ಆಧಾರ್ ಕಾರ್ಡ್ ಒಂದಿದ್ದರೆ ಎಲ್ಲ ಮಾಹಿತಿ ಸುಲಭವಾಗಿ ಸಿಗುತ್ತದೆ. ಆಧಾರ್ ಕಾರ್ಡ್ ಬಳಸಿ ಅನೇಕರ ಖಾತೆಯನ್ನು ವಂಚಕರು ಖಾಲಿ ಮಾಡಿದ್ದಾರೆ. ಹಾಗಾಗಿ ಆಧಾರ್ ಕಾರ್ಡ್ ಸುರಕ್ಷಿತವಾಗಿಡುವುದು ಈಗ ಮುಖ್ಯ. ಅದ್ರ ಬಗ್ಗೆ ಯುಐಡಿಎಐ ಮಾಹಿತಿ ನೀಡಿದೆ.
ಈಗ ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ (Aadhaar Card ) ಬಹಳ ಮುಖ್ಯವಾದ ದಾಖಲೆ (Documentation)ಯಾಗಿದೆ. ಆಧಾರ್ ಗುರುತಿನ ಚೀಟಿಯಾಗಿ ಕೆಲಸ ಮಾಡುತ್ತದೆ. ಸರ್ಕಾರಿ ಸೌಲಭ್ಯ (Government Facility) ಗಳನ್ನು ಪಡೆಯಲು ಬಯಸಿದ್ದರೆ ಆಧಾರ್ ಕಾರ್ಡ್ ಹೊಂದಿರುವುದು ಅವಶ್ಯಕ. ಬರೀ ಸರ್ಕಾರಿ ಕೆಲಸಕ್ಕೆ ಮಾತ್ರವಲ್ಲ ಕೆಲವು ಖಾಸಗಿ (Private) ಸೇವೆಗಳಲ್ಲಿಯೂ ಆಧಾರ್ ಕಾರ್ಡ್ ಅನಿವಾರ್ಯ ಮಾಡಲಾಗಿದೆ. ಮಕ್ಕಳ (Children) ಶಾಲೆ ನೋಂದಣಿಯಿಂದ ಹಿಡಿದು ಆಸ್ಪತ್ರೆ (Hospital) ಯವರೆಗೆ ಎಲ್ಲ ಕಡೆ ಆಧಾರ್ ಅಗತ್ಯ ದಾಖಲೆಯಾಗಿದೆ. ಆದ್ರೆ ಇನ್ನೂ ಕೆಲವರು ಆಧಾರ್ ಪಡೆದಿಲ್ಲ.
ಆಧಾರ್ ಎಲ್ಲ ಕಡೆ ಅತ್ಯಗತ್ಯ ನಿಜ. ಈ ಅಗತ್ಯ ದಾಖಲೆಯನ್ನು ಹೇಗೆ ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಸದ್ಯ ಆಧಾರ್ ಕಾರ್ಡ್ ದುರ್ಬಳಕೆ ಮುನ್ನೆಲೆಗೆ ಬಂದಿದ್ದು, ಅಲ್ಲಿ ಆಧಾರ್ ಕಾರ್ಡ್ ತಪ್ಪಾಗಿ ಬಳಸಲಾಗುತ್ತಿದೆ. ಅಚ್ಚರಿಯ ವಿಷಯವೆಂದರೆ ಆಧಾರ್ ಕಾರ್ಡ್ ಹೊಂದಿರುವವರಿಗೆ ಇದರ ಅರಿವೇ ಇಲ್ಲ.
REPO RATE:ರೆಪೋ ದರ ಹೆಚ್ಚಳದಿಂದ ಸಾಲಗಾರರಿಗೆ ಕಹಿ, ಠೇವಣಿದಾರರಿಗೆ ಸಿಹಿ; ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ
ಹೆಚ್ಚಾಗ್ತಿದೆ ಆಧಾರ್ ಗೆ ಸಂಬಂಧಿಸಿದ ವಂಚನೆ ಪ್ರಕರಣ : ಇತ್ತೀಚಿನ ದಿನಗಳಲ್ಲಿ ಆಧಾರ್‌ಗೆ ಸಂಬಂಧಿಸಿದ ವಂಚನೆ (Fraud) ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಇಂತಹ ವಂಚನೆಗಳಿಂದ ಜನರನ್ನು ರಕ್ಷಿಸಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಕಾಲಕಾಲಕ್ಕೆ ಮಾರ್ಗಸೂಚಿ (Guidelines) ಗಳನ್ನು ನೀಡುತ್ತದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಟ್ವೀಟ್ (Tweet) ಮೂಲಕ ಜನರಿಗೆ ಆಧಾರ್ ಸುರಕ್ಷಿತವಾಗಿಡುವ ಕೆಲ ವಿಧಾನಗಳನ್ನು ಹೇಳಿದೆ. ಬಯೋಮೆಟ್ರಿಕ್ (Biometric) ಡೇಟಾವನ್ನು ಆನ್ಲೈನ್ (Online) ನಲ್ಲಿ ಲಾಕ್ (Lock) ಮಾಡುವ ಮೂಲಕ ಆಧಾರ್ ಕಾರ್ಡ್ ಸುರಕ್ಷಿತವಾಗಿಡಬಹುದು. ಬಯೋಮೆಟ್ರಿಕ್ ಡೇಟಾವನ್ನು ಆನ್ಲೈನ್ ನಲ್ಲಿ ಲಾಕ್ ಮಾಡುವುದು ಸುಲಭ.
Vegetable Price Hike:ಕೈ ಸುಡುತ್ತಿದೆ ತರಕಾರಿ ಬೆಲೆ; ಈ ದುಬಾರಿ ದರಕ್ಕೆ ಕಾರಣವೇನು ಗೊತ್ತಾ? ಇಲ್ಲಿದೆ ಮಾಹಿತಿ
ಮೊದಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ (Website)ಗೆ ಹೋಗಬೇಕು. ಅದರ ಮುಖಪುಟದಲ್ಲಿ ನನ್ನ ಆಧಾರ್ ಎಂಬ ಆಯ್ಕೆ ಕಾಣಿಸುತ್ತದೆ. ಈ ಆಯ್ಕೆ ಮೇಲೆ ಕ್ಲಿಕ್ (Click) ಮಾಡಬೇಕು. ನಂತರ ಆಧಾರ್ ಸೇವೆ ಕಾಣಿಸುತ್ತದೆ. ಅಲ್ಲಿ ಲಾಕ್/ಅನ್ಲಾಕ್ ಬಯೋಮೆಟ್ರಿಕ್ ಮೇಲೆ ಕ್ಲಿಕ್ ಮಾಡಿ. ಅದರ ನಂತರ ಹೊಸ ಪುಟ ತೆರೆಯುತ್ತದೆ. ಅಲ್ಲಿ ಬಾಕ್ಸ್ ಅನ್ನು ಟಿಕ್ ಮಾಡಿ. ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಗೆ ಕ್ಯಾಪ್ಚಾ, ಒಟಿಪಿ ಬರುತ್ತದೆ. ಒಟಿಪಿಯನ್ನು ನಮೂದಿಸಬೇಕು. ನಂತರ ಲಾಕ್ ಮಾಡುವ ಫೀಚರ್ ಸಕ್ರಿಯಗೊಳಿಸಲು ಅರ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ಆಧಾರ್ ಬಯೋಮೆಟ್ರಿಕ್ ಡೇಟಾ ಲಾಕ್ ಆಗುತ್ತದೆ.
ಇದಲ್ಲದೆ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ವೆರಿಫಿಕೇಷನ್ ಕೂಡ ಮಾಡಬೇಕು. ಇದಕ್ಕಾಗಿ ಮೊದಲು ನೀವು http://www.uidai.gov.in ಗೆ ಹೋಗಬೇಕು. ಅಲ್ಲಿ ಮೈ ಆಧಾರ್ ಟ್ಯಾಬ್‌ನಲ್ಲಿ, ವೆರಿಫೈ ಇಮೇಲ್/ಮೊಬೈಲ್ ಸಂಖ್ಯೆ ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕು. ಹೊಸ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ನೀವು ಪರಿಶೀಲಿಸಲು ಬಯಸುವ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯನ್ನು ನಮೂದಿಸಿ. ಅದರ ನಂತರ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಒಟಿಪಿ ಕಳುಹಿಸಿ ಮೇಲೆ ಕ್ಲಿಕ್ ಮಾಡಿ. ಮೊಬೈಲ್ ಸಂಖ್ಯೆ ನಮೂದಿಸಿದ್ದರೆ ಅದಕ್ಕೆ ಒಟಿಪಿ ಬರುತ್ತದೆ. ಇಮೇಲ್ ಐಡಿ ನಮೂದಿಸಿದರೆ ಮೇಲ್‌ನಲ್ಲಿ ಒಟಿಪಿ ಬರುತ್ತದೆ. ನಂತ್ರ ಒಟಿಪಿ ನಮೂದಿಸಬೇಕು. ನಮೂದಿಸಿದ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ಯುಐಡಿಎಐ ದಾಖಲೆಯೊಂದಿಗೆ ಹೊಂದಾಣಿಕೆಯಾಗಿದ್ದರೆ, ಮೊಬೈಲ್ ಸಂಖ್ಯೆ/ಇಮೇಲ್ ಐಡಿ ದಾಖಲೆ ಹೊಂದಾಣಿಕೆಯಾಗಿದೆ ಎಂಬ ಸಂದೇಶ ಬರುತ್ತದೆ.