ಕೇಂದ್ರ ಬಜೆಟ್‌ನ ಮೊಬೈಲ್‌ ಆ್ಯಪ್‌ ಬಿಡುಗಡೆ!

By Suvarna News  |  First Published Jan 24, 2021, 7:41 AM IST

ಕೇಂದ್ರ ಬಜೆಟ್‌ನ ಮೊಬೈಲ್‌ ಆ್ಯಪ್‌ ಬಿಡುಗಡೆ| ಈ ಬಾರಿ ಡಿಜಿಟಲ್‌ ಬಜೆಟ್‌ ಮಂಡಿಸಲಿರುವ ಸೀತಾರಾಮನ್‌


 

ನವದೆಹಲಿ(ಜ.24): ಈ ಬಾರಿಯ ಬಜೆಟ್‌ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಡಿಜಿಟಲ್‌ ರೂಪದಲ್ಲಿ ಸಾದರಪಡಿಸಲಿದ್ದಾರೆ. ಶನಿವಾರ ನಡೆದ ಸಾಂಪ್ರದಾಯಿಕ ಹಲ್ವಾ ತಯಾರಿ ಸಮಾರಂಭದ ವೇಳೆ ನಿರ್ಮಲಾ ಸೀತಾರಾಮನ್‌ ಅವರು ಕೇಂದ್ರ ಬಜೆಟ್‌ ಮೊಬೈಲ್‌ ಆ್ಯಪ್‌ ಅನ್ನು ಬಿಡುಗಡೆ ಮಾಡಿದರು.

Tap to resize

Latest Videos

undefined

ಫೆ.1ರಂದು ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಅನ್ನು ಮಂಡಿಸಿದ ಬಳಿಕ ಮೊಬೈಲ್‌ ಆ್ಯಪ್‌ನಲ್ಲಿ 2020-21ನೇ ಸಾಲಿನ ಹಣಕಾಸು ಬಜೆಟ್‌ನ ಪ್ರತಿಗಳು ಲಭ್ಯವಾಗಲಿವೆ. ಈ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಮೂಲಕ ಸಂಸದರು ಹಾಗೂ ಸಾರ್ವಜನಿಕರು ಬಜೆಟ್‌ ಕುರಿತಾದ ಸಮಗ್ರ ವಿವರಗಳನ್ನು ಓದಬಹುದಾಗಿದೆ. ಬಜೆಟ್‌ ಅನ್ನು ಸುಲಭವಾಗಿ ಓದಲು ಅನುಕೂಲವಾಗುವಂತೆ ಆ್ಯಪ್‌ ಅನ್ನು ತಯಾರಿಸಲಾಗಿದೆ. ಇದರಲ್ಲಿ ಬಜೆಟ್‌ನ ಮಾಹಿತಿ ಶೋಧ, ಸ್ಕ್ರಾಲ್‌ ಮಾಡಲು, ಟೇಬಲ್‌ ಹಾಗೂ ಅಂಕಿ ಅಂಶಗಳನ್ನು ಝೂಮ್‌ ಮಾಡಿ ನೋಡಲು ಸಾಧ್ಯವಿದೆ. ಇದು ಹಿಂದಿ ಹಾಗೂ ಇಂಗ್ಲಿಷ್‌ ಎರಡೂ ಭಾಷೆಯಲ್ಲೂ ಲಭ್ಯವಿರಲಿದೆ.

ನ್ಯಾಷನಲ್‌ ಇನ್ಫಾರ್ಮೆಟಿಕ್ಸ್‌ ಸೆಂಟರ್‌ (ಎನ್‌ಐಸಿ) ಅಡಿಯಲ್ಲಿ ಆ್ಯಪ್‌ ಅನ್ನು ಸಿದ್ಧಪಡಿಸಲಾಗಿದ್ದು, ಕೇಂದ್ರ ಬಜೆಟ್‌ ವೆಬ್‌ಸೈಟ್‌ ನಿಂದಲೂ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

click me!