ನಾಳೆ ನಿರ್ಮಲಾ ಸತತ 8ನೇ ಬಜೆಟ್‌: ಮುಂಗಡಪತ್ರದಲ್ಲಿ ಏನಿರಲಿದೆ ಎಂಬ ಬಗ್ಗೆ ಕುತೂಹಲ!

Published : Jan 31, 2025, 05:00 AM IST
ನಾಳೆ ನಿರ್ಮಲಾ ಸತತ 8ನೇ ಬಜೆಟ್‌: ಮುಂಗಡಪತ್ರದಲ್ಲಿ ಏನಿರಲಿದೆ ಎಂಬ ಬಗ್ಗೆ ಕುತೂಹಲ!

ಸಾರಾಂಶ

2019ರಲ್ಲಿ ಮೋದಿ ಸರ್ಕಾರದ 2ನೇ ಅವಧಿಯಲ್ಲಿ ಪೂರ್ಣಾವಧಿ ವಿತ್ತ ಸಚಿವೆಯಾಗಿ ನೇಮಕಗೊಂಡ ನಿರ್ಮಲಾ ಅವರು ಒಟ್ಟು 7 ಪೂರ್ಣಾವಧಿ ಹಾಗೂ 2024ರ ಫೆಬ್ರವರಿಯಲ್ಲಿ 1 ಮಧ್ಯಂತರ ಬಜೆಟ್‌ ಮಂಡಿಸಿದ್ದರು. ಇನ್ನು ಕೇವಲ 3 ಬಜೆಟ್‌ ಮಂಡಿಸಿದರೆ ಒಟ್ಟು 11 ಬಜೆಟ್‌ ಮಂಡಿಸಿದ ಸಾರ್ವಕಾಲಿಕ ದಾಖಲೆ ಸೃಷ್ಟಿಸಲಿದ್ದಾರೆ. 

ನವದೆಹಲಿ(ಜ.31):  ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫೆ.1ರಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 3ನೇ ಅವಧಿಯ ಎರಡನೇ ಬಜೆಟ್‌ ಮಂಡಿಸಲಿದ್ದಾರೆ. ಈ ಮೂಲಕ ಸೀತಾರಾಮನ್‌ ಅವರು ಸತತ 8ನೇ ಬಾರಿ ಬಜೆಟ್‌ ಮಂಡಿಸಿದ ದಾಖಲೆ ನಿರ್ಮಿಸಲಿದ್ದಾರೆ.

ಈ ಬಾರಿಯ ಬಜೆಟ್‌ನಲ್ಲಿ ದುರ್ಬಲಗೊಂಡಿರುವ ಆರ್ಥಿಕ ಬೆಳವಣಿಗೆಗೆ ಬಲ ತುಂಬುವ ಹಾಗೂ ಬೆಲೆ ಏರಿಕೆ ಮತ್ತು ಸ್ಥಿರ ಆದಾಯದಂತಹ ಸಮಸ್ಯೆಗಳಿಂದ ಬಳಲುತ್ತಿರುವ ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತಹ ನಿರ್ಧಾರಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ.

ಸೀನಿಯರ್‌ ಸಿಟಿಜನ್ಸ್‌ಗೆ ಬಿಗ್‌ ರಿಲೀಫ್‌, ಹಿರಿಯರ ಹೆಲ್ತ್‌ ಇನ್ಶುರೆನ್ಸ್‌ ಪ್ರೀಮಿಯಂ ಬೇಕಾಬಿಟ್ಟಿ ಏರಿಕೆಗೆ IRDAI ಬ್ರೇಕ್‌!

2019ರಲ್ಲಿ ಮೋದಿ ಸರ್ಕಾರದ 2ನೇ ಅವಧಿಯಲ್ಲಿ ಪೂರ್ಣಾವಧಿ ವಿತ್ತ ಸಚಿವೆಯಾಗಿ ನೇಮಕಗೊಂಡ ನಿರ್ಮಲಾ ಅವರು ಒಟ್ಟು 7 ಪೂರ್ಣಾವಧಿ ಹಾಗೂ 2024ರ ಫೆಬ್ರವರಿಯಲ್ಲಿ 1 ಮಧ್ಯಂತರ ಬಜೆಟ್‌ ಮಂಡಿಸಿದ್ದರು. ಇನ್ನು ಕೇವಲ 3 ಬಜೆಟ್‌ ಮಂಡಿಸಿದರೆ ಒಟ್ಟು 11 ಬಜೆಟ್‌ ಮಂಡಿಸಿದ ಸಾರ್ವಕಾಲಿಕ ದಾಖಲೆ ಸೃಷ್ಟಿಸಲಿದ್ದಾರೆ.

ಈವರೆಗೆ ವಿವಿಧ ಸರ್ಕಾರಗಳ ಅವಧಿಯಲ್ಲಿ 10 ಬಾರಿ ಬಜೆಟ್‌ ಮಂಡಿಸಿದ ಖ್ಯಾತಿಗೆ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಪಾತ್ರರಾಗಿದ್ದಾರೆ. ಉಳಿದಂತೆ ವಿತ್ತಸಚಿವರಾಗಿದ್ದ ಪಿ. ಚಿದಂಬರಂ 9 ಬಾರಿ ಹಾಗೂ ಪ್ರಣಬ್‌ ಮುಖರ್ಜಿ 8 ಬಾರಿ ಬಜೆಟ್‌ ಮಂಡಿಸಿದ್ದಾರೆ.

Economic Survey 2025: ಏನಿದು ಆರ್ಥಿಕ ಸಮೀಕ್ಷೆ, ಬಜೆಟ್‌ಗೂ ಮುನ್ನ ದೇಶಕ್ಕೆ ಯಾಕೆ ಇದು

ಷೇರುಪೇಟೆಯೂ ನಾಳೆ ಓಪನ್‌

ಫೆ.1ರಂದೇ ಬಜೆಟ್‌ ಮಂಡಿಸುವ ನಿಯಮ ಜಾರಿಗೆ ಬಂದ ನಂತರ ಶನಿವಾರ ಮಂಡನೆಯಾಗುತ್ತಿರುವ 2ನೇ ಬಜೆಟ್‌ ಇದು. ಸಾಮಾನ್ಯವಾಗಿ ಶನಿವಾರದಂದು ರಜೆ ಇರುವ ಷೇರುಪೇಟೆಯೂ ಕಾರ್ಯನಿರ್ವಹಿಸಲಿದೆ. 2020ರಲ್ಲೂ ಇದೇ ರೀತಿ ಆಗಿತ್ತು.

ನಿರ್ಮಲಾ ದಾಖಲೆಗೆ ಇನ್ನು ಮೂರೇ ಬಜೆಟ್‌

ವಿವಿಧ ಸರ್ಕಾರಗಳ ಅವಧಿಯಲ್ಲಿ 10 ಬಜೆಟ್‌ ಮಂಡಿಸಿದ ಖ್ಯಾತಿ ಮೊರಾರ್ಜಿ ದೇಸಾಯಿ ಅವರಿಗೆ ಇದೆ. 8 ಬಜೆಟ್‌ ಮಂಡಿಸಿರುವ ನಿರ್ಮಲಾ ಇನ್ನು 3 ಮುಂಗಡಪತ್ರ ಮಂಡನೆ ಮಾಡಿದರೆ, ದೇಶದಲ್ಲೇ ಅತಿ ಹೆಚ್ಚು ಕೇಂದ್ರ ಬಜೆಟ್ ಮಂಡಿಸಿದ ಮಂತ್ರಿ ಎಂಬ ಖ್ಯಾತಿಗೆ ಭಾಜನರಾಗಲಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ