Union Budget 2024, ಮೊಬೈಲ್, ಚಿನ್ನ ಸೇರಿ ಕೆಲ ವಸ್ತುಗಳು ಅಗ್ಗ, ಯಾವುದು ದುಬಾರಿ?

By Chethan Kumar  |  First Published Jul 23, 2024, 12:35 PM IST

ಈ ಬಾರಿಯ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಕೆಲ ಮಹತ್ವದ ಘೋಷಣೆ ಮಾಡಿದ್ದಾರೆ. ಇದರಿಂದ ಹಲವು ವಸ್ತುಗಳ ಬೆಲೆ ಇಳಿಕೆಯಾದರೆ, ಕೆಲ ವಸ್ತುಗಳು ಬೆಲೆ ದುಬಾರಿಯಾಗಲಿದೆ. ಈ ಬಜೆಟ್‌ನಲ್ಲಿ ಯಾವುದು ಅಗ್ಗ ಹಾಗೂ ಯಾವುದು ದುಬಾರಿ?
 


ನವದೆಹಲಿ(ಜು.23) ಕೇಂದ್ರ ಬಜೆಟ್ 2024 ಹಲುವ ಹೊಸತನಗಳಿಗೆ ಸಾಕ್ಷಿಯಾಗಿದೆ. ನಿರ್ಮಲಾ ಸೀತಾರಾಮನ್ ತಮ್ಮ 7ನೇ ಬಜೆಟ್ ಮಂಡಿಸಿದ್ದಾರೆ. ಕೆಲ ನೀತಿಗಳ ಬದಲಾವಣೆ, ಆಮದು ಸುಂಕ, ತೆರಿಗೆ ನೀತಿಯಲ್ಲಿನ ಬದಲಾವಣೆಗಳಿಂದ ಹಲವು ವಸ್ತುಗಳು ಬೆಲೆ ಇಳಿಕೆಯಾದರೆ, ಕೆಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಈ ಪೈಕಿ ಮೊಬೈಲ್, ಚಿನ್ನ, ಬೆಳ್ಳಿ ಸೇರಿದಂತೆ ಪ್ರಮುಖ ವಸ್ತಗಳ ಬೆಲೆ ಇಳಿಕೆಯಾಗಿದೆ. ಇನ್ನು ಪ್ಲಾಸ್ಟಿಕ್, ಆಮದು ಬಟ್ಟೆ ಸೇರಿದಂತೆ ಕೆಲ ವಸ್ತುಗಳ ಬೆಲೆ ಏರಿಕೆಯಾಗಿದೆ.

ಯಾವುದು ಅಗ್ಗ?
ಕ್ಯಾನ್ಸರ್ ಔಷಧಿ
ಮೊಬೈಲ್ 
ಬೆಳ್ಳಿ-ಬಂಗಾರ, ಪ್ಲಾಟಿನಂ
ಮೀನು ಸೇರಿದಂತೆ ಸಮುದ್ರ ಆಹಾರ
ಸೋಲಾರ್ ಶಕ್ತಿ ಬಿಡಿ ಭಾಗ
ಚಪ್ಪಲಿ ಸೇರಿದಂತೆ ಪಾದರಕ್ಷೆ
ಕ್ಯಾಮೆರಾ ಲೆನ್ಸ್
ಎಲೆಕ್ಟ್ರಿಕ್ ವಾಹನ

Latest Videos

undefined

ಕಂಪ್ರೆಸ್ಡ್ ಗ್ಯಾಸ್

Union Budget 2024 ಸರ್ಕಾರದಿಂದ ಮೊದಲ ತಿಂಗಳ ವೇತನ ಸೇರಿ ಉದ್ಯೋಗಿಗಳಿಗೆ ಬಂಪರ್ ಗಿಫ್ಟ್ ಘೋಷಣೆ!

ಯಾವುದು ದುಬಾರಿ?
ಪ್ಲಾಸ್ಟಿಕ್ - ಫ್ಲೆಕ್‌ ತೆರಿಗೆ ಹೆಚ್ಚಳ
ಪರಿಸರದ ಹಿತದೃಷ್ಟಿಗೆ ಮಾರಕ
ಅಮುದು ಬಟ್ಟೆ

ಪ್ಲಾಟಿನಂ ಕಸ್ಟಮ್ ತೆರಿಗೆಯನ್ನು ಶೇಕಡಾ 6 ರಷ್ಟು ಇಳಿಕೆ ಮಾಡಲಾಗಿದೆ.  ಮೊಬೈಲ್ ಫೋನ್ ಹಾಗೂ ಚಾರ್ಜರ್ ಮೇಲಿನ ಕಸ್ಟಮ್ ತೆರಿಗೆಯನ್ನು ಶೇಕಡಾ 15ರಷ್ಟು ಇಳಿಕೆ ಮಾಡಲಾಗಿದೆ. ಲಿಥಿಯಂ ಇಯಾನ್ ಬ್ಯಾಟರಿ ಮೇಲಿನ ತೆರಿಗೆ ಕಡಿತಗೊಳಿಸಲಾಗಿದೆ. ಇದರಿಂದ ಮೊಬೈಲ್ ಮಾತ್ರವಲ್ಲ, ಎಲೆಕ್ಟ್ರಿಕ್ ವಾಹನಗಳ ಬೆಲೆಯೂ ಇಳಿಕೆಯಾಗಲಿದೆ.  ಇನ್ನು ಕ್ಯಾಮೆರಾ ಲೆನ್ಸ್ ಮೇಲಿನ ತೆರಿಗೆ ಕಡಿತಗೊಳಿಸಲಾಗಿದೆ.ಸಮುದ್ರ ಆಹಾರಗಳಾದ ಮೀನು ಸೇರಿದಂತೆ ಇತರ ಆಗಾರದ ಬೆಲಯಲ್ಲಿ ಇಳಿಕೆಯಾಗಲಿದೆ. 

ನಿರ್ಮಲಾ ಸೀತಾರಾಮನ್ 7ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಕೆಲ ಮಹತ್ತರ ಘೋಷಣೆಗಳನ್ನು ಮಾಡಿದ್ದಾರೆ. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವ ಜೊತೆಗೆ ಉದ್ಯೋಗ ಸೃಷ್ಟಿಗೂ ಗಮನಹರಿಸಲಾಗಿದೆ. ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವವರಿಗೆ ಸರ್ಕಾರ ಪ್ರೋತ್ಸಾಹ ಧನ ನೀಡಲಾಗುತ್ತದೆ.  ಇನ್ನು ಬಿಹಾರ ಹಾಗೂ ಆಂಧ್ರ ಪ್ರದೇಶಕ್ಕೆ ಬಂಪರ್ ಕೊಡುಗೆ ನೀಡಲಾಗಿದೆ. ಎನ್‌ಡಿಎ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದ ಈ ಎರಡು ರಾಜ್ಯಗಳಿಗೆ ಸಾವಿರಾರು ಕೋಟಿ ರೂಪಾಯಿ ವಿಶೇಷ ಅನುದಾನ ನೀಡಲಾಗಿದೆ. 

Union Budget 2024 ದಾಖಲೆಯ 7ನೇ ಬಜೆಟ್ ಮಂಡನೆಯಲ್ಲಿ 9 ಆದ್ಯತೆ ಕ್ಷೇತ್ರ ಘೋಷಣೆ!

1 ಕೋಟಿ ಯುವ ಸಮೂಹಕ್ಕೆ ಇಂಟರ್ನ್‌ಶಿಪ್‌ ಯೋಜನೆ, ಬಡವರಿಗೆ 1 ಕೋಟಿ ಮನೆ ನಿರ್ಮಾಣ, ಪ್ರವಾಸೋದ್ಯಮಗಳ ಮೂಲಕ ಆದಾಯ ವೃದ್ಧಿಗೆ ಕ್ರಮ, ಮೂಲಭೂತ ಸೌಕರ್ಯ ಅಭಿವೃದ್ಧಿಗೂ ಈ ಬಾರಿಯ ಬಜೆಟ್‌ ಒತ್ತು ನೀಡಿದೆ.

 

click me!