ಜನರಲ್ ಪ್ರಾವಿಡೆಂಟ್ ಫಂಡ್‌ ಬಡ್ಡಿ ದರ ಏರಿಕೆ, ಯಾರಿಗೆಲ್ಲ ಸಿಗಲಿದೆ ಲಾಭ?

By Web DeskFirst Published Oct 16, 2018, 8:14 PM IST
Highlights

ಕೇಂದ್ರ ಸರಕಾರ ಉದ್ಯೋಗಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಜನರಲ್ ಪ್ರಾವಿಡೆಂಟ್ ಫಂಡ್‌ (ಜಿಪಿಎಫ್‌) ಗೆ ಸಂಬಂಧಿಸಿದ ಬಡ್ಡಿ ದರದಲ್ಲಿ ಗಣನೀಯ ಏರಿಕೆ ಮಾಡಿದೆ. ಏನಿದು ಲಾಭದಾಯಕ ಸುದ್ದಿ? ವಿವರ ಮುಂದಿದೆ.

ನವದೆಹಲಿ[ಅ.16] ಜನರಲ್ ಪ್ರಾವಿಡೆಂಟ್ ಫಂಡ್‌ (ಜಿಪಿಎಫ್‌) ಮತ್ತು ಸಂಬಂಧಿತ ಇತರ ಯೋಜನೆಗಳ ಮೇಲಿನ ಬಡ್ಡಿದರವನ್ನು ಕೇಂದ್ರ ಸರಕಾರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದ ಅವಧಿಗೆ ಅನ್ವಯವಾಗುವಂತೆ ಶೇ. 0.4 ಅಂಶದಿಂದ 8 ರವರೆಗೆ ಏರಿಕೆ ಮಾಡಿದೆ. 

ಜಿಪಿಎಫ್ ಮೇಲಿನ ಬಡ್ಡಿದರ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಶೇ. 7.6 ಇತ್ತು ಅದೀಗ ಶೇ. 8ಕ್ಕೆ ಏರಿಕೆಯಾಗುತ್ತಿದೆ. 2018-19ನೇ ಅವಧಿಯಲ್ಲಿ ಜಿಪಿಎಫ್‌ ಮತ್ತು ಸಂಬಂಧಿತ ಇತರ ಫಂಡ್‌ಗಳ ಮೇಲೆ ಶೇ. 8 ಬಡ್ಡಿದರ ಅನ್ವಯವಾಗಲಿದ್ದು ಹೆಚ್ಚಿನ ಬಡ್ಡಿ ದರ ಸಿಗಲಿದೆ.

ಹೊಸ ಬಡ್ಡಿ ದರ ಅಕ್ಟೊಬರ್ 1, 2018ರಿಂದ ಡಿ. 31, 2018ರ ಅವಧಿಯಲ್ಲಿ ಜಾರಿಯಲ್ಲಿರುತ್ತದೆ. ಕೇಂದ್ರ ಸರಕಾರದ ಉದ್ಯೋಗಿಗಳು, ರೈಲ್ವೆ ಮತ್ತು ಭದ್ರತಾ ಪಡೆಗಳವರಿಗೆ ಪ್ರಾವಿಡೆಂಟ್ ಫಂಡ್ ಮೇಲೆ ಬಡ್ಡಿದರ ಅನ್ವಯವಾಗಲಿದೆ ಎಂದು ಸರಕಾರದ ಪ್ರಕಟಣೆ ತಿಳಿಸಿದೆ.

ಕಳೆದ ತಿಂಗಳು ಸರಕಾರ ಸಣ್ಣ ಉಳಿತಾಯ, ಎನ್‌ಎಸ್‌ಸಿ, ಪಿಪಿಎಫ್‌ ಮೇಲಿನ ಬಡ್ಡಿದರವನ್ನು ಅಕ್ಟೋಬರ್-ಡಿಸೆಂಬರ್ ಅವಧಿಗೆ ಶೇ. 0.4 ಅಂಶ ಏರಿಕೆ ಮಾಡುವುದಾಗಿ ಹೇಳಲಾಗಿತ್ತು. ಇದೀಗ ಜನರಲ್ ಪ್ರಾವಿಡೆಂಟ್ ಫಂಡ್‌ (ಜಿಪಿಎಫ್‌) ನ ಬಡ್ಡಿ ದರವನ್ನು ಏರಿಕೆ ಮಾಡಲಾಗಿದ್ದು ಎಲ್ಲ ಒಳಪಡುವ ಎಲ್ಲ ಉದ್ಯೋಗಿಗಳಿಗೆ ಲಾಭ ದೊರೆಯಲಿದೆ.


 

click me!