ಭಾರತಕ್ಕಿಂತ ಕಡಿಮೆ ಬೆಲೆಗೆ ಬೆಳ್ಳಿ ಮಾರಾಟ ಮಾಡುವ ಟಾಪ್-10 ದೇಶಗಳಿವು!

Published : Feb 28, 2025, 03:40 PM ISTUpdated : Feb 28, 2025, 03:42 PM IST
ಭಾರತಕ್ಕಿಂತ ಕಡಿಮೆ ಬೆಲೆಗೆ ಬೆಳ್ಳಿ ಮಾರಾಟ ಮಾಡುವ ಟಾಪ್-10 ದೇಶಗಳಿವು!

ಸಾರಾಂಶ

ಬಂಗಾರ, ಬೆಳ್ಳಿ ಖರೀದಿಯಲ್ಲಿ ಭಾರತ ಎಷ್ಟೇ ಮುಂದಿದ್ದರೂ, ಭಾರತಕ್ಕಿಂತ ಅತಿ ಕಡಿಮೆ ಬೆಲೆಗೆ ಬೆಳ್ಳಿ ಮಾರಾಟ ಮಾಡುವ ಟಾಪ್-10 ದೇಶಗಳ ಪಟ್ಟಿ ಇಲ್ಲಿದೆ. ಕೆಲವರು ಬೆಳ್ಳಿ ಖರೀದಿ ಮಾಡಲೆಂದೇ ಈ ದೇಶಕ್ಕೆ ಹೋಗುತ್ತಾರೆ.

ಬಂಗಾರ, ಬೆಳ್ಳಿಯನ್ನು ಧರಿಸುವುದು ಹಾಗೂ ಖರೀದಿ ಮಾಡುವುದೆಂದರೆ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಆದರೆ, ಬೆಳ್ಳಿ ಮಾರಾಟದಲ್ಲಿ ನಮ್ಮ ದೇಶ ಎಷ್ಟೇ ಮುಂದಿದ್ದರೂ, ಭಾರತಕ್ಕಿಂತ ಕಡಿಮೆ ಬೆಲೆಗೆ ಬೆಳ್ಳಿ ಮಾರಾಟ ಮಾಡುವ ಟಾಪ್-10 ದೇಶಗಳಿ ಇಲ್ಲಿವೆ ನೋಡಿ... ಈ ದೇಶಗಳಿಂದ ಕೆಜಿಗಟ್ಟಲೆ ಬೆಳ್ಳಿಯನ್ನು ಖರೀದಿಸಿ ತರಬಹುದು.

ಸಾಮಾನ್ಯವಾಗಿ ಹಬ್ಬ ಹರಿದಿನಗಳಲ್ಲಿ ಭಾರತೀಯರು ಬಂಗಾರ ಕೊಳ್ಳೋಕೆ ಮುಗಿಬೀಳ್ತಾರೆ. ಅದು ಬರೀ ಹೂಡಿಕೆ ಎಂಬುದಷ್ಟೇ ಅಲ್ಲ, ಧಾರ್ಮಿಕ ನಂಬಿಕೆಯ ರೂಪದಲ್ಲಿಯೂ ಈ ವಸ್ತುಗಳಿಗೆ ಬೆಲೆ ಕೊಡುತ್ತಾರೆ. ಬಂಗಾರ, ಬೆಳ್ಳಿ ಆಮದು ಮಾಡಿಕೊಳ್ಳೋ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಕಳೆದ ವಾರವಷ್ಟೇ ಬಂಗಾರದ ಬೆಲೆ ಗಗನಕ್ಕೇರಿತ್ತು. ಬೆಳ್ಳಿ ಬೆಲೆಯೂ ಅದೇ ಹಾದಿಯಲ್ಲಿದೆ. 2025ರ ಫೆಬ್ರವರಿ ಲೆಕ್ಕಾಚಾರದ ಪ್ರಕಾರ, ಭಾರತದಲ್ಲಿ ಬೆಳ್ಳಿ ಬೆಲೆ ಪ್ರತಿ ಔನ್ಸ್‌ಗೆ 2,765 ರೂಪಾಯಿ ಮತ್ತು ಪ್ರತಿ ಕೆ.ಜಿಗೆ 88,927 ರೂಪಾಯಿ ಇದೆ.

ಅಮೆರಿಕಾದಲ್ಲಿ ಬೆಳ್ಳಿ ಬೆಲೆ ಪ್ರತಿ ಔನ್ಸ್‌ಗೆ 2,766 ರೂಪಾಯಿ ಮತ್ತು ಪ್ರತಿ ಕೆ.ಜಿಗೆ 88,926 ರೂಪಾಯಿ ಇದೆ. ಅಮೇರಿಕಾ ಮತ್ತು ಭಾರತ ದೇಶಗಳಲ್ಲಿ ಬೆಳ್ಳಿಯ ಬೆಲೆ ಒಂದೆರಡು ರೂಪಾಯಿ ವ್ಯತ್ಯಾಸವಿದೆ. ದೊಡ್ಡ ಮಟ್ಟದ ವ್ಯತ್ಯಾಸವೇನೂ ಕಂಡುಬರುವುದಿಲ್ಲ.  ಆದರೆ, ಭಾರತಕ್ಕಿಂತ ಅತಿ ಕಡಿಮೆ ಬೆಲೆಗೆ ಬೆಳ್ಳಿ ಸಿಗೋ ದೇಶಗಳೂ ಇವೆ. ಕೆಲವು ದೇಶಗಳಲ್ಲಿ ಭಾರತಕ್ಕಿಂತ ಬೆಳ್ಳಿ ಬೆಲೆ ಕಡಿಮೆ ಇರೋಕೆ ಕಾರಣ, ಅಲ್ಲಿ ಆಮದು ಸುಂಕ ಮತ್ತು ತೆರಿಗೆ ಕಡಿಮೆ ಇರೋದು. ಅದಕ್ಕೆ, ಕಡಿಮೆ ಬೆಲೆಗೆ ಬೆಳ್ಳಿ ಕೊಳ್ಳೋಕೆ ಅಂತಾನೇ ಜನ ಆ ದೇಶಗಳಿಗೆ ಹೋಗುತ್ತಾರೆ.

ಕಡಿಮೆ ಬೆಲೆಗೆ ಬೆಳ್ಳಿ ಸಿಗೋ ದೇಶಗಳು ಇಲ್ಲಿವೆ: (ಬೆಲೆ 

ದೇಶ     ಬೆಳ್ಳಿ ಬೆಲೆ (ಔನ್ಸ್‌ನಲ್ಲಿ)ಬೆಳ್ಳಿ ಬೆಲೆ (ಕೆ.ಜಿ.ಯಲ್ಲಿ)
ಆಸ್ಟ್ರೇಲಿಯಾ    2,750.4988,488.03
ಚಿಲಿ    2,753.44    88,552.18
ರಷ್ಯಾ    2,754.33    88,552.18
ಪೋಲೆಂಡ್    2,756.18    88,531.41
ಅರ್ಜೆಂಟೀನಾ    2,761.72    88,791.03
ಬೊಲಿವಿಯಾ    2,764.37    88,877.02
ಯುಎಸ್ಎ    2,766.93    88,926.87
ಭಾರತ    2,765.94    88,927.83
ಚೀನಾ    2,768.91    89,023.40
ಮೆಕ್ಸಿಕೋ    2,770.62    88,915.53
ಪೋರ್ಚುಗಲ್    2,771.24    89,083.89
ಪೆರು    2,771.73    89,099.94
ಯುಕೆ    2,773.67    89,211.12 

ಸೂಚನೆ:  ಫೆಬ್ರವರಿ ತಿಂಗಳ ಬೆಲೆಗಳ ಆಧಾರದ ಮೇಲೆ ಈ ವರದಿ ತಯಾರಿಸಲಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!