ಕಾರ್‌ ದೈತ್ಯ ಟೋಯೋಟಾ ಬಿಗ್‌ ಪ್ಲ್ಯಾನ್‌, ದೇಶದ ಮೊಟ್ಟಮೊದಲ R&D ಕೇಂದ್ರ ಬೆಂಗಳೂರಿನಲ್ಲಿ ಸ್ಥಾಪನೆ!

ಟೊಯೋಟಾ ಮೋಟಾರ್ ಕಾರ್ಪೋರೇಷನ್ ಭಾರತದಲ್ಲಿ ತನ್ನ ಮೊದಲ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸುತ್ತಿದೆ. ಇದು ಭಾರತದಲ್ಲಿ ಟೊಯೋಟಾದ ಮೊದಲ ಆರ್‌ & ಡಿ ಘಟಕವಾಗಿದ್ದು, 2027ರ ವೇಳೆಗೆ ಇಂಜಿನಿಯರ್‌ಗಳ ಸಂಖ್ಯೆಯನ್ನು 1 ಸಾವಿರಕ್ಕೆ ಏರಿಕೆ ಮಾಡುವ ಗುರಿಯನ್ನು ಹೊಂದಿದೆ.

Toyota Motor Corporation RnD Center in Bengaluru san

ಬೆಂಗಳೂರು (ಮಾ.22): ವಿಶ್ವದ ಅತ್ಯಂತ ದೈತ್ಯ ಕಾರ್‌ ಕಂಪನಿ ಟೊಯೋಟಾ ಮೋಟಾರ್ ಕಾರ್ಪೋರೇಷನ್‌ ತನ್ನ ಸ್ಥಳೀಯ ಘಟಕದ ಮೂಲಕ ಭಾರತದಲ್ಲಿ ತನ್ನ ಮೊದಲ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸುತ್ತಿದೆ ಎಂದು ವರದಿಯಾಗಿದೆ. ಇದು ಭಾರತದಲ್ಲಿ ಟೋಯೋಟಾದ ಮೊದಲ ಆರ್‌ & ಡಿ ಘಟಕವಾಗಿದ್ದು, ಈ ಘಟಕ ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿರುವುದು ವಿಶೇಷವಾಗಿದೆ.  ಹೊಸ ಸಂಶೋಧನೆ ಮತ್ತು ಅಭಿವೃದ್ಧಿ ಘಟಕವು ಬೆಂಗಳೂರಿನ ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈ.ಲಿ.ನ ಅಸ್ತಿತ್ವದಲ್ಲಿರುವ ಕಾರ್ಖಾನೆಯ ಬಳಿ ಸುಮಾರು 200 ಜನ ಇಂಜಿನಿಯರ್‌ ತಂಡದೊಂದಿಗೆ ಕಾರ್ಯಾಚರಣೆ ಆರಂಭ ಮಾಡಲಿದೆ ಎನ್ನಲಾಗಿದೆ.

2027ರ ವೇಳೆಗೆ ಈ ಘಟಕದಲ್ಲಿ ಇಂಜಿನಿಯರ್‌ಗಳ ಸಂಖ್ಯೆಯನ್ನು 1 ಸಾವಿರಕ್ಕೆ ಏರಿಕೆ ಮಾಡುವ ಪ್ಲ್ಯಾನ್‌ಅನ್ನು ಹೊಂದಿದೆ. ಭಾರತದಲ್ಲಿ ಮಾರುತಿ ಸುಜುಕಿ ಕಂಪನಿಯ ಪ್ರಾಬಲ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಾಗೂ ಇವಿ ಮಾರುಕಟ್ಟೆಯಲ್ಲಿ ಪ್ರಬಲವಾಗಿ ಮುಂದುವರಿಯುವ ಭಾಗವಾಗಿ ಟೋಯೋಟಾ ಈ ನಿರ್ಧಾರ ಮಾಡಲಿದೆ ಎನ್ನಲಾಗಿದೆ.

Latest Videos

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರತಿನಿಧಿಗಳು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಟೊಯೋಟಾ ಕಂಪನಿ ಕೂಡ ಈ ಬಗ್ಗೆ ಏನನ್ನೂ ಹೇಳಿಲ್ಲ. ಕಳೆದ ವರ್ಷ ಟೊಯೋಟಾ ಭಾರತವನ್ನು ಮಧ್ಯಪ್ರಾಚ್ಯ, ಪೂರ್ವ ಏಷ್ಯಾ ಮತ್ತು ಓಷಿಯಾನಿಯಾ ಪ್ರದೇಶದಾದ್ಯಂತ ತನ್ನ ಕಾರ್ಯಾಚರಣೆಗಳ ಕೇಂದ್ರವನ್ನಾಗಿ ಮರುಸಂಘಟಿಸಿದ ನಂತರ ಈ ಸಂಶೋಧನಾ ಘಟಕವನ್ನಾಗಿ ಘೋಷಣೆ ಮಾಡಿದೆ . ಭಾರತವನ್ನು ಸ್ವಚ್ಛ ಮತ್ತು ಹಸಿರು ತಂತ್ರಜ್ಞಾನಗಳ ಜಾಗತಿಕ ಕೇಂದ್ರವಾಗಿ ಗುರುತಿಸಲು ಕಂಪನಿಯು ಆದ್ಯತೆಯ ಹೂಡಿಕೆಗಳ ಸರಣಿಯನ್ನು ಘೋಷಿಸಿದೆ.

1.2 ಕೋಟಿ ರೂ ಮೌಲ್ಯದ ಕಾರು ಖರೀದಿಗೆ ಮುಂದಾದ ಸಿದ್ದರಾಮಯ್ಯ, ಇದರ ವಿಶೇಷತೆ ಏನು?

ಟೊಯೋಟಾ ಭಾರತದಲ್ಲಿ ಪ್ಲಗ್-ಇನ್ ವಾಹನಗಳ ಮಾರಾಟವನ್ನು ಇನ್ನೂ ಪ್ರಾರಂಭಿಸಿಲ್ಲ. ಇದು ಇಲ್ಲಿಯವರೆಗೆ ಗ್ಯಾಸೋಲಿನ್ ಮತ್ತು ಹೈಬ್ರಿಡ್ ಮಾದರಿಗಳನ್ನು ಅವಲಂಬಿಸಿದೆ ಮತ್ತು ವಿಶ್ವದ ಮೂರನೇ ಅತಿದೊಡ್ಡ ವಾಹನ ಮಾರುಕಟ್ಟೆಯಲ್ಲಿ ಮಾರಾಟವನ್ನು ಹೆಚ್ಚಿಸಲು ಸುಜುಕಿ ಮೋಟಾರ್ ಕಾರ್ಪ್ ಜೊತೆ ಪಾಲುದಾರಿಕೆಯನ್ನು ಹೊಂದಿದೆ. ಸುಜುಕಿ ಮೋಟಾರ್‌ನಲ್ಲಿ ಕಂಪನಿಯು 5.4% ಪಾಲನ್ನು ಹೊಂದಿದೆ.ಸುಮಾರು 3,000 ಎಂಜಿನಿಯರ್‌ಗಳನ್ನು ಹೊಂದಿರುವ ದೇಶದ ಅತಿದೊಡ್ಡ ಆಟೋ ಎಂಜಿನಿಯರಿಂಗ್ ಕೇಂದ್ರಗಳಲ್ಲಿ ಒಂದಾದ ರೋಹ್ಟಕ್‌ನಲ್ಲಿರುವ ಸುಜುಕಿಯ ಭಾರತೀಯ ಘಟಕದ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಾಚರಣೆಗಳನ್ನು ಟೊಯೋಟಾ ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಿದೆ ಎಂದು ತಿಳಿಸಲಾಗಿದೆ.

ಮುಂದಿನ ಕೆಲ ತಿಂಗಳಲ್ಲಿ ಬರಲಿರುವ ಭರ್ಜರಿ ಮೈಲೇಜ್‌ನ ಹೈಬ್ರಿಡ್‌ ಕಾರುಗಳು!

ಚೀನಾ ಮತ್ತು ಥೈಲ್ಯಾಂಡ್‌ನಲ್ಲಿ ಇದೇ ರೀತಿಯ ಹೂಡಿಕೆಗಳನ್ನು ಅನುಸರಿಸಿ, ಜಪಾನ್‌ನ ಹೊರಗೆ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಟೊಯೋಟಾದ ಮೂರನೇ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಳವಾಗಿ ಭಾರತದ ಸಂಶೋಧನಾ ಕೇಂದ್ರವು ರೂಪುಗೊಳ್ಳಲಿದೆ. ಆರಂಭದಲ್ಲಿ ಇದು ಭಾರತೀಯ ಮಾರುಕಟ್ಟೆಯನ್ನು ಪೂರೈಸುತ್ತದೆಯಾದರೂ, ನಂತರ 9,000 ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿರುವ ಮರ್ಸಿಡಿಸ್-ಬೆನ್ಜ್‌ನ ಬೆಂಗಳೂರು ಕೇಂದ್ರದಂತೆ ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾಗಿ ವಿಕಸನಗೊಳ್ಳುವ ಸಾಧ್ಯತೆ ಇದೆ.
 

vuukle one pixel image
click me!