ಫ್ಲಿಪ್‌ಕಾರ್ಟ್,ಅಮೇಜಾನ್‌ಗೆ ಸೆಡ್ಡು ಹೊಡೆಯಲು ಬರುತ್ತಿದೆ ರಿಲಯನ್ಸ್ ಆನ್‌ಲೈನ್!

Published : Jul 30, 2018, 04:38 PM IST
ಫ್ಲಿಪ್‌ಕಾರ್ಟ್,ಅಮೇಜಾನ್‌ಗೆ ಸೆಡ್ಡು ಹೊಡೆಯಲು ಬರುತ್ತಿದೆ ರಿಲಯನ್ಸ್ ಆನ್‌ಲೈನ್!

ಸಾರಾಂಶ

ಆನ್‌ಲೈನ್ ಶಾಂಪಿಂಗ್ ಇದೀಗ ಭಾರತದ ಸೇಲ್ಸ್ ಮಾರುಕಟ್ಟೆಯನ್ನ ಆಕ್ರಮಿಸಿಕೊಂಡಿದೆ. ಫ್ಲಿಪ್‌ಕಾರ್ಟ್ ಹಾಗೂ ಅಮೇಜಾನ್ ಕಂಪೆನಿಗಳು ಇದರಲ್ಲಿ ಅಗ್ರಗಣ್ಯ. ಇದೀಗ ಈ ಆನ್‌ಲೈನ್ ಸೇಲ್ಸ್ ಕಂಪೆನಿಗಳಿಗೆ ಸೆಡ್ಡುಹೊಡೆಯಲು ರಿಲಾಯನ್ಸ್ ಎಂಟ್ರಿ ಕೊಡುತ್ತಿದೆ. ಇಲ್ಲಿದೆ ರಿಲಯನ್ಸ್ ಆನ್‌ಲೈನ್ ಶಾಂಪಿಂಗ್ ಮಾಹಿತಿ.

ಕೋಲ್ಕತ್ತಾ(ಜು.30): ಜಿಯೋ ಸಿಮ್ ಬಿಡುಗಡೆ ಮಾಡೋ ಮೂಲಕ ಏರ್‌ಟೆಲ್, ವೋಡಾಫೋನ್ ಸೇರಿದಂತೆ ಎಲ್ಲಾ ಕಂಪೆನಿಗಳಿಗೆ ಭಾರಿ ಹೊಡೆತ ನೀಡಿದ ರಿಲಯನ್ಸ್ ಇದೀಗ ಆನ್‌ಲೈನ್ ಶಾಪಿಂಗ್ ಕಡೆ ಚಿತ್ತ ಹರಿಸಿದೆ.  ಭಾರತದಲ್ಲಿ ಆನ್‌ಲೈನ್ ಸೇಲ್‌ ಮಾರುಕಟ್ಟೆ ಆಕ್ರಮಿಸಿಕೊಂಡಿರುವ ಫ್ಲಿಪ್‌ಕಾರ್ಟ್ ಹಾಗೂ ಅಮೇಜಾನ್ ಕಂಪೆನಿಗಳಿಗೆ ಸೆಡ್ಡು ಹೊಡೆಯಲು ರಿಲಯನ್ಸ್ ತಯಾರಿ ಆರಂಭಿಸಿದೆ.

ವಾಲ್ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ ಹಾಗೂ ಅಮೇಜಾನ್ ಕಂಪೆನಿಗಳು ಆರ್ಭಟಕ್ಕೆ ಬ್ರೇಕ್ ಹಾಕಲು ಇದೀಗ ರಿಲಾಯನ್ಸ್ ರಿಟೇಲ್ ಸಿದ್ಧವಾಗಿದೆ. ಇದೀಗ ರಿಲಾಯನ್ಸ್ ಹೊಸದಾಗಿ ರಿಲಾಯನ್ಸ್ ರಿಟೇಲ್ ಆನ್‌ಲೈನ್ ಶಾಪಿಂಗ್ ಆರಂಭಿಸುತ್ತಿದೆ. ರಿಲಯನ್ಸ್ ರಿಟೇಲ್ ಈಗಾಗಲೇ ಪ್ರತಿ ನಗರಗಳಲ್ಲಿ ಮಳಿಗೆ ಹೊಂದಿದೆ. ಭಾರತದಲ್ಲಿ ಓಟ್ಟು 305 ರಿಲಾಯನ್ಸ್ ಮಳಿಗೆ ಹಾಗೂ 4530 ಜಿಯೋ ಸೆಂಟರ್‌ಗಳಿವೆ. ಎಲೆಕ್ಟ್ರಾನಿಕ್ಸ್, ಫ್ಯಾಶನ್, ಉಡುಪುಗಳು, ತಿನಿಸುಗಳು ಸೇರಿದಂತೆ ಎಲ್ಲಾ ವಸ್ತುಗಳ ಈ ಮಳಿಗೆಗಳಲ್ಲಿ ಲಭ್ಯವಿದೆ.

ರಿಲಯನ್ಸ್ ರಿಟೇಲ್ ಅಂಗಗಳಾದ ರಿಲಾಯನ್ಸ್ ಡಿಜಿಟಲ್, ರಿಲಾಯನ್ಸ್ ಟ್ರೆಂಡ್, ರಿಲಾಯನ್ಸ್ ಮಾರ್ಟ್, ರಿಲಾಯನ್ಸ್ ಫ್ರೆಶ್ ಇದೀಗ ಆನ್‌ಲೈನ್ ಸೇಲ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಫ್ಲಿಪ್ಕಾರ್ಟ್ ಹಾಗೂ ಅಮೇಜಾನ್ ಕಂಪೆನಿಗಳ ರೀತಿಯಲ್ಲೇ ವಸ್ತುಗಳನ್ನ ಗ್ರಾಹಕರ ಮನೆ ಬಾಗಿಲಿಗೆ  ತಲುಪಿಸಲು ರೆಡಿಯಾಗಿದೆ.

ಜಿಯೋ ಆಫರ್ ಮೂಲಕ ಇತರ ಎಲ್ಲಾ ಸಿಮ್ ಕಂಪೆನಿಗಳಿಗೆ ಬಾರಿ ಹೊಡೆತ ನೀಡಿ ಗ್ರಾಹಕರ ಮನಸ್ಸು ಗೆದ್ದ ರಿಲಯನ್ಸ್ ಇದೇ ರೀತಿ ಆನ್‌ಲೈನ್ ಸೇಲ್ ಮಾರುಕಟ್ಟೆ ಆಕ್ರಮಿಸಿಕೊಳ್ಳೋ ಪ್ರಯತ್ನದಲ್ಲಿದೆ. ಅನ್‌ಲೈನ್‌ನಲ್ಲಿ ಖರೀದಿಸೋ ಗ್ರಾಹಕರಿಗೆ ಭಾರಿ ರಿಯಾಯಿತಿ ನೀಡಲು ರಿಲಯನ್ಸ್ ನಿರ್ಧರಿಸಿದೆ.

ಮುಂಬರುವ ದೀಪಾವಳಿ ಹಬ್ಬದ ವೇಳೆ ರಿಲಯನ್ಸ್ ರಿಟೇಲ್ ಆನ್‌ಲೈನ್ ಅಧೀಕೃತವಾಗಿ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. ವಿಶೇಷ ಅಂದರೆ, ರಿಲಯನ್ಸ್ ರಿಟೇಲ್ ಆನ್‌ಲೈನ್ ಮೂಲಕ ಕೇವಲ ರಿಲಯನ್ಸ್ ಬ್ರ್ಯಾಂಡ್ ಮಾತ್ರವಲ್ಲ ಇತರ ಎಲ್ಲಾ ಬ್ರ್ಯಾಂಡ್‌ಗಳು ಲಭ್ಯವಿದೆ.

ಎಲ್‌ಜಿ, ಸಾಮ್ಸಂಗ್, ಸೋನಿ, ರೆಡ್ ಮಿ, ಪನಾಸೋನಿಕ್ ಸೇರಿದಂತೆ ಎಲ್ಲಾ ಬ್ರ್ಯಾಂಡ್‌ಗಳ ಎಲೆಕ್ಟ್ರಾನಿಕ್ ವಸ್ತುಗಳು ರಿಲಯನ್ಸ್ ರಿಟೇಲ್ ಆನ್‌ಲೈನ್ ಶಾಪಿಂಗ್‌ನಲ್ಲಿ ಲಭ್ಯವಾಗಲಿದೆ. ಇಷ್ಟೇ ಅಲ್ಲ, ಕಡಿಮೆ ಬೆಲೆ ಜೊತೆಗೆ ಭರ್ಜರಿ ಆಫರ್ ನೀಡಲು ರಿಲಾಯನ್ಸ್ ನಿರ್ಧರಿಸಿದೆ. ಇದು ಜಿಯೋ ರೀತಿಯಲ್ಲೇ ಇತರ ಆನ್‌ಲೈನ್ ಶಾಪಿಂಗ್‌ಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?
ನಿಖಿಲ್‌ ಕಾಮತ್‌ ಅವಿವಾಹಿತರಲ್ಲ, ವಿಚ್ಛೇದಿತ; ಅವರ ಮೊದಲ ಪತ್ನಿ ದೇಶದ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿ ನಿರ್ದೇಶಕಿ!