ಜಿಎಸ್‌ಟಿ ದರ ಕಡಿತದ ಬೆನ್ನಲ್ಲಿಯೇ ದಾಖಲೆ ಬರೆದ ನವರಾತ್ರಿ ಸೇಲ್; ಅತಿಹೆಚ್ಚು ಮಾರಾಟವಾದ ವಸ್ತುಗಳು ಇಲ್ಲಿವೆ!

Published : Oct 05, 2025, 08:19 PM IST
GST Navaratri Offer

ಸಾರಾಂಶ

ಕೇಂದ್ರ ಸರ್ಕಾರದ ಜಿಎಸ್‌ಟಿ 2.0 ಪರಿಷ್ಕರಣೆಯಿಂದಾಗಿ 375 ವಸ್ತುಗಳ ಬೆಲೆ ಇಳಿದಿದೆ. ಇದರ ಪರಿಣಾಮವಾಗಿ, 2025ರ ನವರಾತ್ರಿಯಲ್ಲಿ ಕಳೆದ ದಶಕದಲ್ಲೇ ಅತಿಹೆಚ್ಚು ಮಾರಾಟ ದಾಖಲಾಗಿದ್ದು, ವಿಶೇಷವಾಗಿ ವಾಹನ ಮತ್ತು ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ.

ಕೇಂದ್ರ ಸರ್ಕಾರದಿಂದ ಸರಕು ಸೇವಾ ತೆರಿಗೆ (ಜಿಎಸ್‌ಟಿ) ಪರಿಷ್ಕರಣೆ ಮಾಡಿದ ಬೆನ್ನಲ್ಲಿಯೇ 375 ವಸ್ತುಗಳ ಮೇಲಿನ ದರವು ಕುಡಿತವಾಗಿತ್ತು. ಈ ಜಿಎಸ್‌ಟಿ 2.0 ಅನ್ನು ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ವಿಜಯದಶಮಿ ಕೊಡುಗೆ ಎಂದು ಬಣ್ಣಿಸಿದ್ದರು. ಇದರ ಬೆನ್ನಲ್ಲಿಯೇ ದೇಶದಾದ್ಯಂತ 2025ರ ನವರಾತ್ರಿಯಲ್ಲಿ ಅತಿಹೆಚ್ಚು ಉತ್ಪನ್ನಗಳು ಮಾರಾಟವಾಗಿವೆ. ಇದು ಕಳೆದ 10 ವರ್ಷಗಳಲ್ಲಿಯೇ ಅತ್ಯಧಿಕ ಮಾರಾಟದ ದಾಖಲೆಯಾಗಿದೆ ಎಂದು ತಿಳಿದುಬಂದಿದೆ.

375 ಉತ್ಪನ್ನಗಳ ಜಿಎಸ್‌ಟಿ ದರಗಳನ್ನು ಕಡಿಮೆ ಮಾಡಿದ್ದರಿಂದ ದೇಶದ ಗ್ರಾಹಕ ವಲಯದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ವಾಹನ ಡೀಲರ್‌ಶಿಪ್‌ಗಳು ಮತ್ತು ಎಲೆಕ್ಟ್ರಾನಿಕ್ಸ್ ಅಂಗಡಿಗಳಲ್ಲಿ ಜನರ ದಟ್ಟಣೆ ಹೆಚ್ಚಾಗಿದೆ. ಕಳೆದ ಒಂದು ದಶಕದಲ್ಲೇ ಅತಿ ಹೆಚ್ಚು ನವರಾತ್ರಿ ಮಾರಾಟ ಈ ಬಾರಿ ದಾಖಲಾಗಿದೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಜಿಎಸ್‌ಟಿ ಇಳಿಕೆಯಿಂದಾಗಿ ಉತ್ಪನ್ನಗಳ ಬೆಲೆ ಕಡಿಮೆಯಾಗಿದ್ದು, ಸಾಮಾನ್ಯ ಜನರಿಗೆ ಹೊಸ ವಾಹನಗಳು ಮತ್ತು ಇತರ ಜೀವನಶೈಲಿ ಉತ್ಪನ್ನಗಳಿಗಾಗಿ ಹಣ ಖರ್ಚು ಮಾಡಲು ಸಹಾಯಕವಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ತೆರಿಗೆ ಇಳಿಕೆಯಿಂದ ಬೆಲೆ ಏರಿಕೆ ತಪ್ಪಿತು:

ಆಹಾರ ಪದಾರ್ಥಗಳು, ದೈನಂದಿನ ಬಳಕೆಯ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ಸಿಮೆಂಟ್, ಮತ್ತು ವಾಹನಗಳ ಜಿಎಸ್‌ಟಿ ದರಗಳನ್ನು ಕಡಿಮೆ ಮಾಡಲಾಗಿದೆ. ತೆರಿಗೆ ಸ್ಲ್ಯಾಬ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ತಂಬಾಕು ಹೊರತುಪಡಿಸಿ ಇತರ ಉತ್ಪನ್ನಗಳ ಮೇಲಿನ ಸೆಸ್ ಅನ್ನು ತೆಗೆದುಹಾಕಲು ನಿರ್ಧರಿಸಲಾಗಿತ್ತು. ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವುದರ ಜೊತೆಗೆ ಮಾರುಕಟ್ಟೆಯಲ್ಲಿ ಬಳಕೆಯನ್ನು ಹೆಚ್ಚಿಸುವುದು ಈ ಕ್ರಮದ ಹಿಂದಿನ ಮುಖ್ಯ ಉದ್ದೇಶವಾಗಿತ್ತು. ಇದು ತಾತ್ಕಾಲಿಕವಾಗಿ ತೆರಿಗೆ ಆದಾಯದ ಮೇಲೆ ಪರಿಣಾಮ ಬೀರಿದರೂ, ಬಳಕೆ ಹೆಚ್ಚಳವು ಆರ್ಥಿಕತೆಗೆ ಲಾಭದಾಯಕವಾಗಿದೆ.

ಕಾರು ಮಾರಾಟದಲ್ಲಿ ಭಾರಿ ಏರಿಕೆ, ಬುಕ್ಕಿಂಗ್‌ಗಳು ಹೆಚ್ಚಳ:

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ 3.5 ಲಕ್ಷ ಬುಕ್ಕಿಂಗ್‌ಗಳನ್ನು ವರದಿ ಮಾಡಿದೆ. ಇದರಲ್ಲಿ ಸುಮಾರು 2.5 ಲಕ್ಷ ಆರ್ಡರ್‌ಗಳು ಡೆಲಿವರಿಗೆ ಬಾಕಿ ಇವೆ. ನವರಾತ್ರಿ ಮುಗಿಯುವಷ್ಟರಲ್ಲಿ 2 ಲಕ್ಷ ವಾಹನಗಳನ್ನು ಡೆಲಿವರಿ ಮಾಡಲು ಸಾಧ್ಯವಾಗುತ್ತದೆ ಎಂದು ಕಂಪನಿ ನಿರೀಕ್ಷಿಸುತ್ತಿದೆ. ಇದು ಕಳೆದ ವರ್ಷದ 85,000 ಕಾರುಗಳಿಗೆ ಹೋಲಿಸಿದರೆ 2.3 ಪಟ್ಟು ಹೆಚ್ಚಾಗಿದೆ. ಮಹೀಂದ್ರಾದ ಎಕ್ಸ್‌ಯುವಿ 700 ಮತ್ತು ಸ್ಕಾರ್ಪಿಯೋ ಎನ್ ಮಾದರಿಗಳ ಮಾರಾಟದಲ್ಲಿ 60% ಹೆಚ್ಚಳ ದಾಖಲಾಗಿದೆ. ಹ್ಯುಂಡೈನ ಕ್ರೆಟಾ ಮತ್ತು ವೆನ್ಯೂ ಮಾದರಿಗಳಿಗೂ ಭಾರಿ ಬೇಡಿಕೆ ಕಂಡುಬಂದಿದೆ. ಗ್ರಾಹಕ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲೂ ಉತ್ತಮ ಮಾರಾಟ ನಡೆದಿದೆ. ಈ ಉತ್ಸಾಹವು ಮುಂಬರುವ ದೀಪಾವಳಿ ಸೀಸನ್‌ನಲ್ಲೂ ಭಾರತೀಯ ಆರ್ಥಿಕತೆಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!