*ಫೆಬ್ರವರಿ 1ರಂದು 2022-23ನೇ ಆರ್ಥಿಕ ಸಾಲಿನ ಕೇಂದ್ರ ಬಜೆಟ್ ಮಂಡನೆ
*ಈ ಬಾರಿ 256ನೇ ಬಜೆಟ್ ಅಧಿವೇಶನ
*ಭಾರತ ಸಂವಿಧಾನದ ಅನುಚ್ಛೇದ 112ರಲ್ಲಿದೆ ಬಜೆಟ್ ಪ್ರಸ್ತಾಪ
Business DesK: 2022-23ನೇ ಆರ್ಥಿಕ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ( finance minister) ನಿರ್ಮಲಾ ಸೀತಾರಾಮನ್ (Nirmala Sitharaman) ಫೆಬ್ರವರಿ 1ರಂದು ಲೋಕಸಭೆಯಲ್ಲಿ(Lok Sabha) ಮಂಡಿಸಲಿದ್ದಾರೆ. ಇದು 256ನೇ ಬಜೆಟ್ ಅಧಿವೇಶನವಾಗಿದ್ದು (budget session), ಜನವರಿ 31ರಿಂದ ಪ್ರಾರಂಭವಾಗಲಿದೆ. ಅಂದ್ರೆ ಗೋವಾ(Goa), ಉತ್ತರಾಖಂಡ್ (Uttarakhand), ಮಣಿಪುರ (Manipur), ಪಂಜಾಬ್ (Punjab) ಹಾಗೂ ಉತ್ತರ ಪ್ರದೇಶ ( Uttar Pradesh) ಈ ಐದು ರಾಜ್ಯಗಳ ಚುನಾವಣೆಗಿಂತ ಕೇವಲ ಎರಡು ವಾರ ಮುನ್ನ ಬಜೆಟ್ (Budget) ಅಧಿವೇಶನಕ್ಕೆ ಚಾಲನೆ ಸಿಗಲಿದೆ. ಬಜೆಟ್ (Budget) ಈಗಾಗಲೇ ಸಾಕಷ್ಟು ನಿರೀಕ್ಷೆಗಳು ಗರಿಗೆದರಿವೆ. ಕೊರೋನಾ (Corona) ಮೂರನೇ ಅಲೆ ದೇಶಾದ್ಯಂತ ಅರ್ಭಟ ನಡೆಸುತ್ತಿರೋ ಬೆನ್ನಲ್ಲೇ ಕಳೆದ ಬಾರಿಯಂತೆ ಈ ಬಾರಿ ಕೂಡ ಆರ್ಥಿಕತೆಗೆ ಚೇತರಿಕೆ ನೀಡುವಂತಹ ಪ್ಯಾಕೇಜ್ ಗಳನ್ನು ಸರ್ಕಾರ ಘೋಷಿಸಬಹುದೆಂಬ ಭರವಸೆ ಕೂಡ ಇದೆ.ಬಜೆಟ್ ಕುರಿತು ಜನಸಾಮಾನ್ಯರಿಗೆ ಅನೆಕ ಪ್ರಶ್ನೆಗಳು ಕಾಡುತ್ತವೆ. ಬಜೆಟ್ ಹೇಗೆ ಸಿದ್ಧಪಡಿಸುತ್ತಾರೆ? ಯಾರು ಸಿದ್ಧಪಡಿಸುತ್ತಾರೆ? ಅದ್ರ ಉದ್ದೇಶವೇನು? ಇಂಥ ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಬಜೆಟ್ ಅಂದ್ರೇನು?
ಭಾರತ ಸಂವಿಧಾನದ (Indian Constitution) ಅನುಚ್ಛೇದ (Article) 112 ವಾರ್ಷಿಕ ಹಣಕಾಸಿನ ವಿವರಣ ಪಟ್ಟಿ ಬಗ್ಗೆ ವಿವರಣೆ ನೀಡುತ್ತದೆ. ಇದರ ಪ್ರಕಾರ ಏಪ್ರಿಲ್ 1ರಿಂದ ಮಾರ್ಚ್ 31ರ ತನಕದ ಪ್ರತಿ ಆರ್ಥಿಕ ಸಾಲಿನ ಭಾರತ ಸರ್ಕಾರದ ಅಂದಾಜು ಸ್ವೀಕೃತಿ ಹಾಗೂ ವೆಚ್ಚದ ಮಾಹಿತಿಯನ್ನು ಸಂಸತ್ತಿನ (Parliament) ಮುಂದಿಡಬೇಕು. ಈ ವಿವರಣ ಪಟ್ಟಿಯನ್ನೇ 'ವಾರ್ಷಿಕ ಹಣಕಾಸಿನ ವಿವರಣೆ' ಎಂದು ಕರೆಯಲಾಗುತ್ತದೆ. ಇದ್ರಲ್ಲಿ ಭಾರತ ಸರ್ಕಾರದ ಸ್ವೀಕೃತಿ ಹಾಗೂ ಪಾವತಿಗಳ ಮಾಹಿತಿಯನ್ನು ಮೂರು ವಿಭಾಗಗಳ ಅಡಿಯಲ್ಲಿ ತೋರಿಸಲಾಗುತ್ತದೆ.
1.ಸಂಚಿತ ನಿಧಿ( Consolidated Fund)
2.ಆಕಸ್ಮಿಕ ನಿಧಿ ( Contingency Fund)
3.ಸಾರ್ವಜನಿಕ ಖಾತೆ (Public Account)
ಕೇಂದ್ರ ಬಜೆಟ್ ಅನ್ನು ಎರಡು ವಿಧಗಳಾಗಿ ವಿಂಗಡಿಸಲಾಗುತ್ತದೆ: ಕಂದಾಯ (Revenue) ಹಾಗೂ ಬಂಡವಾಳ (capital).ಕಂದಾಯ ಬಜೆಟ್ ಸರ್ಕಾರದ ಕಂದಾಯ ಸ್ವೀಕೃತಿಗಳಾದ ತೆರಿಗೆ ಹಾಗೂ ಇತರ ಆದಾಯಗಳು ಹಾಗೂ ಅವುಗಳಿಂದ ವ್ಯಯಿಸಿದ ಮೊತ್ತವನ್ನು ಒಳಗೊಂಡಿದೆ. ಕಂದಾಯ ವೆಚ್ಚ ಸಾರ್ವಜನಿಕ ಇಲಾಖೆಗಳು ಹಾಗೂ ವಿವಿಧ ಸೇವೆಗಳಿಗೆ ವ್ಯಯಿಸಿದ ಹಣ ಸರ್ಕಾರ ಸಾಲದ ಮೇಲೆ ವಿಧಿಸಿರೋ ಬಡ್ಡಿ ಶುಲ್ಕ, ಸಬ್ಸಿಡಿ ಇತ್ಯಾದಿಯನ್ನು ಒಳಗೊಂಡಿದೆ. ಇವೆಲ್ಲವೂ ಆಸ್ತಿಗಳನ್ನು ಸೃಜಿಸದ ವೆಚ್ಚಗಳಾಗಿವೆ. ಅಂದ್ರೆ ಈ ವೆಚ್ಚಗಳಿಂದ ಸರ್ಕಾರಕ್ಕೆ ಯಾವುದೇ ಆದಾಯ ಬರೋದಿಲ್ಲ.
ಬಂಡವಾಳ (capital) ಬಜೆಟ್ ಅಂದ್ರೆ ಬಂಡವಾಳ ಸ್ವೀಕೃತಿ ಹಾಗೂ ಪಾವತಿಗಳು. ಬಂಡವಾಳ ಸ್ವೀಕೃತಿಯಲ್ಲಿನ ಮುಖ್ಯ ಅಂಶಗಳೆಂದ್ರೆ ಸಾರ್ವಜನಿಕರು ಹಾಗೂ ಇತರರಿಂದ ಭಾರತ ಸರ್ಕಾರ ಪಡೆದಿರೋ ಸಾಲಗಳು.
undefined
LIC Policy: ವಾರಸುದಾರರ ಕೈತಪ್ಪುವ ವಿಮೆ, ಠೇವಣಿ ಹಣ, ಏನು ಮಾಡಬೇಕು.?
ಯಾರು ಬಜೆಟ್ ಸಿದ್ಧಪಡಿಸುತ್ತಾರೆ?
ಹಣಕಾಸು ಸಚಿವಾಲಯ ಇತರ ಸಚಿವಾಲಯಗಳೊಂದಿಗೆ ಅವರ ಹಣಕಾಸಿನ ಅಗತ್ಯಗಳ ಕುರಿತು ಚರ್ಚಿಸಿದ ಬಳಿಕ ಬಜೆಟ್ ಸಿದ್ಧಪಡಿಸುತ್ತದೆ. ಬಜೆಟ್ ಸಿದ್ಧಪಡಿಸೋ ಪ್ರಕ್ರಿಯೆಗೆ ಸುದೀರ್ಘ ಸಮಯವನ್ನು ತೆಗೆದುಕೊಳ್ಳಲಾಗುತ್ತದೆ. ಹಣಕಾಸಿನ ಅಗತ್ಯಗಳ ಬಗ್ಗೆ ನೀತಿ ಆಯೋಗ, ವಿವಿಧ ಸಚಿವಾಲಯಗಳ ಜೊತೆ ವಿತ್ತ ಸಚಿವರು ಚರ್ಚೆ ನಡೆಸುತ್ತಾರೆ. ಅವರ ಕೆಲವು ಸಲಹೆಗಳನ್ನು ಬಜೆಟ್ ಸಿದ್ಧಪಡಿಸೋವಾಗ ಪರಿಗಣಿಸಲಾಗುತ್ತದೆ. ಹಾಗೆಯೇ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಹಾಗೂ ತಜ್ಞರ ಜೊತೆ ಕೂಡ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಹಣಕಾಸು ಸಚಿವಾಲಯದ ವೆಚ್ಚದ ಮಾರ್ಗಸೂಚಿಗಳ ಆಧಾರದಲ್ಲಿ ಎಲ್ಲ ಸಚಿವಾಲಯಗಳು ತಮ್ಮ ಬೇಡಿಕೆಗಳನ್ನು ಮಂಡಿಸಬೇಕು. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಬಜೆಟ್ ವಿಭಾಗ ಬಜೆಟ್ ಸಿದ್ಧಪಡಿಸೋ ನೋಡಲ್ ಸಂಸ್ಥೆಯಾಗಿದೆ.
ಬಜೆಟ್ ಹೇಗೆ ಸಿದ್ಧಪಡಿಸಲಾಗುತ್ತದೆ?
ಬಜೆಟ್ ವಿಭಾಗವು ಕೇಂದ್ರದ ಎಲ್ಲ ಸಚಿವಾಲಯಗಳು, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಸ್ವಯತ್ತ ಸಂಸ್ಥೆಗಳು, ಇಲಾಖೆಗಳು ಹಾಗೂ ಸೇನಾಪಡೆಗಳು ಮುಂದಿನ ಆರ್ಥಿಕ ವರ್ಷಕ್ಕೆ ಅಂದಾಜು ಬಜೆಟ್ ಸಿದ್ಧಪಡಿಸುತ್ತವೆ. ಕೇಂದ್ರ ಸಚಿವಾಲಯಗಳು ಹಾಗೂ ಹಣಕಾಸು ಸಚಿವಾಲಯದ ವೆಚ್ಚ ವಿಭಾಗವು ಸಾಕಷ್ಟು ಚರ್ಚೆ ನಡೆಸಿ ಅಂದಾಜು ಪಟ್ಟಿಯನ್ನು ಸಿದ್ಧಪಡಿಸುತ್ತವೆ.
Gold Investment: ಚಿನ್ನಾಭರಣ ಖರೀದಿ ಬದಲು ಬಂಗಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ!
ಬಜೆಟ್ ಮಂಡನೆ ಹೇಗೆ?
ಬಜೆಟ್ ಮಂಡಿಸೋ ಮುನ್ನ ವಿತ್ತ ಸಚಿವರು ಸಂಪುಟಕ್ಕೆ ಬಜೆಟ್ ಸಾರಾಂಶವನ್ನು ವಿವರಿಸುತ್ತಾರೆ. ವಿತ್ತ ಸಚಿವರು ಬಜೆಟ್ ಭಾಷಣದ ಮೂಲಕ ಲೋಕಸಭೆಯಲ್ಲಿ ಬಜೆಟ್ ಮಂಡಿಸುತ್ತಾರೆ. ಲೋಕಸಭೆಯಲ್ಲಿ ಮಂಡನೆಯಾದ ತಕ್ಷಣ ಬಜೆಟ್ ಪ್ರತಿಯನ್ನು ರಾಜ್ಯಸಭೆಯಲ್ಲಿ ಕೂಡ ಮಂಡಿಸಲಾಗುತ್ತದೆ.