ಚೀನಾದಿಂದ ಅಮೆರಿಕಕ್ಕೆ ಮತ್ತೊಂದು ಶಾಕ್‌: ಯುಎಸ್‌ನ ಸೆಮಿಕಂಡಕ್ಟರ್‌, ಐಟಿ ವಲಯಕ್ಕೆ ಭಾರೀ ಹೊಡೆತ

ಅಮೆರಿಕ ಮತ್ತು ಚೀನಾದ ನಡುವಿನ ಸುಂಕ ಉದ್ವಿಗ್ನತೆಯ ನಡುವೆ, ಚೀನಾ ಸೆಮಿಕಂಡಕ್ಟರ್‌ ಮತ್ತು ಐಟಿ ಉತ್ಪನ್ನಗಳಲ್ಲಿ ಬಳಸುವ ಅಪರೂಪದ ಲೋಹಗಳ ರಫ್ತಿಗೆ ನಿರ್ಬಂಧ ವಿಧಿಸಲು ಮುಂದಾಗಿದೆ. ಬೀರಬಹುದು.

US China Trade War Escalates Chinas Rare Earth Metal Export Curbs to Hit US Tech Industries

ಬೀಜಿಂಗ್‌: ಅಮೆರಿಕ ಮತ್ತು ಚೀನಾದ ನಡುವೆ ಸುಂಕ ಉದ್ವಿಗ್ನತೆಯ ನಡುವೆ ಚೀನಾ, ಡೊನಾಲ್ಡ್‌ ಟ್ರಂಪ್‌ಗೆ ಮತ್ತೊಂದು ಶಾಕ್‌ ನೀಡಲು ಮುಂದಾಗಿದ್ದು, ಸೆಮಿ ಕಂಡಕ್ಟರ್‌, ಐಟಿ ಉತ್ಪನ್ನಗಳಲ್ಲಿ ಬಳಕೆಯಾಗುವ ಅಪರೂಪದ ಲೋಹ ರಫ್ತಿಗೆ ನಿರ್ಬಂಧ ವಿಧಿಸಲು ಮುಂದಾಗಿದೆ. ಇದರಿಂದ ಅಮೆರಿಕದ ಐಟಿ ವಲಯಕ್ಕೆ ಹೊಡೆತ ಬೀಳುವ ಸಾಧ್ಯತೆಯಿದೆ.

ಡಿಸ್ಪ್ರೋಸಿಯಮ್ ಮತ್ತು ನಿಯೋಡೈಮಿಯಮ್ ಎನ್ನುವ ಅಪರೂಪದ ಲೋಹಗಳು ಚೀನಾದಲ್ಲಿ ಲಭ್ಯ. ಇದು ರಕ್ಷಣಾ ಉಪಕರಣಗಳು, ಸೆಮಿ ಕಂಡಕ್ಟರ್‌ಗಳು, ಇಂಧನ ವಲಯ, ಎಲೆಕ್ಟ್ರಾನಿಕ್ ಡಿಸ್‌ಪ್ಲೇ ಸೇರಿದಂತೆ ಬಹುತೇಕ ತಂತ್ರಜ್ಞಾನಗಳ ಬಳಕೆಗೆ ಅಗತ್ಯ. ವಿಶ್ವದಲ್ಲಿ ಇದರ ಉತ್ಪಾದನೆಯ ಶೇ.90ರಷ್ಟು ಪಾಲು ಚೀನಾದ್ದಿದೆ. ಇದೀಗ ಚೀನಾ ರಫ್ತಿಗೆ ನಿರ್ಬಂಧವನ್ನು ವಿಧಿಸಲು ಮುಂದಾಗಿರುವುದರಿಂದ, ಐಟಿ ವಲಯದಲ್ಲಿರುವ ಮುಂಚೂಣಿಯಲ್ಲಿರುವ ಅಮೆರಿಕಗೆ ಇದರಿಂದ ಪೆಟ್ಟು ಬೀಳಲಿದ್ದು, ಸೆಮಿ ಕಂಡಕ್ಟರ್‌, ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕೆಗೆ ಹಿನ್ನೆಡೆಯಾಗುವ ಸಾಧ್ಯತೆಯಿದೆ.

Latest Videos

ವಿಶ್ವದ ಟಾಪ್-100 ವಿಮಾನ ನಿಲ್ದಾಣಗಳು:ಬೆಂಗಳೂರಿಗೆ ಬೆಸ್ಟ್ ರ‍್ಯಾಂಕ್

ಟ್ರಂಪ್‌ ಮಾತು ಕೇಳದ ಹಾರ್ವರ್ಡ್ ವಿವಿಗೆ 18700 ಕೋಟಿ ಹಣ ಕಟ್‌!
ವಾಷಿಂಗ್ಟನ್‌: ಕ್ಯಾಂಪಸ್‌ನಲ್ಲಿ ಯಹೂದಿ ವಿರೋಧಿ ನೀತಿಗೆ ಕಡಿವಾಣ ಹಾಕಬೇಕು, ವಿವಿ ಆಡಳಿತದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂಬ ಸರ್ಕಾರದ ಆದೇಶವನ್ನು ಪ್ರತಿಷ್ಠಿತ ಹಾರ್ವರ್ಡ್ ವಿವಿ ನಿರಾಕರಿಸಿದ ಬೆನ್ನಲ್ಲೇ ವಿವಿಗೆ 18700 ಕೋಟಿ ರು. ಅನುದಾನ ಸ್ಥಗಿತಗೊಳಿಸುವುದಾಗಿ ಮತ್ತು ತೆರಿಗೆ ವಿನಾಯ್ತಿ ರದ್ದುಗೊಳಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಎಚ್ಚರಿಸಿದ್ದಾರೆ. ಸರ್ಕಾರದ ಈ ಕ್ರಮವನ್ನು ಶೈಕ್ಷಣಿಕ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಹಲವು ಶಿಕ್ಷಣ ತಜ್ಞರು ಖಂಡಿಸಿದ್ದಾರೆ. ಅಮೆರಿಕದ ಅತ್ಯಂತ ಹಳೆಯ ವಿಶ್ವವಿದ್ಯಾಲಯ ಟ್ರಂಪ್‌ ಸರ್ಕಾರದ ಆದೇಶ ತಿರಸ್ಕರಿಸಿದ ಮೊದಲ ವಿವಿಯಾಗಿದೆ. ಉಳಿದ ವಿವಿಗಳು ಕೂಡಾ ಇದೇ ಹಾದಿ ಹಿಡಿದರೆ ಶೈಕ್ಷಣಿಕ ವಲಯದಲ್ಲಿ ದೊಡ್ಡ ಗೊಂದಲದ ಭೀತಿ ಎದುರಾಗಿದೆ.

ಕಾಡುತ್ತಿರುವ ಹೌತಿ ಉಗ್ರರ ಹೆಡೆಮುರಿ ಕಟ್ಟಲು ಟ್ರಂಪ್ ಪ್ಲಾನ್‌ : ಇರಾನ್‌ಗೆ ಮತ್ತಷ್ಟು ಸಂಕಷ್ಟ

ಅಮೆರಿಕದ ಬೋಯಿಂಗ್ ವಿಮಾನ ಖರೀದಿ ಸ್ಥಗಿತಗೊಳಿಸಿದ ಚೀನಾ!

ಬೀಜಿಂಗ್‌: ಅಮೆರಿಕ ಮತ್ತು ಚೀನಾದ ನಡುವಿನ ಸುಂಕ ಸಂಘರ್ಷದ ತೀವ್ರವಾದ ಬೆನ್ನಲ್ಲೇ, ಚೀನಾವು ಅಮೆರಿಕದ ಬೋಯಿಂಗ್ ಕಂಪನಿಗಳ ವಿಮಾನ ಖರೀದಿ ಸ್ಥಗಿತಗೊಳಿಸಿದೆ. ಬೋಯಿಂಗ್ ವಿಮಾನಗಳ ಖರೀದಿ ನಿಲ್ಲಿಸುವಂತೆ ತನ್ನ ವಿಮಾನಯಾನ ಸಂಸ್ಥೆಗಳಿಗೆ ಚೀನಾ ಆದೇಶಿಸಿದೆ.ಈಗಾಗಲೇ ಮಾಡಿಕೊಂಡ ವಿಮಾನಗಳ ಸ್ವೀಕಾರಕ್ಕೂ ಸರ್ಕಾರ ಬ್ರೇಕ್‌ ಹಾಕಿದೆ. ಜೊತೆಗೆ ವಿಮಾನಗಳ ತಯಾರಿಕೆಗೆ ಬಳಸುವ ಅಮೆರಿಕದ ಕಂಪನಿಗಳ ವಿಮಾನಕ್ಕೆ ಸಂಬಂಧಿತ ಉಪಕರಣಗಳು ಮತ್ತು ಬಿಡಿಭಾಗಗಳ ಖರೀದಿಯನ್ನು ಕೂಡ ಚೀನಾ ರದ್ದುಗೊಳಿಸಿದೆ.

vuukle one pixel image
click me!