2024ರಲ್ಲಿ ಸ್ವಿಗ್ಗಿ 8 ಕೋಟಿಗೂ ಹೆಚ್ಚು ಆರ್ಡರ್‌ಗಳನ್ನು ಪೂರೈಸಿದ್ದು, ಒಬ್ಬ ಗ್ರಾಹಕ 3 ಲಕ್ಷ ರೂ. ಮೌಲ್ಯದ ಒಂದೇ ಆರ್ಡರ್ ಮಾಡಿದ್ದಾರೆ. ಬಿರಿಯಾನಿ ಅತ್ಯಧಿಕ ಆರ್ಡರ್ ಆಗಿರುವ ಆಹಾರವಾಗಿದ್ದು, ದೋಸೆ ಬೆಳಗಿನ ಉಪಾಹಾರದಲ್ಲಿ ಮೊದಲ ಸ್ಥಾನ ಪಡೆದಿದೆ.
ಮುಂಬೈ: ಇಂದು ಯಾವುದೇ ವಸ್ತು ಬೇಕಾದ್ರೂ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ರೆ ಮನೆ ಬಾಗಿಲಿಗೆ ಬರುತ್ತದೆ. ಇಂತಹುವುದೇ ಒಂದು ವೇದಿಕೆ ಸ್ವಿಗ್ಗಿ. ಆಹಾರ ಜೊತೆ ದಿನಬಳಕೆ ಸಾಮಾಗ್ರಿಗಳನ್ನು ಸ್ವಿಗ್ಗಿ ಪೂರೈಸುವ ಕೆಲಸ ಮಾಡುತ್ತದೆ. 2024ರ ಸ್ವಿಗ್ಗಿ ವಾರ್ಷಿಕ ಅಂಕಿಅಂಶಗಳು ಬಹಿರಂಗಗೊಂಡಿದ್ದು, ಮುಂಬೈ ಮೂಲದ ವ್ಯಕ್ತಿಯೋರ್ವ 3 ಲಕ್ಷ ರೂಪಾಯಿ ಮೌಲ್ಯದ ಒಂದೇ ಆರ್ಡರ್ ಮಾಡಿದ್ದಾರೆ. ಇದು 2024ರ ಅತ್ಯಧಿಕ ಬಿಲ್ ಆಗಿದೆ. ಬೆಂಗಳೂರಿನ ಪಾಸ್ತಾಯಿಂದ ಹಿಡಿದು ದೆಹಲಿಯ ಚೋಲೆ ಬಟೋರೆವರೆಗೂ ಅನೇಕ ಜನರು ಸ್ವಿಗ್ಗಿಯಲ್ಲಿ ತಮ್ಮಿಷ್ಟದ ಆಹಾರ ತರಿಸಿಕೊಂಡು ಸವಿದಿದ್ದಾರೆ.
ಸ್ವಿಗ್ಗಿಯ ಅಂಕಿಅಂಶಗಳ ಪ್ರಕಾರ, ಬೆಂಗಳೂರಿನ ವ್ಯಕ್ತಿಯೊಬ್ಬರು 49,900 ರೂಪಾಯಿ ಮೌಲ್ಯದ ಪಾಸ್ತಾ ಆರ್ಡರ್ ಮಾಡಿದ್ದಾರೆ. ದೆಹಲಿಯ ಜನರು ಅತ್ಯಧಿಕವಾಗಿ ಚೋಲೆ ಬಟೂರೆ ಆರ್ಡರ್ ಮಾಡಿದ್ದಾರೆ. ಈ ವರ್ಷ ಬಿರಿಯಾನಿ ಅತ್ಯಧಿಕ ಆರ್ಡರ್ ಆಗಿರುವ ಆಹಾರವಾಗಿದ್ದು, ಮೊದಲ ಸ್ಥಾನದಲ್ಲಿದೆ. ಒಟ್ಟು 83 ಮಿಲಿಯನ್ ಬಿರಿಯಾನ್ ಆರ್ಡರ್ ಮಾಡಲಾಗಿದ್ದು, ಇದು ಪ್ರತಿ ಸೆಕೆಂಡ್‌ಗೆ 2 ಆಗಿದೆ, ಭಾರತದ ಜನರು ಅತ್ಯಧಿಕವಾಗಿ ಬಿರಿಯಾನಿ ಆರ್ಡರ್ ಮಾಡಿರೋದು ಕಂಡು ಬಂದಿದೆ. ಬೆಳಗಿನ ಉಪಹಾರದ ಪಟ್ಟಿಯಲ್ಲಿ ದೋಸೆ ಮೊದಲ ಸ್ಥಾನ ಪಡೆದುಕೊಂಡಿದ್ದು, 1 ವರ್ಷದಲ್ಲಿ 23 ಮಿಲಿಯನ್ ಆರ್ಡರ್ ಆಗಿವೆ.
undefined
ಇನ್ನು ಡಿಸರ್ಟ್ ವಿಷಯದಲ್ಲಿ ರಸ್ಮಲಾಯಿ ಮತ್ತು ಸೀತಾಫಲ ಐಸ್ ಕ್ರೀಂನ್ನು ಅತ್ಯಧಿಕವಾಗಿ ಆರ್ಡರ್ ಮಾಡಲಾಗಿದ್ದು, 10 ನಿಮಿಷ ಅವಧಿಯಲ್ಲಿಯೇ ಗ್ರಾಹಕರಿಗೆ ತಲುಪಿಸಲಾಗಿದೆ. ಜನರು ಮಧ್ಯಾಹ್ನದ ಊಟಕ್ಕಿಂತ ರಾತ್ರಿಯ ಊಟವನ್ನು ಹೆಚ್ಚು ಆರ್ಡರ್ ಮಾಡಿದ್ದಾರೆ. 215 ಮಿಲಿಯನ್ ಡಿನ್ನರ್ ಮೀಲ್ ಆರ್ಡರ್ ಆಗಿದ್ದು, ಇದು ಲಂಚ್ ಮೀಲ್‌ಗಿಂತ ಶೇ.29ರಷ್ಟು ಅಧಿಕವಾಗಿದೆ.
ಇದನ್ನೂ ಓದಿ: ಸ್ನೇಹಿತರೆಲ್ಲಾ ವಿದೇಶಕ್ಕೆ ಹೋದ್ರೆ, ಊರಲ್ಲಿದ್ದುಕೊಂಡೇ ವರ್ಷಕ್ಕೆ ₹2.5 ಕೋಟಿ ಗಳಿಸುತ್ತಿರೋ 34ರ ಯುವಕ
ಇಷ್ಟು ಮಾತ್ರವಲ್ಲ ಸ್ವಿಗ್ಗಿ ಕೆಲವು ವಿಶೇಷ ಆರ್ಡರ್‌ಗಳನ್ನು ಸ್ವೀಕರಿಸಿದೆ. ದೆಹಲಿ ಗ್ರಾಹಕರೊಬ್ಬರು ಒಂದೇ ಆರ್ಡರ್‌ನಲ್ಲಿ 250 ಆನಿಯನ್ ಪಿಜ್ಜಾ, ಮತ್ತೊಬ್ಬರು 1.22 ಲಕ್ಷ ರೂಪಾಯಿ ಹಣವನ್ನು ಒಂದೇ ಆರ್ಡರ್‌ನಲ್ಲಿ ಉಳಿಸಿದ್ದಾರೆ. ಇನ್ನು ಸ್ನ್ಯಾಕ್ಸ್ ನಲ್ಲಿ ಚಿಕನ್ ರೋಲ್ಸ್ 2.48 ಮಿಲಿಯನ್, ಚಿಕನ್ ಬರ್ಗರ್ 1.84 ಮಿಲಿಯನ್ ಬಾರಿ ಆರ್ಡರ್ ಮಾಡಲಾಗಿದೆ.
ಯಾವ ನಗರದಲ್ಲಿ ಹೆಚ್ಚು ಆರ್ಡರ್ ಆಗಿದ್ದೇನು?
ದೆಹಲಿ: ಚೋಲೆ ಬಟೂರೆ
ಚಂಡೀಗಢ: ಆಲೂ ಪರಾಟಾ
ಕೋಲ್ಕತ್ತಾ: ಕಚೋರಿ
ಬೆಂಗಳೂರು: ಮದ್ಯ (2,89,000 ಆರ್ಡರ್)
ದೆಹಲಿ: ಮದ್ಯ(96,000 ಆರ್ಡರ್)
ಇದನ್ನೂ ಓದಿ: 70 ಗಂಟೆ ಕೆಲ್ಸ ನಿಮ್ಗೆ ಕೋಟಿ ರೂ ಕೊಡುತ್ತೆ, ಉದ್ಯೋಗಿ ಕತೆ ಏನು?ಮೂರ್ತಿಗೆ ನಮಿತಾ ಥಾಪರ್ ಪ್ರಶ್ನೆ!