2 ವರ್ಷದಲ್ಲಿ ಹೊಸದಾಗಿ 3.81 ಲಕ್ಷ ಹುದ್ದೆ ಸೃಷ್ಟಿ: ಕೇಂದ್ರ ಸಚಿವೆ ನಿರ್ಮಲಾ

By Web DeskFirst Published Jul 9, 2019, 9:33 AM IST
Highlights

2 ವರ್ಷದಲ್ಲಿ ಹೊಸದಾಗಿ 3.81 ಲಕ್ಷ ಹುದ್ದೆ ಸೃಷ್ಟಿ: ಕೇಂದ್ರ ಸಚಿವೆ ನಿರ್ಮಲಾ| 2017 ರ ಮಾ.1ಕ್ಕೆ ದೇಶಾದ್ಯಂತ ಕೇಂದ್ರ ಸರ್ಕಾರಿ ಸೇವೆಯಲ್ಲಿ 32.38 ಲಕ್ಷ ಜನ

ನವದೆಹಲಿ[ಜು.09]: ದೇಶಾದ್ಯಂತ ಉದ್ಯೋಗ ಕೊರತೆಯ ಆರೋಪಗಳ ಬೆನ್ನಲ್ಲೇ, ಕೇಂದ್ರ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ವಿವಿಧ ಇಲಾಖೆಗಳಲ್ಲಿ 3.81 ಲಕ್ಷ ಹುದ್ದೆಗಳನ್ನು ಸೃಷ್ಟಿಸಿದೆ. 2017 ರ ಮಾ.1ಕ್ಕೆ ದೇಶಾದ್ಯಂತ ಕೇಂದ್ರ ಸರ್ಕಾರಿ ಸೇವೆಯಲ್ಲಿ 32.38 ಲಕ್ಷ ಜನರಿದ್ದರೆ, 2019 ರ ಮಾ.1ರ ವೇಳೆಗೆ ಈ ಸಂಖ್ಯೆ 36.19 ಲಕ್ಷಕ್ಕೆ ಏರಿಕೆಯಾಗಿದೆ.

ಒಟ್ಟಾರೆ ಎಲ್ಲ ಇಲಾಖೆ ಸೇರಿ 3,81,199 ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ತಿಳಿಸಿದ್ದಾರೆ.

ಈ ಪೈಕಿ ಅತಿ ಹೆಚ್ಚು ಎಂದರೆ ರೈಲ್ವೆಯಲ್ಲಿ 98,999, ಪೊಲೀಸ್‌ ಇಲಾಖೆಯಲ್ಲಿ 80,000, ಪರೋಕ್ಷ ತೆರಿಗೆ ಇಲಾಖೆಯಲ್ಲಿ 53,000 ಹಾಗೂ ನೇರ ತೆರಿಗೆ ಇಲಾಖೆಯಲ್ಲಿ 29,935, ರಕ್ಷಣಾ (ಸಿವಿಲ್‌) ಇಲಾಖೆಯಲ್ಲಿ 46,347, ಅಣು ಇಂಧನ ಶಕ್ತಿ ಇಲಾಖೆಯಲ್ಲಿ 10,000, ಟೆಲಿಕಾಂ ಇಲಾಖೆಯಲ್ಲಿ 2250, ನೀರಾವರಿ ಸಂಪನ್ಮೂಲ ಇಲಾಖೆಯಲ್ಲಿ 3981, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಲ್ಲಿ 7,743, ಗಣಿಗಾರಿಕೆ ಸಚಿವಾಲಯದಲ್ಲಿ 6338, ಬಾಹ್ಯಾಕಾಶ ಇಲಾಖೆಯಲ್ಲಿ 2920, ಸಿಬ್ಬಂದಿ ಆಡಳಿತ ಸುಧಾರಣೆ ಮತ್ತು ಪಿಂಚಣಿ ಸಚಿವಾಲಯದಲ್ಲಿ 2056, ವಿದೇಶಾಂಗ ಸಚಿವಾಲಯದಲ್ಲಿ 1833 ಹುದ್ದೆಗಳನ್ನು ಸೃಷ್ಟಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

click me!