Union Budget 2024: ವಿದೇಶಗಳಿಗೆ 2023-24ರಲ್ಲಿ ಭಾರತದಿಂದ 8990 ಕೋಟಿ ರೂಪಾಯಿ ಸಾಲ!

Published : Feb 01, 2024, 07:10 PM IST
Union Budget 2024: ವಿದೇಶಗಳಿಗೆ 2023-24ರಲ್ಲಿ ಭಾರತದಿಂದ 8990 ಕೋಟಿ ರೂಪಾಯಿ ಸಾಲ!

ಸಾರಾಂಶ

ಭಾರತ 2023-24ರಲ್ಲಿ ವಿದೇಶಗಳಿಗೆ ಸಾಲ ಹಾಗೂ ಅನುದಾನ ನೀಡುವ ಸಲುವಾಗಿಯೇ 8990 ಕೋಟಿ ರೂಪಾಯಿಯನ್ನು ಮೀಸಲಿಟ್ಟಿದೆ. ಹೆಚ್ಚಿನವುಗಳು ಭಾರತ ತನ್ನ ಸಹಾಯ ಎನ್ನುವ ನಿಟ್ಟಿನಲ್ಲಿ ಕೊಟ್ಟಿರುವ ಹಣವಾಗಿದೆ.  

ನವದೆಹಲಿ (ಫೆ.1): ಕೇಂದ್ರ ಸರ್ಕಾರ ತನ್ನ ಮಧ್ಯಂತರ ಬಜೆಟ್‌ಅನ್ನು ಪ್ರಕಟಿಸಿದ್ದು, ಇದೇ ವೆಳೆ 2023-24ರಲ್ಲಿ ವಿದೇಶಗಳಿಗೆ ಅನುದಾನದ ರೂಪದಲ್ಲಿ ನೀಡಲಿರುವ ಹಾಗೂ ಈ ವರ್ಷದ ಅಂತ್ಯದ ವೇಳೆಗೆ ನೀಡಲಿರುವ ಹಣದ ವಿವರವನ್ನು ಪಟ್ಟಿ ಮಾಡಿದೆ. ಅದರಂತೆ 2023-24ರಲ್ಲಿ ಕೇಂದ್ರ ಸರ್ಕಾರ 8990 ಕೋಟಿ ರೂಪಾಯಿಗಳನ್ನು ವಿದೇಶಕ್ಕೆ ಅನುದಾನದ ರೂಪದಲ್ಲಿ ನೀಡಿದೆ.ಇದರಲ್ಲಿ ಹೆಚ್ಚಿನ ಅನುದಾನಗಳನ್ನು ಭಾರತ ತನ್ನ ನೆರೆಯ ದೇಶಗಳಿಗೆ ನೀಡಿದೆ.  ವಿದೇಶಾಂಗ ವ್ಯವಹಾರಗಳ ಇಲಾಖೆಯ ಅಡಿಯಲ್ಲಿಯೇ ಹೆಚ್ಚಿನ ಅನುದಾನಗಳನ್ನು ಹಂಚಿಕೆ ಮಾಡಲಾಗಿದೆ. ಅಫ್ಘಾನಿಸ್ತಾನ ದೇಶಕ್ಕೆ ಭಾರತ 220 ಕೋಟಿ ಅನುದಾನ ನೀಡಿದೆ. ನೆರೆಯ ಬಾಂಗ್ಲಾದೇಶಕ್ಕೆ 130 ಕೋಟಿ, ನೇಪಾಳಕ್ಕೆ 650 ಕೋಟಿ, ಶ್ರೀಲಂಕಾಕ್ಕೆ 60 ಕೋಟಿ ರೂಪಾಯಿಗಳನ್ನು ಅನುದಾನವಾಗಿ ನೀಡಿದೆ. ನೆರೆಯ ಪುಟ್ಟ ದೇಶವಾಗಿರುವ ಭೂತಾನ್‌ಗೆ 784.61 ಕೋಟಿ ರೂಪಾಯಿಯನ್ನು ಅನುದಾನವಾಗಿ ನೀಡಿದ್ದರೆ, ಸಾಲವಾಗಿ 1614.36 ಕೋಟಿ ರೂಪಾಯಿಗಳನ್ನು ಭಾರತ ನೀಡಿದೆ.

ಭಾರತದೊಂದಿಗೆ ರಾಜತಾಂತ್ರಿಕ ಬಿಕ್ಕಟ್ಟಿನಲ್ಲಿರುವ ಮಾಲ್ಡೀವ್ಸ್‌ ದೇಶಕ್ಕೆ ಭಾರತ 770.90 ಕೋಟಿ ರೂಪಾಯಿ ಅನುದಾನವನ್ನು ನೀಡಿದೆ. ಮಂಗೋಲಿಯಾ ದೇಶಕ್ಕೆ 5 ಕೋಟಿ, ಮಾರಿಷಷ್‌ ದೇಶಕ್ಕೆ 330 ಕೋಟಿ ರೂಪಾಯಿ, ಶೆಷೀಲ್ಸ್‌ ದೇಶಕ್ಕೆ 9.91 ಕೋಟಿ ರೂಪಾಯಿ, ಈಶಾನ್ಯ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಮಯನ್ಮಾರ್‌ ದೇಶಕ್ಕೆ 370 ಕೋಟಿ ರೂಪಾಯಿ ಅನುದಾನವನ್ನು ಭಾರತ ನೀಡಿದೆ. ಇತರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ 95 ಕೋಟಿ ರೂಪಾಯಿ, ಪಾಕೃತಿಕ ವಿಕೋಪಕ್ಕೆ 55 ಕೋಟಿ ರೂಪಾಯಿ ಅನುದಾನ ನೀಡಿದೆ.

ಇಷ್ಟು ಮಾತ್ರವಲ್ಲದೆ ಆಫ್ರಿಕನ್‌ ರಾಷ್ಟ್ರಗಳು (180 ಕೋಟಿ), ಯುರೋಷ್ಯನ್‌ ದೇಶಗಳು (20 ಕೋಟಿ), ಲ್ಯಾಟಿನ್‌ ಅಮೆರಿಕ ದೇಶಗಳು (32 ಕೋಟಿ), ಇರಾನ್‌ನ ಚಭಹಾರ್‌ ಬಂದರಿಗೆ (100 ಕೋಟಿ) ಹಾಗೂ ಅಂತಾರಾಷ್ಟ್ರೀಯ ತರಬೇತಿ ಕಾರ್ಯಕ್ರಮಕ್ಕೆ (1105 ಕೋಟಿ) ಅನುದಾನವನ್ನು ನೀಡಿದೆ. ವಿವಿಧ ದೇಶಗಳ ಸಾಂಸ್ಕೃತಿಕ ಹಾಗೂ ಪಾರಂಪರಿಕ ಪ್ರಾಜೆಕ್ಟ್‌ಗಳಿಗಾಗಿ 10 ಕೋಟಿ ರೂಪಾಯಿ ಅನುದಾನ ನೀಡಿದೆ.

Union Budget 2024:ಬಡವರ ಕಲ್ಯಾಣದಿಂದ ದೇಶದ ಕಲ್ಯಾಣ; ಬಡತನ ನಿರ್ಮೂಲನೆಗೆ ಹಲವು ಕ್ರಮ

ಇನ್ನು ಕೇಂದ್ರ ಹಣಕಾಸು ಇಲಾಖೆ 1392.35 ಕೋಟಿ ರೂಪಾಯಿಯನ್ನು ಅನುದಾನವಾಗಿ ವಿವಿಧ ಕಾರ್ಯಕ್ರಮಗಳಿಂದ ನೀಡಿದೆ.  ಭಾರತೀಯ ಅಭಿವೃದ್ಧಿ ಮತ್ತು ಆರ್ಥಿಕತೆಯ ಅಡಿಯಲ್ಲಿ ಸಾಲದ ಸಹಾಯ ಯೋಜನೆ (ಐಡಿಯಾಸ್‌) ಅಡಿಯಲ್ಲಿ 1300 ಕೋಟಿ ರೂಪಾಯಿ ನೀಡಲಾಗಿದ್ದರೆ,  ವಿದೇಶಗಳೊಂಡಿಗೆ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ದೇಶಗಳು (ಅಂತರರಾಷ್ಟ್ರೀಯ ಕೊಡುಗೆ) ಅಡಿಯಲ್ಲಿ 72.31 ಕೋಟಿ ರೂಪಾಯಿ,  ವಿದೇಶಗಳೊಂದಿಗೆ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ದೇಶಗಳು ಅಡಿಯಲ್ಲಿ 20,04 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.

ದ್ರ ಬಜೆಟ್ ಲೋಕಸಭೆ ಚುನಾವಣೆ ಪ್ರೇರಿತ ಅಲ್ಲ, ಅಭಿವೃದ್ಧಿಗೆ ಪೂರಕ: ಸಚಿವ ಪ್ರಹ್ಲಾದ್ ಜೋಶಿ

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!