ವಿಮಾ ಸಂಸ್ಥೆಗಳಲ್ಲಿ ಕೊಳೆಯುತ್ತಿರುವ ಹಣವೆಷ್ಟು?

By Web DeskFirst Published Jul 29, 2018, 6:50 PM IST
Highlights

15, 167 ಕೋಟಿ ರೂ. ವಿಮೆಗೆ ವಾರಸುದಾರರೇ ಇಲ್ಲ

ವಿಮಾ ಸಂಸ್ಥೆಗಳಲ್ಲಿ ಕೊಳೆಯುತ್ತಾ ಬಿದ್ದಿದೆ ಹಣ

ಬೆಚ್ಚಿ ಬೀಳಿಸಿದ ಐಆರ್ ಡಿಎಐ ದತ್ತಾಂಶ ಮಾಹಿತಿ

ಎಲ್ಐಸಿ ಒಂದರಲ್ಲೇ 10,509 ಕೋಟಿ ರೂ.
 

ನವದೆಹಲಿ(ಜು.29): ದೇಶದ ಒಟ್ಟು 23 ವಿಮಾ ಸಂಸ್ಥೆಗಳಲ್ಲಿ ವಾರಸುದಾರರಿಲ್ಲದೆ ಬರೋಬ್ಬರಿ 15, 167 ಕೋಟಿ ರೂ. ಕೊಳೆಯುತ್ತಾ ಬಿದ್ದಿದೆ. 

ಐಆರ್‌ಡಿಎಐ ದತ್ತಾಂಶದ ಪ್ರಕಾರ, ವಿಮೆ ಮಾಡಿದ ಬಳಿಕ ಅದನ್ನು ಮರೆತು ಬಿಟ್ಟಿದ್ದರಿಂದ ಮತ್ತು ವಾರಸುದಾರರಿಗೆ ವಿಮೆಯ ಮಾಹಿತಿಯಿಲ್ಲದೇ ಇರುವುದರಿಂದ 15,167 ಕೋಟಿ ರೂ. ವಾರಸುದಾರರಿಲ್ಲದ ಹಣ ಜಮೆಯಾಗಿದೆ. 

2018ರ ಮಾರ್ಚ್ 31ರವರೆಗೂ 15,166 ಕೋಟಿ ರೂ. ಬಾಕಿ ಉಳಿದಿದ್ದು ಈ ಪೈಕಿ ಎಲ್ಐಸಿ 10,509 ಕೋಟಿ ರೂ. ಉಳಿದ 22 ಖಾಸಗಿ ಸಂಸ್ಥೆಗಳು 4,657.47 ಕೋಟಿ ರೂ. ವಾರಸುದಾರರಿಲ್ಲದ ಹಣ ಹೊಂದಿವೆ.
 

click me!