2014ಕ್ಕೂ ಮುನ್ನ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ದೇಶದ ಆರ್ಥಿಕತೆಯನ್ನು ಯಾವ ರೀತಿ ದುರಪಯೋಗಪಡಿಸಿಕೊಂಡಿತ್ತು ಎನ್ನುವುದನ್ನು ತಿಳಿಸುವ ನಿಟ್ಟಿನಲ್ಲಿ ಶ್ವೇತ ಪತ್ರ ಹೊರಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಬಗ್ಗೆ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ನವದೆಹಲಿ (ಫೆ.1): ದೇಶದ ಆರ್ಥಿಕತೆ 2014ರ ಮುನ್ನ ಹೇಗಿತ್ತು ಹಾಗೂ ಈಗ ಹೇಗಿದೆ ಎನ್ನುವ ವಿಚಾರವಾಗಿ ಶ್ವೇತ ಪತ್ರ ಹೊರಡಿಸಲು ತೀರ್ಮಾನ ಮಾಡಿದೆ ಹಾಗೂ ಹಿಂದಿನ ಸರ್ಕಾರದಿಂದ ಆದ ತಪ್ಪುಗಳಿಂದ ಪಾಠಗಳನ್ನು ತಿಳಿಸುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ 10 ವರ್ಷಗಳ ಆಡಳಿತದ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೇ 2014 ರಲ್ಲಿ ಅಧಿಕಾರಕ್ಕೆ ಬಂದಿತ್ತು. ಗುರುವಾರ ತಮ್ಮ ಬಜೆಟ್ ಭಾಷಣದ ಕಟ್ಟ ಕಡೆಯಲ್ಲಿ ನಿರ್ಮಲಾ ಸೀತಾರಾಮನ್ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. '2014ರವರೆಗೂ ನಾವು ಎಲ್ಲಿದ್ದೆವು. ಹಾಗೂ ಈಗ ಎಲ್ಲಿದ್ದೇವೆ ಎನ್ನುವುದನ್ನು ನೋಡಲು ಸೂಕ್ತವಾಗಿರುತ್ತದೆ. ಆ ವರ್ಷಗಳಲ್ಲಿ ಆದ ಆರ್ಥಿಕತೆಯ ದುರುಪಯೋಗದಿಂದ ಪಾಠಗಳನ್ನು ತಿಳಿಯುವ ಉದ್ದೇಶಕ್ಕಾಗಿ ಸರ್ಕಾರವು ಸದನದ ಎದುರು ಶ್ವೇತ ಪತರ ಹೊರಡಿಸಲು ತೀರ್ಮಾನ ಮಾಡಿದೆ' ಎಂದು ಮುಂದಿನ ಹಣಕಾಸು ವರ್ಷದ ಮಧ್ಯಂತರ ಬಜೆಟ್ ಅನ್ನು ಮಂಡನೆ ಮಾಡುವಾಗ ತಿಳಿಸಿದ್ದಾರೆ.
2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿ ಆರ್ಥಿಕತೆಯನ್ನು ಹಂತ ಹಂತವಾಗಿ ಸರಿಪಡಿಸುವ ಮತ್ತು ಆಡಳಿತ ವ್ಯವಸ್ಥೆಗಳನ್ನು ಕ್ರಮಬದ್ಧಗೊಳಿಸುವ ಜವಾಬ್ದಾರಿಯೇ ಅಗಾಧವಾಗಿತ್ತು. ಜನರಿಗೆ ಭರವಸೆ ನೀಡುವುದು, ಹೂಡಿಕೆಗಳನ್ನು ಆಕರ್ಷಿಸುವುದು ಮತ್ತು ಹೆಚ್ಚು ಅಗತ್ಯವಿರುವ ಸುಧಾರಣೆಗಳಿಗೆ ಬೆಂಬಲವನ್ನು ನಿರ್ಮಿಸುವುದು ಸಮಯದ ಅಗತ್ಯವಾಗಿತ್ತು. ರಾಷ್ಟ್ರ ಮೊದಲು ಎನ್ನುವ ನಮ್ಮ ಬಲವಾದ ನಂಬಿಕೆಯನ್ನು ಅನುಸರಿಸಿದ ನಮ್ಮ ಸರ್ಕಾರ ಅದನ್ನು ಯಶಸ್ವಿಯಾಗಿ ನಿರ್ವಹಿಸಿದೆ ಎಂದು ಹೇಳಿದ್ದಾರೆ.
ಅಂದಿನ ಬಿಟ್ಟಕ್ಕನ್ನು ಈಗ ಸಂಪೂರ್ಣವಾಗಿ ನಿವಾರಿಸಲಾಗಿದೆ ಮತ್ತು ಸರ್ವತೋಮುಖ ಅಭಿವೃದ್ಧಿಯೊಂದಿಗೆ ಆರ್ಥಿಕತೆಯನ್ನು ಉನ್ನತ ಸುಸ್ಥಿರ ಬೆಳವಣಿಗೆಯ ಹಾದಿಯಲ್ಲಿ ದೃಢವಾಗಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ. ಳೆದ ಹತ್ತು ವರ್ಷಗಳಲ್ಲಿ ಭಾರತೀಯ ಆರ್ಥಿಕತೆಯು ಆಳವಾದ ಧನಾತ್ಮಕ ರೂಪಾಂತರವನ್ನು ಕಂಡಿದೆ ಎಂದು ಹೇಳುತ್ತನೇ ಸುಮಾರು ಒಂದು ಗಂಟೆ ಅವಧಿಯ ಬಜೆಟ್ ಭಾಷಣವನ್ನು ಪ್ರಾರಂಭಿಸಿದರು. ಭಾರತದ ಜನರು ಭರವಸೆ ಮತ್ತು ಆಶಾವಾದದಿಂದ ಭವಿಷ್ಯವನ್ನು ಎದುರು ನೋಡುತ್ತಿದ್ದಾರೆ ಎಂದು ತಿಳಿಸಿದರು.
" ದೇಶವು ಅಗಾಧವಾದ ಸವಾಲುಗಳನ್ನು ಎದುರಿಸುತ್ತಿದ್ದಾಗ 2014ರಲ್ಲಿ ಜನರ ಆಶೀರ್ವಾದದೊಂದಿಗೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಮತ್ತು ಕ್ರಿಯಾತ್ಮಕ ನಾಯಕತ್ವದಲ್ಲಿ ನಮ್ಮ ಸರ್ಕಾರಕ್ಕೆ ಅಧಿಕಾರಕ್ಕೆ ಬಂದಿತ್ತು' ಎಂದು ಹೇಳಿದರು. ತಮ್ಮ ಆರನೇ ಬಜೆಟ್ ಅನ್ನು ಮಂಡಿಸಿದ ಅವರು, 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಅನ್ನು ಅದರ 'ಮಂತ್ರ'ವಾಗಿಟ್ಟುಕೊಂಡು, ಸರ್ಕಾರವು ಆ ಸವಾಲುಗಳನ್ನು ಸರಿಯಾದ ಎಚ್ಚರಿಕೆಯಿಂದ ನಿವಾರಿಸಿದೆ ಎಂದು ಹೇಳಿದರು. ರಚನಾತ್ಮಕ ಸುಧಾರಣೆಗಳನ್ನು ನಮ್ಮ ಸರ್ಕಾರ ಕೈಗೊಂಡಿದೆ. ಜನಪರ ಕಾರ್ಯಕ್ರಮಗಳನ್ನು ರೂಪಿಸಲಾಯಿತು ಮತ್ತು ತ್ವರಿತವಾಗಿ ಕಾರ್ಯಗತಗೊಳಿಸಲಾಯಿತು ಮತ್ತು ಉದ್ಯೋಗ ಮತ್ತು ಉದ್ಯಮಶೀಲತೆಗೆ ಹೆಚ್ಚಿನ ಅವಕಾಶಗಳಿಗಾಗಿ ಪರಿಸ್ಥಿತಿಗಳನ್ನು ರಚಿಸಲಾಗಿದೆ ಎಂದಿದ್ದಾರೆ.
Why the Modi Govt. will bring out a WHITE PAPER... pic.twitter.com/dxSVThr6OV
— Piyush Goyal Office (@PiyushGoyalOffc)undefined
Union Budget 2024: ಬಜೆಟ್ ನಲ್ಲಿ ಕೃಷಿಗೆ ಧಕ್ಕಿದ್ದು ಅತ್ಯಲ್ಪ;ಆದ್ರೂ ರೈತರ ಆದಾಯ ಹೆಚ್ಚಳಕ್ಕೆ ಸಂಕಲ್ಪ!
ಇಂದು ದೇಶದ ಆರ್ಥಿಕತೆ ಹೊಸ ಚೈತನ್ಯ ಪಡೆದುಕೊಂಡಿದೆ. ಅಭಿವೃದ್ಧಿಯ ಹಣ್ಣುಗಳು ಈಗ ಜನರಿಗೆ ತಲುಪಲು ಆರಂಭಿಸಿವೆ. ದೇಶವು ಹೊಸ ಉದ್ದೇಶ ಮತ್ತು ಭರವಸೆಯ ಅರ್ಥವನ್ನು ಪಡೆದುಕೊಂಡಿದೆ. ಇದೇ ಕಾರಣಕ್ಕಾಗಿ ಜನರು ದೊಡ್ಡ ಜನಾದೇಶದೊಂದಿಗೆ 2019ರಲ್ಲಿ ಮತ್ತೆ ಅಧಿಕಾರ ನೀಡಿದರು ಎಂದರು. ಶತಮಾನಗಳಲ್ಲಿ ಒಮ್ಮೆ ಬರಬಹುದಾದಂಥ ಸಾಂಕ್ರಾಮಿಕವನ್ನು ನಮ್ಮ ದೇಶ ಯಶಸ್ವುಯಾಗಿ ಜಯಿಸಿದೆ. ಆತ್ಮ ನಿರ್ಭರ ಭಾರತದಲ್ಲಿ ದೀರ್ಘ ದಾಪುಗಾಲು ತೆಗೆದುಕೊಂಡಿದೆ ಎಂದರು. "ನಮ್ಮ ಸರ್ಕಾರದ ಅತ್ಯದ್ಭುತ ಕೆಲಸದ ಆಧಾರದ ಮೇಲೆ ಮತ್ತೊಮ್ಮೆ ಜನಾದೇಶದೊಂದಿಗೆ ಜನರಿಂದ ಆಶೀರ್ವದಿಸಲ್ಪಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ತಿಳಿಸಿದ್ದಾರೆ. ಮುಂದಿನ ಲೋಕಸಭೆಯನ್ನು ಆಯ್ಕೆ ಮಾಡಲು ಸಾರ್ವತ್ರಿಕ ಚುನಾವಣೆಗಳು ಈ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದೆ.
ವಿಕ್ಷಿತ್ ಭಾರತದ ನಮ್ಮ ಕನಸನ್ನು ನನಸಾಗಿಸುವ ಹಾದಿಯಲ್ಲಿದ್ದೇವೆ: ರಾಜೀವ್ ಚಂದ್ರಶೇಖರ್