Union Budget 2024: ಈ ವರ್ಷ ಕ್ರೆಡಿಟ್ ಹರಿವು ಹೆಚ್ಚಳ; 9 ತಿಂಗಳಲ್ಲಿ ವಿವಿಧ ವಲಯಕ್ಕೆ ಕ್ರೆಡಿಟ್ ಹರಿವು ಎಷ್ಟಿದೆ?

By Suvarna NewsFirst Published Feb 1, 2024, 10:59 AM IST
Highlights

2023ನೇ ಹಣಕಾಸು ಸಾಲಿಗೆ ಹೋಲಿಸಿದರೆ 2024ನೇ ಸಾಲಿನಲ್ಲಿ ವಿವಿಧ ವಲಯಕ್ಕೆ ಕ್ರೆಡಿಟ್ ಹರಿವು ಹೆಚ್ಚಿದೆ.ಹಾಗಾದ್ರೆ ಕಳೆದ 9 ತಿಂಗಳಲ್ಲಿ (2023ನೇ ಸಾಲಿನ  ಏಪ್ರಿಲ್-ಡಿಸೆಂಬರ್ ತನಕ ) ವಿವಿಧ ವಲಯಕ್ಕೆ ಕ್ರೆಡಿಟ್ ಹರಿವು ಎಷ್ಟಿದೆ?
 

ನವದೆಹಲಿ (ಫೆ.2): 2024ನೇ ಸಾಲಿನ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಜ.2) ಮಂಡಿಸಲಿದ್ದಾರೆ. ಏಪ್ರಿಲ್, ಮೇನಲ್ಲಿ ಚುನಾವಣೆ ನಡೆಯಲಿರುವ ಕಾರಣ ಈ ಬಾರಿಯ ಬಜೆಟ್ ಪೂರ್ಣ ಪ್ರಮಾಣದಲ್ಲಿ ಇರೋದಿಲ್ಲ. ಹೀಗಾಗಿ ಬಜೆಟ್ ನಲ್ಲಿ ಯಾವುದೇ ಮಹತ್ವದ ಘೋಷಣೆಯನ್ನು ನಿರೀಕ್ಷಿಸುವಂತಿಲ್ಲ. ಇನ್ನು ವಿತ್ತ ಸಚಿವೆ 2024ನೇ ಸಾಲಿನ  ಸರ್ಕಾರದ ಕ್ರೆಡಿಟ್ ಖಾತೆ ಕುರಿತ ಮಾಹಿತಿಯನ್ನು ಮಂಡಿಸುವ ಮುನ್ನ ಕಳೆದ 9 ತಿಂಗಳಲ್ಲಿ ಅಂದರೆ 2023ನೇ ಸಾಲಿನ ಏಪ್ರಿಲ್ ನಿಂದ ಡಿಸೆಂಬರ್ ತನಕದ ಕ್ರೆಡಿಟ್ ಹರಿವನ್ನು ಗಮನಿಸಿದರೆ ಕಳೆದ ಹಣಕಾಸು ಸಾಲಿಗೆ ಹೋಲಿಸಿದರೆ ಈ ಹಣಕಾಸು ಸಾಲಿನಲ್ಲಿ ಹೆಚ್ಚಳ ಕಂಡುಬಂದಿದೆ. ಈ ವರ್ಷದ ಹಣಕಾಸು ಸಾಲಿನಲ್ಲಿ ಒಟ್ಟು ಕ್ರೆಡಿಟ್ ಹರಿವು 22.8 ಶತಕೋಟಿ ರೂ. ಇದೆ. ಕಳೆದ ಸಾಲಿನಲ್ಲಿ ಇದು 14.1ಶತಕೋಟಿ ರೂ. ಇತ್ತು. ಅಂದರೆ ಕಳೆದ ಸಾಲಿಗಿಂತ ಈ ವರ್ಷ ಶೇ.1.6ರಷ್ಟು ಹೆಚ್ಚಳವಾಗಿದ.

ವಲವಾರು ಕ್ರೆಡಿಟ್ ಪ್ರಗತಿ ಹೀಗಿದೆ:
ಕೃಷಿ ವಲಯಕ್ಕೆ 2023ನೇ ಹಣಕಾಸಿನ ಸಾಲಿಗೆ ಹೋಲಿಸಿದ್ರೆ 2024ನೇ ಹಣಕಾಸು ಸಾಲಿನಲ್ಲಿ ಕ್ರೆಡಿಟ್ ಹರಿವು ಶೆ.1.5ರಷ್ಟು ಹೆಚ್ಚಿದೆ. 2023ನೇ ಹಣಕಾಸು ಸಾಲಿನಲ್ಲಿ ಕೃಷಿ ವಲಯಕ್ಕೆ 1724 ಶತಕೋಟಿ ರೂ. ಹರಿದು ಬಂದಿದ್ದರೆ, 2024ನೇ ಸಾಲಿನಲ್ಲಿ 2664 ಶತಕೋಟಿ ಕೋಟಿ ರೂ. ಹರಿದು ಬಂದಿದೆ. ಇನ್ನು ಕೈಗಾರಿಕಾ ವಲಯಕ್ಕೆ ಕ್ರೆಡಿಟ್ ಹರಿವಿನಲ್ಲಿ ಶೇ.1.8ರಷ್ಟು ಏರಿಕೆಯಾಗಿದೆ. 2023ನೇ ಸಾಲಿನಲ್ಲಿ 1397 ಶತಕೋಟಿ ರೂ. ಹರಿದು ಬಂದಿದ್ದರೆ, 2024ನೇ ಸಾಲಿನಲ್ಲಿ 2484 ಶತಕೋಟಿ ರೂ. ಬಂದಿದೆ. ಇದರಲ್ಲಿ ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗೆ 2,729 ಶತಕೋಟಿ ರೂ. ಹಾಗೂ ಮೂಲಸೌಕರ್ಯಕ್ಕೆ 771 ಕೋಟಿ ರೂ. ಕ್ರೆಡಿಟ್ ಹರಿದು ಬಂದಿದೆ. 

ಇಂದು ಕೇಂದ್ರ ಬಜೆಟ್: ಸತತ 6ನೇ ಬಾರಿ ಬಜೆಟ್‌ ಮಂಡಿಸಿ ಮೊರಾರ್ಜಿ ದಾಖಲೆ ಸರಿಗಟ್ಟಲಿರುವ ನಿರ್ಮಲಾ

ಸೇವಾ ವಲಯಕ್ಕೆ ಎಷ್ಟು?
ಸೇವಾ ವಲಯಕ್ಕೆ 2023ನೇ ಹಣಕಾಸು ಸಾಲಿನಲ್ಲಿ ಕ್ರೆಡಿಟ್ ಹರಿವು 4958 ಶತಕೋಟಿ ರೂ.ಇದ್ದರೆ, 2024ನೇ ಸಾಲಿನಲ್ಲಿ 7064 ಕೋಟಿ ರೂ. ಇದೆ. ಅಂದರೆ ಶೇ.1.4ರಷ್ಟು ಹೆಚ್ಚಳವಾಗಿದೆ. ಇನ್ನು ವೈಯಕ್ತಿಕ ಸಾಲಗಳ ವಲಯಕ್ಕೆ 2023ನೇ ಹಣಕಾಸು ಸಾಲಿನಲ್ಲಿ ಕ್ರೆಡಿಟ್ ಹರಿವು 5707 ಶತಕೋಟಿ ರೂ. ಇದ್ದು, 2024ನೇ ಸಾಲಿನಲ್ಲಿ 9946 ಶತಕೋಟಿ ರೂ. ಇದೆ. ಅಂದರೆ ಕ್ರೆಡಿಟ್ ಹರಿವಿನಲ್ಲಿ ಶೇ.1.7ರಷ್ಟು ಹೆಚ್ಚಳವಾಗಿದೆ. ಇದರಲ್ಲಿ ಗೃಹಸಾಲಗಳ ಕ್ರೆಡಿಟ್ ಹರಿವಿನ ಪ್ರಮಾಣದಲ್ಲಿ 2023ನೇ ಸಾಲಿಗೆ ಹೋಲಿಸಿದರೆ 2024ರಲ್ಲಿ ಶೇ.2.7ರಷ್ಟು ಹೆಚ್ಚಳವಾಗಿದೆ. ಇನ್ನು ಒಟ್ಟು ಬ್ಯಾಂಕ್ ಕ್ರೆಡಿಟ್ 2023ನೇ ಹಣಕಾಸು ಸಾಲಿನಲ್ಲಿ 14155 ಶತಕೋಟಿ ರೂ. ಇದ್ದು, 2024ನೇ ಸಾಲಿನಲ್ಲಿ 22,861ರೂ. ಇದೆ. ಅಂದರೆ ಶೇ.1.6ರಷ್ಟು ಹೆಚ್ಚಳವಾಗಿದೆ. 

ಬಜೆಟ್ ಕುರಿತ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಿರ್ಮಲಾ ಸೀತಾರಾಮನ್ ಅವರ 6ನೇ ಬಜೆಟ್ 
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಲೋಕಸಭೆ ಚುನಾವಣೆಗೆ ಹೋಗುವುದಕ್ಕೂ ಮುನ್ನ ಮಂಡಿಸಲಿರುವ ಕೊನೆಯ ಆಯವ್ಯಯ ಇದಾಗಿದೆ. ಮೊರಾರ್ಜಿ ದೇಸಾಯಿ ಬಳಿಕ ಸತತ 6 ಬಾರಿ ಕೇಂದ್ರ ಬಜೆಟ್‌ ಮಂಡಿಸಿದ ವಿತ್ತ ಮಂತ್ರಿಯಾಗಿ ನಿರ್ಮಲಾ ಸೀತಾರಾಮನ್‌ ಇಂದು ದಾಖಲೆ ಬರೆಯಲಿದ್ದಾರೆ.

ಚುನಾವಣೆಗೂ ಮುನ್ನ ಮಂಡಿಸಲಿರುವ ಬಜೆಟ್‌ ಆಗಿರುವುದರಿಂದ ಇದು ಪೂರ್ಣ ಪ್ರಮಾಣದ ಬಜೆಟ್‌ ಆಗಿರದೆ ಮಧ್ಯಂತರ ಬಜೆಟ್‌ ಆಗಿರಲಿದೆ. ಅದರಲ್ಲಿ ಮತದಾರರಿಗೆ ಭರ್ಜರಿ ಕೊಡುಗೆಗಳು ಇರಲಿವೆಯೇ ಅಥವಾ ದೇಶದ ಆರ್ಥಿಕಾಭಿವೃದ್ಧಿಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಬಜೆಟ್‌ ಮಂಡಿಸಲಾಗುತ್ತದೆಯೇ ಅಥವಾ ಜನಪ್ರಿಯ ಹಾಗೂ ಅಭಿವೃದ್ಧಿಪರ ಉಪಕ್ರಮಗಳ ಮಿಶ್ರಣವಾದ ಬಜೆಟ್‌ ಆಗಿರಲಿದೆಯೇ ಎಂಬ ಕುತೂಹಲ ಮೂಡಿದೆ.
 

click me!