ಪತ್ನಿ, ಮಕ್ಕಳ ದುಡ್ಡು ನಂಬಿರುವ ಮಲ್ಯ, ಐಷಾರಾಮಕ್ಕೆ ಬ್ರೇಕ್‌!

Published : Apr 05, 2019, 08:24 AM ISTUpdated : Apr 05, 2019, 08:29 AM IST
ಪತ್ನಿ, ಮಕ್ಕಳ ದುಡ್ಡು ನಂಬಿರುವ ಮಲ್ಯ, ಐಷಾರಾಮಕ್ಕೆ ಬ್ರೇಕ್‌!

ಸಾರಾಂಶ

ಮಲ್ಯ, ಐಷಾರಾಮಕ್ಕೆ ಬ್ರೇಕ್‌!| ಪತ್ನಿ, ಮಕ್ಕಳ ದುಡ್ಡಲ್ಲೇ ಜೀವನ

ಲಂಡನ್‌[ಏ.05]: ಸಾವಿರಾರು ಕೋಟಿ ರು. ಸಾಲ ಮಾಡಿದ್ದರೂ, ಲಂಡನ್‌ನಲ್ಲಿ ವಾರಕ್ಕೆ 17 ಲಕ್ಷ ರು.ವೆಚ್ಚ ಮಾಡಿಕೊಂಡು ಜೀವನ ನಡೆಸುತ್ತಿದ್ದ ವಿಜಯ್‌ ಮಲ್ಯ, ಐಷಾರಾಮಿ ಜೀವನಕ್ಕೆ ಬ್ರೇಕ್‌ ಹಾಕಿಕೊಳ್ಳುವುದಾಗಿ ಹೇಳಿದ್ದಾರೆ.

ಮಲ್ಯ ಲಂಡನ್‌ನ ಐಸಿಐಸಿಐ ಬ್ಯಾಂಕ್‌ ಖಾತೆಯಲ್ಲಿ ಹೊಂದಿರುವ 2.33 ಕೋಟಿ ರು. ಜಫ್ತಿಗೆ ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳು ಲಂಡನ್‌ ಕೋರ್ಟ್ ಮೊರೆ ಹೋಗಿವೆ.

ಈ ಕುರಿತ ಅರ್ಜಿ ವಿಚಾರಣೆ ವೇಳೆ ಮಲ್ಯ ಪರ ವಕೀಲರು, ತಮ್ಮ ಕಕ್ಷಿದಾರ ಎಲ್ಲಾ ಬ್ಯಾಂಕ್‌ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಐಸಿಐಸಿಐ ಬ್ಯಾಂಕ್‌ ಹಣ ಮಾತ್ರವೇ ಕೋರ್ಟ್‌ ವೆಚ್ಚಕ್ಕೆ ಬಳಸಲು ಸಿಗುತ್ತಿದೆ. ತಮ್ಮ ಬಳಿ ಈಗ 2956 ಕೋಟಿ ರುಪಾಯಿ ಮೌಲ್ಯದ ವೈಯಕ್ತಿಕ ಆಸ್ತಿ ಉಳಿದಿದ್ದು, ಅದನ್ನು ಸಾಲ ತೀರುವಳಿ ಉದ್ದೇಶದಿಂದ ಕರ್ನಾಟಕ ಹೈಕೋರ್ಟ್‌ ಮುಂದೆ ಪ್ರಸ್ತಾಪ ಇಟ್ಟಿದ್ದೇನೆ. ಜೊತೆಗೆ ತಮ್ಮ ಪಿ.ಎ. ಮಿ ಮಹಲ್‌ ಎಂಬುವರಿಂದ ಹಾಗೂ ವ್ಯವಹಾರ ಪಾಲುದಾರ ಬೇಡಿ ಎಂಬುವರಿಂದ ಕ್ರಮವಾಗಿ 75.7 ಲಕ್ಷ ರು. ಹಗೂ 1.15 ಕೋಟಿ ರು.ಗಳನ್ನು ‘ದೈನಂದಿನ ಖರ್ಚಿಗಾಗಿ’ ಪಡೆದಿರುವುದಾಗಿ ಮಲ್ಯ ಹೇಳಿದ್ದರು.

ಆದರೆ ಈ ವಾದ ತಳ್ಳಿಹಾಕಿದ್ದ ಎಸ್‌ಬಿಐ ಪರ ವಕೀಲರು, ತಮಗೆ ಯಾವುದೇ ಹಣ ಮೂಲದ ಇಲ್ಲವೆಂದು ಮಲ್ಯ ಹೇಳುತ್ತಿದ್ದಾರೆ. ಆದರೆ ಮಾಸಿಕ 16 ಲಕ್ಷ ರು. ವೆಚ್ಚ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ವಾದಿಸಿದ್ದರು. ಈ ವೇಳೆ ತಮ್ಮ ಮಾಸಿಕ ವೆಚ್ಚವನ್ನು 6.50 ಲಕ್ಷ ರು.ಗೆ ಇಳಿಸುವುದಾಗಿ ಮಲ್ಯ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!