ಫ್ಲಿಪ್‌ಕಾರ್ಟ್‌ನ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಹ್ಯಾವೆಲ್ಸ್, ಓರಿಯಂಟ್ ಮತ್ತು ಸ್ಯಾನ್‌ಸುಯಿ ಕಂಪನಿಗಳ ಗೀಸರ್‌ಗಳು ಅರ್ಧ ಬೆಲೆಗೆ ಲಭ್ಯ. ಈ ಸೇಲ್‌ನಲ್ಲಿ ಗ್ರಾಹಕರಿಗೆ ಹೆಚ್ಚುವರಿ ರಿಯಾಯಿತಿಗಳು ಮತ್ತು EMI ಆಯ್ಕೆಗಳೂ ಇವೆ.
ನವದೆಹಲಿ: ಆನ್‌ಲೈನ್ ಮಾರುಕಟ್ಟೆಯಾಗಿರುವ ಫ್ಲಾಟ್‌ಫಾರಂನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ ( Big Saving Days Sale ) ನಡೆಯುತ್ತಿದೆ. ಈ ಸೇಲ್‌ನಲ್ಲಿ ಮನೆಗೆ ಬೇಕಾಗಿರುವ ಇಲೆಕ್ಟ್ರಾನಿಕ್ಸ್ ಉಪಕರಣಗಳ ಮೇಲೆ ಭರ್ಜರಿ ಡಿಸ್ಕೌಂಟ್ ಆರಂಭವಾಗಿದೆ. ಈ ಸಮಯದಲ್ಲಿ
ಮನೆಗೆ ಬೇಕಾಗುವ ಗೀಸರ್ ಬೆಲೆ ಮೇಲೆಯೂ ಹೆಚ್ಚು ರಿಯಾಯ್ತಿಯನ್ನು ನೀಡಲಾಗುತ್ತಿದೆ. ಹೌದು, ಅರ್ಧ ಬೆಲೆಗೆ ದುಬಾರಿಯ ಗೀಸರ್‌ಗಳು ಮಾರಾಟಕ್ಕಿವೆ. ಚಳಿಗಾಲ ಇರೋದರಿಂದ ಜನರು ಗೀಸರ್ ಖರೀದಿಸೋದು ಸಾಮಾನ್ಯ. ಹಾಗಾಗಿ ಗೀಸರ್ ಬೆಲೆಗಳ ಮೇಲೆ ರಿಯಾಯ್ತಿ ಘೋಷಿಸಲಾಗಿದೆ. ನೀವೆನಾದ್ರೂ ಗೀಸರ್ ಖರೀದಿ ಬಗ್ಗೆ ಯೋಚಿಸುತ್ತಿದ್ದರೆ ಇದು ಸರಿಯಾದ ಸಮಯ ಎಂದು ಹೇಳಬಹುದು.
ಆಫರ್ ಮುಗಿಯುವ ಮುನ್ನವೇ ಮನೆಗೆ ಬೇಕಾಗಿರುವ ವಸ್ತುಗಳನ್ನು Big Saving Days Saleನಲ್ಲಿ ಖರೀದಿಸಬಹುದು. ಅರ್ಧ ಬೆಲೆಗೆ ಸಿಗುತ್ತಿರುವ ಮೂರು ಗೀಸರ್‌ಗಳ ಮಾಹಿತಿ ಇಲ್ಲಿದೆ.
undefined
1.HAVELLS 10 L Storage Water Geyser
ಹ್ಯಾವೆಲ್ಸ್ ಕಂಪನಿಯ 10 ಲೀಟರ್ ಸಾಮರ್ಥ್ಯದ ಗೀಸರ್ ಕಡಿಮೆ ಬೆಲೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಸಿಗುತ್ತಿದೆ. ಹ್ಯಾವೆಲ್ಸ್ ಗೀಸರ್ ಮೂಲ ಬೆಲೆ 14,290 ರೂಪಾಯಿ ಆಗಿದೆ. ಆದರೆ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಕೇವಲ 6,999 ರೂಪಾಯಿಗೆ ಸಿಗುತ್ತಿದೆ. ಗ್ರಾಹಕರು Axis Bank Credit Card ಬಳಸಿ ಖರೀದಿಸಿದ್ರೆ ಹೆಚ್ಚುವರಿಯಾಗಿ 1,250 ರೂಪಾಯಿ ರಿಯಾಯ್ತಿಸಿಗಲಿದೆ. ಇಷ್ಟು ಮಾತ್ರವಲ್ಲ ಗೀಸರ್ ಮೇಲೆ 1,790 ರೂಪಾಯಿವರೆಗೆ ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದೆ.
ಇದನ್ನೂ ಓದಿ: ತಿಂಗಳಿಗೆ 10 ಸಾವಿರ ಗಳಿಸುತ್ತಿದ್ದವನ ಖಾತೆಯಲ್ಲಿ 2 ಕೋಟಿ ರೂಪಾಯಿ; ಇದು ನಿಮ್ಮ ಸುತ್ತಮುತ್ತವೇ ಇರೋ ಬ್ಯುಸಿನೆಸ್?
2.Orient Electric 25 L Storage Water Geyser
ಓರಿಯಂಟ್ ಕಂಪನಿಯ 25 ಲೀಟರ್ ಸಾಮರ್ಥ್ಯದ ಗೀಸರ್ ಸಹ ಅರ್ಧ ಬೆಲೆಗೆ ಮಾರಾಟವಾಗುತ್ತಿದೆ. ದೊಡ್ಡ ಕುಟುಂಬ ನಿಮ್ಮದಾಗಿದ್ರೆ ಈ ಗೀಸರ್ ನಿಮಗೆ ಒಳ್ಳೆಯ ಆಯ್ಕೆಯಾಗಲಿದ್ದು, ಇದರ ಮೂಲ ಬೆಲೆಯ ಮೇಲೆ ಶೇ.51ರಷ್ಟು ಡಿಸ್ಕೌಂಟ್ ನೀಡಲಾಗುತ್ತಿದೆ. ಅಂದ್ರೆ ಲಾಂಚ್ ಪ್ರೈಸ್‌ನ ಅರ್ಧದಷ್ಟು ಬೆಲೆಗೆ ಒರಿಯಂಟ್ ಎಲೆಕ್ಟ್ರಿಕ್ ಗೀಸರ್ ಸಿಗುತ್ತಿವೆ. ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ 6,499 ರೂಪಾಯಿಗೆ ಲಭ್ಯವಿದ್ದು, Axis Bank Credit Card ಬಳಕೆ ಮೇಲೆ ಹೆಚ್ಚುವರಿಗೆ 1,250 ರೂಪಾಯಿ ರಿಯಾಯ್ತಿ ಸಿಗುತ್ತಿದೆ.
3.Sansui 25 L Storage Water Geyser
ಸ್ಯಾನ್‌ಸುಯಿಯ 25 ಲೀಟರ್ ಸಾಮರ್ಥ್ಯದ ಗೀಸರ್ ಮೇಲೆಯೂ ಭಾರೀ ರಿಯಾಯ್ತಿ ಲಭ್ಯವಿದೆ. Sansui ಗೀಸರ್ ಮೇಲೆ ಶೇ.52ರಷ್ಟು ಡಿಸ್ಕೌಂಟ್ ನೀಡಲಾಗುತ್ತಿದ್ದು, ಗ್ರಾಹಕರಿಗೆ 4,799 ರೂಪಾಯಿಗೆ ಲಭ್ಯವಿದೆ. Axis Bank Credit Card ಬಳಕೆ ಮೇಲೆ ಹೆಚ್ಚುವರಿಯಾಗಿ 1,250 ರೂಪಾಯಿ ರಿಯಾಯ್ತಿ ಸಿಗುತ್ತದೆ. ಇಷ್ಟು ಮಾತ್ರವಲ್ಲ ಇದರ ಮೇಲೆ 36 ಕಂತುಗಳ EMI ಪ್ಲಾನ್‌ನಲ್ಲಿ ಖರೀದಿಸಬಹುದು. ಕೇವಲ 169 ರೂಪಾಯಿಯಲ್ಲಿ ಈ ಗೀಸರ್ ಮನೆಗೆ ತೆಗೆದುಕೊಂಡು ಹೋಗಬಹುದು.
ಇದನ್ನೂ ಓದಿ: 2025ಕ್ಕೆ ಕಡಿಮೆ ಬಂಡವಾಳದ 10 ಬ್ಯುಸಿನೆಸ್ ಐಡಿಯಾಗಳು: ಪ್ರತಿದಿನ ಎಣಿಸಬಹುದು ಹಣ