ನಮ್ಮ ಎಕಾನಮಿ 5 ಟ್ರಿಲಿಯನ್ ತಲುಪಲಿದೆ: ದ.ಕೊರಿಯಾದಿಂದ ಮೋದಿ ಘೋಷಣೆ!

Published : Feb 21, 2019, 06:18 PM IST
ನಮ್ಮ ಎಕಾನಮಿ 5 ಟ್ರಿಲಿಯನ್ ತಲುಪಲಿದೆ: ದ.ಕೊರಿಯಾದಿಂದ ಮೋದಿ ಘೋಷಣೆ!

ಸಾರಾಂಶ

ಭಾರತದ ಆರ್ಥಿಕತೆ ಸದೃಢ ಎಂದ ಪ್ರಧಾನಿ ಮೋದಿ| ದ.ಕೊರಿಯಾ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ| ಶೀಘ್ರವೇ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಿ ಭಾರತ| ಭಾರತ-ಕೊರಿಯಾ ಉದ್ಯಮಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ|

ಸಿಯೋಲ್(ಫೆ.21): ಭಾರತದ ಆರ್ಥಿಕತೆ ಸದೃಢವಾಗಿದ್ದು, ಶೀಘ್ರವೇ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದಕ್ಷಿಣ ಕೊರಿಯಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ-ಕೊರಿಯಾ ಉದ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಮುಕ್ತ ಆರ್ಥಿಕತೆಯಾಗಿರುವ ಭಾರತ ಕಳೆದ 4 ವರ್ಷಗಳಲ್ಲಿ 250 ಬಿಲಿಯನ್ ಡಾಲರ್ ನಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿದೆ ಎಂದು ಪ್ರಧಾನಿ ಈ ವೇಳೆ ಹೇಳಿದರು. 

ಭಾರತವನ್ನು ಹೊರತುಪಡಿಸಿ ವರ್ಷದಿಂದ ವರ್ಷಕ್ಕೆ ವಿಶ್ವದ ಯಾವುದೇ ದೊಡ್ಡ ಆರ್ಥಿಕತೆಯೂ ಸಹ ಶೇ.7 ರಷ್ಟು ಬೆಳವಣಿಗೆ ಸಾಧಿಸಿಲ್ಲ ಎಂದು ಮೋದಿ ಈ ವೇಳೆ ನುಡಿದರು.

ಉದ್ಯಮ ಸ್ಥಾಪನೆ ಸರಳೀಕರಣದ ವಿಷಯದಲ್ಲಿ ಭಾರತ 77 ನೇ ಸ್ಥಾನದಲ್ಲಿದೆ.  ಮುಂದಿನ ವರ್ಷ ಟಾಪ್  50 ದೇಶಗಳ ಪೈಕಿ ಭಾರತ ಸ್ಥಾನ ಪಡೆಯಲಿದೆ ಎಂದು ಮೋದಿ ಭರವಸೆ ವ್ಯಕ್ತಪಡಿಸಿದರು

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಭಾರತೀಯರ ಕ್ರೇಜ್, ದುಬೈನ ಶಾರುಖ್ ಖಾನ್ ಆಫೀಸ್ ಟವರ್ ಬರೋಬ್ಬರಿ 5000 ಕೋಟಿ ರೂ ಗೆ ಮಾರಾಟ!
ಹೊಸ ವರ್ಷದ ಆಫರ್‌ ನಲ್ಲಿ ಟಿವಿ, ಮೊಬೈಲ್ ಖರೀದಿಸಲು ಫ್ಲಾನ್ ಮಾಡಿದ್ರೆ ನಿಮಗಿದು ಶಾಕಿಂಗ್ ಸುದ್ದಿ!