ಎಲ್ಐಸಿಯ ಈ ಯೋಜನೆಯಲ್ಲಿ ದಿನಕ್ಕೆ ಕೇವಲ 150 ರೂ. ಪ್ರೀಮಿಯಂ ಪಾವತಿಸಿದ್ರೆ ಸಾಕು, ನಿಮ್ಮ ಮಕ್ಕಳ ಭವಿಷ್ಯ ಸುರಕ್ಷಿತ!

By Suvarna News  |  First Published Nov 29, 2022, 7:24 PM IST

ಮಕ್ಕಳ ಶಿಕ್ಷಣ, ಮದುವೆ ಮುಂತಾದ ಭವಿಷ್ಯದ ವೆಚ್ಚಗಳನ್ನು ಭರಿಸಲು ಪೋಷಕರು ಬಾಲ್ಯದಿಂದಲೇ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಬಯಸುವವರು ಎಲ್ಐಸಿ ಜೀವನ್ ತರುಣ್ ಪಾಲಿಸಿ ಆಯ್ಕೆ ಮಾಡಬಹುದು. ಹಾಗಾದ್ರೆ ಈ ಪಾಲಿಸಿಯ ವಿಶೇಷತೆಗಳೇನು? ಇಲ್ಲಿದೆ ಮಾಹಿತಿ. 


Business Desk:ಹೂಡಿಕೆ ಹಾಗೂ ಉಳಿತಾಯದ ವಿಚಾರ ಬಂದಾಗ ಭಾರತೀಯರು ಮೊದಲು ನೋಡೋದು ಸುರಕ್ಷತೆ. ಇದೇ ಕಾರಣಕ್ಕೆ ಅವರು ಸರ್ಕಾರದ ಬೆಂಬಲಿತ ಸಂಸ್ಥೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ.  ಭಾರತದ ಹೂಡಿಕೆದಾರರ ನೆಚ್ಚಿನ ಆಯ್ಕೆಗಳಲ್ಲಿ ಎಲ್ ಐಸಿ ಕೂಡ ಒಂದು.  ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಭಾರತದ ಅತೀದೊಡ್ಡ ಹಾಗೂ ಅತ್ಯಂತ ಹಳೆಯ ಜೀವ ವಿಮೆ ಒದಗಿಸುವ ಸಂಸ್ಥೆ. ಹೂಡಿಕೆದಾರರ ಅಗತ್ಯಗಳು ಹಾಗೂ ವಯಸ್ಸಿಗೆ ಅನುಗುಣವಾಗಿ ಹೊಸ ಯೋಜನೆಗಳನ್ನು ಎಲ್ಐಸಿ ಪರಿಚಯಿಸುತ್ತದೆ. ನಿಮ್ಮ ಮಗುವಿನ ಭವಿಷ್ಯವನ್ನು ಸುರಕ್ಷಿತವಾಗಿಡಲು ನೀವು ಎಲ್ಐಸಿ ಜೀವನ್ ತರುಣ್ ಪಾಲಿಸಿ ಮಾಡಿಸಬಹುದು. ಈ ಯೋಜನೆ ಜೀವ ವಿಮೆ ಉಳಿತಾಯವನ್ನು ಒದಗಿಸುವ ಜೊತೆಗೆ ಮಗು ಹಾಗೂ ಪಾಲಕರ ಭವಿಷ್ಯವನ್ನು ಸುರಕ್ಷಿತವಾಗಿಡಲು ನೆರವು ನೀಡುತ್ತದೆ. ಇದು ನಾನ್ ಲಿಂಕ್ಡ್ ಹಾಗೂ ವೈಯಕ್ತಿಕ ಯೋಜನೆಯಾಗಿದೆ. ಈ ಪಾಲಿಸಿ ಮೂಲಕ ನೀವು ಮಕ್ಕಳ ಶಿಕ್ಷಣ ಹಾಗೂ ಮದುವೆಗೆ ಹೂಡಿಕೆ ಮಾಡಬಹುದು. ಆದ್ರೆ ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಲು ಮಗುವಿಗೆ ಕನಿಷ್ಠ 90 ದಿನಗಳಾಗಿರಬೇಕು. 12 ವಯಸ್ಸಿನ ತನಕದ ಮಗುವಿಗೆ ಈ ಪಾಲಿಸಿ ಮಾಡಿಸಬಹುದು. 25 ವರ್ಷ ತುಂಬಿದ ಬಳಿಕ ಪಾಲಿಸಿ ಮೆಚ್ಯುರಿಟಿಯ ಸಂಪೂರ್ಣ ಮೊತ್ತವನ್ನು ಪಡೆಯಬಹುದು. 

ಎಲ್ಐಸಿ ಜೀವನ್ ತರುಣ್ ಪಾಲಿಸಿ 25 ವರ್ಷಗಳ ಮೆಚ್ಯುರಿಟಿ ಅವಧಿ ಹೊಂದಿದ್ದರೂ ಮಗುವಿಗೆ 20 ವರ್ಷ ತುಂಬುವ ತನಕ ಮಾತ್ರ ಪಾಲಿಸಿ ಪ್ರೀಮಿಯಂ ಪಾವತಿಸಬೇಕು. ಈ ಪಾಲಿಸಿಯನ್ನು ಭರವಸೆ ನೀಡಿರುವ ಕನಿಷ್ಠ  75,000 ರೂಪಾಯಿಗೂ ಖರೀದಿಸಬಹುದು. ಈ ಪಾಲಿಸಿಯಲ್ಲಿ ಹೂಡಿಕೆ ಮಾಡಲು ಯಾವುದೇ ಗರಿಷ್ಠ ಮಿತಿ ವಿಧಿಸಿಲ್ಲ. ನೀವು 5ಲಕ್ಷ ರೂ. ಭರವಸೆ ನೀಡಿರುವ ಮೊತ್ತವನ್ನು ಆಯ್ಕೆ ಮಾಡಿಕೊಂಡಿದ್ದರೆ, ನಿಮ್ಮ ವಾರ್ಷಿಕ ಪ್ರೀಮಿಯಂ 54,000 ರೂ. ಅಂದ್ರೆ ಪ್ರತಿನಿತ್ಯ ನೀವು 150 ರೂ. ಪ್ರೀಮಿಯಂ ಪಾವತಿಸಿದ್ರೆ ಸಾಕು . 12ನೇ ವಯಸ್ಸಿಗೆ ನೀವು ಈ ಪಾಲಿಸಿ ಖರೀದಿಸಿದ್ರೆ 23 ವರ್ಷಗಳ ಬಳಿಕ ಅಂದ್ರೆ ಆ ಮಗುವಿಗೆ  25 ವರ್ಷ ತುಂಬಿದ ಬಳಿಕ 8.44ಲಕ್ಷ ರೂ. ರಿಟರ್ನ್ ಲಭಿಸುತ್ತದೆ. 

Tap to resize

Latest Videos

Frozen Bank Account: ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗಿದ್ರೆ ಚಿಂತೆ ಬೇಡ: ತಕ್ಷಣ ಹೀಗ್‌ ಮಾಡಿ

ಎಲ್ಐಸಿ ಜೀವನ್ ತರುಣ್ ಪಾಲಿಸಿ ಪಾವತಿಸುವ ಪೋಷಕರು ಮರಣ ಹೊಂದಿದರೆ ಭವಿಷ್ಯದ ಎಲ್ಲ ಪ್ರೀಮಿಯಂಗಳನ್ನು ಮನ್ನಾ ಮಾಡಲಾಗುತ್ತದೆ. ಎಲ್ಐಸಿ ಜೀವನ್ ತರುಣ್ ಪಾಲಿಸಿ ಅಡಿಯಲ್ಲಿ ನೀವು 26ಲಕ್ಷ ರೂ. ತನಕ ವಿಮೆ ಪಡೆಯಬಹುದು. ಎಲ್ಐಸಿ ಜೀವನ್ ತರುಣ್ ಪಾಲಿಸಿಯಲ್ಲಿ ಡೆತ್ ಬೆನಿಫಿಟ್ಸ್ ಪಾಲಿಸಿದಾರ ಮೃತಪಟ್ಟರೆ ಸಿಗುವ ವಿಮಾ ಮೊತ್ತವಾಗಿದೆ. ಇದು ವಾರ್ಷಿಕ ಪ್ರೀಮಿಯಂನ 7 ಪಟ್ಟು ಅಥವಾ ವಿಮಾ ಮೊತ್ತದ ಶೇ.125ಕ್ಕಿಂತ ಹೆಚ್ಚಿರುತ್ತದೆ. ಇನ್ನು ಡೆತ್ ಬೆನಿಫಿಟ್ ಮೃತಪಟ್ಟ ದಿನಾಂಕದ ತನಕ ಪಾವತಿಸಿದ ಒಟ್ಟು ಪ್ರೀಮಿಯಂಗಳ ಶೇ.105ಕ್ಕಿಂತ ಕಡಿಮೆ ಇರುವುದಿಲ್ಲ. 

Global Technology Summit: ಬಯೋಕಾನ್ ಮುಖ್ಯಸ್ಥೆ ಜತೆ ಪುಲಿಟ್ಜರ್ ವಿಜೇತ ಸಿದ್ಧಾರ್ಥ ಮುಖರ್ಜಿ ಚರ್ಚೆ

ಇನ್ನು ಪಾಲಿಸಿಯ ಅವಧಿಯಲ್ಲಿ ಪಡೆಯಬೇಕಾದ ಸರ್ವೈವಲ್ ಬೆನಿಫಿಟ್‌ ಅನ್ನು ನೀವು 4 ರೀತಿಯಲ್ಲಿ ಆಯ್ಕೆ ಮಾಡಬಹುದಾಗಿದೆ. ಆಯ್ಕೆ 1ರಡಿಯಲ್ಲಿ ಯಾವುದೇ ಸರ್ವೈವಲ್ ಪ್ರಯೋಜನವಿಲ್ಲ. ಇನ್ನು ಮೆಚ್ಯುರಿಟಿ ಪ್ರಯೋಜನ ವಿಮಾ ಮೊತ್ತದ ಶೇ.100 ಆಗಿದೆ. ಇನ್ನು ಆಯ್ಕೆ 2ರ ಅಡಿಯಲ್ಲಿ ಸರ್ವೈವಲ್ ಬೆನಿಫಿಟ್ 5 ವರ್ಷಗಳ ತನಕ ಪ್ರತಿ ವರ್ಷ ವಿಮಾ ಮೊತ್ತದ ಶೇ.5 ಆಗಿರುತ್ತದೆ. ಇನ್ನು ಮೆಚ್ಯೂರಿಟಿ ಲಾಭ ವಿಮಾ ಮೊತ್ತದ ಶೇ.75 ಆಗಿದೆ. ಇನ್ನು ಆಯ್ಕೆ 3ರಡಿಯಲ್ಲಿ ಸರ್ವೈವಲ್ ಬೆನಿಫಿಟ್ 5 ವರ್ಷಗಳ ತನಕ ಪ್ರತಿ ವರ್ಷ ವಿಮಾ ಮೊತ್ತದ ಶೇ.10 ಮತ್ತು ಮೆಚ್ಯೂರಿಟಿ ಪ್ರಯೋಜನ ವಿಮಾ ಮೊತ್ತದ ಶೇ.50 ಆಗಿದೆ. ಇನ್ನು ಆಯ್ಕೆ 4ರಡಿಯಲ್ಲಿ 5 ವರ್ಷಗಳ ತನಕ ಪ್ರತಿ ವರ್ಷ ವಿಮಾ ಮೊತ್ತದ ಶೇ.15 ಆಗಿರುತ್ತದೆ. ಹಾಗೆಯೇ  ಮೆಚ್ಯೂರಿಟಿ ಲಾಭ ವಿಮಾ ಮೊತ್ತದ ಶೇ.25 ಆಗಿದೆ. 

click me!