
ನವದೆಹಲಿ(ಜು.23) ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಕೆಲ ಮಹತ್ವದ ಘೋಷಣೆ ಮಾಡಿದ್ದಾರೆ. 9 ಆದ್ಯತೆ ಕ್ಷೇತ್ರಗಳ ಪೈಕಿ ಉದ್ಯೋಗ ಹಾಗೂ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದರ ಅಡಿಯಲ್ಲಿ ಕೆಲ ವಿಶೇಷ ಅನುದಾನ ಹಾಗೂ ಘೋಷಣೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವ ನೌಕರರಿಗೆ ಸರ್ಕಾರ ಮೊದಲ ತಿಂಗಳಲ್ಲಿ ಪ್ರೋತ್ಸಾಹ ಧನ ನೀಡಲಿದೆ. ಈ ಮೂಲಕ ಉದ್ಯೋಗದಾತ ಹಾಗೂ ಉದ್ಯೋಗಿಗೆ ಉತ್ತೇಜನ ನೀಡಲು ಈ ಯೋಜನೆ ಘೋಷಿಸಲಾಗಿದೆ. ಈ ಬಜೆಟ್‌ನಲ್ಲಿ ಉದ್ಯೋಗಿಗಳಿಗೆ ನಿರ್ಮಲಾ ಸೀತಾರಾಮನ್ ಘೋಷಿಸಿದ ಬಂಪರ್ ಕೊಡುಗೆ ಲಿಸ್ಟ್ ಇಲ್ಲಿದೆ.
ಮೊದಲ ಬಾರಿಗೆ ಕೆಲಸಕ್ಕೆ ಸೇರುವ ಉದ್ಯೋಗಿಗಳಿಗೆ ನೆರವಾಗಲು ವಿಶೇಷ ಯೋಜನೆ ಘೋಷಣೆ ಮಾಡಲಾಗಿದೆ. ಇದರ ಅಡಿಯಲ್ಲಿ ಕಂಪನಿ ವೇತನದ ಜೊತೆಗೆ ಸರ್ಕಾರ ಮೊದಲ ತಿಂಗಳ ಸಂಬಂಳವನ್ನು ಉದ್ಯೋಗಿಗೆ ನೀಡಲಿದೆ. ಇದೇ ವೇಳೆ ಕೌಶಲ್ಯ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ. ಯುವ ಸಮೂಹಕ್ಕೆ ಹೊಸ ಯೋಜನೆಗಳ ಮೂಲಕ ಹೆಚ್ಚಿನ ಉದ್ಯೋಗ ಅವಕಾಶ ಕಲ್ಪಿಸಲು ವಿಶೇಷ ಯೋಜನೆ ರೂಪಿಸಲಾಗಿದೆ. ಇದಕ್ಕೆಗೆ ಅನುದಾನ ಮೀಸಲಿಡಲಾಗಿದೆ.
ಇಂಟರ್ನ್‌ಶಿಪ್‌ಗಾಗಿ ವಿಶೇಷ ಯೋಜನೆ ಜಾರಿಗೊಳಿಸಲಾಗಿದೆ. ಈ ಪೈಕಿ ಅಗ್ರಗಣ್ಯ 500 ಕಂಪನಿಗಳಲ್ಲಿ ಇಂಟರ್ನಶಿಪ್ ಯೋಜನೆ ಜಾರಿ ಮಾಡಲಾಗಿದೆ. ಇಂಟರ್ನ್‌ಶಿಪ್ ತರಬೇತಿ ಪಡೆಯುವವರಿಗೆ ಭತ್ಯೆಯಾಗಿ 5,000 ರೂಪಾಯಿ ಹಾಗೂ ಒಂದು ಬಾರಿ ಪ್ರೋತ್ಸಾಹ ಧನವಾಗಿ 6,000 ರೂಪಾಯಿ ಹಣವನ್ನು ಇಂಟರ್ನ್‌ಶಿಪ್ ಯೋಜನೆಯಡಿ ನೀಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Budget 2024 LIVE: ನೈಸರ್ಗಿಕ ಕೃಷಿಗೆ ಒತ್ತು, ಆಂಧ್ರ, ಬಿಹಾರಕ್ಕೆ ಬಂಪರ್
ಪ್ರಮುಖವಾಗಿ ಉತ್ಪಾದನಾ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ ಮಾಡಲು ಎನ್‌ಡಿಎ ಸರ್ಕಾರ ಪ್ರಮುಖ ಆದ್ಯತೆ ನೀಡಲಿದೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಉದ್ಯೋಗ ಅಭದ್ರತೆ ಸವಾಲು ಎದುರಿಸಲು ಹೊಸ ಯೋಜನೆ ಜಾರಿ ಮಾಡಲಾಗಿದೆ.
ಉದ್ಯೋಗ ಕ್ಷೇತ್ರದ ಜೊತೆಗೆ ಕೃಷಿ, ಶಿಕ್ಷಣ, ಮಹಿಳೆ, ಬಡತನ ಸೇರಿದಂತೆ 9 ಕ್ಷೇತ್ರಗಳಿಗೆ ಆದ್ಯತೆ ನೀಡಿದೆ. ಪ್ರಮುಖವಾಗಿ ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ತೋಟಿ ರೂಪಾಯಿ ಅನುದಾನ ನೀಡಲಾಗಿದೆ. ಈ ಮೂಲಕ ಕೃಷಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಬೆಳೆಗಳ ಉತ್ಪಾದನೆ ಒತ್ತು ನೀಡಲಾಗಿದೆ. ಬೆಳೆ ಸಮೀಕ್ಷೆಗೆ ಡಿಜಿಟಲ್ ವ್ಯವಸ್ಥೆ ಜಾರಿ ಮಾಡಲಾಗಿದೆ. 400ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಡಿಜಿಟಲ್ ಬೆಲೆ ಸಮೀಕ್ಷೆ ಜಾರಿ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
Union Budget 2024 ದಾಖಲೆಯ 7ನೇ ಬಜೆಟ್ ಮಂಡನೆಯಲ್ಲಿ 9 ಆದ್ಯತೆ ಕ್ಷೇತ್ರ ಘೋಷಣೆ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.