Breaking News: ಮಾರುಕಟ್ಟೆ ಕುಸಿತದ ನಡುವೆಯೂ ಗುಡ್‌ನ್ಯೂಸ್‌ ನೀಡಿದ EPFO, ಈ ವರ್ಷ ಸಿಗುತ್ತೆ ಇಷ್ಟು ಬಡ್ಡಿ!

Published : Feb 28, 2025, 01:14 PM ISTUpdated : Feb 28, 2025, 01:21 PM IST
Breaking News: ಮಾರುಕಟ್ಟೆ ಕುಸಿತದ ನಡುವೆಯೂ ಗುಡ್‌ನ್ಯೂಸ್‌ ನೀಡಿದ EPFO, ಈ ವರ್ಷ ಸಿಗುತ್ತೆ ಇಷ್ಟು ಬಡ್ಡಿ!

ಸಾರಾಂಶ

ನೌಕರರ ಭವಿಷ್ಯ ನಿಧಿ ಸಂಘಟನೆ (EPFO) 2024-25ನೇ ಸಾಲಿಗೆ EPF ಮೇಲಿನ ಬಡ್ಡಿ ದರವನ್ನು 8.25% ನಲ್ಲಿಯೇ ಉಳಿಸಲು ನಿರ್ಧರಿಸಿದೆ. ಈ ನಿರ್ಧಾರವನ್ನು ಫೆಬ್ರವರಿ 28 ರಂದು ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

PF Interest Rate : ಕೆಲಸ ಮಾಡುವ ಕೋಟ್ಯಂತರ ನೌಕರರಿಗೆ ಸಿಹಿ ಸುದ್ದಿ ಇದೆ. ಮಾರುಕಟ್ಟೆಯಲ್ಲಿನ ಕುಸಿತ ಮತ್ತು ಬಾಂಡ್ ಇಳುವರಿ ನಷ್ಟದ ನಡುವೆಯೂ ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ಬಡ್ಡಿ ದರವನ್ನು 8.25% ನಲ್ಲಿಯೇ ಇರಿಸಲು ತೀರ್ಮಾನ ಮಾಡಿದೆ. ಫೆಬ್ರವರಿ 28 ರಂದು 2024-25ನೇ ಸಾಲಿನ ಬಡ್ಡಿ ದರದ (Interest Rate) ಬಗ್ಗೆ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಪಿಎಫ್‌ಒ 2024-25 ಕ್ಕೆ ನೌಕರರ ಭವಿಷ್ಯ ನಿಧಿ (EPF) ಠೇವಣಿಗಳ ಮೇಲೆ ಶೇಕಡಾ 8.25 ರಷ್ಟು ಬಡ್ಡಿಯನ್ನು ಪಡೆಯುವುದನ್ನು ಮುಂದುವರಿಸುತ್ತದೆ. ಫೆಬ್ರವರಿ 2024 ರಲ್ಲಿ, EPF ಮೇಲಿನ ಬಡ್ಡಿ ದರವನ್ನು 2022-23 ರಲ್ಲಿ 8.15% ರಿಂದ 2023-24 ಕ್ಕೆ 8.25% ಕ್ಕೆ ಹೆಚ್ಚಿಸಲಾಗಿತ್ತು.

ಮಾರ್ಚ್ 2022 ರಲ್ಲಿ EPFO, ​​2021-22 ಕ್ಕೆ EPF ಮೇಲಿನ ಬಡ್ಡಿದರವನ್ನು ನಾಲ್ಕು ದಶಕಗಳ ಕನಿಷ್ಠ ಮಟ್ಟವಾದ 8.1% ಕ್ಕೆ ಇಳಿಸಿತು, 2020-21 ರಲ್ಲಿ 8.5% ರಿಂದ ಇದು ಕೆಳಗೆ ಇಳಿಸಿತ್ತು. EPFO ದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು (CBT) ಶುಕ್ರವಾರ ನಡೆದ ಸಭೆಯಲ್ಲಿ 2024-25 ಕ್ಕೆ EPF ಮೇಲೆ 8.25% ಬಡ್ಡಿದರವನ್ನು ನೀಡಲು ನಿರ್ಧರಿಸಿದೆ.

2020-21ರ ಸಾಲಿಗೆ EPF ನೀಡಿದ್ದ 8.1% ಬಡ್ಡಿದರವು 1977-78 ರ ನಂತರದ ಅತ್ಯಂತ ಕಡಿಮೆ ಎನಿಸಿತ್ತು. ಆಗ EPF ಬಡ್ಡಿದರವು 8% ರಷ್ಟಿತ್ತು. ಸರ್ಕಾರವು ಹಣಕಾಸು ಸಚಿವಾಲಯದ ಮೂಲಕ ಅನುಮೋದನೆ ನೀಡಿದ ನಂತರವೇ ಇಪಿಎಫ್‌ಒ ಬಡ್ಡಿದರವನ್ನು ನೀಡುತ್ತದೆ.

ಮಾರ್ಚ್ 2020 ರಲ್ಲಿ, ಇಪಿಎಫ್‌ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು 2019-20 ಕ್ಕೆ ಏಳು ವರ್ಷಗಳ ಕನಿಷ್ಠ ಮಟ್ಟವಾದ 8.5% ಕ್ಕೆ ಇಳಿಸಿತ್ತು. ಅದಕ್ಕೂ ಹಿಂದಿ ವರ್ಷದಲ್ಲಿ ಅಂದರೆ, 2018-19 ಕ್ಕೆ ನೀಡಲಾದ 8.65% ರಿಂದ ಭಾರೀ ಪ್ರಮಾಣದಲ್ಲಿ ಕೆಳಗೆ ಇಳಿಸಿತ್ತು. ಇಪಿಎಫ್‌ಒ ತನ್ನ ಚಂದಾದಾರರಿಗೆ 2016-17 ರಲ್ಲಿ 8.65% ಮತ್ತು 2017-18 ರಲ್ಲಿ 8.55% ಬಡ್ಡಿದರವನ್ನು ನೀಡಿತ್ತು.

ಇಪಿಎಫ್‌ಎ ಪೆನ್ಶನ್‌ ಲೆಕ್ಕಾಚಾರ: 10 ವರ್ಷ ಕೆಲಸ ಮಾಡಿದ್ರೆ ಎಷ್ಟು ಪಿಂಚಣಿ ಸಿಗುತ್ತೆ?

2015-16 ರಲ್ಲಿ ಬಡ್ಡಿದರವು 8.8% ಕ್ಕೆ ಸ್ವಲ್ಪ ಹೆಚ್ಚಾಗಿತ್ತು. ನಿವೃತ್ತಿ ನಿಧಿ ಸಂಸ್ಥೆಯು 2013-14 ಮತ್ತು 2014-15 ರಲ್ಲಿ 8.75% ಬಡ್ಡಿದರವನ್ನು ನೀಡಿತು, ಇದು 2012-13 ಕ್ಕೆ 8.5% ಕ್ಕಿಂತ ಹೆಚ್ಚಾಗಿದೆ. 2011-12 ರಲ್ಲಿ ಬಡ್ಡಿದರವು 8.25% ಆಗಿತ್ತು.

ಭಾರೀ ಕುಸಿತ ಕಂಡ ಭಾರತೀಯ ಷೇರು ಮಾರುಕಟ್ಟೆ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!