ಅಮೆರಿಕಾಗೆ ಬೈ.. ಬೈ.. ಸ್ಟಾರ್ಟಪ್‌ಗೆ ಹಾಯ್‌ ಎಂದಿದ್ದ ಸಾಫ್ಟ್‌ವೇರ್‌ ಇಂಜಿನಿಯರ್ ಕೊನೆಗೂ ಸಕ್ಸಸ್!

By Govindaraj S  |  First Published Aug 10, 2023, 6:45 PM IST

ಅವರು ಅಮೇರಿಕ ದೇಶದಲ್ಲಿ ಪ್ರತಿ ತಿಂಗಳು ಲಕ್ಷ-ಲಕ್ಷ ಸಂಬಳ ಪಡೆಯುತ್ತಿದ್ದರು. ಆದ್ರೆ ಸಡನ್‌ ಆಗಿ ಅದೇನಾಯ್ತೋ ಗೊತ್ತಿಲ್ಲ, ಹುಟ್ಟೂರಲ್ಲಿ ಏನಾದ್ರು ಮಾಡಬೇಕು ಅಂತಾ ವಿನೂತನವಾದ ಉದ್ಯಮಕ್ಕೆ ಕೈ ಹಾಕಿದ್ರು. 


ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್, ವಿಜಯಪುರ 

ವಿಜಯಪುರ (ಆ.10): ಅವರು ಅಮೇರಿಕ ದೇಶದಲ್ಲಿ ಪ್ರತಿ ತಿಂಗಳು ಲಕ್ಷ-ಲಕ್ಷ ಸಂಬಳ ಪಡೆಯುತ್ತಿದ್ದರು. ಆದ್ರೆ ಸಡನ್‌ ಆಗಿ ಅದೇನಾಯ್ತೋ ಗೊತ್ತಿಲ್ಲ, ಹುಟ್ಟೂರಲ್ಲಿ ಏನಾದ್ರು ಮಾಡಬೇಕು ಅಂತಾ ವಿನೂತನವಾದ ಉದ್ಯಮಕ್ಕೆ ಕೈ ಹಾಕಿದ್ರು. ವಿದೇಶದಿಂದ ಮರಳಿದ ಇವರ ಸ್ಟಾರ್ಟಪ್ ಕಂಡು ಜನರು ನಕ್ಕು ಹೀಯಾಳಿಸಿದ್ರು, ಇತ್ತ ಮನೆಯವರು ಅಮೆರಿಕಾ ತೊರೆದು ಬಂದು ಹೊಸ ಉದ್ಯಮಕ್ಕೆ ಕೈಹಾಕಿದ್ದನ್ನ ಕಂಡು ಮುಂದೆನಾಗುತ್ತೋ ಅಂತಾ ಭಯ ಬಿದ್ದಿದ್ದರು. ಆದ್ರೀಗ ಜನರ ಆರೋಗ್ಯಕ್ಕಾಗಿ ಶುರು ಮಾಡಿದ ಅದೊಂದು ಸ್ಟಾರ್ಟಪ್‌ ಈಗ ಜನರನ್ನ ಆಕರ್ಷಿಸುವ ಜೊತೆಗೆ ಸ್ವಂತ ಉದ್ಯೋಗವಾಗಿ ಬೆಳೆದು ನಿಂತಿದೆ.

Tap to resize

Latest Videos

ಸಾಫ್ಟ್‌ವೇರ್‌ ಕೆಲಸಕ್ಕೆ ಬಾಯ್‌, ಸ್ಟಾರ್ಟಪ್‌ಗೆ ಹಾಯ್..‌ ಹಾಯ್‌: ಇವರ ಹೆಸ್ರು ಮಲ್ಲಿಕಾರ್ಜುನ್‌ ಹಟ್ಟಿ ಅಂತಾ. ವಿಜಯಪುರ ನಗರದ ಗ್ಯಾನಿ ಕಾಲೋನಿ ನಿವಾಸಿ. ಅಮೆರಿಕಾದಲ್ಲಿ ಕೈ ತುಂಬಾ ಕಾಸು ತಂದು ಕೊಡುವೆ ಸಾಫ್ಟ್‌ವೇರ್‌  ಕೆಲಸ ಇತ್ತು. ತಿಂಗಳಿಗೆ ಕಮ್ಮಿ ಅಂದ್ರು 3.50 ಲಕ್ಷ ದಿಂದ 4 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದರು. ವರ್ಷಕ್ಕೆ ಅರ್ಧ ಕೋಟಿ ಸಂಬಳ ಪಡೆಯೋ ಸಾಫ್ಟ್‌ವೇರ್‌ ಇಂಜಿನೀಯರ್‌ ಆಗಿದ್ರು. ಆದ್ರೆ ಸಡನ್‌ ಆಗಿ ಏನಾದರು ವಿಶೇಷವಾಗಿರೋದನ್ನ ಮಾಡಬೇಕು, ಏನಾದ್ರು ಸಾಧಿಸಬೇಕು ಅಂತಾ ಅಮೆರಿಕಾ ದೇಶದ ಸಾಪ್ಟವೇರ್‌ ಕೆಲಸಕ್ಕೆ ಬಾಯ್‌ ಬಾಯ್‌ ಹೇಳಿ ತವರೂರು ವಿಜಯಪುರಕ್ಕೆ ಆಗಮಿಸಿದ್ರು. 2008ರಲ್ಲಿ ಅಮೆರಿಕಾ ಸೇರಿದ್ದ ಮಲ್ಲಿಕಾರ್ಜುನ್‌ ಹಟ್ಟಿ 2013ರಲ್ಲಿ ಕೆಲಸಕ್ಕೆ ರಿಸೈನ್‌ ಮಾಡಿ ಊರಿಗೆ ಬಂದಿದ್ರು. ಆರಂಭದಲ್ಲಿ ಏನು ಮಾಡಬೇಕು ಎಂದು ತಿಳಿಯದೆ 2018 ರ ವರೆಗು ತಮ್ಮ ಸ್ವಂತ ಊರು ಶಿವಣಗಿಯಲ್ಲಿ ಸಿರಿಧಾನ್ಯ ಬೆಳೆಯುವ ಕೃಷಿ ಕಾಯಕ ಶುರುಮಾಡಿದ್ರು. ಆದ್ರೆ ಇದನ್ನ ಉದ್ಯಮವಾಗಿ ಪರಿವರ್ತಿಸಬೇಕು ಅಂದು ಕೊಂಡು ಮಾಜಿ ಸಾಫ್ಟ್‌ವೇರ್‌ ಇಂಜಿನೀಯರ್‌ ಸ್ಟಾರ್ಟಪ್‌ಗೆ  ಕೈ ಹಾಕಿದ್ರು.

ಕೊಡಗಿನಲ್ಲಿ ತೆರಿಗೆ ಕಟ್ಟದಿದ್ದರೆ ಗೃಹಲಕ್ಷ್ಮಿ ಅರ್ಜಿ ಸಲ್ಲಿಸುವಂತಿಲ್ಲ?: ಜನರ ಆಕ್ರೋಶ

"ಪಾರ್ಮ್‌ ಟು ಪ್ಲೇಟ್‌ ಥಿಮ್‌ನಲ್ಲಿ ಸ್ಟಾರ್ಟಪ್: ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನೀಯರ್‌ ಆಗಿ ಕೆಲಸ ಮಾಡಿದ್ದ ಮಲ್ಲಿಕಾರ್ಜುನ ಹಟ್ಟಿಯವರ ತಲೆಯಲ್ಲಿ ನೂರಾರು ಐಡಿಯಾಗಳಿದ್ವು. ಆದ್ರೆ ಅದರಲ್ಲಿ ಸ್ಟಾರ್ಟ ಅಫ ರೀತಿಯಲ್ಲಿ ಅವರು ಆಯ್ದು ಕೊಂಡಿದ್ದು ಪಾರ್ಮ್‌ ಟು ಪ್ಲೇಟ್‌ ಎನ್ನುವ ವಿನೂತನವಾದ ಥಿಮ್., ಅಂದ್ರೆ ಹೊಲದಿಂದ ತಟ್ಟೆಗೆ ಎನ್ನುವ ಅರ್ಥದಲ್ಲಿ. ಅಂದ್ರೆ ಅವರು ಹೊಲದಲ್ಲಿ ಬೆಳೆಯುತ್ತಿದ್ದ ಸಿರಿಧಾನ್ಯಕ್ಕೆ ಅಷ್ಟೊಂದು ಬೇಡಿಕೆ ಕಂಡು ಬರಲಿಲ್ಲ. ಸಿರಿಧಾನ್ಯಗಳು ಜನರ ಆರೋಗ್ಯಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತವೆಯಾದ್ರು, ಜನರು ಆ ಬಗ್ಗೆ ನಿರಾಸಕ್ತಿ ಇರೋದನ್ನ ಗಮನಿಸಿದ ಮಲ್ಲಿಕಾರ್ಜುನ್‌ ಹಟ್ಟಿ ಅವರು ಸಿರಿಧಾನ್ಯವನ್ನ ಬ್ರಾಂಡ್‌ ಮಾಡುವ ಉದ್ದೇಶದಿಂದ ಸಿರಿಧಾನ್ಯ ಹಳ್ಳಿಮನೆ ಎನ್ನುವ ಹೊಟೇಲ್‌ ಉದ್ಯಮಕ್ಕೆ ಕೈಹಾಕಿದ್ರು.

ಕೋವಿಡ್‌ ಸಮಯದಲ್ಲಿ ಕೈ ಹಿಡಿದ ಸ್ಟಾರ್ಟಪ್‌: ಸಿರಿಧಾನ್ಯಗಳಿಂದಲೇ ತಯಾರಿಸಿ ತಿಂಡಿ, ಊಟ, ಸಿಹಿ ತಿನಿಸು, ಸಿರಿಧಾನ್ಯಗಳಿಂದಲೇ ತಯಾರಿಸಿದ ಕುರುಕಲು ತಿಂಡಿ ಇದು ಮಲ್ಲಿಕಾರ್ಜುನ್‌ ಹಟ್ಟಿ ಅವರು ಆರಂಭಿಸಿದ ಉದ್ಯಮ. ಆದ್ರೆ ಆರಂಭದಲ್ಲಿ ಬಹಳಷ್ಟು ಕಷ್ಟ ಅನುಭವಿಸಿದ ಇವರಿಗೆ ಕೋವಿಡ್‌ ವರದಾನವಾಯ್ತು. ಯಾಕಂದ್ರೆ ಕೋವಿಡ್‌ ಸಂದರ್ಭದಲ್ಲಿ ಜನರಲ್ಲಿ ಉತ್ತಮ ಆಹಾರ ಸೇವನೆ, ಪೌಷ್ಟಿಕ ಆಹಾರ ಸೇವನೆಯ ಬಗ್ಗೆ ಅರಿವು ಶುರುವಾಗಿತ್ತು. ಇದೆ ಸರಿಯಾದ ಸಮಯ ಎಂದು ಸಿರಿಧಾನ್ಯಗಳ ಮಹತ್ವವನ್ನ ಅವರು ಬಯಸುವ ತಿಂಡಿ-ತಿನಿಸು-ರುಚಿಕಟ್ಟಾದ ಊಟದ ಮೂಲಕ ಜನರಿಗೆ ನೀಡೋದಕ್ಕೆ ಶುರು ಮಾಡಿದ್ರು. ಕೋವಿಡ್‌ ಸಮಯದಲ್ಲಿ ಸಿರಿಧಾನ್ಯಗಳ ಗಂಜಿ ಬಲುಫೇಮಸ್‌ ಆಯ್ತು. ಆರಂಭದಲ್ಲಿ ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸಲು ಹೆಣಗಾಡಿದ್ದ ಮಲ್ಲಿಕಾರ್ಜುನ್‌ ಹಟ್ಟಿ ಅವರಿಗೆ ಕೋವಿಡ್‌ನಲ್ಲಿ ಜನರ ಭಾವನೆಗಳ ಉಂಟಾದ ಬದಲಾವಣೆ ಸಹಕಾರಿಯಾಯ್ತು.

ಹಳ್ಳಿಮನೆಯಲ್ಲಿ ಸಿರಿಧಾನ್ಯಗಳದ್ದೆ ಸದ್ದು: ವಿಜಯಪುರ ನಗರದ ಗೋಳಗುಮ್ಮಟ ರಸ್ತೆಯಲ್ಲಿ ಸಿರಿಧಾನ್ಯ ಹಳ್ಳಿಮನೆ ಎನ್ನುವ ಹೊಟೇಲ್‌ ಆರಂಭಿಸಿದ್ದಾರೆ. ಇಲ್ಲಿ ತಮ್ಮದೆ ಹೊಲದಲ್ಲಿ ಬೆಳೆದ 9 ಸಿರಿಧಾನ್ಯಗಳಿಂದ ತಿಂಡಿ-ತಿನಿಸು-ಊಟ ತಯಾರಿಸಲಾಗುತ್ತೆ. ಆರೋಗ್ಯ ದೃಷ್ಟಿಯಿಂದ ಸಿರಿಧಾನ್ಯಗಳ ಆಹಾರ ಉಪಯುಕ್ತತೆ ಅರಿತಿರುವ ಸಾಕಷ್ಟು ಶ್ರೀಮಂತರು, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು ಸಿರಿಧಾನ್ಯ ಹಳ್ಳಿ ಮನೆಯ ಊಟ-ಆಹಾರಕ್ಕೆ ಮುಗಿಬೀಳ್ತಿದ್ದಾರೆ. ಅದ್ರಲ್ಲು ಹೆಲ್ತಬಗ್ಗೆ ಕೇರ್‌ ಮಾಡೋರಿಗೆ ಇದೊಂದು ಆಸ್ಪತ್ರೆ ರೀತಿಯಲ್ಲೆ ಭಾಸವಾಗುತ್ತೆ. ಯಾಕಂದ್ರೆ ಇಲ್ಲಿ ಮಾಡುವ ಯಾವ ಅಡುಗೆಗು ಕೆಮಿಕಲ್‌, ಸಕ್ಕರೆ, ರುಚಿ ಹೆಚ್ಚಿಸುವ ಕೆಮಿಕಲ್‌ ಬಳಕೆ ಮಾಡಲ್ಲ. ಶುದ್ಧವಾಗಿ ಅಡುಗೆ-ತಿಂಡಿ-ತಿನಿಸುಗಳನ್ನ ತಯಾರಿಸಲಾಗುತ್ತೆ. ಸಿರಿಧಾನ್ಯಗಳಾದ ಆರ್ಕ, ಊದಲು, ನವನೆ ಸೇರಿದಂತೆ 9 ಧಾನ್ಯಗಳಿಂದ ಇಲ್ಲಿ ತಿಂಡಿ-ತಿನಿಸು-ಊಟ ತಯಾರಿಸಲಾಗುತ್ತೆ. ಬಿಪಿ, ಶುಗರ್‌ಗೆ ಮದ್ದು ಈ ಧಾನ್ಯಗಳಲ್ಲಿದ್ದು, ವಿಟಮಿನ್‌ ಗಳ ಕೊರತೆಯನ್ನು ಸಿರಿಧಾನ್ಯಗಳು ನೀಗಿಸುತ್ವೆ. ಹೀಗಾಗಿ ಜನರು ಈ ಹೊಟೇಲ್‌ಗೆ ಮುಗಿ ಬೀಳ್ತಿದ್ದಾರೆ.

20 ಸಿಬ್ಬಂದಿ, ತಿಂಗಳಿಗೆ 7.50 ಲಕ್ಷ ದುಡಿಮೆ: ಅಮೆರಿಕದಲ್ಲಿ ಸಾಫ್ಟ್‌ವೇರ್‌ ಕಂಪನಿಯಲ್ಲಿದ್ದಾಗ ಮಲ್ಲಿಕಾರ್ಜುನ್‌ ಹಟ್ಟಿ ಅವರಿಗೆ ತಿಂಗಳಿಗೆ 3.50 ಲಕ್ಷ ಸಂಬಳ ಇತ್ತು. ವರ್ಷಕ್ಕೆ ಅರ್ಧ ಕೋಟಿ ದುಡಿಯ ಬಲ್ಲ ಸಾಫ್ಟ್‌ವೇರ್‌ ಕಂಪನಿ ತೊರೆದ ಮಲ್ಲಿಕಾರ್ಜುನ ಅವರಿಗೆ ಸಾರ್ಟಫ್‌ ಬಲು ಚಾಲೆಂಜಿಂಗ್‌ ಆಗಿತ್ತು. ‌ಆದ್ರೆ ಇಂದು ಸಿರಿಧಾನ್ಯ ಹಳ್ಳಿಮನೆ ಎಂದರೆ ವಿಜಯಪುರದಲ್ಲಿ ಮನೆ ಮಾತಾಗಿದೆ. ದೇಶ ನಾನಾ ಕಡೆಗಳಿಂದ ಪ್ರವಾಸಕ್ಕೆ ಬರುವವರು ಇಲ್ಲಿ ಹುಡುಕಿಕೊಂಡು ಬಂದು ಊಟ, ತಿಂಡಿ ಮಾಡಿ ಬೇಷ್‌ ಎಂದು ಹೋಗ್ತಾರೆ. ಇದೆಲ್ಲವನ್ನ ಮೆಂಟೆನ್‌ ಮಾಡಲು 20 ಜನರಿಗೆ ಕೆಲಸಕ್ಕೆ ಇಟ್ಟುಕೊಂಡು ಸಾವಿರಾರು ಸಂಬಳ ಕೊಡ್ತಿದ್ದಾರೆ ಮಲ್ಲಿಕಾರ್ಜುನ್‌ ಹಟ್ಟಿ. ಇಂದು ತಿಂಗಳಿಗೆ 7.5ⁿ ಲಕ್ಷದಷ್ಟು ದುಡಿಯುತ್ತಿರೋದಲ್ಲದೆ ಐದಾರು ಕುಟುಂಬಗಳಿಗೆ ಆಸರೆಯಾಗಿದ್ದಾರೆ. ಈಗ ಪುಡ್‌ ಪ್ರಾಸೆಸಿಂಗ್‌ ಯೂನಿಟ್‌ ಕೂಡ ಸ್ಥಾಪಿಸಿದ್ದು, ರಾಜ್ಯಾದ್ಯಂತ ಸಿರಿದಾನ್ಯ ಹಳ್ಳಿಮನೆಯ ಪ್ರಾಂಚೈಸಿ ಕೊಡುವ ಮಟ್ಟಿಗೆ ಮಲ್ಲಿಕಾರ್ಜುನ್‌ ಬೆಳೆದು ನಿಂತಿದ್ದಾರೆ..

Mangaluru: ಎಸ್‌ಡಿಪಿಐಗೆ ಬಿಜೆಪಿ ಸಾಥ್: ತಲಪಾಡಿ ಗ್ರಾ.ಪಂ ಎಸ್‌ಡಿಪಿಐ ತೆಕ್ಕೆಗೆ!

ಸಾಫ್ಟ್‌ವೇರ್‌ ಇಂಜಿನಿಯರ್‌ ನ ಸ್ಟಾರ್ಟಪ್‌ಕಂಡು ನಕ್ಕಿದ್ದ ಜನ: ಆರಂಭದಲ್ಲಿ ಸಿರಿಧಾನ್ಯ ಬೆಳೆದು ಅವುಗಳ ಸಂಸ್ಕರಣೆ ಮಾಡಿಸಿದ ಮೇಲು ಮಾರಾಟವಾಗದೆ, ಕೊಳ್ಳುವವರು ಇಲ್ಲದೆ ಕೈ ಸುಟ್ಟುಕೊಂಡಿದ್ರು. ಹೊಟೇಲ್‌ ಉದ್ಯಮದ ಅನುಭವ ಪಡೆಯಲು ಸಾಫ್ಟ್‌ವೇರ್‌ ಆದ್ರೆ ಪಾರ್ಮ್‌ ಟು ಪ್ಲೇಟ್‌ ಕಾನ್ಸೆಪ್ಟ್‌ ಮೂಲಕ ಸ್ಟಾರ್ಟಪ್‌ಗೆ ಇಳಿದಾಗ ಕೋವಿಡ್‌ ಸಮಯ ಸಾತ್‌ ಕೊಟ್ಟಿತ್ತು. ಹೊಟೇಲ್‌ ಉದ್ಯಮದ ಅನುಭವಕ್ಕಾಗಿ ರಸ್ತೆ ಮೇಲೆ ಇಡ್ನಿ, ಟೀಯನ್ನು ಮಲ್ಲಿಕಾರ್ಜುನ್‌ ಮಾರಾಟ ಮಾಡಿದ್ದಾರೆ. ಆಗ ವಿದೇಶದಲ್ಲಿ ಲಕ್ಷ-ಲಕ್ಷ ಸಂಬಳ ಪಡೆಯೋ ಸಾಫ್ಟವೇರ್‌ ಇಂಜಿನೀಯರ್‌ ರೋಡಲ್ಲಿ ಇಡ್ನಿ-ಟೀ ಮಾರ್ತಿದ್ದಾನಲ್ಲ ಅಂತಾ ಜನರು ನಕ್ಕಿದ್ದು ಇದೆ. ಸ್ವತಃ ಮನೆಯವರೆ ಗಾಭರಿಯಾಗಿ ನಮ್ಮ ಹುಡುಗ ಹಾಳಾದ ಅಂದುಕೊಂಡಿದ್ದು ಇದೆ. ಆದ್ರೀಗ ರಾಜ್ಯದಲ್ಲಿ ಏಕೈಕ ಸಿರಿಧಾನ್ಯ ತಿಂಡಿ, ಊಟ, ಸಿಹಿ ತಿನಿಸು ತಯಾರಕರು ಎನ್ನು ಕೀರ್ತಿ ಮಲ್ಲಿಕಾರ್ಜುನ್‌ ಹಟ್ಟಿಯವರಿಗಿದೆ.

click me!