ಮೋದಿ ವಿರುದ್ದ ಏಕಾಏಕಿ ತಿರುಗಿ ಬಿದ್ದ ಟ್ರಂಪ್: ಭಾರತಕ್ಕೆ ಸಬ್ಸಿಡಿ ಕಟ್!

By Web DeskFirst Published 8, Sep 2018, 4:19 PM IST
Highlights

ಅಮೆರಿಕ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ! ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಘೋಷಣೆ! ಭಾರತ, ಚೀನಾಗೆ ನೀಡುತ್ತಿದ್ದ ಸಬ್ಸಿಡಿ ಇನ್ಮುಂದೆ ಇಲ್ಲ! ವಿಶ್ವ ವ್ಯಾಪಾರ ಸಂಘಟನೆ ವಿರುದ್ಧ ಹರಿಹಾಯ್ದ ಟ್ರಂಪ್

ವಾಷಿಂಗ್ಟನ್(ಸೆ.8): ಅಮೆರಿಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೆಂದು ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಪರಿಗಣಿಸುವುದರಿಂದ, ಅದು ಇನ್ನಷ್ಟು ವೇಗವಾಗಿ ಅಭಿವೃದ್ಧಿ ಹೊಂದಲು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾದ ಭಾರತ ಮತ್ತು ಚೀನಾಕ್ಕೆ ಅದು ನೀಡುತ್ತಿದ್ದ ಸಬ್ಸಿಡಿಗಳನ್ನು ನಿಲ್ಲಿಸಲು ಮುಂದಾಗಿದೆ.

ಈ ಕುರಿತು ಮಾತನಾಡಿರುವ ಟ್ರಂಪ್, ಚೀನಾ ಅತೀ ಪ್ರಬಲ ಆರ್ಥಿಕ ರಾಷ್ಟ್ರವಾಗಿ ಬೆಳೆಯಲು ವಿಶ್ವ ವ್ಯಾಪಾರ ಸಂಘಟನೆ ಅನುಮತಿ ನೀಡಿದೆ ಎಂದು ಆರೋಪಿಸಿದ್ದಾರೆ. ಕೆಲವು ದೇಶಗಳನ್ನು ನಾವು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕ ರಾಷ್ಟ್ರವೆಂದು ಪರಿಗಣಿಸುತ್ತೇವೆ. ಇನ್ನೂ ಪ್ರವರ್ಧಮಾನಕ್ಕೆ ಬಾರದಿರುವ ಕೆಲವು ದೇಶಗಳಿಗೆ ನಾವು ಸಬ್ಸಿಡಿಗಳನ್ನು ನೀಡುತ್ತೇವೆ. ಅದರಂತೆ ಭಾರತ, ಚೀನಾ ಮೊದಲಾದ ದೇಶಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳಾಗಿವೆ ಎಂದು ಟ್ರಂಪ್ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಚೀನಾ ಮತ್ತು ಭಾರತಕ್ಕೆ ನಾವು ಮುಂದಿನ ದಿನಗಳಲ್ಲಿ ನಾವು ಸಬ್ಸಿಡಿಗಳನ್ನು ನಿಲ್ಲಿಸಲಿದ್ದೇವೆ ಎಂದು ಟ್ರಂಪ್ ಘೋಷಿಸಿದ್ದಾರೆ. ವಿಶ್ವ ವ್ಯಾಪಾರ ಸಂಘಟನೆ ಮೇಲೆ ವಾಗ್ದಾಳಿ ನಡೆಸಿದ ಅವರು, ವಿಶ್ವ ವ್ಯಾಪಾರ ಸಂಘಟನೆ ಎಲ್ಲದಕ್ಕಿಂತಲೂ ಕೆಟ್ಟದು. ಅನೇಕರಿಗೆ ಅದೇನೆಂದು ಗೊತ್ತಿಲ್ಲ. ಅದು ಚೀನಾವನ್ನು ಪ್ರಬಲ ರಾಷ್ಟ್ರ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಅಮೆರಿಕ ಮತ್ತು ಚೀನಾ ಮಧ್ಯೆ ವ್ಯಾಪಾರ ಕೊರತೆಯಿಂದಾಗಿ ವಿಶ್ವದ ಎರಡು ಪ್ರಬಲ ಆರ್ಥಿಕ ರಾಷ್ಟ್ರಗಳ ನಡುವೆ ದರ ಯುದ್ಧ ನಡೆದಿದೆ. ನಾನು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಅತಿದೊಡ್ಡ ಅಭಿಮಾನಿ, ಆದರೆ ವ್ಯವಹಾರ ವಿಷಯದಲ್ಲಿ ಸರಿಯಾಗಿರಬೇಕೆಂದು ನಾನು ಅವರಿಗೆ ಹೇಳಿದ್ದೇನೆ ಎಂದರು.

ಹಲವು ವರ್ಷಗಳಿಂದ ಅಮೆರಿಕ ಬೇರೆ ದೇಶಗಳನ್ನು ಕಾಪಾಡುತ್ತಾ ಬಂದಿದೆ. ಅವರು ಸಂಪತ್ತು ಮಾಡಿಕೊಂಡಿದ್ದಾರೆ. ಆ ರಾಷ್ಟ್ರಗಳಿಗೆ ಹೆಚ್ಚಿನ ಮಿಲಿಟರಿ ವೆಚ್ಚವಿಲ್ಲ. ವಿಶ್ವದಲ್ಲಿ ಅತಿ ಹೆಚ್ಚು ಮಿಲಿಟರಿ ವೆಚ್ಚ ಮಾಡುತ್ತಿರುವುದು ನಾವು. ಅದರಲ್ಲಿ ಬಹುತೇಕ ಪಾಲು ಬೇರೆ ದೇಶಗಳನ್ನು ರಕ್ಷಿಸಲು ಹೋಗುತ್ತದೆ. ಆದರೆ ಅವರಲ್ಲಿ ಕೆಲವರು ನಮ್ಮನ್ನು ಇಷ್ಟಪಡುವುದು ಕೂಡ ಇಲ್ಲ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.

Last Updated 9, Sep 2018, 10:26 PM IST