ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಿ ಭಾವುಕರಾದ ವಿವಾದಿತ ಉದ್ಯಮಿ ವಿಜಯ್ ಮಲ್ಯ!

By Chethan KumarFirst Published Oct 10, 2024, 2:56 PM IST
Highlights

ಭಾರತೀಯತೆ, ಮೇಕ್ ಇನ್ ಇಂಡಿಯಾವನ್ನು ಹಲುವ ದಶಕಗಳ ಹಿಂದೆ ಆರಂಭಿಸಿ ವಿಶ್ವಕ್ಕೆ ಮಾದರಿಯಾಗಿದ್ದ ಉದ್ಯಮಿ ರತನ್ ಟಾಟಾ ನಿಧನಕ್ಕೆ ದೇಶವೇ ಮರುಗಿದೆ. ಇತ್ತ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, ಟಾಟಾ ನಿಧನತ್ತೆ ಸಂತಾಪ ಸೂಚಿಸಿದ್ದಾರೆ. ಭಾವುಕ ಟ್ವೀಟ್ ಮಾಡಿರುವ ಮಲ್ಯಗೆ ನೆಟ್ಟಿಗರು ಹೇಳಿದ್ದೇನು?

ನವದೆಹಲಿ(ಅ.10)  ಉದ್ಯಮ ಸಾಮ್ರಾಜ್ಯದ ಮೂಲಕ ಭಾರತೀಯರ ಶಕ್ತಿ ಸಾಮರ್ಥ್ಯವನ್ನು ವಿಶ್ವಕ್ಕೆ ಸಾರಿ ಹೇಳಿದ ಉದ್ಯಮಿ ರತನ್ ಟಾಟಾ ನಿಧನದಿಂದ ದೇಶವೇ ಶೋಕಸಾಗರದಲ್ಲಿ ಮುಳುಗಿದೆ. ಟಾಟಾ ನಿಧನಕ್ಕೆ ಗಣ್ಯರು ಸೇರಿದಂತೆ ಜನಸಾಮಾನ್ಯರು ಕಂಬನಿ ಮಿಡಿದಿದ್ದಾರೆ, ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಬ್ಯಾಂಕ್ ವಂಚನೆಯಿಂದ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಕೂಡ ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮೂಲಕ ವಿಜಯ್ ಮಲ್ಯ ಸಂತಾಪ ಸೂಚಿಸಿದ್ದಾರೆ. ಟಾಟಾ ನಿಧನ ಸುದ್ದಿ ತೀವ್ರ ದುಃಖ ತರಿಸಿದೆ ಎಂದಿದ್ದಾರೆ. ಮಲ್ಯ ಟ್ವೀಟ್‌ಗೆ ನೆಟ್ಟಿಗರು ಭಾರಿ ಪ್ರತಿಕ್ರಿಯೆ ನೀಡಿದ್ದಾರೆ. 

ರತನ್ ಟಾಟಾಗೆ ಸಂತಾಪ ಸೂಚಿಸಿದ ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ. ರತನ್ ಟಾಟಾ ನಿಧನ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಭಾರತದ ಅತೀ ದೊಡ್ಡ ಕೈಗಾರಿಕೋದ್ಯಮ ಕಟ್ಟಿ ಬೆಳೆಸಿ ಯಶಸ್ವಿಯಾಗಿ ಮುನ್ನಡೆಸುವ ಪ್ರತಿ ಹೆಜ್ಜೆಯಲ್ಲಿ ಘನತೆ ಜೊತೆಗೆ ಅನುಗ್ರಹವನ್ನು ಪಡೆದುಕೊಂಡಿದ್ದರು. ಒಂ ಶಾಂತಿ ಎಂದು ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ.  

Latest Videos

ಇಂಗ್ಲೆಂಡ್ ಆಯೋಜಿಸಿದ ಜೀವಮಾನ ಶ್ರೇಷ್ಠ ಪ್ರಶಸ್ತಿ ಸ್ವೀಕಾರಕ್ಕೆ ಗೈರಾಗಿದ್ದ ಟಾಟಾ, ಕಾರಣ ಮುದ್ದಿನ ನಾಯಿ!

ಭಾರತದಲ್ಲಿ ವಿಜಯ್ ಮಲ್ಯ ತನ್ನ ಉದ್ಯಮ ಸಾಮ್ರಾಜ್ಯದ ಉತ್ತುಂಗದಲ್ಲಿರುವಾಗಲೂ ರತನ್ ಟಾಟಾರಿಂದ ಪ್ರೇರಿತವಾಗಿರುವ ಕುರಿತು ಹೇಳಿಕೊಂಡಿದ್ದಾರೆ. ರತನ್ ಟಾಟಾ ಉದ್ಯಮ ಕಟ್ಟಿ ಬೆಳೆಸಿದ ರೀತಿ ನಿಜಕ್ಕೂ ಎಲ್ಲರಿಗೂ ಸ್ಪೂರ್ತಿ ಎಂದಿದ್ದರು. ಆದರೆ ಬ್ಯಾಂಕ್ ಸಾಲದ ಸುಳಿಯಲ್ಲಿ ಸಿಲುಕಿ ವಿದೇಶಕ್ಕೆ ಪರಾರಿಯಾದ ವಿಜಯ್ ಮಲ್ಯ, ಭಾರತದ ಆಗು ಹೋಗುಗಳ ಕುರಿತು ಹೆಚ್ಚಿನ ಟ್ವೀಟ್, ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ. ಕೇವಲ ದೀಪಾವಳಿ, ಗಣೇಶ ಚತುರ್ಥಿ ಸೇರಿದಂತೆ ವಿಶೇಷ ಹಬ್ಬಗಳ ಸಂದರ್ಭದಲ್ಲಿ ವಿಜಯ್ ಮಲ್ಯ ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ. 

 

Very sad to hear of the passing away of Mr Ratan Tata. He was the epitome of dignity and grace at all times even whilst successfully leading India’s largest Industrial House. RIP Sir.

— Vijay Mallya (@TheVijayMallya)

 

ಇದೇ ಕಾರಣಕ್ಕೆ ವಿಜಯ್ ಮಲ್ಯ ಟ್ರೋಲ್ ಆಗಿದ್ದರು. ಬ್ಯಾಂಕ್ ರಜಾ ದಿನ ನೋಡಿಕೊಂಡು ವಿಜಯ್ ಮಲ್ಯ ಟ್ವೀಟ್ ಮಾಡುತ್ತಾರೆ ಅನ್ನೋ ಟ್ರೋಲ್ ಭಾರಿ ಸಂಚಲನ ಸೃಷ್ಟಿಸಿತ್ತು. ಇದೀಗ ರತನ್ ಟಾಟಾಗೆ ಸಂತಾಪ ಸೂಚಿಸಿದ ಟ್ವೀಟ್ ಕುರಿತು ಹಲವರು ಪ್ರತಿಕ್ರಿಯಿಸಿದ್ದಾರೆ. ರತನ್ ಟಾಟಾ ಯಾವತ್ತಿಗೂ ಗ್ರೇಟ್. ಅವರ ವ್ಯಕ್ತಿತ್ವದ ನೆರಳಿಗೂ ಯಾರೂ ಸಮವಿಲ್ಲ, ಎಲ್ಲರೂ ರತನ್ ಟಾಟಾ ನೋಡಿ ಕಲಿಯಬೇಕಿದೆ ಎಂದು ವಿಜಯ್ ಮಲ್ಯಗೆ ಪ್ರರೋಕ್ಷವಾಗಿ ಕಾಲೆಳೆದಿದ್ದಾರೆ. ಇದೇ ವೇಳೆ ರತನ್ ಟಾಟಾ ಗ್ರೇಟ್, ಬ್ಯಾಂಕ್ ತೆರೆದಿರುವ ದಿನವೇ ವಿಜಯ್ ಮಲ್ಯ ಟ್ವೀಟ್ ಮಾಡುವಂತೆ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಟಾಟಾ ಕನ್ಸಲ್ಟೆನ್ಸಿ ಮಹತ್ವದ ಘೋಷಣೆ: ಆಂಧ್ರದಲ್ಲಿ ಐಟಿ ಕೇಂದ್ರ ಸ್ಥಾಪನೆ, 10 ಸಾವಿರ ಉದ್ಯೋಗವಕಾಶ!

ಭಾರತಕ್ಕೆ ಬನ್ನಿ, ಲೋನ್ ಮರುಪಾವತಿಸಿ ಆರ್‌ಸಿಬಿ ಮುಖ್ಯಸ್ಥ ಸ್ಥಾನ ವಹಿಸಿಕೊಳ್ಳಿ ಎಂದು ಕೆಲವರು ಸಲಹೆ ನೀಡಿದ್ದಾರೆ. ರತನ್ ಟಾಟಾ ಅಂತಿಮ ದರ್ಶನ ಪಡೆಯಲು ಭಾರತಕ್ಕೆ ಮರಳಿ ಎಂದು ಕೆಲವರು ಮನವಿ ನೀಡಿದ್ದಾರೆ.
 

click me!