
ಇಂದು ಉದ್ಯಮಿ ವಿಜಯ್ ಮಲ್ಯ 70ನೇ ಹುಟ್ಟುಹಬ್ಬ. ದೇಶ ಬಿಟ್ಟು ಪರಾರಿಯಾಗಿ ವಿದೇಶದಲ್ಲಿ ಒಂಟಿಯಾಗಿ ನೆಲೆಸಿರುವ ವಿಜಯ್ ಮಲ್ಯಗೆ ಅವರ ಆತ್ಮೀಯ ಗೆಳೆಯ ಲಲಿತ್ ಮೋದಿ ಲಂಡನ್‌ನಲ್ಲಿ ಬರ್ತ್‌ಡೇಗೂ ಮೊದಲು ಅದ್ದೂರಿಯಾಗಿ ಪಾರ್ಟಿ ಆಯೋಜಿಸಿದ್ದಾರೆ. ಈ ಪಾರ್ಟಿಯಲ್ಲಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಭಾಗಿಯಾಗಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಫೋಟೋಗ್ರಾಫರ್ ಜಿಮ್ ರೈಡಲ್ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಾಜಿ ಅಧ್ಯಕ್ಷರಾಗಿದ್ದ ಲಲಿತ್ ಮೋದಿ ಲಂಡನ್‌ಗೆ ಪರಾರಿಯಾದ ಉದ್ಯಮಿ ವಿಜಯ್ ಮಲ್ಯ ಅವರಿಗೆ ಲಂಡನ್‌ನಲ್ಲಿ ಅದ್ದೂರಿ ಹುಟ್ಟುಹಬ್ಬದ ಪಾರ್ಟಿಯನ್ನು ಆಯೋಜಿಸಿದ್ದಾರೆ. ಬೆಲ್‌ಗ್ರೇವ್ ಸ್ಕ್ವೇರ್‌ನಲ್ಲಿರುವ ಲಲಿತ್ ಮೋದಿ ಅವರ ನಿವಾಸದಲ್ಲಿಯೇ ಈ ಪಾರ್ಟಿ ಆಯೋಜಿಸಲಾಗಿತ್ತು. ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು.
ಈ ಬರ್ತ್‌ಡೇ ಪಾರ್ಟಿಯಲ್ಲಿ ಖ್ಯಾತ ಛಾಯಾಗ್ರಾಹಕ ಜಿಮ್ ರೈಡೆಲ್ ಕೂಡ ಭಾಗಿಯಾಗಿದ್ದರು. ಅವರು ಲಲಿತ್ ಮೋದಿ ಮತ್ತು ಮಲ್ಯ ಅವರ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಲಲಿತ್ ಮೋದಿ ಅವರ ಸುಂದರವಾದ ಲಂಡನ್ ಮನೆಯಲ್ಲಿ ನಿನ್ನೆ ರಾತ್ರಿ ವಿಜಯ್ ಮಲ್ಯ ಅವರ ಗೌರವಾರ್ಥವಾಗಿ ಅವರ 70 ನೇ ಹುಟ್ಟುಹಬ್ಬಕ್ಕೂ ಮೊದಲು ಅದ್ಭುತ ಹುಟ್ಟುಹಬ್ಬದ ಪಾರ್ಟಿಯನ್ನು ಆಯೋಜಿಸಿದ್ದಕ್ಕಾಗಿ ಲಲಿತ್ ಕೆ ಮೋದಿ ಅವರಿಗೆ ಧನ್ಯವಾದಗಳು ಎಂದು ಅವರು ಬರೆದಿದ್ದಾರೆ. ಇದಕ್ಕೆ ಲಲಿತ್ ಮೋದಿಯವರು ಪ್ರತಿಕ್ರಿಯಿಸಿದ್ದು, ನನ್ನ ಮನೆಯಲ್ಲಿ ಆಯೋಜಿಸಿದ್ದ ವಿಜಯ್ ಮಲ್ಯ ಅವರ ಬರ್ತ್‌ಡೇ ಪೂರ್ವ ಪಾರ್ಟಿಗೆ ಆಗಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಇವರೇನು ಅಭಿಮಾನಿಗಳ ಅಥವಾ ರಣಹದ್ದುಗಳ: ಮುಗಿಬಿದ್ದ ಜನರಿಂದ ನಟಿಯ ರಕ್ಷಿಸಲು ಪಡಿಪಾಟಲು ಪಟ್ಟ ಬಾಡಿಗಾರ್ಡ್
ಫೊಟೋಗ್ರಾಫರ್ ಜಿಮ್ ರೈಡೆಲ್ ಅವರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಫೋಟೋಗಳಲ್ಲಿ ಅವರು ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಕೂಡ ಹಂಚಿಕೊಂಡಿದ್ದು, ಆಮಂತ್ರಣ ಪತ್ರದಲ್ಲಿ ರಿಮಾ (ಬೌರಿ) ಮತ್ತು ಲಲಿತ್ ತಮ್ಮ ಆತ್ಮೀಯ ಸ್ನೇಹಿತ ವಿಜಯ್ ಮಲ್ಯ ಅವರ ಗೌರವಾರ್ಥವಾಗಿ ಒಂದು ಮನಮೋಹಕ ಸಂಜೆಗೆ ನಿಮ್ಮನ್ನು ಆಹ್ವಾನಿಸುತ್ತಾರೆ, ಕಿಂಗ್ ಆಫ್ ಗುಡ್‌ಟೈಮ್ಸ್‌ನ್ನು ಸಂಭ್ರಮಿಸುತ್ತಿದ್ದೇಬೆ ಎಂದು ಬರೆಯಲಾಗಿದೆ. ಈ ಆಹ್ವಾನ ಪತ್ರಿಕೆಯಲ್ಲಿ ಮಾಜಿ ವಿಮಾನಯಾನ ಉದ್ಯಮಿಯೂ ಆಗಿರುವ ವಿಜಯ್ ಮಲ್ಯ ಅವರ ಕಾರ್ಟೂನ್ ಶೈಲಿಯ ಫೋಟೋವನ್ನು ಕೂಡ ಹಾಕಲಾಗಿದೆ.
ರೈಡೆಲ್ ಹಂಚಿಕೊಂಡಿರುವ ಪಾರ್ಟಿ ನೈಟ್‌ನ ಫೋಟೋಗಳಲ್ಲಿ ನಟ ಇದ್ರಿಸ್ ಎಲ್ಬಾ ಮತ್ತು ಫ್ಯಾಷನ್ ಡಿಸೈನರ್ ಮನೋವಿರಾಜ್ ಖೋಸ್ಲಾ, ಕಿರಣ್ ಮಜುಂದಾರ್ ಶಾ ಮುಂತಾದ ಗಣ್ಯರನ್ನು ಕಾಣಬಹುದು. ಇದಕ್ಕೂ ಮೊದಲು, ಲಲಿತ್ ಮೋದಿ ತಮ್ಮ 63 ನೇ ಹುಟ್ಟುಹಬ್ಬವನ್ನು ಲಂಡನ್‌ನಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡಿದ್ದರು. ಈ ಪಾರ್ಟಿಯಲ್ಲಿ ವಿಜಯ್ ಮಲ್ಯ ಸೇರಿದಂತೆ ಆಪ್ತರು ಭಾಗವಹಿಸಿದ್ದರು. ಮೇಫೇರ್‌ನಲ್ಲಿರುವ ವಿಶೇಷ ಮ್ಯಾಡಾಕ್ಸ್ ಕ್ಲಬ್‌ನಲ್ಲಿ ಈ ಉತ್ಸಾಹಭರಿತ ಪಾರ್ಟಿ ನಡೆದಿತ್ತು.
ಇದನ್ನೂ ಓದಿ: 2 ಮಕ್ಕಳಾದ ನಂತರವು ಮುಸ್ಲಿಂ ಸೊಸೆಯ ಒಪ್ಪಿಕೊಳ್ಳದ ಪೋಷಕರು: ವಿಚ್ಛೇದನ ನೀಡಲು ಮುಂದಾದ ಮಗನಿಂದ ಆಯ್ತು ಘೋರ ಅಪರಾಧ
ಇದಕ್ಕೂ ಮೊದಲು ಈ ವರ್ಷದ ಆರಂಭದಲ್ಲಿ ಮೋದಿ ಆಯೋಜಿಸಿದ್ದ ಖಾಸಗಿ ಕರೋಕೆ ಸಂಜೆಯಲ್ಲಿಯೂ ಈ ಉದ್ಯಮ ಲೋಕದ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು , ಈ ಕಾರ್ಯಕ್ರಮಕ್ಕೆ ಕ್ರಿಕೆಟಿಗ ಕ್ರಿಸ್ ಗೇಲ್ ಸೇರಿದಂತೆ 300 ಕ್ಕೂ ಹೆಚ್ಚು ಅತಿಥಿಗಳು ಆಗಮಿಸಿದ್ದರು. ಭಾರತದಲ್ಲಿ ಹಣಕಾಸು ಮತ್ತು ನಿಯಂತ್ರಕ ವಿಷಯಗಳಿಗೆ ಸಂಬಂಧಿಸಿದಂತೆ ಹಲವಾರು ಕಾನೂನು ಪ್ರಕರಣಗಳನ್ನು ಎದುರಿಸುತ್ತಿರುವ ಮೋದಿ ಮತ್ತು ಮಲ್ಯ ಇಬ್ಬರೂ ಯುಕೆಯಲ್ಲಿ ವಾಸಿಸುತ್ತಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.