ಉಬರ್‌ನಲ್ಲಿನ್ನು ಮಹಿಳೆಯರ ಪ್ರಯಾಣ ಸೇಫ್, ವಿಶೇಷ ಸೇವೆ ಆರಂಭ

By Roopa Hegde  |  First Published Dec 13, 2024, 1:21 PM IST

ಉಬರ್, ಮಹಿಳೆಯರಿಗೆ ಪ್ರಯಾಣ ಸುರಕ್ಷತೆ ಜೊತೆ ಆದಾಯ ಗಳಿಕೆಗೆ ಅವಕಾಶ ನೀಡಿದೆ. ಇನ್ಮುಂದೆ ಉಬರ್ ನಲ್ಲಿ ಮಹಿಳಾ ಬೈಕ್ ರೈಡರ್ ಲಭ್ಯವಾಗಲಿದ್ದು, ಒಂದ್ಕಡೆ ಇದು ಮಹಿಳಾ ಪ್ರಯಾಣಿಕರಿಗೆ ಭದ್ರತೆ ಒದಗಿಸಿದ್ರೆ ಇನ್ನೊಂದ್ಕಡೆ ಮಹಿಳಾ ಚಾಲಕರಿಗೆ ಉದ್ಯೋಗ ನೀಡಲಿದೆ. 
 


ರೈಡ್ ಹೇಲಿಂಗ್ ಆಪ್ಲಿಕೇಶನ್ ಉಬರ್ (ride hailing app uber) ತನ್ನ ಮಹಿಳಾ ಪ್ರಯಾಣಿಕರಿಗೆ ಸೂಪರ್ ಗಿಫ್ಟ್ (Super Gift) ನೀಡಿದೆ. ಉಬರ್ ತನ್ನ ಅಪ್ಲಿಕೇಷನ್ ನಲ್ಲಿ  ಬೈಕ್, ಆಟೋ ಹಾಗೂ ಕಾರಿನ ಸೇವೆ ನೀಡ್ತಾ ಬಂದಿದೆ. ಇಷ್ಟು ದಿನ ಮಹಿಳಾ ಪ್ರಯಾಣಿಕರಿಗೆ ಬೈಕ್ ಆಯ್ಕೆ ಸ್ವಲ್ಪ ಕಷ್ಟವಾಗಿತ್ತು. ಯಾಕೆಂದ್ರೆ ಬೈಕನ್ನು ಪುರುಷರು ಚಲಾಯಿಸ್ತಿದ್ರು. ಹಾಗಾಗಿ ಅಗತ್ಯವಿಲ್ಲದ ಜಾಗಕ್ಕೂ ಮಹಿಳೆಯರು ಬೈಕ್ ಬಿಟ್ಟು ಆಟೋ ಆಯ್ಕೆ ಮಾಡಿಕೊಳ್ಳುವ ಪರಿಸ್ಥಿತಿ ಇತ್ತು. ಆದ್ರೀಗ ಮಹಿಳೆ ಚಾಲಕರನ್ನು ಉಬರ್ ಒದಗಿಸಿದೆ. ಮಹಿಳಾ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಉಬರ್, ಉಬರ್ ಮೋಟೋ ವುಮೆನ್ (Uber Moto Women) ಬಿಡುಗಡೆ ಮಾಡಿದೆ. 

ಬೆಂಗಳೂರಿ (Bangalore)ನಲ್ಲಿ ಮೊದಲ ಬಾರಿ ಈ ಸೇವೆ ಶುರುವಾಗಿದ್ದು, ಮಹಿಳೆಯರಿಗೆ ಮಾತ್ರ ಮೋಟೋ ವುಮೆನ್ ಸೇವೆ ಲಭ್ಯವಾಗಲಿದೆ.   ದ್ವಿಚಕ್ರ ವಾಹನ ಸೇವೆಯು ಮಹಿಳೆಯರನ್ನು ಮಹಿಳಾ ಚಾಲಕರೊಂದಿಗೆ ಕನೆಕ್ಟ್ ಮಾಡುತ್ತದೆ. ಈ ಸೇವೆ ಮಹಿಳೆಯರ ಸುರಕ್ಷತೆ ಮತ್ತು ಅಗತ್ಯಗಳನ್ನು ಪೂರೈಸುವ ಭರವಸೆ ನೀಡುತ್ತದೆ ಎಂದು ಉಬರ್ ಹೇಳಿದೆ. ಮಹಿಳಾ ಸವಾರರು ಮತ್ತು ಚಾಲಕರಿಂದ ಬಂದ ಪ್ರತಿಕ್ರಿಯೆಯ ಆಧಾರದ ಮೇಲೆ ಈ ಸೇವೆಯನ್ನು ಪ್ರಾರಂಭಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಮಹಿಳಾ ಚಾಲಕರೊಂದಿಗೆ ಸವಾರಿ ಮಾಡಲು ಆದ್ಯತೆ ನೀಡುವ ಮಹಿಳೆಯರಿಗೆ ಉಬರ್ ಮೋಟೋ ವುಮೆನ್ ಸುರಕ್ಷಿತ, ಕೈಗೆಟುಕುವ ಮತ್ತು ಅನುಕೂಲಕರ ಆಯ್ಕೆಯಾಗಿದೆ. ಉಬರ್ ಮೋಟೋ ವುಮೆನ್ ಸೇವೆಗೆ ಈಗಾಗಲೇ 300ಕ್ಕೂ ಹೆಚ್ಚು ಮಹಿಳೆಯರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಮಹಿಳಾ ಚಾಲಕಿಯರು ಮಹಿಳೆಯರನ್ನು ಬಿಟ್ಟು ಬೇರೆ ಪ್ರಯಾಣಿಕರನ್ನು ಕೂಡ ಬೈಕಿನಲ್ಲಿ ಕರೆದೊಯ್ಯಬಹುದು. ಆ ಸಮಯದಲ್ಲಿ ಅವರು ವುಮೆನ್ ಓನ್ಲಿ ಎನ್ನುವ ಆಯ್ಕೆಯನ್ನು ಆಫ್ ಮಾಡಿಕೊಳ್ಳಬೇಕು. ಇದು ಹೆಚ್ಚು ಗಳಿಸಲು ಮಹಿಳೆಯರಿಗೆ ಆಯ್ಕೆ ನೀಡುತ್ತದೆ. ಮಹಿಳಾ ಚಾಲಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದ್ದು, ಅವರಿಗೆ ಇನ್ನಷ್ಟು ಉದ್ಯೋಗ ನೀಡುವ ನಿಟ್ಟಿನಲ್ಲಿ ಉಬರ್ ತನ್ನ ಯೋಜನೆಯನ್ನು ಮುಂದಿನ ವರ್ಷ ವಿಸ್ತರಿಸುವ ಆಲೋಚನೆಯಲ್ಲಿದೆ. 

Tap to resize

Latest Videos

ಚಳಿಗೆ ಬೆಂಕಿ ಕಾಯಿಸಲು ಒಲೆಯಲ್ಲಿ ನೋಟುಗಳನ್ನು ಸುಟ್ಟ ಅಸಾಮಿ; ಇವನಿಗೇನು ಹುಚ್ಚು ಹಿಡಿದಿದೆಯಾ?

ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಪ್ರಾದೇಶಿಕ ವ್ಯಾಪಾರ ಕಾರ್ಯಾಚರಣೆಗಳ ಮುಖ್ಯಸ್ಥ ಅಭಿಷೇಕ್ , ಉಬರ್ ಮೋಟೋ ವುಮೆನ್,  ಮಹಿಳೆಯರಿಗೆ ಸುರಕ್ಷಿತ ಮತ್ತು ಹೆಚ್ಚು ಅನುಕೂಲಕರವಾದ ರೈಡ್ ಆಯ್ಕೆಯನ್ನು ಒದಗಿಸಲು ಮಾತ್ರ ಶುರು ಮಾಡಿಲ್ಲ, ಇದು ಮಹಿಳೆಯರಿಗೆ ಉದ್ಯೋಗ ನೀಡುವ ಮೂಲಕ ಅವರಿಗೆ ಆದಾಯ ಹೆಚ್ಚಿಸಿಕೊಳ್ಳುವ ಅವಕಾಶ ನೀಡುತ್ತದೆ ಎಂದಿದ್ದಾರೆ. ಹೊಸ ಆವಿಷ್ಕಾರಗಳನ್ನು ಬೆಂಗಳೂರು ಅಳವಡಿಸಿಕೊಳ್ಳಲು ಸದಾ ಮುಂದಿರುವ ಕಾರಣ, ಈ ಸೇವೆಯನ್ನು ಮೊದಲು ಬೆಂಗಳೂರಿನಲ್ಲಿ ಶುರು ಮಾಡಲಾಗಿದೆ ಎಂದವರು ಹೇಳಿದ್ದಾರೆ. 

undefined

ಮಗು ಕಳೆದುಕೊಂಡ ನೋವಿನಲ್ಲೂ ಮಹಾನ್ ಕೆಲಸ, 2 ದಿನದ ಶಿಶು ದೇಹ ದಾನ ಮಾಡಿದ

ಬೆಂಗಳೂರಿನ ಎಲ್ಲಾ ಪ್ರಮುಖ ಭಾಗಗಳಲ್ಲಿ ಉಬರ್ ಮೋಟೋ ವುಮೆನ್ ಸೇವೆ ಲಭ್ಯವಾಗಲಿದೆ. ಉಬರ್, ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಬರದಂತೆ ಮಾನಿಟರ್ ಮಾಡುತ್ತದೆ. ಅಗತ್ಯವಿದ್ದಾಗ ಸಹಾಯವನ್ನು ಒದಗಿಸುತ್ತದೆ. ಮಹಿಳಾ ಸವಾರರು ಮತ್ತು ಚಾಲಕರು ಉಬರ್‌ನ 24×7 ಸುರಕ್ಷತಾ ಸಹಾಯವಾಣಿ ಸಹಾಯ ಪಡೆಯಬಹುದು. ಬೈಕ್ ರೈಡಿಂಗ್ ನಲ್ಲಿ ಆಸಕ್ತಿ ಹೊಂದಿದ್ದು, ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆ ನಿಮ್ಮ ಬಳಿ ಇದ್ದರೆ ನೀವು ಕೂಡ ಉಬರ್ ಜೊತೆ ಕೈಜೋಡಿಸಬಹುದು. ಕಂಪನಿಯ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು. 

click me!