodafone engineer Rowan Chesmer) ಎಂಬವರು ಸೆಂಟ್ರಲ್ ವೇಲ್ಸ್‌ನ ಪರ್ವತ ಪ್ರದೇಶದಿಂದ (mountainous area in central Wales) ವೊಡಾಫೋನ್ ಗ್ರೂಪ್ ಸಿಇಒ ಮಾರ್ಗರಿಟಾ ಡೆಲ್ಲಾ ವ್ಯಾಲೆ (Vodafone Group CEO Margherita Della Valle) ಅವರಿಗೆ ಕರೆ ಮಾಡಿದ್ದಾರೆ. ಈ ಸ್ಥಳವು ಹಿಂದೆ ಯಾವುದೇ ಮೊಬೈಲ್ ಬ್ರಾಡ್‌ಬ್ಯಾಂಡ್ ವ್ಯಾಪ್ತಿಯನ್ನು ಹೊಂದಿಲ್ಲ, ಈ ತಂತ್ರಜ್ಞಾನದ ಪರಿವರ್ತಕ ಸಾಮರ್ಥ್ಯವನ್ನು ಹೇಳುತ್ತಿದೆ. 

ವೊಡಾಫೋನ್ ಮಾಡಿರುವ ಈ ಸಾಧನೆಯನ್ನು ಮೊಬೈಲ್ ಸಂವಹನದಲ್ಲಿ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಲಾಗುತ್ತಿದೆ. ಜನವರಿ 1, 1985ರಂದು ವೊಡಾಫೋನ್ ಮೊದಲ ಬಾರಿಗೆ ಇಂಗ್ಲೆಂಡ್‌ನಲ್ಲಿ ಮೊಬೈಲ್ ಫೋನ್ ಕರೆಯನ್ನು ಮಾಡಿತ್ತು. ಇದಾದ 40 ವರ್ಷದ ಬಳಿಕ ವೊಡಾಫೋನ್ ಮತ್ತೊಂದು ಮಹತ್ತರವಾದ ಸಾಧನೆಯನ್ನು ಮಾಡಿದೆ. . ನೇರ-ಮೊಬೈಲ್ ಉಪಗ್ರಹ ತಂತ್ರಜ್ಞಾನವು ವೊಡಾಫೋನ್‌ನ ಫೈಬರ್ ಮತ್ತು ಮೊಬೈಲ್ ನೆಟ್‌ವರ್ಕ್‌ ಕರೆ ಮಾಡಬಹುದಾಗಿದೆ, ಯಾವುದೇ ಅಡೆತಡೆಯಿಲ್ಲದೇ ಮ್ಯಾನುಯುಲ್ ಸ್ವಿಚ್ಚಿಂಗ್ ಕನೆಕ್ಟಿವಿಟಿ ಇರಲಿದೆ. 

ವೊಡಾಫೋನ್ 2019 ರಿಂದ AST ಸ್ಪೇಸ್‌ಮೊಬೈಲ್‌ನಲ್ಲಿ ಪ್ರಮುಖ ಹೂಡಿಕೆದಾರರಾಗಿದ್ದು, ಬಾಹ್ಯಾಕಾಶ ಆಧಾರಿತ ಸಂಪರ್ಕವನ್ನು ಪರೀಕ್ಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. AST ಸ್ಪೇಸ್‌ಮೊಬೈಲ್‌ನ ಐದು ಕಾರ್ಯಾಚರಣಾ BlueBird ಉಪಗ್ರಹಗಳು ಈಗ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳಿಗೆ ನೇರ ಸಂಪರ್ಕವನ್ನು ಒದಗಿಸುತ್ತವೆ, 120 Mbps ವರೆಗೆ ಗರಿಷ್ಠ ಡೇಟಾ ಪ್ರಸರಣ ವೇಗವನ್ನು ನೀಡುತ್ತವೆ.

ಇದನ್ನೂ ಓದಿ: ಅಂಬಾನಿ ಜಿಯೋಗೆ ಆಘಾತ ಕೊಟ್ಟ ಹೊಸ ರಿಪೋರ್ಟ್; ಏನಿದು  OpenSignal ವರದಿ? ಬಚ್ಚಿಟ್ಟ ಸತ್ಯ ಬಯಲು

ಈ ವಿಡಿಯೋ ಕಾಲ್ ಮತ್ತಷ್ಟು ಪರೀಕ್ಷೆಗಳು ನಡೆಯಬೇಕಿದೆ. 2026ರ ವೇಳೆಗೆ ಈ ಸೇವೆಯನ್ನು ಯುರೋಪಿಯನ್ ಮಾರುಕಟ್ಟೆಗೆ ಪರಿಚಯಿಸಲು ಪ್ಲಾನ್ ಮಾಡಿಕೊಳ್ಳಲಾಗುತ್ತಿದೆ ಎಂದು ವೊಡಾಫೋನ್ ಗ್ರೂಪ್ ಸಿಇಒ ಮಾರ್ಗರಿಟಾ ಡೆಲ್ಲಾ ವ್ಯಾಲೆ ಹೇಳಿದ್ದಾರೆ. ಇನ್ನು AST ಸ್ಪೇಸ್‌ಮೊಬೈಲ್ ಸಂಸ್ಥಾಪಕ ಮತ್ತು ಸಿಇಒ ಅಬೆಲ್ ಅವೆಲ್ಲನ್ ಈ ಕುರಿತು ಪ್ರತಿಕ್ರಿಯಿಸಿದ್ದು, ವೊಡಾಪೋನ್ ಜೊತೆಗಿನ ಸಹಯೋಗದಲ್ಲಿದು ಮತ್ತೊಂದು ಐತಿಹಾಸಿಕ ಹೆಜ್ಜೆ ಎಂದು ಶ್ಲಾಘಿಸಿದ್ದಾರೆ.

ಭವಿಷ್ಯದಲ್ಲಿ ವೊಡಾಫೋನ್‌ನ ಡೈರೆಕ್ಟ್-ಟು-ಮೊಬೈಲ್ ಉಪಗ್ರಹ ತಂತ್ರಜ್ಞಾನವು ಜಾಗತಿಕ ದೂರಸಂಪರ್ಕದಲ್ಲಿ ಹೊಸ ಮಾನದಂಡ ರಚನೆಗೆ ಕಾರಣವಾಗಬಹುದು. ಮೊಬೈಲ್ ಬ್ರಾಡ್‌ಬ್ಯಾಂಡ್ ಕವರೇಜ್ ಕಡಿಮೆ ಇರುವ ಪ್ರದೇಶಗಳಲ್ಲಿ ವೊಡಾಫೋನ್ ಹೊಸ ಭರವಸೆಯನ್ನು  ಸೃಷ್ಟಿಸಿದೆ. ವೊಡಾಫೋನ್ ಮಾಡಿರುವ ಸಾಧನೆ, ಎಲಾನ್ ಮಸ್ಕ್‌ ಅವರ ಸ್ಟಾರ್‌ಲಿಂಕ್, ಮುಕೇಶ್ ಅಂಬಾನಿಯ ಜಿಯೋ ಮತ್ತು ಸುನಿಲ್ ಮಿತ್ತಲ್ ಅವರ ಏರ್‌ಟೆಲ್ ಗೆ ಇದು ಮಾರುಕಟ್ಟೆಯಲ್ಲಿ ತಮ್ಮ ಸೇವೆಗಳನ್ನು ಮತ್ತಷ್ಟು ಸುಧಾರಿಸಿಕೊಳ್ಳುವ  ಸವಾಲು ಹಾಕಿದೆ. 

ಇದನ್ನೂ ಓದಿ: ಒಂದಲ್ಲ, ಎರಡಲ್ಲ, ಬರೋಬ್ಬರಿ 5 ವಾರ್ಷಿಕ ಪ್ಲಾನ್‌ ಅನೌನ್ಸ್ ಮಾಡಿ ಎಲ್ಲರಿಗೂ ಶಾಕ್ ಕೊಟ್ಟ ವೊಡಾಫೋನ್ ಐಡಿಯಾ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ