ಭಾರತ-ವಿಯೇಟ್ನಾಂ ಆರ್ಥಿಕ ಸಂಬಂಧಕ್ಕೆ ಮುನ್ನುಡಿ!

First Published Jul 31, 2018, 3:14 PM IST
Highlights

ಭಾರತ-ವಿಯೇಟ್ನಾಂ ಆರ್ಥಿಕ ಸಂಬಂಧ ವೃದ್ಧಿ

ವಿಯೆಟ್ನಾಂ ರಾಯಬಾರಿ ತೊನ್  ಸಿನ್ಹಾ  ಥಾನ್

ಭಾರತದೊಂದಿಗೆ ವ್ಯಾಪಾರ ಸಂಬಂಧ ವೃದ್ಧಿ

ಹೂಡಿಕೆಗೆ ವಿಪುಲ ಅವಕಾಶವಿದೆ ಎಂದ ಥಾನ್ 

ನವದೆಹಲಿ(ಜು.31): ಭಾರತ ಮತ್ತು ವಿಯೆಟ್ನಾಂ  ನಡುವಣ ವ್ಯಾಪಾರ, ಆರ್ಥಿಕ ಒಪ್ಪಂದಗಳಲ್ಲಿ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಭಾರತದಲ್ಲಿನ ವಿಯೆಟ್ನಾಂ ರಾಯಬಾರಿ ತೊನ್  ಸಿನ್ಹಾ  ಥಾನ್  ಹೇಳಿದ್ದಾರೆ.

ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಥಾನ್ , ಭಾರತ ಮತ್ತು ವಿಯೆಟ್ನಾಂ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಾಗಿದ್ದು, ವಿಶ್ವದಲ್ಲಿ ಉತ್ತಮ ಆರ್ಥಿಕ ಪ್ರಗತಿ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲುತ್ತವೆ ಎಂದು ಹೇಳಿದರು.

ಭಾರತದಂತಹ ರಾಷ್ಟ್ರಗಳೊಂದಿಗೆ ವಿಯೆಟ್ನಾಂ ಆರ್ಥಿಕ  ಸಂಬಂಧ ವೃದ್ದಿಸಿಕೊಳ್ಳಬೇಕಾಗಿದೆ. ಭಾರತ ದೊಡ್ಡ ಮಾರುಕಟ್ಟೆಯಾಗಿದ್ದು, ಹೂಡಿಕೆ ಮಾಡಲು ವಿಪುಲ ಅವಕಾಶಗಳಿರುವುದಾಗಿ ಥಾನ್ ಹೇಳಿದರು.

ಸದ್ಯ ಇತರ ರಾಷ್ಟ್ರಗಳೊಂದಿಗೆ  ವಿಯೇಟ್ನಾಂ 420 ಬಿಲಿಯನ್ ಡಾಲರ್ ನಷ್ಟು  ವ್ಯಾಪಾರ ನಡೆಯುತ್ತಿದ್ದು, ಭಾರತದೊಂದಿಗೆ ಪ್ರಸ್ತುತ  7.6  ಬಿಲಿಯನ್ ಡಾಲರ್ ನಷ್ಟು ಮಾತ್ರ  ವ್ಯಾಪಾರ ನಡೆಸುತ್ತಿದೆ. ಇದು ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಬಹಳ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕ ಅಭಿವೃದ್ದಿ ದರ  ಶೇ, 7.3 ರಿಂದ 7.5 ರಷ್ಟು ಹೆಚ್ಚಾಗಲಿದೆ ಎಂದು ಥಾನ್ ತಿಳಿಸಿದರು.

ರಾಜಕೀಯ  , ರಕ್ಷಣಾ ಸಹಕಾರ ಹೊರತುಪಡಿಸಿದಂತೆ  ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ  ಮತ್ತಿತರ ಕ್ಷೇತ್ರಗಳಲ್ಲಿಯೂ ಉಭಯ ದೇಶಗಳ ನಡುವಣ ಸಂಬಂಧ ಅಭಿವೃದ್ದಿಗೆ ಪ್ರಯತ್ನಿಸಬೇಕಾದ ಅಗತ್ಯವಿದೆ ಎಂದು ಥಾನ್ ಅಭಿಪ್ರಾಯಪಟ್ಟಿದ್ದಾರೆ.

India & Vietnam are both fastest growing economies in the world. Last yr Vietnam was growing at 6.8% & India is now on a very fast growing path. This yr it may grow at 7.3 or 7.5%. So we're among the best economies in the world: Vietnamese Envoy to India Ton Sinh Thanh (30.07.18) pic.twitter.com/FOfPVJPOO2

— ANI (@ANI)

ಆಗಸ್ಟ್ ತಿಂಗಳಲ್ಲಿ  ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿಯೆಟ್ನಾಂ ಪ್ರವಾಸ ಕೈಗೊಳ್ಳಲಿದ್ದು, ಅವರ ಭೇಟಿಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ಥಾನ್ ತಿಳಿಸಿದರು.

click me!