Agriculture Export:ಕೃಷಿ ರಫ್ತಿನಲ್ಲಿ ದಾಖಲೆಯ ಗುರಿ ಸಾಧಿಸಿದ ಭಾರತ; ಇದು ಹೇಗೆ ಸಾಧ್ಯವಾಯಿತು? ಇಲ್ಲಿದೆ ಮಾಹಿತಿ

By Suvarna News  |  First Published Apr 25, 2022, 6:44 PM IST

*ಕೃಷಿ ರಫ್ತಿನ ಹೆಚ್ಚಳಕ್ಕೆ ಹಲವು ಉಪಕ್ರಮಗಳನ್ನು ಕೈಗೊಂಡ ವಾಣಿಜ್ಯ ಇಲಾಖೆ
*ರಾಜ್ಯ, ಜಿಲ್ಲೆ ಹಾಗೂ ಗ್ರಾಮೀಣ ಮಟ್ಟದಲ್ಲಿ ರಫ್ತು ಆಧಾರಿತ ಕೃಷಿ ಬಗ್ಗೆ ರೈತರಿಗೆ ಮಾಹಿತಿ 
*ಕೋವಿಡ್ -19 ಹೊರತಾಗಿಯೂ ಕೃಷಿ ವಲಯದ ರಫ್ತಿನಲ್ಲಿ ಹೆಚ್ಚಳ 
 


ನವದೆಹಲಿ (ಏ.25): ವಾಣಿಜ್ಯ ಇಲಾಖೆ (Department of Commerce) ಕೈಗೊಂಡ ಹಲವು ಉಪಕ್ರಮಗಳ ಪರಿಣಾಮವಾಗಿ ಭಾರತ (India) 2021-22ನೇ ಸಾಲಿನಲ್ಲಿ ಕೃಷಿ  (Agriculture) ರಫ್ತಿನಲ್ಲಿ  50  ಬಿಲಿಯನ್ ಅಮೆರಿಕನ್ ಡಾಲರ್ (Dollar) ದಾಖಲೆ ಗುರಿ ತಲುಪಲು ಸಾಧ್ಯವಾಗಿದೆ. ಆ ಮೂಲಕ ಭಾರತ ಜಗತ್ತಿನ ಫುಡ್ ಬಾಸ್ಕೆಟ್ ಆಗಿ ಪರಿವರ್ತನೆ ಹೊಂದಿದೆ ಎಂದು ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಕುರಿತು ಎಎನ್ ಐ (ANI)ಸುದ್ದಿ ಸಂಸ್ಥೆ ಜೊತೆಗೆ ಮಾಹಿತಿ ಹಂಚಿಕೊಂಡ ವಾಣಿಜ್ಯ ಸಚಿವಾಲಯದ ಅಧಿಕಾರಿಗಳು, ಈ ಮೊದಲು 2013-14 ಸಾಲಿನಲ್ಲಿ 43 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ರಫ್ತು ಅತ್ಯಧಿಕ ಮಟ್ಟದ ದಾಖಲೆಯಾಗಿತ್ತು. ಆ ಬಳಿಕ ರಫ್ತಿನಲ್ಲಿ ಇಳಿಕೆ ದಾಖಲಾಯಿತು. 2016-17ನೇ ಸಾಲಿನಲ್ಲಿ ರಫ್ತಿನಲ್ಲಿ 10 ಬಿಲಿಯನ್ ಡಾಲರ್ ಇಳಿಕೆ ಕಂಡುಬಂದಿದೆ. ಆ ಬಳಿಕ ವಾಣಿಜ್ಯ ಇಲಾಖೆ ಕೃಷಿ ರಫ್ತಿನಲ್ಲಿ ಇಳಿಕೆಗೆ ನಾಲ್ಕು ಪ್ರಮುಖ ಕಾರಣಗಳನ್ನು ಗುರುತಿಸಿತು ಎಂದು ತಿಳಿಸಿದ್ದಾರೆ.

Tap to resize

Latest Videos

ವಿಶ್ವದ ಟಾಪ್-5 ಶ್ರೀಮಂತರಲ್ಲಿ ಗೌತಮ್ ಅದಾನಿ, ಈ ಬಿಲಿಯನೇರ್‌ ಕೂಡಾ ರೇಸ್‌ನಲ್ಲಿ ಹಿಂದೆ!

'ಮೊದಲನೆಯದಾಗಿ ಕೃಷಿ  ಉತ್ಪನ್ನಗಳ ಉತ್ಪಾದನೆ ಹಾಗೂ ರಫ್ತಿನ ನಡುವೆ ಸಂಪರ್ಕವಿರಲಿಲ್ಲ. ಎರಡನೆಯದಾಗಿ ರಾಜ್ಯ ಸರ್ಕಾರ ಹಾಗೂ ಕೃಷಿಕರು ರಫ್ತು ಆಧಾರಿತ ಉತ್ಪಾದನೆ ಪರಿಕಲ್ಪನೆ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿರಲಿಲ್ಲ' ಎಂದು ಅಧಿಕಾರಿಗಳು ಹೇಳಿದ್ದಾರೆ. ಇವೆಲ್ಲದರ ಜೊತೆಗೆ ರಾಜ್ಯ ಸರ್ಕಾರಗಳು ರಫ್ತು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವಿಚಾರ ಎಂದು ಭಾವಿಸಿ ಅದಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರಲಿಲ್ಲ. ಅಲ್ಲದೆ, ರಫ್ತು ಆಧಾರಿತ ಮೂಲಸೌಕರ್ಯ ರಾಜ್ಯ ಸರ್ಕಾರಗಳಿಗೆ ಈ ವಿಚಾರದಲ್ಲಿ ತಜ್ಞ ಅನುಭವದ ಕೊರತೆಯಿರುವುದು ಕೂಡ ಕೃಷಿ ರಫ್ತಿನ ಇಳಿಕೆಗೆ ಕಾರಣವಾಗಿದೆ ಎಂಬ ಅಂಶವನ್ನು ವಾಣಿಜ್ಯ ಇಲಾಖೆ ಪತ್ತೆ ಹಚ್ಚಿತು.

ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ವಾಣಿಜ್ಯ ಇಲಾಖೆ ಯೋಜನೆಯೊಂದನ್ನು ರೂಪಿಸಿತು. ಅಷ್ಟೇ ಅಲ್ಲ, ಮೊದಲ ಬಾರಿಗೆ ಕೇವಲ ರಾಜ್ಯಗಳನ್ನು ಮಾತ್ರವಲ್ಲ, ಜಿಲ್ಲೆ ಹಾಗೂ ಗ್ರಾಮ ಮಟ್ಟಗಳಲ್ಲಿ ಕೂಡ ರೈತರನ್ನು ತಲುಪುವ ಪ್ರಯತ್ನ ಮಾಡಿತು. 'ಭಾರತದಲ್ಲಿ ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ವಲಯಗಳು ಅತೀದೊಡ್ಡ ಜೀವನಾಧಾರದ ಮೂಲವಾಗಿವೆ. ಹೀಗಾಗಿ ಸರ್ಕಾರ ಈ ವಲಯಕ್ಕೆ ನೆರವು ನೀಡಲು ಬಯಸಿದ್ದು, ಹೆಚ್ಚುವರಿ ಕೃಷಿ ಉತ್ಪಾದನೆಯನ್ನು ಭಾರತ ಸರ್ಕಾರ ಬೇರೆ ರಾಷ್ಟ್ರಗಳಿಗೆ ರಫ್ತು ಮಾಡುತ್ತದೆ ಎಂಬ ಬಗ್ಗೆ ನಮ್ಮ ಅಧಿಕಾರಿಗಳು ಕೃಷಿಕರಿಗೆ ಮಾಹಿತಿ ನೀಡುವ ಜೊತೆಗೆ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದರು' ಎಂದು ವಾಣಿಜ್ಯ ಇಲಾಖೆ ಮಾಹಿತಿ ನೀಡಿದೆ.

ಕೋವಿಡ್ -19 ಜಾಗತಿಕ ಪೆಂಡಾಮಿಕ್ ಹೊರತಾಗಿಯೂ ಕೃಷಿ ವಲಯದ ರಫ್ತಿನಲ್ಲಿ ಹೆಚ್ಚಳ ಕಂಡುಬಂದಿದೆ. ಆಹಾರ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಿತ್ತು. ಆದ್ರೆ ಲಾಕ್ ಡೌನ್ ಕಾರಣದಿಂದ ಕಚೇರಿಗಳು ಹಾಗೂ ರಸ್ತೆಗಳನ್ನು ಮುಚ್ಚಿದ ಕಾರಣದಿಂದ ದೊಡ್ಡ ಸಮಸ್ಯೆಗಳು ಹುಟ್ಟಿಕೊಂಡಿದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೂ ವಿದೇಶಗಳಲ್ಲಿನ ಭಾರತೀಯ ಸಂಸ್ಥೆಗಳು ಹಾಗೂ ಖರೀದಿದಾರರು ಹಾಗೂ ಮಾರಾಟಗಾರರ ವರ್ಚುವಲ್ ಸಭೆಗಳ ಮೂಲಕ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Palm Oil Price: ಸೋಪು, ಶಾಂಪು, ಅಡುಗೆ ಎಣ್ಣೆ ಬೆಲೆ ಮತ್ತಷ್ಟು ದುಬಾರಿ

ಸರ್ಕಾರದ ಪ್ರಯತ್ನದ ಫಲವಾಗಿ 2021-22ನೇ ಸಾಲಿನಲ್ಲಿ ಭಾರತ  ಸುಮಾರು 10 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಅಕ್ಕಿ ರಫ್ತು ಮಾಡಿದೆ. ಇದು ಜಗತ್ತಿನ ಒಟ್ಟು ಅಕ್ಕಿ ರಫ್ತಿನ ಶೇ.50ರಷ್ಟು ಪ್ರಮಾಣ. ಇನ್ನು ದಾಖಲೆಯ ಪ್ರಮಾಣದ ಕಡಲೊತ್ಪನ್ನಗಳನ್ನು ಕೂಡ ರಫ್ತು ಮಾಡಲಾಗಿದೆ. ಒಟ್ಟು 8 ಬಿಲಿಯನ್ ಅಮೆರಿಕನ್ ಡಾಲರ್ ಕಡಲೊತ್ಪನ್ನಗಳನ್ನು ರಫ್ತು ಮಾಡಲಾಗಿದೆ. 4.5 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಸಕ್ಕರೆ, 4 ಬಿಲಿಯನ್ ಅಮೆರಿಕನ್ ಡಾಲರ್ ಸಾಂಬಾರ್ ಪದಾರ್ಥಗಳು ಹಾಗೂ 3 ಬಿಲಿಯನ್ ಅಮೆರಿಕನ್ ಡಾಲರ್  ಮೌಲ್ಯದ ಹತ್ತಿಯನ್ನು ರಫ್ತು ಮಾಡಲಾಗಿದೆ. 


 

click me!