Elon Musk: ಟ್ವಿಟರ್‌ಗೆ ಎಲಾನ್ ಮಸ್ಕ್‌ ಬಾಸ್‌: ಪರಾಗ್‌ ಅಗರವಾಲ್‌ ಸೇರಿ ಹಲವು ಉನ್ನತ ಅಧಿಕಾರಿಗಳು ವಜಾ?

By Manjunath Nayak  |  First Published Oct 28, 2022, 10:17 AM IST

Elon Musk Takes Over Twitter: ಟ್ವೀಟರ್‌ ನಿಯಂತ್ರಣ ತೆಗೆದುಕೊಂಡ ಬಳಿಕ ಎಲಾನ್‌ ಕಂಪನಿಯ ಟ್ವೀಟರ್‌ ಸಿಐಓ ಭಾರತೀಯ ಪರಾಗ್‌ ಅಗರವಾಲ್‌ ಸೇರಿದಂತೆ ಉನ್ನತ ಕಾರ್ಯನಿರ್ವಾಹಕರನ್ನು ವಜಾಗೊಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.   


ನ್ಯೂಯಾರ್ಕ್ (ಅ. 28): ಸಾಮಾಜಿಕ ಮಾಧ್ಯಮ ಟ್ವಿಟರನ್ನು (Twitter) 44 ಶತಕೋಟಿ ಡಾಲರ್‌ಗೆ (₹3.62 ಲಕ್ಷ ಕೋಟಿ)ಗೆ ಖರೀದಿಸುವ ಪ್ರಕ್ರಿಯೆಯನ್ನು ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ (Elon Musk) ಪೂರ್ಣಗೊಳಿಸಿದ್ದಾರೆ. ಟ್ವೀಟರ್‌ ನಿಯಂತ್ರಣ ತೆಗೆದುಕೊಂಡ ಬಳಿಕ ಎಲಾನ್‌ ಟ್ವೀಟರ್‌ ಸಿಐಓ, ಭಾರತೀಯ ಪರಾಗ್‌ ಅಗರವಾಲ್‌ (Parag Agrawal) ಸೇರಿದಂತೆ ಉನ್ನತ ಕಾರ್ಯನಿರ್ವಾಹಕರನ್ನು ವಜಾಗೊಳಿಸಿದ್ದಾರೆ ಎಂದು ಯುಎಸ್ ಮಾಧ್ಯಮಗಳು ವರದಿ ಮಾಡಿದೆ. ಮಸ್ಕ್ ಮುಖ್ಯ ಕಾರ್ಯನಿರ್ವಾಹಕ ಪರಾಗ್ ಅಗರವಾಲ್, ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಮತ್ತು ಕಾನೂನು ನೀತಿ, ಟ್ರಸ್ಟ್ ಮತ್ತು ಸುರಕ್ಷತೆಯ ಮುಖ್ಯಸ್ಥರನ್ನು ವಜಾಗೊಳಿಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ಮತ್ತು CNBC ವರದಿ ಮಾಡಿವೆ. ಟ್ವೀಟರ್‌ ಜತೆಗಿನ ಒಪ್ಪಂದಿಂದ ಹಿಂದೆ ಸರಿಯುವ ಮಸ್ಕ್‌ ನಿರ್ಧಾರದ ಬಗ್ಗೆ ಟ್ವೀಟರ್‌ ಸಿಐಓ ಪರಾಗ್‌ ಅಗರ್‌ವಾಲ್ ಕಾನೂನು ಸಮರಕ್ಕೆ ಮುಂದಾಗಿದ್ದರು. 

ತಾವು ಕಂಪನಿಯ ಮಾಲೀಕರಾಗುತ್ತಲೇ ಕಂಪನಿಯಲ್ಲಿನ ಶೇ.75ರಷ್ಟು ಸಿಬ್ಬಂದಿಗಳನ್ನು ಮನೆಗೆ ಕಳುಹಿಸಲು ನಿರ್ಧರಿಸಿರುವುದಾಗಿ ಎಲಾನ್‌ ಮಸ್ಕ್‌ ಈ ಹಿಂದೆ ಸುಳಿವು ನೀಡಿದ್ದರು.  ಕಂಪನಿಯಲ್ಲಿನ ಸುಮಾರು 7500 ಸಿಬ್ಬಂದಿ ಪೈಕಿ ಶೇ.75ರಷ್ಟುಸಿಬ್ಬಂದಿಯನ್ನು ತೆಗೆದು ಹಾಕಲು ಮಸ್ಕ್‌ ಯೋಜಿಸಿದ್ದಾರೆ ಎಂದು ವರದಿಗಳು ತಿಳಿಸಿದ್ದವು. ಆದರೆ ಶೇ.75 ಸಿಬ್ಬಂದಿಗಳನ್ನು ವಜಾ ಮಾಡುವುದಿಲ್ಲ ಎಂದು ಎಲಾನ್‌ ಮಸ್ಕ್‌ ತಿಳಿಸಿದ್ದಾರೆ.  

Tap to resize

Latest Videos

 

ಸಿಂಕ್‌ ಹಿಡಿದು ಟ್ವಿಟ್ಟರ್‌ ಕಚೇರಿಗೆ ಭೇಟಿ ನೀಡಿದ Elon Musk..!

ಗುರುವಾರ ಟ್ವೀಟರ್‌ ಖರೀದಿಸುವ ಬಗ್ಗೆ ಎಲಾನ್‌ ಮಸ್ಕ್‌ ಟ್ವೀಟ್‌ ಮಾಡಿದ್ದು ಟ್ವಿಟರ್ ಪ್ರಧಾನ ಕಚೇರಿಯಲ್ಲಿ ಕಾಫಿ ಬಾರ್‌ನಲ್ಲಿನ ಪೋಟೋ ಸಹ ಹಂಚಿಕೊಂಡಿದ್ದಾರೆ. ಟ್ವೀಟರ್‌ ಜತೆಗಿನ ಎಲಾನ್‌ ಮಸ್ಕ್‌ 44 ಶತಕೋಟಿ ಡಾಲರ್‌  ಒಪ್ಪಂದವು ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು.  ಟ್ವೀಟರ್‌ ಖರೀದಿಯಿಂದ ಹಿಂದೆ ಸರಿದು ಕಾನೂನು ಸಮರ ಎದುರಿಸುತ್ತಿದ್ದ ಮಸ್ಕ್‌ ಟ್ವೀಟರ್‌ ಒಪ್ಪಂದ ನಡೆಯದಿದ್ದರೆ ತಮ್ಮದೇ ಆದ ಹೊಸ ಸಾಮಾಜಿಕ ಮಾಧ್ಯಮ ಎಕ್ಸ್‌ಡಾಟ್‌ಕಾಂ ಶುರು ಮಾಡುವ ಸುಳಿವೂ ನೀಡಿದ್ದರು.  

 

At Twitter headquarters’ coffee bar, ⁦⁩ pic.twitter.com/vy5Cw7zttf

— Walter Isaacson (@WalterIsaacson)

 

ಟ್ವೀಟರ್‌ ಖರೀದಿಗೆ ನಿರ್ಧಾರ: ಈ ಎಲ್ಲ ವಿವಾದಗಳ ನಡುವೆ ಎಲಾನ್‌ ಮಸ್ಕ್‌ ಟ್ವೀಟರ್‌ ಜತೆಗಿನ ಒಪ್ಪಂದವನ್ನು ಕೈಬಿಡುತ್ತಾರೆ ಎಂಬ ವರದಿಗಳು ಬಂದಿದ್ದವು. ಟ್ವೀಟರ್‌ ಸ್ಪ್ಯಾಮ್‌ ಖಾತೆಗಳ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದ್ದ ಮಸ್ಕ್‌ ಒಪ್ಪಂದ ಮುರಿದುಕೊಳ್ಳುವ ಘೋಷಣೆ ಮಾಡಿದ್ದರು. ಹೀಗಾಗಿ ಮಸ್ಕ್‌ ವಿರುದ್ಧ ಟ್ವೀಟರ್‌ ಕಂಪನಿ ಕೋರ್ಟ್ ಮೊರೆ ಹೋಗಿತ್ತು. 

ಆದರೆ  ಏಪ್ರಿಲ್ 4 ರಂದು  ಮಸ್ಕ್ ​​​​ಕಂಪನಿಯಲ್ಲಿ 9.2% ಪಾಲು ಹೊಂದಿರುವುದಾಗಿ ಬಹಿರಂಗಪಡಿಸಿದ್ದರು. ಈ ಮೂಲಕ ಮಸ್ಕ್‌ ಟ್ವೀಟರ್‌ನನ ಅತಿದೊಡ್ಡ ಷೇರುದಾರಾಗಿದ್ದರು. ಟ್ವೀಟರ್‌ ಖರೀದಿಗೆ ಮುಂದಾಗಿದ್ದ ಉದ್ಯಮಿ ಎಲಾನ್‌ ಮಸ್ಕ್‌ ಆಫರ್‌ಗೆ ಕಂಪನಿಯ ಷೇರುದಾರರು ಅಂಗೀಕಾರ ನೀಡಿದ್ದರು. 

click me!