ಬ್ರಿಟನ್‌ ಆರ್ಥಿಕತೆ 300 ವರ್ಷದಲ್ಲೇ ದಾಖಲೆ ಕುಸಿತ!

Published : Feb 13, 2021, 08:12 AM IST
ಬ್ರಿಟನ್‌ ಆರ್ಥಿಕತೆ 300 ವರ್ಷದಲ್ಲೇ ದಾಖಲೆ ಕುಸಿತ!

ಸಾರಾಂಶ

ಬ್ರಿಟನ್‌ ಆರ್ಥಿಕತೆ 300 ವರ್ಷದಲ್ಲೇ ದಾಖಲೆ ಕುಸಿತ| 2020ರಲ್ಲಿ ಬ್ರಿಟನ್‌ ಜಿಡಿಪಿ ಶೇ.-9.9ಕ್ಕೆ ಕುಸಿತ| 1709ರಲ್ಲಿ ಶೇ.-13ಕ್ಕೆ ಕುಸಿತ ಕಂಡಿದ್ದ ಆರ್ಥಿಕತೆ

ಲಂಡನ್(ಫೆ.13)‌: ಕೊರೋನಾ ವೈರಸ್‌ ಲಾಕ್‌ಡೌನ್‌ ಕಾರಣದಿಂದಾಗಿ ಬ್ರಿಟನ್‌ನ ಆರ್ಥಿಕತೆ ಕಳೆದ 300 ವರ್ಷಗಳಲ್ಲೇ ದಾಖಲೆಯ ಪತನವನ್ನು ಕಂಡಿದೆ. 2020ರಲ್ಲಿ ಬ್ರಿಟನ್‌ ಜಿಡಿಪಿ ದರ ನಕಾರಾತ್ಮಕ ಶೇ.9.9ಕ್ಕೆ ಕುಸಿತ ದಾಖಲಿಸಿದೆ.

ದೇಶದ ಆರ್ಥಿಕತೆ ಇಷ್ಟೊಂದು ಕುಸಿತವನ್ನು ಕಂಡಿರುವುದು 1709ರ ಬಳಿಕ ಇದೇ ಮೊದಲು. 1709ರಲ್ಲಿ ಬ್ರಿಟನ್‌ ಭೀಕರ ಚಳಿಗಾಲಕ್ಕೆ ಸಾಕ್ಷಿಯಾಗಿತ್ತು. 500 ವರ್ಷಗಳಲ್ಲೇ ಯುರೋಪ ಎದುರಿಸಿದ ಅತಿ ಕಠಿಣ ಚಳಿಗಾಲದಿಂದಾಗಿ ಬಿಸಿಲು ಇಲ್ಲದೇ ಕೃಷಿ ಚಟುವಟಿಗಳು ನಿಂತುಹೋಗಿದ್ದರಿಂದ ಆಹಾರ ಕೊರತೆ ಉಂಟಾಗಿ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದ್ದವು. ಇದರ ಪರಿಣಾಮವಾಗಿ 1709ರಲ್ಲಿ ಬ್ರಿಟನ್‌ ಆರ್ಥಿಕತೆ ಶೇ.-13ಕ್ಕೆ ಕುಸಿತ ಕಂಡಿತ್ತು. ಇದೀಗ ಕೊರೋನಾ ಕಾರಣದಿಂದಾಗಿ 2020ರಲ್ಲಿ ಬ್ರಿಟನ್‌ ಆರ್ಥಿಕತೆ ಶೇ.-9.9ಕ್ಕೆ ಕುಸಿತ ದಾಖಲಿಸಿದೆ. ಬ್ರಿಟನ್‌ ಆರ್ಥಿಕತೆಯಲ್ಲಿ ಶೇ.80ರಷ್ಟುಪಾಲು ಹೊಂದಿರುವ ಸೇವಾ ವಲಯ ಶೇ.-8.9ಕ್ಕೆ ಕುಸಿತ ಕಂಡಿದ್ದರೆ, ಉತ್ಪಾದನೆ ವಲಯ ಶೇ.- 8.6ಕ್ಕೆ ಮತ್ತು ನಿರ್ಮಾಣ ವಲಯ ಶೇ.-12.5ಕ್ಕೆ ಕುಸಿತ ದಾಖಲಿಸಿದೆ.

ಇದೇ ವೇಳೆ ಆರ್ಥಿಕತೆ ಚೇತರಿಕೆಯ ಧನಾತ್ಮಕ ಲಕ್ಷಣಗಳು ಗೋಚರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಚೇತರಿಕೆ ಕಾಣಲಿದೆ ಎಂಬ ವಿಶ್ವಾಸವಿದೆ ಎಂದು ಹಣಕಾಸು ಸಚಿವ ರಿಶಿ ಸುನಾಕ್‌ ಹೇಳಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!