ಒಂದು ಗುಡ್, ಮತ್ತೊಂದು ಬ್ಯಾಡ್ ನ್ಯೂಸ್ ಕೊಟ್ಟ ಆರ್‌ಬಿಐ!

By Web DeskFirst Published Oct 14, 2018, 3:55 PM IST
Highlights

ಬ್ಯಾಂಕ್ ಸಾಲದ ಪ್ರಮಾಣದಲ್ಲಿ ಭಾರೀ ಏರಿಕೆ! ಬ್ಯಾಂಕ್‌ಗಳ ಸಾಲದ ಪ್ರಮಾಣ ಶೇ. 12.51ಕ್ಕೆ ಏರಿಕೆ! ಬ್ಯಾಂಕ್‌ಗಳ ಠೇವಣಿ ಮೊತ್ತದಲ್ಲೂ ಗಣನೀಯ ಏರಿಕೆ! ಬ್ಯಾಂಕ್‌ಗಳ ಠೇವಣಿ ಪ್ರಮಾಣ ಶೇ. ಶೇ. 8.7ಕ್ಕೆ ಏರಿಕೆ! ಕೃಷಿ, ಕೈಗಾರಿಕೆ ಕ್ಷೇತ್ರಕ್ಕೆ ನೀಡಿದ ಸಾಲದ ಪ್ರಮಾಣ ಏರಿಕೆ

ನವದೆಹಲಿ(ಅ.14): ದೇಶದ ಜನತೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಒಂದು ಸಿಹಿ ಸುದ್ದಿ ಮತ್ತು ಒಂದು ಕಹಿ ಸುದ್ದಿಯನ್ನು ನೀಡಿದೆ. ಒಂದೆಡೆ ಬ್ಯಾಂಕ್‌ಗಳ ಸಾಲದ ಪ್ರಮಾಣ ಏರಿಕೆಯಾಗಿದ್ದರೆ, ಮತ್ತೊಂದೆಡೆ ಠೇವಣಿ ಪ್ರಮಾಣದಲ್ಲೂ ಏರಿಕೆ ಕಂಡುಬಂದಿದೆ.

ಈ ಕುರಿತು ವರದಿ ಬಿಡುಗಡೆ ಮಾಡಿರುವ ಆರ್‌ಬಿಐ, ಸೆ.28, 2018 ರ ಅವಧಿವರೆಗೆ ಬ್ಯಾಂಕ್‌ಗಳ ಸಾಲದ ಪ್ರಮಾಣ ಶೇ. 12.51 ರಷ್ಟು ಹೆಚ್ಚಾಗಿದ್ದು, 89.82 ಲಕ್ಷ ಕೋಟಿ ರೂ.ಗಳಾಗಿದೆ ಎಂದು ತಿಳಿಸಿದೆ.

ಅದೇ ರೀತಿ ಠೇವಣಿಯಲ್ಲೂ ಭಾರೀ ಏರಿಕೆ ಕಂಡುಬಂದಿದ್ದು, ಶೇ. 8.7 ರ ಪ್ರಮಾಣದಲ್ಲಿ   117.99 ರಷ್ಟಾಗಿದೆ ಎಂದು ಆರ್‌ಬಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಕಳೆದ ವರ್ಷ ಸಾಲದ ಪ್ರಮಾಣ 79.83 ಲಕ್ಷ ಕೋಟಿ ರೂ ಮತ್ತು ಠೇವಣಿ ಮೊತ್ತ 109.17 ಲಕ್ಷ ಕೋಟಿ ರೂ. ಇತ್ತು ಎಂದು ಆರ್‌ಬಿಐ ತನ್ನ ವರದಿಯಲ್ಲಿ ತಿಳಿಸಿದೆ. 

ಕೃಷಿ ಕ್ಷೇತ್ರಕ್ಕೆ ವಿವಿಧ ಬ್ಯಾಂಕ್‌ಗಳು ನೀಡಿರುವ ಸಾಲದ ಪ್ರಮಾಣ ಶೇ. 6.5 ರಿಂದ ಶೇ. 6.6 ಕ್ಕೆ ಏರಿಕೆಯಾಗಿದೆ. ಅದರಂತೆ ಕೈಗಾರಿಕೆ ಕ್ಷೇತ್ರಕ್ಕೆ ಕೊಡಮಾಡಿದ ಸಾಲದ ಪ್ರಮಾಣ ಶೇ. 1.9ರಷ್ಟು ಹೆಚ್ಚಾಗಿದೆ.

ಸೇವಾ ಕ್ಷೇತ್ರಕ್ಕೆ ನೀಡಿದ ಸಾಲದ ಪ್ರಮಾಣ ಶೇ. 26.27 ರಷ್ಟಿದ್ದು, ವೈಯಕ್ತಿಕ ಸಾಲದ ಪ್ರಮಾಣ ಶೇ. 18.2 ರಷ್ಟಾಗಿದೆ. ಕಳೆದ ವರ್ಷದಲ್ಲಿ ಇದು ಶೇ. 15.7 ರಷ್ಟಿತ್ತು ಎಂದು ಆರ್‌ಬಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. 
 

click me!