Black Friday Sale: ವಿಜಯ್ ಸೇಲ್ಸ್‌ನಲ್ಲಿ ಐಫೋನ್ 17 ಬೆಲೆ ಭಾರೀ ಇಳಿಕೆ, ₹13000 ಕಡಿಮೆ ಬೆಲೆಗೆ ಖರೀದಿಸಿ!

Published : Nov 29, 2026, 12:12 PM IST
Vijay Sales Black Friday Sale Apple iPhone 17

ಸಾರಾಂಶ

ವಿಜಯ್ ಸೇಲ್ಸ್‌ನ ಬ್ಲ್ಯಾಕ್ ಫ್ರೈಡೇ ಸೇಲ್‌ನಲ್ಲಿ ಐಫೋನ್ 17 ಮೇಲೆ ಭರ್ಜರಿ ರಿಯಾಯಿತಿ ಲಭ್ಯವಿದೆ. ₹5,000 ಇನ್‌ಸ್ಟಂಟ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಆಫರ್ ಹಾಗೂ ಬ್ಯಾಂಕ್ ರಿಯಾಯಿತಿಗಳ ಮೂಲಕ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಜೊತೆಗೆ ಇತರೆ ಬ್ರ್ಯಾಂಡ್‌ಗಳ ಎಲೆಕ್ಟ್ರಾನಿಕ್ ವಸ್ತುಗಳ ಮೇಲೂ ಆಫರ್‌ಗಳಿವೆ.

Black Friday Sale 2026: ನಿಮ್ಮ ಮೊಬೈಲ್ ಹಳೆಯದಾಗಿಯಾ? ಹೊಸ ಫೋನ್ ಖರೀಸುವ ಪ್ಲಾನ್ ಮಾಡಿದ್ದೀರಾ? ಐಫೋನ್ ಖರೀದಿಸಬೇಕು ಅನ್ನೊ ಆಸೆ ಇದೆಯಾ? ಹಾಗಾದರೆ ಆಪಲ್ ಕಂಪನಿಯ ಐಫೋನ್ 17 ಖರೀದಿಸಲು ಇದು ಸರಿಯಾದ ಸಮಯ. ಬ್ಲ್ಯಾಕ್ ಫ್ರೈಡ್ ಸೇಲ್‌ನಲ್ಲಿ ಐಫೋನ್ 17 ಬೆಲೆ ಇಳಿಕೆಯಾಗಿದ್ದು, ಇದು ಹಿಂದೆಂದಿಗಿಂತಲೂ ಕೈಗೆಟುಕುವ ಬೆಲೆಗೆ ಇಳಿಕೆಯಾಗಿದೆ.

ಹೌದು ಈ ಐಫೋನ್ 17 ಹೊಸ ಅಪ್ಡೇಟ್ ಬಂದಿದೆ.ವಿಜಯ್ ಸೇಲ್ಸ್ ತನ್ನ ಬ್ಲಾಕ್‌ ಫ್ರೈಡ್ ಸೇಲ್‌ ಆರಂಭಿಸಿದೆ ಅದರಲ್ಲಿ ಆಪಲ್ ಫೋನ್‌ , ಲ್ಯಾಪ್‌ಟಾಪ್ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭರ್ಜರಿ ಆಫರ್ ನೀಡಿದೆ. ಇದರಿಂದಾಗಿ ಐಫೋನ್ 17 ಫೋನ್ ಗೂ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಇದರಲ್ಲಿ ಬ್ಯಾಂಕ್ ಆಫರ್, ಎಕ್ಸ್‌ಚೇಂಜ್ ಆಫರ್, ಕ್ಯಾಶ್‌ಬ್ಯಾಕ್, ವೋಚರ್ ಸೇರಿದಂತೆ ಹಲವು ಪ್ರಯೋಜನಗಳನ್ನ ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ಬ್ಲಾಕ್ ಫ್ರೈಡೇ ಸೇಲ್‌ನಲ್ಲಿ ಐಫೋನ್ 17 ಬೆಲೆ ಎಷ್ಟು? ಏನೇನು ಆಫರ್‌ಗಳಿವೆ ಅನ್ನೋದನ್ನು ತಿಳಿಯೋಣ

ಐಫೋನ್ 17 ಮೇಲೆ 13,000 ರೂಪಾಯಿಗಳವರೆಗೆ ಉಳಿತಾಯ

ವಿಜಯ್ ಸೇಲ್ಸ್‌ನ ಬ್ಲ್ಯಾಕ್ ಫ್ರೈಡೇ ಸೇಲ್‌ನಲ್ಲಿ ಆಪಲ್ ಐಫೋನ್ 17 ರ 256GB ಮಾದರಿಯ ಬೆಲೆ ₹93,490. ಈ ಬೆಲೆಯ ಜೊತೆಗೆ, ಬಳಕೆದಾರರು ಹೆಚ್ಚುವರಿಯಾಗಿ ₹5,000 Instant Discount ಸಿಗುತ್ತದೆ. ನಿಮ್ಮಲ್ಲಿ ಹಳೆಯ ಐಫೋನ್ ಇದ್ದರೆ ಇಲ್ಲಿ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದು ಅದರಿಂದ ಸುಮಾರು ₹8,000 ವರೆಗೆ ಬೋನಸ್ ಸಿಗುತ್ತೆ ಈ ಎರಡು ಆಫರ್‌ ಸಂಪೂರ್ಣ ಬಳಸಿಕೊಂಡರೆ ಐಫೋನ್ ಬೆಲೆ ₹80,490 ಕ್ಕೆ ಇಳಿಯುತ್ತೆ. ಇದರಿಂದ 13,000 ರೂಪಾಯಿ ಉಳಿತಾಯವಾಗಬಹುದು.

ಇದಲ್ಲದೆ ಬ್ಯಾಂಕ್ ಆಫರ್, ಫ್ಲೈಟ್ ವೋಚರ್‌ಗಳ ಪಡೆಯಬಹುದು!

ಬ್ಲಾಕ್ ಫ್ರೈಡೇ ಸೇಲ್‌ನಲ್ಲಿ ಬ್ಯಾಂಕ್‌ಗಳಿಂದಲೂ ಪ್ರಯೋಜನ ಪಡೆಯಬಹುದು. ಹೇಗೆ ಅಂತೀರಾ? ಈಗ ನೀವು ಹೆಚ್‌ಡಿಎಫ್‌ಸಿ ಬ್ಯಾಂಕ್ ಅಕೌಂಟ್‌ ಇದ್ದರೆ HDFC ಬ್ಯಾಂಕ್ ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳ ಮೇಲೆ 15,000 ರೂ.ಗಳವರೆಗೆ ಡಿಸ್ಕೌಂಟ್ ಸಿಗುತ್ತೆ. ನಿಮ್ಮಲ್ಲಿ ಹೆಚ್‌ಡಿಎಫ್‌ಸಿ ಇಲ್ಲ, ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇದೆ ಅಂದ್ರೂ ಇಲ್ಲಿಯೂ ಕ್ರೆಡಿಟ್ ಕಾರ್ಡ್ ಮೇಲೆ 15,000 ರೂ.ಗಳವರೆಗೆ ಡಿಸ್ಕೌಂಟ್ ಸಿಗುತ್ತೆ. ಇನ್ನು ಆನ್‌ಲೈನ್ ಶಾಪಿಂಗ್ ixigo ಕೂಡ 5,000 ರೂ. ವರೆಗಿನ ಫ್ಲೈಟ್ ವೋಚರ್‌ ಸಿಗುತ್ತೆ. ಪೇಟಿಎಂ ಪಿಒಎಸ್ ಇಎಂಐ ವಹಿವಾಟುಗಳನ್ನು ಇನ್-ಸ್ಟೋರ್‌ನಲ್ಲಿ ಮಾಡುವವರಿಗೆ 5,000 ವರೆಗಿನ ಪೇಟಿಎಂ ಫ್ಲೈಟ್ ವೋಚರ್‌ ನೀಡಲಾಗುತ್ತೆ.

ಐಫೋನ್ ಅಲ್ಲದೆ ಇತರೆ ಉತ್ಪನ್ನಗಳ ಆಫರ್‌ಗಳು ಹೇಗಿವೆ?

ಆಪಲ್ ಜೊತೆಗೆ, ವಿಜಯ್ ಸೇಲ್ಸ್‌ನ ಮಾರಾಟವು ಇತರ ಹಲವು ಬ್ರಾಂಡ್‌ಗಳ ಉತ್ಪನ್ನಗಳ ಮೇಲೆ ಬೆಲೆಯೂ ಇಳಿಕೆ ಮಾಡಿದೆ. ಲ್ಯಾಪ್‌ಟಾಪ್ ಗಳಲ್ಲಿ HP, ಲೆನೊವೊ, ಡೆಲ್ ಲ್ಯಾಪ್‌ಟಾಪ್‌ಗಳು ಸೇರಿವೆ. ಸ್ಮಾರ್ಟ್‌ಫೋನ್‌ಗಳಲ್ಲಿ Samsung, OnePlus, Vivo, OPPO ಮತ್ತು Xiaomi, ಟಿವಿಗಳು, ಆಡಿಯೊ ಸಾಧನಗಳು ಮತ್ತು ಗೃಹೋಪಯೋಗಿ ಉಪಕರಣಗಳ ಬೆಲೆಯೂ ಇಳಿಕೆಯಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Airtelನಿಂದ ಗ್ರಾಹಕರಿಗೆ ದೊಡ್ಡ ಮೋಸ? TRAIಗೆ ಹೇಳಿದ ಕಡಿಮೆ ಬೆಲೆ ಪ್ಲಾನ್‌ ಎಲ್ಲಿ?
ಬಿಸ್ಲೆರಿ ನೀರಿನ ಪರೀಕ್ಷಾ ವರದಿಯಲ್ಲಿ ಗೊಂದಲವಿದೆ, ದಯವಿಟ್ಟು ಮತ್ತೊಮ್ಮೆ ಮರುಪರಿಶೀಲಿಸಿ : FSSAI ಗೆ ಕಂಪನಿ ಮನವಿ