ವರ್ಷಕ್ಕೆ ಕೋಟಿ ಸಂಪಾದಿಸೋ ಈಕೆ ಸೇಲ್ ಮಾಡೋದು ದೇಹದ ಮೇಲಿನ ಕೂದಲನ್ನು?

Published : Oct 26, 2023, 02:27 PM IST
ವರ್ಷಕ್ಕೆ ಕೋಟಿ ಸಂಪಾದಿಸೋ ಈಕೆ ಸೇಲ್ ಮಾಡೋದು ದೇಹದ ಮೇಲಿನ ಕೂದಲನ್ನು?

ಸಾರಾಂಶ

ಈಗಿನ ದಿನಗಳಲ್ಲಿ ಗಳಿಕೆಗೆ ನಾನಾ ದಾರಿ ಇದೆ. ಜನ ನಮ್ಮನ್ನು ಹೇಗೆ ನೋಡ್ತಾರೆ ಎನ್ನುವ ಬಗ್ಗೆ ಚಿಂತೆ ಮಾಡ್ತಾ ಮನೆಯಲ್ಲಿ ಕುಳಿತುಕೊಳ್ಳುವ ಬದಲು ತಲೆ ಓಡಿಸಿದ್ರೆ ಕೋಟಿ ಕೋಟಿ ಸಂಪಾದನೆ ಮಾಡ್ಬಹುದು.   

ವಿಶ್ವದಾದ್ಯಂತ ಜನರು ಚಿತ್ರವಿಚಿತ್ರ ರೀತಿಯಲ್ಲಿ ಹಣ ಸಂಪಾದನೆ ಮಾಡ್ತಿದ್ದಾರೆ. ಬಹುತೇಕರ ಟಾರ್ಗೆಟ್ ಸಾಮಾಜಿಕ ಜಾಲತಾಣ. ಇಲ್ಲಿ ತಮ್ಮ ಫೋಟೋಗಳನ್ನು ಅಥವಾ ತಾವು ತಯಾರಿಸಿದ ವಸ್ತುಗಳ ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡಿ ಹಣ ಸಂಪಾದನೆ ಮಾಡುವವರೇ ಹೆಚ್ಚು. ಸೆಕ್ಸಿ ಫೋಟೋಗಳನ್ನು ಹಾಕಿ ಹಣ ಸಂಪಾದನೆ ಮಾಡುವ ಯುವತಿಯರಿದ್ದಾರೆ. ಮಹಿಳೆಯೊಬ್ಬಳು ತನ್ನ ಕಾಲುಗಳ ಫೋಟೋ ಹಾಕಿ ಶ್ರೀಮಂತೆಯಾಗಿದ್ದಾಳೆ. ಇನ್ನೊಬ್ಬ ಮಹಿಳೆ ಯಾವ ಫೋಟೋ ಹಾಕಿ ಹಣ ಗಳಿಸ್ತಿದ್ದಾಳೆ ಅನ್ನೋದನ್ನು ಕೇಳಿದ್ರೆ ನೀವು ದಂಗಾಗ್ತೀರ.

ಮಹಿಳೆಯರು ತಮ್ಮ ಸೌಂದರ್ಯ (Beauty) ದ ಬಗ್ಗೆ ಹೆಚ್ಚು ಕಾಳಜಿ ವಹಿಸ್ತಾರೆ. ಮುಖ, ದೇಹದ ಮೇಲೆ ಎಲ್ಲೂ ಹೆಚ್ಚುವರಿ ಕೂದಲಿ (Hair) ರಬಾರದು ಎಂಬುದು ಅವರ ಆಸೆಯಾಗಿರುತ್ತದೆ. ಇದೇ ಕಾರಣಕ್ಕೆ ಐಬ್ರೋ, ವ್ಯಾಕ್ಸಿಂಗ್ ಅಂತ ಮಾಡಿಸ್ತಿರುತ್ತಾರೆ. ಅಂಡರ್ ಆರ್ಮ್ (Under Arm) ಕ್ಲೀನಿಂಗ್ ಕೂಡ ಇಲ್ಲಿ ಸೇರಿದೆ. ಯಾವುದೇ ಸ್ಲೀವ್ ಲೆಸ್ ಡ್ರೆಸ್ ಧರಿಸುವ ಮುನ್ನ ಮಹಿಳೆಯರು ಮಾಡುವ ಮೊದಲ ಕೆಲಸ ಅಂಡರ್ ಆರ್ಮ್ ಕ್ಲೀನ್. ಅಲ್ಲಿ ಕೂದಲಿದರೆ ಅಥವಾ ಆ ಜಾಗ ಕಪ್ಪಾಗಿದ್ರೆ ಅದನ್ನು ನಾಚಿಗೆ ಎನ್ನುವಂತೆ ಭಾವಿಸ್ತಾರೆ ಹುಡುಗಿಯರು. ಆದ್ರೆ ಈ ಯುವತಿ, ಅಂಡರ್ ಆರ್ಮ್ ಕೂದಲಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಹಣ ಸಂಪಾದನೆ ಮಾಡ್ತಿದ್ದಾಳೆ.

ಕೋಟಿ ಕೋಟಿ ವಂಚಿಸಿ ಭಾರತದಿಂದ ಪಲಾಯನಗೈದ ಲಲಿತ್‌ ಮೋದಿ, ಮಗಳು ಈಗ ಮಿಲಿಯನ್ ಡಾಲರ್ ಸಂಸ್ಥೆಯ ಒಡತಿ!

ಅಂಡರ್ ಆರ್ಮ್ ಕೂದಲಿಂದ್ಲೇ 8 ಕೋಟಿ ಸಂಪಾದನೆ : ನೀವು ನಂಬಿದ್ರೆ ನಂಬಿ, ಬಿಟ್ರೆ ಬಿಡಿ. ಇದು ಮಾತ್ರ ಸತ್ಯ. ಅಂಡರ್ ಆರ್ಮ್ ಕೂದಲಿನ ಫೋಟೋದಿಂದಲೇ ಈ ಯುವತಿ ವರ್ಷಕ್ಕೆ ಸುಮಾರು ಒಂದು ಮಿಲಿಯನ್ ಡಾಲರ್ ಅಂದ್ರೆ ಸುಮಾರು 8 ಕೋಟಿ ರೂಪಾಯಿ ಸಂಪಾದನೆ ಮಾಡ್ತಾಳೆ. ೩೦ ವರ್ಷದ ಯುಕೆಯ ಫಾಕ್ಸ್ ಹಣವನ್ನೇನೋ ಸಂಪಾದನೆ ಮಾಡಿದ್ದಾಳೆ. ಆದ್ರೆ ಅದಕ್ಕೆ ತಕ್ಕಂತೆ ಸಮಸ್ಯೆಗಳನ್ನು ಕೂಡ ಎದುರಿಸುತ್ತಿದ್ದಾಳೆ. ದಿನದಲ್ಲಿ ೧೪ ಗಂಟೆ ಮೊಬೈಲ್ ನಲ್ಲಿರುವ ಕಾರಣ ಆಕೆ ಡಿಜಿಟಲ್ ವರ್ಟಿಗೋ ಸಮಸ್ಯೆಯಿಂದ ಬಳಲುತ್ತಿದ್ದಾಳೆ.

ಸಹೋದರಿ ಜೊತೆಗೆ ಐಟಿ ಕಂಪನಿ ಸ್ಥಾಪಿಸಿ ಯಶಸ್ಸು ಕಂಡ ಈ ಐಐಟಿ ಪದವೀಧರನ ನಿವ್ವಳ ಸಂಪತ್ತು 39,000 ಕೋಟಿ ರೂ.!

ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ಮೂಲಕ ತಾನು ತಿಂಗಳಿಗೆ  9,500 ಡಾಲರ್ ಅಂದ್ರೆ 7 ಲಕ್ಷ ರೂಪಾಯಿ ಗಳಿಸುತ್ತೇನೆ ಎಂದು ಫಾಕ್ಸ್ ಹೇಳಿಕೊಂಡಿದ್ದಾಳೆ.  ಸಾಮಾಜಿಕ ಜಾಲತಾಣದಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾಳೆ ಫಾಕ್ಸ್. ಮಹಿಳೆಯರ ಮೇಲೆ ಸೌಂದರ್ಯದ ಮಾನದಂಡಗಳನ್ನು ಹೇರಲಾಗಿದೆ. ಇದು ಫಾಕ್ಸ್ ಗೆ ಇಷ್ಟವಾಗ್ತಿರಲಿಲ್ಲ. ಇದೇ ಕಿರಿಕಿರಿಯಿಂದಾಗಿ ಏಳು ವರ್ಷಗಳ ಹಿಂದೆ ಅಂಡರ್ ಆರ್ಮ್ಸ್ ನ ಕೂದಲನ್ನು ಮೊದಲ ಬಾರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಳು ಫಾಕ್ಸ್.  ಮಾಡೆಲ್ ಕಂಪನಿಗಳು ದೇಹದ ಮೇಲಿರುವ ಕೂದಲನ್ನು ವಿಶೇಷವಾಗಿ ಅಂಡರ್ ಆರ್ಮ್ಸ್ ನಲ್ಲಿರುವ ಕೂದಲನ್ನು ಗಮನಿಸಬೇಕೆಂದು ಫಾಕ್ಸ್ ಬಯಸಿದ್ದಳು. ಹಾಗಾಗಿ ಆಕೆ ಸಮುದ್ರತೀರದಲ್ಲಿ ಅಥವಾ ಪರ್ವತಗಳಲ್ಲಿ ಮಾಡೆಲ್ ಗಳು ಫೋಟೋಕ್ಕೆ ಫೋಸ್ ನೀಡುವಂತೆ ಫೋಸ್ ಕೊಡ್ತಿದ್ದಳು. ಆದ್ರೆ ಆಕೆ ಫೋಸ್ ಸ್ವಲ್ಪ ಭಿನ್ನವಾಗಿರುತ್ತಿತ್ತು. ಅಂಡರ್ ಆರ್ಮ್ಸ್ ಕೂದಲು ಕಾಣುವಂತೆ ಆಕೆ ಫೋಟೋ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡ್ತಿದ್ದಳು.

ಮೇಕಪ್ ಮಾಡೋದನ್ನು ಫಾಕ್ಸ್ ಸಂಪೂರ್ಣವಾಗಿ ನಿಲ್ಲಿಸಿದ್ದಳು. ಶೇವಿಂಗ್ ಕೂಡ ಮಾಡ್ತಾ ಇರಲಿಲ್ಲ. ತಲೆ ಕೂದಲನ್ನು ಕೂಡ ಬಾಚಿ ಕೊಳ್ತಿರಲಿಲ್ಲ. ದೇಹ ಹೇಗಿದೆಯೋ ಹಾಗೆ ಇರಲು ಬಿಟ್ಟಿದ್ದಳು. ಆರಂಭದಲ್ಲಿ ಆಕೆ ವರ್ತನೆ ಸ್ವಲ್ಪ ಭಿನ್ನವೆನ್ನಿಸುತ್ತಿತ್ತು. ಆದರೆ ದಿನ ಕಳೆದಂತೆ ಫಾಕ್ಸ್ ಬಾಡಿ ಪಾಸಿಟಿವ್ (Body Positive) ಇನ್ಫ್ಲುಯೆನ್ಸರ್ ಆದಳು. ಆಕೆ ಬಗ್ಗೆ ಅನೇಕರು ನೆಗೆಟಿವ್ ಕಮೆಂಟ್ ಮಾಡಿದ್ದರು. ಈಗ್ಲೂ ಮಾಡ್ತಿರುತ್ತಾರೆ. ಆದ್ರೆ ಲಕ್ಷಾಂತರ ಮಂದಿ ನನ್ನನ್ನು ಫಾಲೋ ಮಾಡ್ತಾರೆ. ಇದ್ರಿಂದ ನಾನು ಕೋಟಿ ಕೋಟಿ ಹಣ ಸಂಪಾದನೆ ಮಾಡ್ತಿದ್ದೇನೆ ಎನ್ನುತ್ತಾಳೆ ಫಾಕ್ಸ್. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!