Business : ಬಣ್ಣದ ಹಬ್ಬ ಹೋಳಿಯಲ್ಲಿ ಶುರು ಮಾಡಿ ಈ ಬ್ಯುಸಿನೆಸ್

By Suvarna NewsFirst Published Mar 19, 2024, 2:54 PM IST
Highlights

ಭಾರತದಲ್ಲಿ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರತಿಯೊಂದು ಹಬ್ಬವೂ ವಿಶೇಷತೆ ಪಡೆದಿದೆ. ಹೋಳಿ ಹಬ್ಬದಲ್ಲಿ ಬಣ್ಣ ಪ್ರಾಮುಖ್ಯತೆ ಪಡೆದಿದ್ದು, ಈ ಸಮಯದಲ್ಲಿ ಸಾಕಷ್ಟು ಬ್ಯುಸಿನೆಸ್ ಗೆ ಅವಕಾಶ ತೆರೆದುಕೊಳ್ಳುತ್ತದೆ. 
 

ಹೋಳಿಗೆ ಇನ್ನೇನು ಕೆಲವೇ ದಿನಗಳಿವೆ. ಬಣ್ಣದ ಹಬ್ಬಕ್ಕೆ ತಯಾರಿ ಜೋರಾಗಿ ನಡೆದಿದೆ. ಹೋಳಿ ಹಬ್ಬ ಸಂತೋಷವನ್ನು ಇಮ್ಮಡಿಗೊಳ್ಳಿಸುತ್ತದೆ. ಪ್ರತಿ ವರ್ಷ ಈ ಹಬ್ಬವನ್ನು ದೇಶದ ಜನರು ಅದ್ಧೂರಿಯಿಂದ, ಸಂಭ್ರಮದಿಂದ ಆಚರಿಸುತ್ತಾರೆ. ಈ ಹಬ್ಬದಲ್ಲಿ ಬಣ್ಣದ ಹೋಳಿ ಓಕುಳಿ ಆಡೋದು ಮಾತ್ರವಲ್ಲ ಹಣಗಳಿಸಲು ಸಾಕಷ್ಟು ಅವಕಾಶವಿದೆ. ವರ್ಷಕ್ಕೆ ಒಮ್ಮೆ ಬರುವ ಹೋಳಿಯಲ್ಲೂ ಸಾಕಷ್ಟು ಆದಾಯ ಗಳಿಸಬಹುದು. ಕೆಲ ವ್ಯವಹಾರವನ್ನು ನೀವು ಹೋಳಿಯಲ್ಲಿ ಶುರು ಮಾಡಿ, ಹೋಳಿ ಮುಗಿದ ಮೇಲೆ ನಿಲ್ಲಸಬೇಕಾಗುತ್ತೆ. ಮತ್ತೆ ಕೆಲ ವ್ಯವಹಾರವನ್ನು ನೀವು ಹೋಳಿ ನಂತ್ರವೂ ಮುಂದುವರಿಸಬಹುದು. ನಾವಿಂದು ಹೋಳಿ ಹಬ್ಬದಲ್ಲಿ ಯಾವೆಲ್ಲ ಬ್ಯುಸಿನೆಸ್ ಶುರು ಮಾಡಿ ನೀವು ಆದಾಯ ಗಳಿಸಬಹುದು ಎಂಬುದನ್ನು ಹೇಳ್ತೇವೆ. 

ಹೋಳಿ (Holi) ಹಬ್ಬದಲ್ಲಿ ಶುರು ಮಾಡಿ ಈ ಬ್ಯುಸಿನೆಸ್ (Business) :

Latest Videos

ಹೋಳಿ ಈವೆಂಟ್ (Event) : ಹೋಳಿ ಈವೆಂಟ್ ಈಗ ಪ್ರಸಿದ್ಧಿ ಪಡೆದಿದೆ. ಜನರು ಮನೆಯಲ್ಲಿ ಹೋಳಿ ಹಬ್ಬ ಆಚರಿಸಲು ಹೆಚ್ಚಾಗಿ ಇಷ್ಟಪಡೋದಿಲ್ಲ. ಮನೆಗೆ ಗಿಸ್ಟ್ ಆಹ್ವಾನಿಸಿ ಹಬ್ಬ ಆಚರಿಸೋದು ಅಷ್ಟು ಸುಲಭವಲ್ಲ. ಆರಂಭದಲ್ಲಿ ತಯಾರಿ ನಂತ್ರ ಕ್ಲೀನಿಂಗ್ ಎಲ್ಲವೂ ಕಷ್ಟವಾಗುತ್ತದೆ. ಹಾಗಾಗಿ ಬಹುತೇಕರು ಮನೆಯಲ್ಲಿ ಹೋಳಿ ಹಬ್ಬ ಆಚರಿಸದೆ ಹೊರಗೆ ಈವೆಂಟ್ ಸರ್ಚ್ ಮಾಡ್ತಾರೆ. ಈವೆಂಟ್ ಅಂದ್ರೆ ಒಂದು ದೊಡ್ಡ ಹಾಲ್ ಅಥವಾ ಮೈದಾನದಲ್ಲಿ ಹೋಳಿ ಹಬ್ಬ ಆಯೋಜನೆ ಮಾಡೋದು. ಎಲ್ಲ ಸ್ನೇಹಿತರು ಒಂದೇ ಜಾಗದಲ್ಲಿ ಸೇರಿ ಆರಾಮವಾಗಿ ಹೋಳಿ ಹಬ್ಬ ಆಚರಿಸಬಹುದು. ಹಾಗಾಗಿ ಜನರು ಇದಕ್ಕೆ ಹೆಚ್ಚಿನ ಆದ್ಯತೆ ನೀಡ್ತಿದ್ದಾರೆ. ನೀವು ಈ ಈವೆಂಟ್ ಆಯೋಜನೆ ಮಾಡಬಹುದು. ಅದಕ್ಕೆ ಕೆಲ ದಿನಗಳ ಹಿಂದೆ ಪ್ಲಾನ್ ಮಾಡಿ ಈವೆಂಟ್ ಆಯೋಜನೆ ಮಾಡಿ. ಹಾಲ್ ಅಥವಾ ಜಾಗದ ಅವಶ್ಯಕತೆ ಇರುತ್ತದೆ. ಸುರಕ್ಷತೆ, ಆಹಾರದ ವ್ಯವಸ್ಥೆ ಮಾಡುವ ಜೊತೆಗೆ ಟಿಕೆಟ್ ಹಣ ಫಿಕ್ಸ್ ಮಾಡಿ. ಮಕ್ಕಳು, ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಕೂಡ ಮಾಡಬಹುದು. ಆರೋಗ್ಯಕ ಬಣ್ಣವನ್ನು ನೀವು ಬಳಸಬೇಕು. ನಿಮ್ಮ ಈವೆಂಟ್ ಜನರ ಗಮನ ಸೆಳೆದಿದ್ದರೆ ನೀವು ಅದನ್ನು ಬೇರೆ ಹಬ್ಬಕ್ಕೂ ವಿಸ್ತರಿಸಬಹುದು. ಜೊತೆಗೆ ಮುಂದಿನ ವರ್ಷ ಮತ್ತೊಂದಿಷ್ಟು ಜನರು ಟಿಕೆಟ್ ಬುಕ್ ಮಾಡೋದನ್ನು ನೀವು ಖಾತ್ರಿಪಡಿಸಬಹುದು. 

ಶಾರುಖ್​ ಪುತ್ರನ ಬಿಜಿನೆಸ್​ ಬಲು ಜೋರು: ಒಂದು ಲಕ್ಷ ರೂ. ಜಾಕೆಟ್​ 24 ಗಂಟೆಯಲ್ಲಿ ಸೋಲ್ಡ್​ ಔಟ್​!

ಬಣ್ಣದ ವ್ಯಾಪಾರ (Color Business) : ಹೋಳಿ ಅಂದ್ಮೇಲೆ ಅಲ್ಲಿ ಬಣ್ಣ ಇರಲೇಬೇಕು ಸಿಂಥೆಟಿಕ್ ಮತ್ತು ಗಟ್ಟಿಯಾದ ಬಣ್ಣಗಳ ಬದಲಿಗೆ ಹರ್ಬಲ್ ಬಣ್ಣಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ನೀವು ಹರ್ಬಲ್ ಬಣ್ಣವನ್ನು ಮಾರಾಟ ಮಾಡಿ ಹಣಗಳಿಸಿ. ಮನೆಯಲ್ಲಿಯೇ ಬಣ್ಣವನ್ನು ತಯಾರಿಸಬಹುದು. ಇದು ನಿಮಗೆ ಇನ್ನಷ್ಟು ಲಾಭ ನೀಡುತ್ತದೆ.

ಹೋಳಿ ಗಿಫ್ಟ್ (Holi Gift) : ಹಬ್ಬದ ಸಮಯದಲ್ಲಿ ಉಡುಗೊರೆ ನೀಡೋದು ಭಾರತದಲ್ಲಿ ಸಾಮಾನ್ಯ. ನೀವು ಹೋಳಿ ಸಮಯದಲ್ಲಿ ಗಿಫ್ಟ್ ಮಾರಾಟ ಮಾಡುವ ಮೂಲಕ ಹಣ ಗಳಿಸಬಹುದು. ಹೋಳಿಯಲ್ಲಿ ಮಾತ್ರವಲ್ಲ ಈ ಗಿಫ್ಟ್ ಮಾರಾಟವನ್ನು ನೀವು ಹಬ್ಬದ ನಂತ್ರವೂ ಮುಂದುವರೆಸಬಹುದು.

ಮಕ್ಕಳ ಸಲಹೆ.. ಸಾಲವಿಲ್ಲದ ವ್ಯವಹಾರ.. ಯಶಸ್ವಿ ಮಹಿಳೆ ಎಲ್ಲರಿಗೆ ಸ್ಫೂರ್ತಿ

ಆಹಾರ (Food) : ಹೋಳಿ ಹಬ್ಬವನ್ನು ಕೆಲ ಪ್ರದೇಶದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಬಗೆ ಬಗೆಯ ತಿಂಡಿಗಳ ಸೇವನೆ ಮಾಡುತ್ತಾರೆ. ಆದ್ರೆ ಎಲ್ಲರೂ ಈ ಹಬ್ಬದಲ್ಲಿ ಮನೆಯಲ್ಲಿ ಇರಲು ಸಾಧ್ಯವಿಲ್ಲ. ಮನೆಯಿಂದ ಹೊರಗಿರುವವರಿಗೆ ಮನೆಯ ಊಟ ನೀಡುವ ವ್ಯವಸ್ಥೆಯನ್ನು ನೀವು ಮಾಡ್ಬಹುದು. ಕೆಲ ಪಾರ್ಟಿಗಳಿಗೆ ಕೂಡ ಆಹಾರವನ್ನು ನೀವು ಒದಗಿಸಬಹುದು. ಆಹಾರದ ಬ್ಯುಸಿನೆಸ್ ನಲ್ಲಿ ಹೆಚ್ಚು ಲಾಭವಿದೆ. ಹೋಳಿಯಲ್ಲಿ ನಿಮ್ಮ ಆಹಾರ ಕ್ಲಿಕ್ ಆದ್ರೆ ಆ ವ್ಯವಹಾರವನ್ನು ನೀವು ಮುಂದುವರೆಸಬಹುದು.     
 

click me!