63 ವರ್ಷದ ಅಜಯ್ ಬಂಗಾ ಮಾಸ್ಟರ್‌ಕಾರ್ಡ್ ಕಂಪನಿಯ ಮಾಜಿ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಜನಲ್ ಅಟ್ಲಾಂಟಿಕ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಾಷಿಂಗ್ಟನ್ (ಫೆ.23): ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಭಾರತೀಯ ಮೂಲದ ಅಧಿಕಾರಿ ಅಜಯ್ ಬಂಗಾ ಅವರ ಹೆಸರನ್ನು ವಿಶ್ವಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿದ್ದಾರೆ. ಈ ಕುರಿತಾಗಿ ಶ್ವೇತಭವನ ಕೂಡ ಅಧಿಕೃತ ಪ್ರಕಟಣೆ ಹೊರಡಿಸಿದೆ. ಪ್ರಸ್ತುತ ವಿಶ್ವಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಡೇವಿಡ್ ಮಾಲ್ಪಾಸ್ ಅವಧಿಗಿಂತ ಮುನ್ನವೇ ತಮ್ಮ ಸ್ಥಾನ ತೊರೆಯುವುದಾಗಿ ಹೇಳಿರುವ ಕಾರಣ, ಅವರ ಸ್ಥಾನಕ್ಕೆ ಅಜಯ್ ಬಂಗಾ ಹೆಸರನ್ನು ಶಿಫಾರಸು ಮಾಡಿರುವುದಾಗಿ ಬಿಡೆನ್ ಸರ್ಕಾರ ಘೋಷಣೆ ಮಾಡಿದೆ. ಅಜಯ್ ಬಂಗಾ ಇದಕ್ಕೂ ಮುನ್ನ ಮಾಸ್ಟರ್‌ಕಾರ್ಡ್ ಕಂಪನಿಯ ಸಿಇಒ ಆಗಿಯೂ ಕೆಲಸ ಮಾಡಿದ್ದರು. 63 ವರ್ಷದ ಬಂಗಾ ಪ್ರಸ್ತುತ ಜನಲರ್ ಅಟ್ಲಾಂಟಿಕ್‌ನ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಸಾಲ ನೀಡುವ ವಿಶ್ವಬ್ಯಾಂಕ್, ಮಾರ್ಚ್ 29ರವರೆಗೆ ಅಭ್ಯರ್ಥಿ ನಾಮ ನಿರ್ದೇಶಗಳನ್ನು ಸ್ವೀಕರಿಸಲು ಆರಂಭ ಮಾಡಿದೆ. ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ಅಭ್ಯರ್ಥಿಗಳನ್ನೂ ಕೂಡ ಪರಿಗಣನೆ ಮಾಡಲಾಗುವುದು ಎಂದು ವಿಶ್ವಬ್ಯಾಂಕ್ ಈಗಾಗಲೇ ತಿಳಿಸಿದೆ. ವಿಶ್ವಬ್ಯಾಂಕ್‌ನ ಅಧ್ಯಕ್ಷರು ಬಹುತೇಕವಾಗಿ ಅಮೇರಿಕನ್ ಆಗಿದ್ದರೆ, ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯಸ್ಥರು ಸಾಂಪ್ರದಾಯಿಕವಾಗಿ ಯುರೋಪಿಯನ್ ಆಗಿರುತ್ತಾರೆ.
ಭಾರತೀಯ ಮೂಲದ ಅಮೆರಿಕನ್ ಆಗಿರುವ ಬಂಗಾ ಪ್ರಸ್ತುತ ಹೂಡಿಕೆ ಕಂಪನಿಯಾಗಿರುವ ಜನರಲ್ ಅಟ್ಲಾಂಟಿಕ್‌ನ ಉಪಾಧ್ಯಕ್ಷರಾಗಿದ್ದರೆ, ಈ ಹಿಂದೆ ಮಾಸ್ಟರ್‌ಕಾರ್ಡ್‌ನ ಸಿಇಒ ಆಗಿ ಕೆಲಸ ಮಾಡಿದ್ದರು. "ಹವಾಮಾನ ಬದಲಾವಣೆ ಸೇರಿದಂತೆ ನಮ್ಮ ಕಾಲದ ಅತ್ಯಂತ ತುರ್ತು ಸವಾಲುಗಳನ್ನು ನಿಭಾಯಿಸಲು ಸಾರ್ವಜನಿಕ-ಖಾಸಗಿ ಸಂಪನ್ಮೂಲಗಳನ್ನು ಸಜ್ಜುಗೊಳಿಸುವ ನಿರ್ಣಾಯಕ ಅನುಭವವನ್ನು ಬಂಗಾ ಹೊಂದಿದ್ದಾರೆ" ಎಂದು ಬಿಡೆನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತದ ಜಿಡಿಪಿ ದರ ನಿರೀಕ್ಷೆ ಶೇ.6.9ಕ್ಕೇರಿಸಿದ ವಿಶ್ವಬ್ಯಾಂಕ್
2019ರಲ್ಲಿ ಡೊನಾಲ್ಡ್ ಟ್ರಂಪ್ ಅವರಿಂದ ವಿಶ್ವಬ್ಯಾಂಕ್ ಹುದ್ದೆಗೆ ನಾಮನಿರ್ದೇಶನಗೊಂಡಿದ್ದ ವಿಶ್ವಬ್ಯಾಂಕ್ ಅಧ್ಯಕ್ಷ ಮಾಲ್ಪಾಸ್, ತಮ್ಮ ಹುದ್ದೆ ಮುಗಿಯುವ ಒಂದು ವರ್ಷ ಮುಂಚಿತವಾಗಿಯೇ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಣೆ ಮಾಡಿದ್ದರು. ಹವಮಾನ ಬದಲಾವಣೆ ಕುರಿತಾಗಿ ಅವರ ನಿಲುವಿನ ಕಾರಣಕ್ಕಾಗಿಯೇ ಅಧ್ಯಕ್ಷ ಸ್ಥಾನದಿಂದ ಅವರು ಕೆಳಗಿಳಿಯುತ್ತಿದ್ದಾರೆ ಎಂದು ಹೇಳಲಾಗಿದೆ.
COVID-19 ಬಿಕ್ಕಟ್ಟು ವೇಳೆ ಬಡವರಿಗೆ ಭಾರತದ ಬೆಂಬಲ ಅದ್ಭುತ: World Bank ಅಧ್ಯಕ್ಷ ಡೇವಿಡ್ ಮಾಲ್ಪಾಸ್