ಲೋಕಸಭೆಯಲ್ಲಿ 'ಅರ್ಥ ಪಥ'ದ ಬುತ್ತಿ: ಅಭಿವೃದ್ಧಿಗೆ ಇನ್ನೇನು ಬೇಕು ಸ್ಪೂರ್ತಿ?

By Web DeskFirst Published Jul 5, 2019, 11:39 AM IST
Highlights

ಲೋಕಸಭೆಯಲ್ಲಿ ಮೋದಿ 2.0 ಸರ್ಕಾರದ ಮೊದಲ ಬಜೆಟ್ ಮಂಡನೆ| ಬಜೆಟ್ ಮಂಡಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ| ಅರ್ಥ ಪಥದ ನೀಲನಕ್ಷೆ ಬಿಚ್ಚಿಡುತ್ತಿರುವ ನಿರ್ಮಲಾ ಸೀತಾರಾಮನ್| '2024ರಲ್ಲಿ 5 ಟ್ರಿಲಿಯನ್ ಯುಎಸ್ ಡಾಲರ್ ಅರ್ಥ ವ್ಯವಸ್ಥೆ ನಿಶ್ಚಿತ'| 'ರಾಷ್ಟ್ರೀಯ ಬದ್ಧತೆ ಮತ್ತು ಆರ್ಥಿಕ ಅಭಿವೃದ್ಧಿ ಕೇಂದ್ರ ಸರ್ಕಾರದ ನೀತಿ'|

ನವದೆಹಲಿ(ಜು.05): ಮೋದಿ 2.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಲೋಕಸಭೆಯಲ್ಲಿ ಮಂಡನೆಯಾಗುತ್ತಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಬುತ್ತಿ ಬಿಚ್ಚಿಡುತ್ತಿದ್ದಾರೆ. ಬಜೆಟ್ ಭಾಷಣ ಆರಂಭಿಸಿರುವ ನಿರ್ಮಲಾ ಸೀತಾರಾಮನ್, ದೇಶದ ಆರ್ಥಿಕ ಅಭಿವೃದ್ಧಿಯ ನೀಲನಕ್ಷೆಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ.

FM Nirmala Sitharaman: The recent election was charged with brimming home and desire for a bright and stable 'New India'. Voter turnout was highest; every section came to stamp their approval for performing Government pic.twitter.com/kjz5nLsnDL

— ANI (@ANI)

ದೇಶದ ಅರ್ಥ ವ್ಯವಸ್ಥೆ ಈ ವರ್ಷ 3 ಟ್ರಿಲಿಯನ್ ಯುಎಸ್ ಡಾಲರ್‌ಗೆ ತಲುಪಲಿದ್ದು, 2024ರ ವೇಳೆಗೆ ಅರದಥ ವ್ಯವಸ್ಥೆಯನ್ನು 5 ಟ್ರಿಲಿಯನ್ ಯುಎಸ್ ಡಾಲರ್‌ಗೆ ಏರಿಸುವ ಇರಾದೆ ಹೊಂದಲಾಗಿದೆ ಎಂದು ನಿರ್ಮಲಾ ಹೇಳಿದರು.

Finance Minister Nirmala Sitharaman at Lok Sabha: The first term of PM Narendra Modi led NDA govt stood out as a performing govt. Between 2014-2019 he provided a rejuvenated centre-state dynamics, cooperative federalism, GST council and strident commitment to fiscal discipline. pic.twitter.com/qjEbJkw9D1

— ANI (@ANI)

ರಾಷ್ಟ್ರೀಯ ಬದ್ಧತೆ ಮತ್ತು ಆರ್ಥಿಕ ಅಭಿವೃದ್ಧಿ ಕೇಂದ್ರ ಸರ್ಕಾರದ ನೀತಿಯಾಗಿದ್ದು, ಅದರಂತೆ ಅರ್ಥ ವ್ಯವಸ್ಥೆ ನಿರಂತರವಾಗಿ ಅಭಿವೃದ್ಧಿಯ ಪಥದಲ್ಲಿ ಸಾಗುವಂತೆ ಮಾಡಲು ಸರ್ಕಾರ ಸಿದ್ಧವಾಗಿದೆ ಎಂದು ಹಣಕಾಸು ಸಚಿವರು ಭರವಸೆ ನೀಡಿದರು.

Finance Minister Nirmala Sitharaman: The Indian economy will grow to become a $3 trillion economy in the current year itself. It is now the sixth largest in the world. 5 years ago it was at the 11th position. pic.twitter.com/SSPypa8ajC

— ANI (@ANI)

ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಖಾಸಗಿ ಉದ್ದಿಮೆ ಸಂಸ್ಥೆಗಳು ಪ್ರಮುಖ ಕೊಡುಗೆ ನೀಡಿದ್ದು, ವಿಮಾನಯಾನ ಉದ್ದಿಮೆ ಕ್ಷೇತ್ರದಲ್ಲಿ ಭಾರತ ಕಾಲಿಡಲು ಕಾಲ ಪ್ರಶಸ್ತವಾಗಿದೆ ಎಂದು ನಿರ್ಮಲಾ ಅಭಿಪ್ರಾಯಪಟ್ಟರು.

Finance Minister Nirmala Sitharaman: Schemes such as 'Bharatmala', 'Sagarmala' and UDAN are bridging the rural and urban divide, improving our transport infrastructure pic.twitter.com/1UE1kkulZC

— ANI (@ANI)

ಕೇವಲ ಒಂದು ವರ್ಷದಲ್ಲಿ ದೇಶದಲ್ಲಿ 300 ಕಿ.ಮೀ ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲಾಗಿದ್ದು, 218 ಕಿ.ಮೀ. ಉದ್ದದ ಮೆಟ್ರೋ ರೈಲು ಮಾರ್ಗವನ್ನು ಉದ್ಘಾಟಿಸಲಾಗಿದೆ ಎಂದು ಹಣಕಾಸು ಸಚಿವರು ಮಾಹಿತಿ ನೀಡಿದರು.

ಚಿಲ್ಲರೆ ವ್ಯಾಪಾರಿಗಳಿಗೆ ಈಗಾಗಲೇ ಪಿಂಚಣಿ ಯೋಜನೆಯಾದ 'ಪ್ರಧಾನಮಂತ್ರಿ ಕರ್ಮಯೋಗಿ ಮಾನ್ ಸಮ್ಮಾನ್ ಯೋಜನೆ' ಘೋಷಿಸಲಾಗಿದ್ದು, ಇದರಿಂದ ದೇಶದ ಸುಮಾರು 3 ಕೋಟಿ ಚಿಲ್ಲರೆ ವ್ಯಾಪಾರಿಗಳು ಲಾಭ ಪಡೆಯಲಿದ್ದಾರೆ ಎಂದು ಚಿತ್ತ ಸಚಿವೆ ಘೋಷಿಸಿದರು.

click me!