ಮ್ಯಾಗ್ನಂ ಸೇರಿದಂತೆ ಜನಪ್ರಿಯ ಐಸ್ ಕ್ರೀಮ್ ಬ್ರ್ಯಾಂಡ್ ಗಳನ್ನು ಹೊಂದಿರುವ ಯುನಿಲಿವರ್, ಐಸ್ ಕ್ರೀಮ್ ಘಟಕಗಳನ್ನು ಪ್ರತ್ಯೇಕಿಸಲು ಮುಂದಾಗಿದೆ. ಅದರ ಭಾಗವಾಗಿಯೇ ಜಗತ್ತಿನಾದ್ಯಂತ 7,500 ಉದ್ಯೋಗ ಕಡಿತಕ್ಕೆ ಮುಂದಾಗಿದೆ.
ನವದೆಹಲಿ (ಮಾ.19): ಎಫ್ ಎಂಸಿಜೆ ವಲಯದ ಜನಪ್ರಿಯ ಬ್ರ್ಯಾಂಡ್ ಯುನಿಲಿವರ್ ವಿಶ್ವಾದ್ಯಂತ 7500 ಉದ್ಯೋಗ ಕಡಿತ ಮಾಡೋದಾಗಿ ಮಂಗಳವಾರ ಪ್ರಕಟಿಸಿದೆ. ಹೊಸ ವೆಚ್ಚ ಉಳಿತಾಯ ಕಾರ್ಯಕ್ರಮದ ಭಾಗವಾಗಿ ಈ ಕ್ರಮ ಕೈಗೊಳ್ಳೋದಾಗಿ ತಿಳಿಸಿದೆ. ಅಲ್ಲದೆ, ಈ ವೆಚ್ಚ ಕಡಿತದ ಯೋಜನೆಯಡಿಯಲ್ಲೇ ತನ್ನ ಐಸ್ ಕ್ರೀಮ್ ಉತ್ಪಾದನಾ ಘಟಕವನ್ನು ಪ್ರತ್ಯೇಕಿಸಿ, ಅದನ್ನು ಪ್ರತ್ಯೇಕ ಉದ್ಯಮವನ್ನಾಗಿಸುವ ಯೋಜನೆ ರೂಪಿಸಿದೆ.ಮ್ಯಾಗ್ನಂ ಹಾಗೂ ಬೆನ್ ಆಂಡ್ ಜೆರಿಯಂತಹ ಜನಪ್ರಿಯ ಐಸ್ ಕ್ರೀಮ್ ಬ್ರ್ಯಾಂಡ್ ಗಳನ್ನು ಯುನಿಲಿವರ್ ಹೊಂದಿದೆ. ಇನ್ನು ಯನಿಲಿವರ್ ವಿಭಜನೆ ಪ್ರಕ್ರಿಯೆ ತಕ್ಷಣದಿಂದಲೇ ಆರಂಭವಾಗಲಿದ್ದು, 2025ರ ಅಂತ್ಯಕ್ಕೆ ಕೊನೆಗೊಳ್ಳುವ ನಿರೀಕ್ಷೆಯಿದೆ ಎಂದು ಯುನಿಲಿವರ್ ತಿಳಿಸಿದೆ. ಲಂಡನ್ ಲಿಸ್ಟೆಡ್ ಕಂಪನಿಯಾಗಿರುವ ಯುನಿಲಿವರ್, ವಿಭಜನೆಯ ಬಳಿಕ 'ಸರಳ ಹಾಗೂ ಹೆಚ್ಚು ಕೇಂದ್ರೀಕೃತ ಕಂಪನಿಯಾಗಿ' ಬೆಳೆಯಲಿದೆ ಎಂದು ತಿಳಿಸಿದೆ. ಮುಂದಿನ ಮೂರು ವರ್ಷಗಳಲ್ಲಿ ಅಂದಾಜು 800 ಮಿಲಿಯನ್ ಯುರೋಸ್ ಒಟ್ಟು ವೆಚ್ಚ ಉಳಿತಾಯ ಮಾಡುವ ನಿರೀಕ್ಷೆಯ ಕಾರ್ಯಕ್ರಮವನ್ನು ಕಂಪನಿ ಪ್ರಾರಂಭಿಸಿದೆ. ಈ ಬದಲಾವಣೆಯಿಂದ ವಿಶ್ವಾದ್ಯಂತ ಸಂಸ್ಥೆಯ ಒಟ್ಟು 7,500 ಮಂದಿ ಉದ್ಯೋಗ ಕಳೆದುಕೊಳ್ಳುವ ನಿರೀಕ್ಷೆಯಿದೆ.
ಇನ್ನು ಯುನಿಲಿವರ್ ಸಂಸ್ಥೆಯ ಪುನರಚನೆಗೆ ತಗಲುವ ವೆಚ್ಚ ಆ ಅವಧಿಯ ಒಟ್ಟು ವಹಿವಾಟಿನ ಸುಮಾರು ಶೇ.1.2ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಭಾರತ ಮೂಲದ ಗ್ರಾಹಕ ಸರಕುಗಳ ಕಂಪನಿಯಾಗಿದೆ. ಹೋಮ್ ಕೇರ್, ಬ್ಯೂಟಿ & ಪರ್ಸನಲ್ ಕೇರ್, ಆಹಾರ ಮತ್ತು ರಿಫ್ರೆಶ್‌ಮೆಂಟ್ ರಫ್ತು ಮತ್ತು ಶಿಶು ಆರೈಕೆ ಉತ್ಪನ್ನಗಳನ್ನು ಒಳಗೊಂಡಿರುತ್ತದೆ.
ಮಾರುಕಟ್ಟೆ ಮೌಲ್ಯದಲ್ಲಿ ಭಾರತದ ಟಾಪ್ 10 ಕಂಪನಿಗಳಿವು!
ಮ್ಯಾಗ್ನಂ ಐಸ್ ಕ್ರೀಮ್ ಉತ್ಪಾದಕ ಸಂಸ್ಥೆಯಾಗಿರುವ ಯುನಿಲಿವರ್, ಈ ಪ್ರತ್ಯೇಕಿಸೋದಕ್ಕೆ ಅನೇಕ ಆಯ್ಕೆಗಳನ್ನು ಪರಿಗಣಿಸಲಾಗಿದೆ. ಈ ಬೇರ್ಪಡಿಸುವಿಕೆಯಿಂದ ಹೊಸ ಲಿಸ್ಟೆಡ್ ಉದ್ಯಮದ ಆಯ್ಕೆ ಕೂಡ ಇದೆ. ಹೆಲ್ ಮ್ಯಾನ್ ಮಯೋನೈಸ್ ಹಾಗೂ ಡೊಮೆಸ್ಟೊಸ್ ಕ್ಲೀನರ್ಸ್ ಮಾಲೀಕತ್ವವನ್ನು ಕೂಡ ಯುನಿಲಿವರ್ ಹೊಂದಿದೆ. ಯುನಿಲಿವರ್ ಐಸ್ ಕ್ರೀಮ್ ಘಟಕ 2023ರಲ್ಲಿ 8.6 ಬಿಲಿಯನ್ ಡಾಲರ್ ಮಾರಾಟ ಹೊಂದಿದೆ.
ಈ ಉದ್ಯೋಗ ಕಡಿತವು ಮುಖ್ಯವಾಗಿ ಕಚೇರಿ ಕೇಂದ್ರೀಕೃತ ಉದ್ಯೋಗಗಳ ಮೇಲೆ ಪರಿಣಾಮ ಬೀರಲಿದೆ. ಮುಂದಿನ ಮೂರು ವರ್ಷಗಳಲ್ಲಿ 800 ಮಿಲಿಯನ್ ಯುರೋಸ್ ವೆಚ್ಚ ಉಳಿತಾಯದ ಯೋಜನೆಯನ್ನು ಯುನಿಲಿವರ್ ಹೊಂದಿದೆ. ಈ ಪುನರಚನೆಯಿಂದ ಕಂಪನಿಯು ನಾಲ್ಕು ಉದ್ಯಮಗಳ ಮೇಲೆ ಗಮನ ಕೇಂದ್ರೀಕರಿಸಲಿದೆ. ಅವೆಂದರೆ ಸೌಂದರ್ಯ ಹಾಗೂ ಆರೋಗ್ಯ ವರ್ಧನೆ, ವೈಯಕ್ತಿಕ ಕಾಳಜಿ, ಗೃಹ ಕಾಳಜಿ ಹಾಗೂ ಪೌಷ್ಟಿಕಾಂಶ. ಯುನಿಲಿವರ್ ಪ್ರತಿಸ್ಪರ್ಧಿ ಸಂಸ್ಥೆ ನೆಸ್ಲೆ ಎಸ್ ಎ ಈ ಹಿಂದೆಯೇ ತನ್ನ ಐಸ್ ಕ್ರೀಮ್ ಉದ್ಯಮವನ್ನು ಪ್ರತ್ಯೇಕಿಸಿದೆ. ಪ್ರೈವೇಟ್ ಈಕ್ವಿಟಿ ಫರ್ಮ್ ಪೈ ಪಾರ್ಟನರ್ಸ್ ಜಂಟಿ ಸಹಭಾಗಿತ್ವದಲ್ಲಿ ಐಸ್ ಕ್ರೀಮ್ ಉದ್ಯಮ ಪ್ರಾರಂಭಿಸಿದೆ.
2023 ರಲ್ಲಿ ಹೂಡಿಕೆ ಮಾಡಲು 5 ಅತ್ಯುತ್ತಮ ಷೇರುಗಳ ವಿವರ ಹೀಗಿದೆ..
ಐಸ್ ಕ್ರೀಮ್ ಘಟಕವನ್ನು ಪ್ರತ್ಯೇಕಿಸೋದ್ರಿಂದ ಯುನಿಲಿವರ್ ಗೆ ಕೆಲವು ಸಮಸ್ಯೆಗಳು ತಗ್ಗಲಿವೆ. ಬೆನ್ ಆಂಡ್ ಜೆರೆ ತೆಗೆದುಕೊಂಡ ಕೆಲವು ರಾಜಕೀಯ ನಿಲುವುಗಳ ಕಾರಣದಿಂದ ಯುನಿಲಿವರ್ ಅನೇಕ ವಿವಾದಗಳನ್ನು ಎದುರಿಸಬೇಕಾಯಿತು. 2022ರ ಡಿಸೆಂಬರ್ ನಲ್ಲಿ ಯುನಿಲಿವರ್ ಬೆನ್ ಹಾಗೂ ಜೆರಿ ಸ್ವತಂತ್ರ ಮಂಡಳಿ ಜೊತೆಗೆ ಕೋರ್ಟ್ ವಿವಾದ ಬಗೆಹರಿಸಿಕೊಳ್ಳಬೇಕಾಯಿತು. ಇಸ್ರೇಲ್ ಆಕ್ರಮಿತ ವೆಸ್ಟ್ ಬ್ಯಾಂಕ್ ನಲ್ಲಿ ಉತ್ಪನ್ನ ಮಾರಾಟಕ್ಕೆ ಸಂಸ್ಥೆ ತಡೆಯೊಡ್ಡಿದ ಬೆನ್ನಲ್ಲೇ ಈ ವಿವಾದ ಸೃಷ್ಟಿಯಾಗಿತ್ತು. ಮ್ಯಾಗ್ನಂ ಐಸ್ ಕ್ರೀಮ್ ಸಾಕಷ್ಟು ಜನಪ್ರಿಯತೆ ಗಳಿಸಿರುವ ಐಸ್ ಕ್ರೀಮ್ ಬ್ರ್ಯಾಂಡ್ ಆಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಾರುಕಟ್ಟೆ ವಿಸ್ತರಿಸಿಕೊಳ್ಳುವ ನಿರೀಕ್ಷೆಯಿದೆ.