ದಿಗ್ಗಜ ಉದ್ಯಮಿ ರತನ್ ಟಾಟಾ ತಮ್ಮ 86ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಈ ಸುದ್ದಿ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದ್ದು, ಟಾಟಾ ಗ್ರೂಪ್‌ನ ಷೇರುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಮುಂಬೈ: ರತನ್ ಟಾಟಾ ತಮ್ಮ 86ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ದೇಶ-ವಿದೇಶದ ಗಣ್ಯರು ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ರತನ್ ಟಾಟಾ ಒಂದಾದ ನಂತರ ಹೊಸ ಕಂಪನಿಗಳನ್ನು ಆರಂಭಿಸಿದವರು. ದೇಶ ವಿದೇಶಗಳಲ್ಲಿ 30 ಅಧಿಕ ಕಂಪನಿಗಳನ್ನು ರತನ್ ಟಾಟಾ ಹೊಂದಿದ್ದಾರೆ. ರತನ್ ಟಾಟಾ ನಿಧನ ಷೇರು ಮಾರುಕಟ್ಟೆ ಮೇಲೆಯೂ ಪರಿಣಾಮ ಬೀರುತ್ತಿದೆ. ಟಾಟಾ ಗ್ರುಪ್ ಅತಿ ಹೆಚ್ಚು ಮಾರ್ಕೆಟ್ ಕ್ಯಾಪ್ ಹೊಂದಿರುವ ಕಂಪನಿಯಾಗಿದೆ. ಕಳೆದ ಎರಡ್ಮೂರು ದಿನಗಳಿಂದಲೇ ರತನ್ ಟಾಟಾ ಆರೋಗ್ಯದಲ್ಲಿ ಏರುಪೇರು ಎಂಬ ಸುದ್ದಿ ಹರಿದಾಡಿತ್ತು. ಮಂಗಳವಾರ ಟ್ವೀಟ್ ಮೂಲಕ ನಾನು ಆರೋಗ್ಯವಾಗಿದ್ದೇನೆ ಎಂಬ ಮಾಹಿತಿಯನ್ನು ರತನ್ ಟಾಟಾ ಅವರೇ ನೀಡಿದ್ದರು.
ರತನ್ ಟಾಟಾ ಆರೋಗ್ಯದ ವಿಷಯ ಸಹ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿತ್ತು. ಕಳೆದ ಮೂರು ದಿನಗಳಿಂದ ಟಾಟಾ ಸಂಸ್ಥೆಯ ಷೇರುಗಳ ಬೆಲೆಯಲ್ಲಿಯೂ ಇಳಿಕೆಯಾಗಿತ್ತು. ಮತ್ತೊಂದೆಡೆ ಷೇರುದಾರರು ಸಹ ತಮ್ಮ ಷೇರುಗಳನ್ನು ಮಾರಾಟಕ್ಕೆ ಮುಂದಾಗಿದ್ದರು. ಶುಕ್ರವಾರ ಸಂಜೆ ರತನ್ ಟಾಟಾ ನಿಧನದ ಸುದ್ದಿಯನ್ನು ಪ್ರಕಟಿಸಲಾಗುತ್ತೆ ಎಂಬ ಮಾತುಗಳು ಸಹ ಶೇರು ಮಾರುಕಟ್ಟೆಯಲ್ಲಿ ಕೇಳಿ ಬಂದಿದ್ದವು. ರತನ್ ಟಾಟಾ ನಿಧನದ ಸುದ್ದಿ ಷೇರು ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಬೀರದಂತೆ ಅವರ ನಿಧನದ ಸುದ್ದಿ ಘೋಷಣೆ ಮಾಡಲಾಗುತ್ತೆ ಎಂಬ ಸುದ್ದಿ ಹರಿದಾಡಿತ್ತು.
undefined
ಅಕ್ಟೋಬರ್ 9ರ ರಾತ್ರಿ ರತನ್ ಟಾಟಾ ನಿಧನರಾಗಿದ್ದು,ಅಕ್ಟೋಬರ್ 10ರ ಬೆಳಗ್ಗೆ ಇದು ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಸೆನ್ಸಕ್ಸ್ 261 ಮತ್ತು ನಿಫ್ಟಿ-ಫಿಫ್ಟಿ 68 ಅಂಕಗಳಿಂದ ಏರಿಕೆ ಕಂಡಿದೆ. ಟಾಟಾ ಗ್ರುಪ್ ಕಂಪನಿಗಳ ಬಹುತೇಕ ಷೇರುಗಳು ಗ್ರೀನ್ ಟ್ರೆಂಡ್ ನಲ್ಲಿವೆ. ಕೇವಲ ಟಾಟಾ ಮೋಟರ್ಸ್ ಮತ್ತು ಟ್ರೆಂಟ್ ಷೇರುಗಳಲ್ಲಿ ಸಣ್ಣ ಪ್ರಮಾಣದ ಇಳಿಕೆ ಕಂಡು ಬಂದಿದೆ. ಉಳಿದಂತೆ ಎಲ್ಲಾ ಷೇರುಗಳು ಗ್ರೀನ್ ಲೈನ್‌ನಲ್ಲಿಯೇ ಇವೆ. ಟಾಟಾ ಕೆಮಿಕಲ್ ಷೇರುಗಳು ಶೇ.5ರಷ್ಟು ಏರಿಕೆ ಕಂಡು ಬಂದಿದೆ.
ಟಾಟಾ ಗ್ರೂಪ್ ಯಾವುದೇ ವ್ಯಕ್ತಿಯ ಮೇಲೆ ಅವಲಂಬಿತವಾಗಿಲ್ಲ. ಇಡೀ ಗ್ರುಪ್ ಕೆಲಸವನ್ನು ಟಾಟಾ ಸನ್ಸ್ ಹೆಸರಿನ ಟ್ರಸ್ಟ್ ನೋಡಿಕೊಳ್ಳುತ್ತದೆ. ಟಾಟಾ ಸಂಸ್ಥೆಯ ಪ್ರತಿಯೊಂದು ಕಂಪನಿ ತನ್ನದೇ ಆದ ನಿಯಮಗಳು ಮತ್ತು ಅಧಿಕಾರಿಗಳನ್ನು ಹೊಂದಿದೆ. ಹಾಗಾಗಿ ರತನ್ ಟಾಟಾ ನಿಧನ ಷೇರು ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಬೀರುವ ಸಾಧ್ಯತೆ ಅತಿ ವಿರಳ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಎನ್ ಚಂದ್ರಶೇಖರನ್ ಟಾಟಾ ಸನ್ಸ್ ಅಧ್ಯಕ್ಷರಾಗಿದ್ದಾರೆ.
ಟಾಟಾ ಸಂಸ್ಥೆಯಲ್ಲಿ ಕೆಲಸ ಮಾಡುವ ಈ ವ್ಯಕ್ತಿಯ ಸಂಬಳ 135 ಕೋಟಿ ರೂಪಾಯಿ