ಎಟಿಂ ಹಣ ಡ್ರಾಕ್ಕೆ ಶುಲ್ಕ ಏರಿಸಿದ ಆರ್‌ಬಿಐ, ಯುಪಿಐ ಪಾವತಿಯಲ್ಲೂ ಬದಲಾವಣೆ

Published : Feb 02, 2025, 09:45 PM IST
ಎಟಿಂ ಹಣ ಡ್ರಾಕ್ಕೆ ಶುಲ್ಕ ಏರಿಸಿದ ಆರ್‌ಬಿಐ, ಯುಪಿಐ ಪಾವತಿಯಲ್ಲೂ ಬದಲಾವಣೆ

ಸಾರಾಂಶ

ಫೆಬ್ರವರಿಯಿಂದ ಮಹತ್ವದ ಬದಲಾವಣೆಗಳಾಗಿದೆ. ಈ ಪೈಕಿ ಎಟಿಎಂ ಹಣ ಡ್ರಾ ಮಾಡುವ ಉಚಿತ ಮಿತಿ ಇಳಿಕೆ ಮಾಡಲಾಗಿದೆ. ಜೊತೆಗೆ ಹಣ ಡ್ರಾ ಶುಲ್ಕ ಏರಿಕೆ ಮಾಡಲಾಗಿದೆ. ಇನ್ನು ಯುಪಿಐ ಪಾವತಿಯಲ್ಲೂ ಮಹತ್ವದ ಬದಲಾವಣೆ ಮಾಡಲಾಗಿದೆ.

ನವದೆಹಲಿ(ಫೆ.2) ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ವದ ಬದಲಾವಣೆ ಮಾಡಿದೆ. ಈ ಪೈಕಿ ಫೆಬ್ರವರಿ 1 ರಿಂದ ಮಾಡಿರುವ ಎರಡು ಬದಲಾವಣೆ ದೇಶದ ಪ್ರತಿಯೊಬ್ಬರಿಗೂ ತಟ್ಟಲಿದೆ. ಪ್ರಮುಖವಾಗಿ ಎಟಿಎಂ ಹಣ ಡ್ರಾ ನಿಯಮ ಹಾಗೂ ಯುಪಿಐ ಪಾವತಿ ವಿಚಾರದಲ್ಲಿ ಬದಲಾವಣೆಯಾಗಿದೆ. ಕೇಂದ್ರ ಬಜೆಟ್ ಮಂಡನೆ ಬೆನ್ನಲ್ಲೇ ದೇಶದಲ್ಲಿ ಎಟಿಎಂ ಡ್ರಾ ಹಾಗೂ ಯುಪಿಐ ಪಾವತಿ ನಿಯಮದಲ್ಲಿ ಮಹತ್ವದ ಬದಲಾವಣೆಯಾಗಿದೆ.  

ಕೇಂದ್ರೀಯ ಬಜೆಟ್ ದಿನದಂದು ಸಾಮಾನ್ಯ ಜನರಿಗೆ ಮುಖ್ಯವಾದ ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿಗೆ ಸಂಬಂಧಿಸಿದಂತೆ ಹಲವಾರು ನಿಯಮಗಳಲ್ಲಿ ಬದಲಾವಣೆಗಳಾಗಿವೆ. ಶನಿವಾರದಿಂದ ATM ಶುಲ್ಕಗಳು ಹೆಚ್ಚಾಗಿವೆ. ಅಂದರೆ ATM ನಿಂದ ಹಣ ಡ್ರಾ ಮಾಡುವ ಶುಲ್ಕ ಹೆಚ್ಚಾಗಿದೆ. ಹೊಸ ನಿಯಮಗಳ ಪ್ರಕಾರ, ಈಗ ಪ್ರತಿ ತಿಂಗಳು ಕೇವಲ 3 ಬಾರಿ ಮಾತ್ರ ATM ನಿಂದ ಉಚಿತವಾಗಿ ಹಣ ಡ್ರಾ ಮಾಡಬಹುದು. ಇದಾದ ಬಳಿಕ, ಪ್ರತಿ ಹೆಚ್ಚುವರಿ ವಹಿವಾಟಿಗೆ 25 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಆದರೆ ಮೊದಲು ಇದು 20 ರೂಪಾಯಿಗಳಾಗಿತ್ತು. ಯಾರಾದರೂ ತಮ್ಮ ಬ್ಯಾಂಕಿನ ಬದಲು ಬೇರೆ ಬ್ಯಾಂಕಿನ ATM ನಿಂದ ಹಣ ಡ್ರಾ ಮಾಡಿದರೆ, ಪ್ರತಿ ವಹಿವಾಟಿಗೆ 30 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

ಏನಿದು ಹೊಸ ಜಂಪ್ ಡೆಪಾಸಿಟ್ ವಂಚನೆ, ಶುರುವಾಗಿದೆ ಯುಪಿಐ ಪೇಮೆಂಟ್ ಸ್ಕ್ಯಾಮ್!

ಹೀಗಾಗಿ ಮೂರು ಎಟಿಎಂ ವಹಿವಾಟು ಉಚಿತ. ಅದು ಕೂಡ ತಮ್ಮದೇ ಬ್ಯಾಂಕ್‌ ಎಟಿಎಂನಲ್ಲಿ ಮಾಡಬೇಕು. ಇನ್ನು ಮೂರಕ್ಕಿಂತ ಹೆಚ್ಚಾದರೆ ಶುಲ್ಕ ದುಬಾರಿ, ಬೇರೆ ಬ್ಯಾಂಕ್‌ನಲ್ಲಿ ಡ್ರಾ ಮಾಡಿದರೂ ದುಬಾರಿ. ಈ ಮೂಲಕ ಕೇಂದ್ರ ಸರ್ಕಾರ ಡಿಜಿಟಲ್ ವಹಿವಾಟಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದರ ಜೊತೆಗೆ ಮತ್ತೊಂದು ಎಟಿಎಂ ಬದಲಾವಣೆ ಎಂದರೆ ಒಂದು ದಿನ ನೀವು ಎಟಿಎಂ ಮೂಲಕ ಗರಿಷ್ಠ 50,000 ರೂಪಾಯಿ ಮಾತ್ರ ಡ್ರಾ ಮಾಡಲು ಸಾಧ್ಯ. ಇದಕ್ಕಿಂತ ಹೆಚ್ಚಿನ ಹಣ ಎಟಿಎಂ ಮೂಲಕ ಡ್ರಾ ಮಾಡುವಂತಿಲ್ಲ. ಹೆಚ್ಚಿನ ಹಣ ಬೇಕಿದ್ದರೆ ಬ್ಯಾಂಕ್ ಶಾಖೆಗೆ ತೆರಳಿ ಚೆಕ್ ಮೂಲಕ ಡ್ರಾ ಮಾಡಿಕೊಳ್ಳಬೇಕು. ಎಟಿಎಂ ಮೂಲಕ ಸಾಧ್ಯವಿಲ್ಲ. 

ಯುಪಿಐ ಪಾವತಿ ಬದಲಾವಣೆ
ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ಅಥವಾ UPI ವಹಿವಾಟುಗಳಲ್ಲಿಯೂ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಥವಾ NPCI ದೊಡ್ಡ ಬದಲಾವಣೆಗಳನ್ನು ತಂದಿದೆ. ವಿಶೇಷ ಅಕ್ಷರಗಳಾದ @, #, $, ಇತ್ಯಾದಿಗಳನ್ನು ಬಳಸಿ ರಚಿಸಲಾದ UPI ID ಗಳನ್ನು ಫೆಬ್ರವರಿ 1 ರಿಂದ ಸ್ವೀಕರಿಸಲಾಗುವುದಿಲ್ಲ. ಈಗಿನಿಂದ UPI ಬಳಕೆದಾರರು ತಮ್ಮ ID ಗಳನ್ನು ರಚಿಸಲು ವರ್ಣಮಾಲೆಯ ಅಕ್ಷರಗಳನ್ನು ಮಾತ್ರ ಬಳಸಬೇಕಾಗುತ್ತದೆ. ವ್ಯಾವಹಾರಿಕವಾಗಿ ಡಿಜಿಟಲ್ ಪಾವತಿಯ ಭದ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಬದಲಾವಣೆಯನ್ನು ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಸ್ಪೆಷಲ್ ಕ್ಯಾರೆಕ್ಟರ್ ಮೂಲಕ ಐಡಿ ರಚನೆಯಾಗಿರಬಾರದು. ಈ ಮೂಲಕ ಬಳಕೆದಾರರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 

ಬಜೆಟ್ ಘೋಷಣೆ ದೇಶದ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿದೆ. ಅದರಲ್ಲೂ ಜನಸಾಮಾನ್ಯರಿ ತಟ್ಟುವ ಹಲವು ನೀತಿಗಳ ಬದಲಾವಣೆ, ನಿಯಂತ್ರಣಗಳು ಅರಿವು ಅತ್ಯಗತ್ಯ. ಭಾರತದಲ್ಲಿ ಡಿಜಿಟಲ್ ವ್ಯವಹಾರ ಹೆಚ್ಚಿದ್ದರೂ ಎಟಿಎಂ ಬಳಕೆ ಕಡಿಮೆಯಾಗಿಲ್ಲ. ಜನರು ಎಟಿಎಂ ಮೂಲಕ ಹಣ ಡ್ರಾ ಮಾಡುತ್ತಿದ್ದಾರೆ. ಆದರೆ ಇದೀಗ ಹಣ ಡ್ರಾ ಮಾಡವು ಮೊದಲೇ ನಿಯಮ ಬದಲಾವಣೆ ತಿಳಿದುಕೊಂಡರೆ ವಿನಾಕಾರಣ ಶುಲ್ಕ ಪಾವತಿಸವುದನ್ನು ತಪ್ಪಿಸಬಹುದು. ಇಷ್ಟೇ ಅಲ್ಲ ತುರ್ತು ಸಂದರ್ಭಗಳಲ್ಲಿ ಸಂಕಷ್ಟಕ್ಕೆ ಸಿಲುಕುವುದನ್ನೂ ತಪ್ಪಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಎಟಿಎಂ ಹಾಗೂ ಯುಪಿಐ ಪಾವತಿ ಬಗ್ಗೆ ಪರಿಶೀಲನೆ ಮಾಡಿಕೊಳ್ಳಿ. 

ನೀವು SBI, HDFC ಸೇರಿ ಇತರ ಬ್ಯಾಂಕ್ ಎಟಿಎಂ ಬಳಸುತ್ತಿದ್ದೀರಾ? ಹೊಸ ನಿಯಮ ಜಾರಿ!
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ