Economic Survey 2025: ಏನಿದು ಆರ್ಥಿಕ ಸಮೀಕ್ಷೆ, ಬಜೆಟ್‌ಗೂ ಮುನ್ನ ದೇಶಕ್ಕೆ ಯಾಕೆ ಇದು ಮುಖ್ಯ!

Published : Jan 30, 2025, 08:07 PM IST
Economic Survey 2025: ಏನಿದು ಆರ್ಥಿಕ ಸಮೀಕ್ಷೆ, ಬಜೆಟ್‌ಗೂ ಮುನ್ನ ದೇಶಕ್ಕೆ ಯಾಕೆ ಇದು ಮುಖ್ಯ!

ಸಾರಾಂಶ

ಕಳೆದ ಆರ್ಥಿಕ ಸಮೀಕ್ಷೆ ಮಂಡಿಸಿ ಆರು ತಿಂಗಳ ನಂತರ ಈ ವರ್ಷ ಮತ್ತೆ ಆರ್ಥಿಕ ಸಮೀಕ್ಷೆ ಮಂಡಿಸಲಾಗುತ್ತಿದೆ.

ಬೆಂಗಳೂರು (ಜ.30): 2025-26ರಕೇಂದ್ರ ಬಜೆಟ್ ಫೆಬ್ರವರಿ ಒಂದರಂದು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ. ಅದಕ್ಕೂ ಮೊದಲು ಜನವರಿ 31ರಂದು ಅಂದರೆ ನಾಳೆ ದೇಶದ ಆರ್ಥಿಕತೆಯ ಎಕ್ಸ್‌ರೇ ಎಂದೇ ಹೇಳಲಾಗುವ ಆರ್ಥಿಕ ಸಮೀಕ್ಷೆಯನ್ನು ಪ್ರಕಟ ಮಾಡಲಾಗುತ್ತದೆ.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದ್ದಾರೆ. ಇದು ಹಿಂದಿನ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಸಾಧನೆಯ ಮೌಲ್ಯಮಾಪನವನ್ನು ಇದು ಒಳಗೊಂಡಿರುತ್ತದೆ.

ಆರ್ಥಿಕ ಸಮೀಕ್ಷಾ ವರದಿ ಎಂದರೇನು?: ಬಜೆಟ್‌ಗೆ ಒಂದು ದಿನ ಮುಂಚಿತವಾಗಿ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗುತ್ತದೆ. ಅಂದರೆ ನಾಳೆ ಬೆಳಿಗ್ಗೆ 11 ಗಂಟೆಗೆ ಬಜೆಟ್ ಅಧಿವೇಶನ ಆರಂಭವಾಗುತ್ತದೆ. ಸಂಯುಕ್ತ ಅಧಿವೇಶನದಲ್ಲಿ ರಾಷ್ಟ್ರಪತಿ ಎರಡೂ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ನಂತರ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಬೆಳವಣಿಗೆಯ ಕುರಿತು ಮುನ್ಸೂಚನೆಗಳೊಂದಿಗೆ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯನ್ನು ಮಂಡಿಸುತ್ತಾರೆ.

ಕಳೆದ ಆರ್ಥಿಕ ಸಮೀಕ್ಷೆ ಮಂಡಿಸಿ ಆರು ತಿಂಗಳ ನಂತರ ಈ ವರ್ಷ ಮತ್ತೆ ಆರ್ಥಿಕ ಸಮೀಕ್ಷೆ ಮಂಡಿಸಲಾಗುತ್ತಿದೆ. ಏಕೆಂದರೆ, 2024 ಭಾರತದಲ್ಲಿ ಚುನಾವಣಾ ವರ್ಷವಾಗಿತ್ತು, ಆದ್ದರಿಂದ 2024ರ ಚುನಾವಣೆಯ ನಂತರ ಜುಲೈನಲ್ಲಿ ಸಂಪೂರ್ಣ ಬಜೆಟ್ ಮಂಡಿಸಲಾಗಿತ್ತು.

ಕಳೆದ ವರ್ಷದ ಆರ್ಥಿಕ ವಿಷಯಗಳನ್ನು ಆರ್ಥಿಕ ಸಮೀಕ್ಷೆ ಪರಿಶೀಲಿಸುತ್ತದೆ. ಜೊತೆಗೆ ಕೃಷಿ, ಕೈಗಾರಿಕಾ ಉತ್ಪಾದನೆ, ಮೂಲಸೌಕರ್ಯ, ಉದ್ಯೋಗ, ಹಣದುಬ್ಬರ ದರ, ವ್ಯಾಪಾರ, ವಿದೇಶಿ ವಿನಿಮಯ ಮೀಸಲು, ಇತರ ಆರ್ಥಿಕ ಕ್ಷೇತ್ರಗಳಲ್ಲಿನ ಪ್ರವೃತ್ತಿಗಳನ್ನು ಸಮೀಕ್ಷೆ ವಿಶ್ಲೇಷಿಸುತ್ತದೆ. ಈ ವಿವರವಾದ ಸಮೀಕ್ಷೆಯು ಕೇಂದ್ರ ಬಜೆಟ್‌ನಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ. ದೇಶದ ಜಿಡಿಪಿ ಬೆಳವಣಿಗೆಯ ಪ್ರಮುಖ ಸವಾಲುಗಳನ್ನು ಗುರುತಿಸಲು ಸಹ ಆರ್ಥಿಕ ಸಮೀಕ್ಷೆ ಸಹಾಯ ಮಾಡುತ್ತದೆ.

ಕಳೆದ ಕೆಲವು ವರ್ಷಗಳಿಂದ, ಆರ್ಥಿಕ ಸಮೀಕ್ಷೆಯನ್ನು 'ಭಾಗ ಎ', 'ಭಾಗ ಬಿ' ಎಂಬ ಎರಡು ಭಾಗಗಳಾಗಿ ಮಂಡಿಸಲಾಗಿದೆ, ಇದರಲ್ಲಿ ದೇಶದ ಜಿಡಿಪಿ ಬೆಳವಣಿಗೆಯ ದೃಷ್ಟಿಕೋನ, ಹಣದುಬ್ಬರ ದರ, ಮುನ್ಸೂಚನೆಗಳು, ವಿದೇಶಿ ವಿನಿಮಯ ಮೀಸಲು, ವ್ಯಾಪಾರ ಕೊರತೆ ಇತ್ಯಾದಿಗಳ ಕುರಿತು ಮಾಹಿತಿ ಇರುತ್ತದೆ. ಅದೇ ಸಮಯದಲ್ಲಿ, ಭಾಗ ಬಿ ಸಾಮಾಜಿಕ ಭದ್ರತೆ, ಬಡತನ, ಶಿಕ್ಷಣ, ಆರೋಗ್ಯ, ಮಾನವ ಅಭಿವೃದ್ಧಿ ಮುಂತಾದ ನಿರ್ದಿಷ್ಟ ವಿಷಯಗಳ ಕುರಿತು ವಿವರಗಳನ್ನು ಒದಗಿಸುತ್ತದೆ. ಸರ್ಕಾರ ನಡೆಸುವ ಪ್ರಮುಖ ಯೋಜನೆಗಳು ಮತ್ತು ಪ್ರಮುಖ ನೀತಿಗಳು ಮತ್ತು ಅವುಗಳ ಫಲಿತಾಂಶಗಳನ್ನು ಸಮೀಕ್ಷೆ ವಿವರಿಸುತ್ತದೆ.

 

ಬಜೆಟ್ ನಲ್ಲಿ ಮಧ್ಯಮ ವರ್ಗದವರಿಗೆ ಸಿಗುತ್ತಾ ನೆಮ್ಮದಿ? ಬದಲಾಗ್ಬಹುದಾ ಜಿಎಸ್‌ಟಿ ಸ್ಲ್ಯಾಬ್ ?

ಆರ್ಥಿಕ ಸಮೀಕ್ಷೆಯನ್ನು ಯಾರು ಸಿದ್ಧಪಡಿಸುತ್ತಾರೆ; ಇದನ್ನು ಮೊದಲು ಯಾವಾಗ ಮಂಡಿಸಲಾಯಿತು?: ಮುಖ್ಯ ಆರ್ಥಿಕ ಸಲಹೆಗಾರರ (CEA) ಮಾರ್ಗದರ್ಶನದಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯ (DEA) ಆರ್ಥಿಕ ವಿಭಾಗವು ಸಮೀಕ್ಷೆಯನ್ನು ಸಿದ್ಧಪಡಿಸುತ್ತದೆ. 1950-51ರಲ್ಲಿ ಹಣಕಾಸು ಸಚಿವಾಲಯವು ಮೊದಲ ಬಾರಿಗೆ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿತು. ಆದರೆ ಆಗ ಇದನ್ನು ಕೇಂದ್ರ ಬಜೆಟ್ ಜೊತೆಗೆ ಮಂಡಿಸಲಾಗಿತ್ತು.

Union Budget 2025: ಬಜೆಟ್‌ ಸಿದ್ದಮಾಡಲು ನಿರ್ಮಲಾ ಸೀತಾರಾಮನ್‌ ಅವರ ಟೀಮ್‌ನಲ್ಲಿರುವವರು ಯಾರು?

ಆರ್ಥಿಕ ಸಮೀಕ್ಷೆಯನ್ನು ನೇರಪ್ರಸಾರದಲ್ಲಿ ಹೇಗೆ ವೀಕ್ಷಿಸುವುದು: ಆರ್ಥಿಕ ಸಮೀಕ್ಷೆಯ ನೇರಪ್ರಸಾರವನ್ನು ಸರ್ಕಾರದ ಅಧಿಕೃತ ವಾಹಿನಿಗಳಲ್ಲಿ ವೀಕ್ಷಿಸಬಹುದು. ಜೊತೆಗೆ, ಸಂಸದ್ ಟಿವಿ, PIB ಇಂಡಿಯಾ ಕೂಡ ಬಿಡುಗಡೆಯ ನೇರಪ್ರಸಾರವನ್ನು ಮಾಡುತ್ತದೆ. ಲೋಕಸಭಾ ಟಿವಿ ಮತ್ತು ರಾಜ್ಯಸಭಾ ಟಿವಿಯನ್ನು ವಿಲೀನಗೊಳಿಸಿ 2021ರಲ್ಲಿ ಸಂಸದ್ ಟೆಲಿವಿಷನ್ (ಸಂಸದ್ ಟಿವಿ) ರಚಿಸಲಾಯಿತು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!